ETV Bharat / entertainment

ನಾಳೆ 'ಮಿಸ್ಟರ್ ಅಂಡ್​ ಮಿಸೆಸ್ ಮಾಹಿ' ಟ್ರೇಲರ್ ರಿಲೀಸ್: ಜಾಹ್ನವಿ, ರಾಜ್‌ಕುಮಾರ್ ರಾವ್ ಚಿತ್ರದ ಮೇಲೆ ಕುತೂಹಲ - Mr and Mrs Mahi Trailer - MR AND MRS MAHI TRAILER

ಜಾಹ್ನವಿ ಕಪೂರ್ ಮತ್ತು ರಾಜ್‌ಕುಮಾರ್ ರಾವ್ ಅಭಿನಯದ 'ಮಿಸ್ಟರ್ ಅಂಡ್​ ಮಿಸೆಸ್ ಮಾಹಿ' ಚಿತ್ರದ ಅಧಿಕೃತ ಟ್ರೇಲರ್​​​ ನಾಳೆ ಮಧ್ಯಾಹ್ನ ಅನಾವರಣಗೊಳ್ಳಲಿದೆ.

Mr & Mrs Mahi
ಮಿಸ್ಟರ್ ಆ್ಯಂಡ್ ಮಿಸೆಸ್ ಮಾಹಿ (Photo: Karan Johar Instagram)
author img

By ETV Bharat Karnataka Team

Published : May 11, 2024, 3:14 PM IST

ಈ ಸಾಲಿನ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ 'ಮಿಸ್ಟರ್ ಅಂಡ್​ ಮಿಸೆಸ್ ಮಾಹಿ'ಯ ಅಧಿಕೃತ ಟ್ರೇಲರ್​​​ ನಾಳೆ ಅನಾವರಣಗೊಳ್ಳಲಿದೆ. ಬಿಡುಗಡೆಗೆ ಸಜ್ಜಾಗಿರುವ ಜಾಹ್ನವಿ ಕಪೂರ್ ಮತ್ತು ರಾಜ್‌ಕುಮಾರ್ ರಾವ್ ಅಭಿನಯದ ಈ ಚಿತ್ರದ ಟ್ರೇಲರ್​​​ ವೀಕ್ಷಿಸಲು ಅಭಿಮಾನಿಗಳು ಕಾತರರಾಗಿದ್ದಾರೆ. ಇದೀಗ ಟ್ರೇಲರ್​​​ ರಿಲೀಸ್​ ಡೇಟ್ ಅನೌನ್ಸ್ ಆಗಿದೆ.

ಜಾಹ್ನವಿ, ರಾಜ್‌ಕುಮಾರ್ ಸಿನಿಮಾಗಳು ಚಿತ್ರಮಂದಿರಗಳಲ್ಲಿ ತೆರೆಕಂಡು ಕೆಲ ಸಮಯವಾಗಿದೆ. ಈ ಹಿನ್ನೆಲೆ, ಅಭಿಮಾನಿಗಳು 'ಮಿಸ್ಟರ್ ಅಂಡ್​ ಮಿಸೆಸ್ ಮಾಹಿ' ವೀಕ್ಷಿಸುವ ಕಾತರದಲ್ಲಿದ್ದಾರೆ. ಸಿನಿಮಾ ಸುತ್ತಲಿನ ಉತ್ಸಾಹದ ನಡುವೆ ಚಿತ್ರನಿರ್ಮಾಪಕರು ಟ್ರೇಲರ್​​​ ಅನಾವರಣದ ದಿನಾಂಕವನ್ನು ಘೋಷಿಸಿದ್ದಾರೆ. ಚಿತ್ರತಂಡ ಸಾಮಾಜಿಕ ಮಾಧ್ಯಮದಲ್ಲಿಂದು ಚಿತ್ರದ ಹೊಸ ಪೋಸ್ಟರ್ ಬಿಡುಗಡೆ ಮಾಡಿ, ಟ್ರೇಲರ್ ಬಿಡುಗಡೆ ದಿನಾಂಕ ಪ್ರಕಟಿಸಿದೆ. ಮೇ 12ರ ಭಾನುವಾರ ಟ್ರೇಲರ್ ಅನಾವರಣಗೊಳ್ಳಲಿದೆ.

ಖ್ಯಾತ ನಿರ್ಮಾಪಕ ಕರಣ್ ಜೋಹರ್ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಹೊಸ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಟ್ರೇಲರ್ ಬಿಡುಗಡೆ ದಿನಾಂಕವನ್ನು ಘೋಷಿಸಿದರು. ಪೋಸ್ಟರ್​​​​ನಲ್ಲಿ ಮುಖ್ಯಭೂಮಿಕೆಯಲ್ಲಿರುವ ಜಾಹ್ನವಿ ಮತ್ತು ರಾಜ್‌ಕುಮಾರ್ ಕ್ರಿಕೆಟ್ ತಂಡದ ಔಟ್​​ಫಿಟ್ ಧರಿಸಿದ್ದು, ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಯಿಂದ ನೋಡುತ್ತಿದ್ದಾರೆ. ಪೋಸ್ಟರ್​​​ನಲ್ಲಿ ಇಬ್ಬರ ಕೆಮಿಸ್ಟ್ರಿ ವರ್ಕ್​​ಔಟ್​ ಆಗಿದೆ. ಅಲ್ಲದೇ ಫೋಟೋದಲ್ಲಿ "ಎ ಗೂಗ್ಲಿ ಆಫ್ ಎ ಲವ್ ಸ್ಟೋರಿ" ಎಂದು ಬರೆಯಲಾಗಿದ್ದು, ಸಿನಿಮಾ ಸುತ್ತಲಿನ ಕುತೂಹಲ ಹೆಚ್ಚಿಸಿದೆ.

