ಹೈದರಾಬಾದ್: 77ನೇ ಕೇನ್ಸ್ ಫಿಲ್ಮ್ ಫೆಸ್ಟಿವಲ್ ಭಾರತದ ಐತಿಹಾಸಿಕ ಸಿನಿಮಾದ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ. 1976ರಲ್ಲಿ ಶ್ಯಾಮ್ ಬೆನೆಗಲ್ ನಿರ್ದೇಶಿಸಿದ ಮಂಥನ್ ಸಿನಿಮಾದ 4ಕೆ ವರ್ಷನ್ನಲ್ಲಿ ಸಿನಿಮಾ ಪ್ರದರ್ಶನ ಕಾಣಲಿದೆ. ಗುಜರಾತ್ ನಗರದಲ್ಲಿ ಭಾರತದ ಮೊದಲ ಹಾಲು ಸಹಕಾರಿ ಸಂಘದ ಕಥೆಯನ್ನು ಈ ಚಿತ್ರ ಹೊಂದಿದ್ದು, ಸಿನಿಮಾ ಉತ್ಸವದಲ್ಲಿನ ಟೈಮ್ ಲೆಸ್ ಕಥೆಗಳ ಕೇಂದ್ರವಾಗಿ ಸಿನಿಮಾ ಹೈಲೈಟ್ ಆಗಲಿದೆ. ಈ ಚಿತ್ರದ ನಟರುಗಳಿಗೆ ಕೇನ್ಸ್ ರೆಡ್ ಕಾರ್ಪೆಟ್ನಲ್ಲಿ ಮಿಂಚು ಹರಿಸಲಿದ್ದಾರೆ.
ಡಾ ವರ್ಗೀಸ್ ಕುರಿಯನ್ ಅವರ ನಡೆಸಿದ ಹಾಲಿನ ಕ್ರಾಂತಿ ಬಗ್ಗೆ ಈ ಚಿತ್ರದಲ್ಲಿ ನಾಸೀರುದ್ದೀನ್ ಶಾ, ಚಿತ್ರದಲ್ಲಿ ತಮ್ಮ ಜೊತೆ ನಟಿಸಿದ್ದ ಸ್ಮಿತಾ ಪಾಟೀಲ್, ಗಿರೀಶ್ ಕಾರ್ನಾಡ್, ಅಮರೀಶ್ ಪುರಿ ಮತ್ತು ಸಂಗೀತ ಸಂಯೋಜಕ ವನರಾಜ್ ಭಾಟಿಯಾ ಸೇರಿದಂತೆ ಈ ಸಿನಿಮಾಗೆ ಸಂಬಂಧಿಸಿದ ಇತರ ಗಣ್ಯರಿಗೆ ಗೌರವ ಸಲ್ಲಿಸಿದರು. ಇದೇ ವೇಳೆ, ಚಿತ್ರದ ಕುರಿತು ತಮ್ಮ ಅನುಭವ, ಆರಂಭಿಕ ಹಂತದಲ್ಲಿ ಹೊಂದಿದ್ದ ಆತಂಕವನ್ನು ಹಂಚಿಕೊಂಡರು. ಜೊತೆಗೆ ಸಿನಿಮಾ ಪಡೆದ ಅನಿರೀಕ್ಷಿತ ಯಶಸ್ಸಿಗೆ ಕೃತಜ್ಞತೆ ವ್ಯಕ್ತಪಡಿಸಿದ ಅವರು ಈ ಸಿನಿಮಾದಲ್ಲಿ ನಟಿಸಿದ ಪ್ರತಿಯೊಬ್ಬರ ವೃತ್ತಿ ಜೀವನದ ಯಶಸ್ಸಿಗೆ ಇದು ಮುನ್ನುಡಿ ಬರೆಯಿತು ಎಂದರು.
