ETV Bharat / entertainment

ಪ್ರತಿಷ್ಠಿತ ಆಸ್ಕರ್​​ 2024: ವಿಜೇತರು ಯಾರಾಗಬಹುದು, ನಿಮ್ಮ ಊಹೆ ಏನು? - Oscar probable winners

ಮಾರ್ಚ್ 10ರಂದು ಲಾಸ್ ಏಂಜಲೀಸ್‌ನ ಓವೇಶನ್ ಹಾಲಿವುಡ್‌ನಲ್ಲಿರುವ ಡಾಲ್ಬಿ ಥಿಯೇಟರ್‌ನಲ್ಲಿ ಆಸ್ಕರ್ 2024 ನಡೆಯಲಿದೆ.

Oscar probable winners
ವಿಶ್ವ ಪ್ರತಿಷ್ಠಿತ ಆಸ್ಕರ್​​ 2024
author img

By ETV Bharat Karnataka Team

Published : Mar 6, 2024, 7:25 PM IST

ವಿಶ್ವದ ಪ್ರತಿಷ್ಠಿತ 'ಆಸ್ಕರ್​​' ಸಮಾರಂಭಕ್ಕೆ ದಿನಗಣನೆ ಆರಂಭವಾಗಿದೆ. 96ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ಮಾರ್ಚ್ 10ರಂದು ಲಾಸ್ ಏಂಜಲೀಸ್‌ನ ಓವೇಶನ್ ಹಾಲಿವುಡ್‌ನಲ್ಲಿರುವ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ಇನ್ನೇನು ಮೂರು ದಿನಗಳು ಬಾಕಿ ಇದ್ದು, ವಿಜೇತರು ಯಾರಾಗಬಹುದು? ಎಂದು ಊಹಿಸಲಾಗುತ್ತಿದೆ. ಓಪನ್‌ಹೈಮರ್ ಹೆಚ್ಚಿನ ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದ್ದು, ಕಠಿಣ ಸ್ಪರ್ಧೆ ಎದುರಾಗಿದೆ.

ಸೂಪರ್​ ಹಿಟ್​​ 'ಓಪನ್‌ಹೈಮರ್' ಸಿನಿಮಾ 13 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ. ಅದಾಗ್ಯೂ ತೀವ್ರ ಸ್ಪರ್ಧೆ ಎದುರಿಸುತ್ತಿದೆ. ವಿಶೇಷವಾಗಿ ಚಿತ್ರಕಥೆ ಮತ್ತು ಎಡಿಟಿಂಗ್ ಮತ್ತು ಮ್ಯೂಸಿಕ್​ ಸಲುವಾಗಿ ಕಠಿಣ ಸ್ಪರ್ಧೆಯಿದೆ. ಅನಿಮೇಟೆಡ್ ಚಿತ್ರ, ಕಾಸ್ಟೂಮ್​​ ಮತ್ತು ಪ್ರೊಡಕ್ಷನ್​ ಡಿಸೈನ್​​​ನಂತಹ ವಿಭಾಗಗಳಲ್ಲಿ ಸಾಕಷ್ಟು ಸಸ್ಪೆನ್ಸ್ ಇದೆ. ಪೂರ್​​ ಥಿಂಗ್ಸ್ ಮತ್ತು ಬಾರ್ಬಿ ಕಠಿಣ ಸ್ಪರ್ಧೆ ಕೊಡುತ್ತಿರುವ ಸಿನಿಮಾಗಳು. ಪ್ರಮುಖ ವಿಭಾಗಗಳಲ್ಲಿ ಈ ಸಿನಿಮಾ ಅಥವಾ ನಟ-ನಟಿ ವಿಜೇತರಾಗುವ ಸಾಧ್ಯತೆ ಇದೆ ಎಂದು ಊಹಿಸಲಾಗಿರುವ ಹೆಸರುಗಳು ಈ ಕೆಳಗಿದೆ ನೋಡಿ.

ಅತ್ಯುತ್ತಮ ಚಿತ್ರ:

  • ಅನಾಟಮಿ ಆಫ್​ ಎ ಫಾಲ್​​
  • ಬಾರ್ಬಿ
  • ಓಪನ್‌ಹೈಮರ್
  • ದಿ ಹೋಲ್ಡ್​ಓವರ್ಸ್
  • ಕಿಲ್ಲರ್ಸ್ ಆಫ್​​ ದಿ ಫ್ಲವರ್ ಮೂನ್​​
  • ಮಾಯೆಸ್ಟ್ರೋ
  • ಪಾಸ್ಟ್ ಲೈವ್ಸ್
  • ಪೂರ್ ಥಿಂಗ್ಸ್
  • ದಿ ಝೋನ್​ ಆಫ್​ ಇಂಟ್ರೆಸ್ಟ್
  • ಗೆಲುವಿನ ಸಾಧ್ಯತೆ (ಊಹೆ): ಓಪನ್‌ಹೈಮರ್.