ಟ್ರೇಲರ್ ನಾಳೆ ಮಧ್ಯಾಹ್ನ 2:40ಕ್ಕೆ ಮೊದಲು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಪ್ರತ್ಯೇಕವಾಗಿ ಬಿಡುಗಡೆಯಾಗಲಿದೆ. ನಂತರ 3:40ಕ್ಕೆ ಯೂಟ್ಯೂಬ್​ನಲ್ಲಿ ಅನಾವರಣಗೊಳ್ಳಲಿದೆ. ಸುದ್ದಿ ತಿಳಿಸಿದ ಕರಣ್ ಜೋಹರ್, "ಏಕ್ ಸಪ್ನಾ, ದೋ ದಿಲ್. ಪ್ರೀತಿ, ಕನಸುಗಳುಳ್ಳ ಹೊಸ ಇನ್ನಿಂಗ್ಸ್ ಇಮ್​ಪರ್ಫೆಕ್ಟ್ಲಿಪರ್ಫೆಕ್ಟ್​​ ಪಾರ್ಟ್ನರ್​​​​ಶಿಪ್​ನ ಸಂದೇಶ ನೀಡಲು ಸಜ್ಜಾಗಿದೆ. ಮಿಸ್ಟರ್ ಆ್ಯಂಡ್ ಮಿಸೆಸ್ ಮಾಹಿ ಟ್ರೇಲರ್​ ನಾಳೆ ಬಿಡುಗಡೆ ಆಗಲಿದೆ. ಸಿನಿಮಾ ಇದೇ ಮೇ. 31ರಂದು ಚಿತ್ರಮಂದಿರ ಪ್ರವೇಶಿಸಲಿದೆ" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಅಮೆರಿಕದಲ್ಲಿ 'ಗೋಟ್​​' ಚಿತ್ರೀಕರಣ: ಎಸ್​ಎಸ್​ಎಲ್​ಸಿ, ಪಿಯುಸಿ ಟಾಪರ್ಸ್ ಭೇಟಿಯಾಗಲಿದ್ದಾರೆ ವಿಜಯ್ - Vijay

ಚಿತ್ರದಲ್ಲಿ ಮಹೇಂದ್ರ ಸಿಂಗ್ ಧೋನಿ ಪಾತ್ರವನ್ನು ರಾಜ್‌ಕುಮಾರ್ ರಾವ್ ನಿರ್ವಹಿಸಿದ್ದರೆ, ಜಾಹ್ನವಿ ಕಪೂರ್ ಮಹಿಮಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2020ರಲ್ಲಿ 'ಗುಂಜನ್ ಸಕ್ಸೇನಾ - ದಿ ಕಾರ್ಗಿಲ್ ಗರ್ಲ್' ಚಿತ್ರದ ಮೂಲಕ ಚಿತ್ರಂಗ ಪ್ರವೇಶಿಸಿದ ಶರಣ್ ಶರ್ಮಾ ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಧಡಕ್, ರೂಹಿ ಮತ್ತು ಮಿಲಿ ನಂತರ ಚಿತ್ರಮಂದಿರದಲ್ಲಿ ಬಿಡುಗಡೆ ಆಗುತ್ತಿರುವ ಜಾಹ್ನವಿ ಅವರ ನಾಲ್ಕನೇ ಚಿತ್ರ. ನಟಿಯ ಪೊಲಿಟಿಕಲ್​ ಥ್ರಿಲ್ಲರ್ ಉಲಜ್ಹ್ ಮತ್ತು ಜೂನಿಯರ್ ಎನ್‌ಟಿಆರ್, ಸೈಫ್ ಅಲಿ ಖಾನ್ ಜೊತೆಗಿನ ಪ್ಯಾನ್-ಇಂಡಿಯಾ ಪ್ರಾಜೆಕ್ಟ್ ದೇವರ ಸೇರಿದಂತೆ ಇನ್ನೆರಡು ಚಿತ್ರಗಳು ಬಿಡುಗಡೆಗೆ ಎದುರು ನೋಡುತ್ತಿದೆ. ರಾಜ್‌ಕುಮಾರ್ ರಾವ್ ಸ್ತ್ರೀ 2 ಮತ್ತು ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ ಸೇರಿದಂತೆ ಕೆಲ ಪ್ರಾಜೆಕ್ಟ್​ಗಳನ್ನು ಹೊಂದಿದ್ದಾರೆ. ಇವೆರಡೂ ಕೂಡ 2024ರಲ್ಲೇ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಕ್ರಿಶ್ಚಿಯನ್​ ಭಾವನೆಗಳಿಗೆ ಧಕ್ಕೆತಂದ ಆರೋಪ; ನಟಿ ಕರೀನಾ ಕಪೂರ್​​ಗೆ ನೋಟಿಸ್​ ಜಾರಿ ಮಾಡಿದ ಮಧ್ಯಪ್ರದೇಶ ಹೈಕೋರ್ಟ್​​ - Case againest Kareena Kapoor

ETV Bharat Logo

Copyright © 2025 Ushodaya Enterprises Pvt. Ltd., All Rights Reserved.