ಹಿಂದಿ ಭಾಷೆಯಲ್ಲಿ ನಿರ್ಮಿಸಲಾದ ಈ ಸಿನಿಮಾ ಬಂಗಾಳಿ ನಿರ್ದೇಶಕರ ಸಾಮಾಜಿಕ ವಾಸ್ತವಗಳ ಸ್ಪಷ್ಟವಾದ ಚಿತ್ರಣವಾಗಿದೆ. 1976ರಲ್ಲಿ ಬಿಡುಗಡೆಯಾದ ಈ ಸಿನಿಮಾ 1977ರಲ್ಲಿ ಎರಡು ರಾಷ್ಟ್ರೀಯ ಚಲನಚಿತ್ರಗಳ ಪ್ರಶಸ್ತಿಗಳನ್ನು ಪಡೆದುಕೊಂಡಿತ್ತು. ಜೊತೆಗೆ ಹಲವು ಅಕಾಡೆಮಿ ಪ್ರಶಸ್ತಿಯಲ್ಲೂ ಪ್ರತಿನಿಧಿಸುವ ಮೂಲಕ ಜಾಗತಿಕ ವೇದಿಕೆಯಲ್ಲಿ ಮಹತ್ವವನ್ನು ಸಾರಿತು. ಫಿಲ್ಮ್ ಹೆರಿಟೇಜ್ ಫೌಂಡೇಶನ್ (ಎಫ್‌ಹೆಚ್‌ಎಫ್) ಪ್ರಸಾದ್ ಕಾರ್ಪೊರೇಷನ್ ಮತ್ತು ಎಲ್'ಇಮ್ಯಾಜಿನ್ ರಿಟ್ರೊವಾಟಾ ಪ್ರಯೋಗಾಲಯದ ಸಹಯೋಗದೊಂದಿಗೆ ಕೈಗೊಂಡ ಮರುಸ್ಥಾಪನೆ ಪ್ರಕ್ರಿಯೆಯಲ್ಲಿ ಸಿನಿಮಾ ಹೊಸ ಜೀವನ ಪಡೆದಿದ್ದು, ಭವಿಷ್ಯದ ಪೀಳಿಗೆಗೆ ಅದರ ಸಿನಿಮೀಯ ಪರಂಪರೆಯನ್ನು ಉಳಿಸಿದೆ.
ದಿವಂಗತ ಸ್ಮಿತಾ ಪಾಟೀಲ್ ಮತ್ತು ಡಾ.ವರ್ಗೀಸ್ ಕುರಿಯನ್ ಅವರ ಕುಟುಂಬಗಳಿಗೆ ಮಂಥನದ ಪ್ರದರ್ಶನ ವಿಶೇಷ ಕ್ಷಣವಾಗಿದೆ. ಸ್ಮಿತಾ ಪಾಟೀಲ್ ಅವರ ಪುತ್ರ ಪ್ರತೀಕ್ ಬಬ್ಬರ್, ಆತನ ಚಿಕ್ಕಮ್ಮರಾದ ಅನಿತಾ ಪಾಟೀಲ್ ದೇಶಮುಖ್ ಮತ್ತು ಮಾನ್ಯ ಪಾಟೀಲ್ ಸೇಠ್ ಈ ಪ್ರದರ್ಶನದ ವೇಳೆ ಹಾಜರಿದ್ದರು. ಡಾ.ವರ್ಗೀಸ್ ಕುರಿಯನ್ ಅವರ ಪುತ್ರಿ ನಿರ್ಮಲಾ ಕುರಿಯನ್ ಅವರು ಕೂಡ ಕಾಣಿಸಿಕೊಂಡರು. ಮಂಥನ್ ಮರುಸ್ಥಾಪಿತ ಆವೃತ್ತಿಯು ಜೂನ್ 1 ರಂದು 70 ನಗರಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.
ಇದನ್ನೂ ಓದಿ: ಕೇನ್ಸ್'ನಲ್ಲಿ 1.8 ಲಕ್ಷ ಮೌಲ್ಯದ ದಿರಿಸಿನಲ್ಲಿ ಮಿಂಚಿದ ನಟಿ ಶೋಭಿತಾ!