ಅತ್ಯುತ್ತಮ ನಿರ್ದೇಶಕ:

  • ಜೋನಾಥನ್ ಗ್ಲೇಝರ್, (ದಿ ಝೋನ್​ ಆಫ್​ ಇಂಟ್ರೆಸ್ಟ್)
  • ಕ್ರಿಸ್ಟೋಫರ್ ನೋಲನ್, (ಓಪನ್‌ಹೈಮರ್)
  • ಯೊರ್ಗೊಸ್ ಲ್ಯಾಂತಿಮೊಸ್, (ಪೂರ್ ಥಿಂಗ್ಸ್)
  • ಮಾರ್ಟಿನ್ ಸ್ಕೊರ್ಸೆಸ್, (ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್)
  • ಜಸ್ಟಿನ್ ಟ್ರೈಟ್, (ಅನಾಟಮಿ ಆಫ್​ ಎ ಫಾಲ್)​​
  • ಗೆಲುವಿನ ಸಾಧ್ಯತೆ (ಊಹೆ): ಕ್ರಿಸ್ಟೋಫರ್ ನೋಲನ್, (ಓಪನ್‌ಹೈಮರ್).

ಅತ್ಯುತ್ತಮ ನಟಿ:

  • ಆನೆಟ್ ಬೆನಿಂಗ್, (ನ್ಯಾಡ್)
  • ಸಾಂಡ್ರಾ ಹಲ್ಲರ್, (ಅನಾಟಮಿ ಆಫ್​ ಎ ಫಾಲ್)​​
  • ಲಿಲಿ ಗ್ಲ್ಯಾಡ್‌ಸ್ಟೋನ್, (ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್)
  • ಕಾರೆ ಮುಲ್ಲಿಗನ್, (ಮಾಯೆಸ್ಟ್ರೋ)
  • ಎಮ್ಮಾ ಸ್ಟೋನ್, (ಪೂರ್ ಥಿಂಗ್ಸ್)
  • ಗೆಲುವಿನ ಸಾಧ್ಯತೆ (ಊಹೆ): ಲಿಲಿ ಗ್ಲ್ಯಾಡ್‌ಸ್ಟೋನ್, (ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್).

ಅತ್ಯುತ್ತಮ ನಟ:

  • ಬ್ರಾಡ್ಲಿ ಕೂಪರ್, (ಮಾಯೆಸ್ಟ್ರೋ)
  • ಸಿಲಿಯನ್ ಮರ್ಫಿ, (ಓಪನ್‌ಹೈಮರ್)
  • ಕೋಲ್ಮನ್ ಡೊಮಿಂಗೊ, (ರಸ್ಟಿನ್)
  • ಪೌಲ್ ಗಿಯಾಮಟ್ಟಿ, (ದಿ ಹೋಲ್ಡ್​ಓವರ್ಸ್)
  • ಜೆಫ್ರಿ ರೈಟ್, (ಅಮೆರಿಕನ್ ಫಿಕ್ಷನ್)
  • ಗೆಲುವಿನ ಸಾಧ್ಯತೆ (ಊಹೆ): ಸಿಲಿಯನ್ ಮರ್ಫಿ, (ಓಪನ್‌ಹೈಮರ್).

ಇದನ್ನೂ ಓದಿ: ವಿಶ್ವ ಸುಂದರಿ 2024: ಐಶ್ವರ್ಯಾ ರೈ ಹಾಡುಗಳಿಗೆ ನೃತ್ಯ ಮಾಡಿದ ಭಾರತದ ಪ್ರತಿನಿಧಿ ಸಿನಿ ಶೆಟ್ಟಿ

ಈ ಸಿನಿಮಾಗಳು, ನಟ-ನಟಿಯರು ಈಗಾಗಲೇ ಕೆಲ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಸದ್ದು ಮಾಡಿದೆ. ಸಿನಿಮಾ ಜನಮನ ಸೆಳೆದಿದೆ. ಇದೊಂದು ಊಹೆ ಅಷ್ಟೇ. ಆಸ್ಕರ್ ಗೆಲುವು ಯಾರ ಪಾಲಾಗಲಿದೆ ಎಂಬುದು ಶೀಘ್ರದಲ್ಲೇ ಗೊತ್ತಾಗಲಿದೆ.

ಇದನ್ನೂ ಓದಿ: 96ನೇ ಆಸ್ಕರ್ ಪ್ರಶಸ್ತಿ ನಾಮನಿರ್ದೇಶನ: ರೇಸ್‌ನಲ್ಲಿ ಭಾರತದ ಸಾಕ್ಷ್ಯಚಿತ್ರ 'ಟು ಕಿಲ್ ಎ ಟೈಗರ್‌'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.