ETV Bharat / entertainment

ಸ್ಟೈಲಿಶ್​ ಲುಕ್​ನಲ್ಲಿ ಕಾಣಿಸಿಕೊಂಡ ಸೂಪರ್ ಸ್ಟಾರ್ ಮಹೇಶ್ ಬಾಬು: ಅಭಿಮಾನಿಗಳ ಮನ ಗೆದ್ದ ಹೊಸ ಲುಕ್ - Mahesh Babu - MAHESH BABU

ಸೂಪರ್ ಸ್ಟಾರ್ ಮಹೇಶ್ ಬಾಬು ಇತ್ತೀಚೆಗೆ ತಮ್ಮ 49ನೇ ಹುಟ್ಟುಹಬ್ಬವನ್ನು ರಾಜಸ್ಥಾನದಲ್ಲಿ ಕುಟುಂಬಸ್ಥರೊಂದಿಗೆ ಅದ್ಧೂರಿಯಾಗಿ ಆಚರಿಸಿಕೊಂಡರು. ನಟ ಮಹೇಶ್ ಬಾಬು ಜೈಪುರ ವಿಮಾನ ನಿಲ್ದಾಣದಲ್ಲಿ ಹೊಸ ಪೋನಿಟೈಲ್ ಲುಕ್​ನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.

ಸ್ಟೈಲಿಶ್​ ಲುಕ್​ನಲ್ಲಿ ಕಾಣಿಸಿಕೊಂಡ ಸೂಪರ್ ಸ್ಟಾರ್ ಮಹೇಶ್ ಬಾಬು
ಸ್ಟೈಲಿಶ್​ ಲುಕ್​ನಲ್ಲಿ ಕಾಣಿಸಿಕೊಂಡ ಸೂಪರ್ ಸ್ಟಾರ್ ಮಹೇಶ್ ಬಾಬು (ANI)
author img

By ETV Bharat Karnataka Team

Published : Aug 11, 2024, 6:15 PM IST

ಮುಂಬೈ: ಸೂಪರ್ ಸ್ಟಾರ್ ಮಹೇಶ್ ಬಾಬು ಇತ್ತೀಚೆಗೆ ತಮ್ಮ 49ನೇ ಹುಟ್ಟುಹಬ್ಬವನ್ನು ರಾಜಸ್ಥಾನದಲ್ಲಿ ಕುಟುಂಬಸ್ಥರೊಂದಿಗೆ ಅದ್ಧೂರಿಯಾಗಿ ಆಚರಿಸಿಕೊಂಡರು. ಇನ್ನು, ನಟ ಮಹೇಶ್ ಬಾಬು ಜೈಪುರ ವಿಮಾನ ನಿಲ್ದಾಣದಲ್ಲಿ ಅವರ ಪತ್ನಿ ನಮ್ರತಾ ಶಿರೋಡ್ಕರ್ ಮತ್ತು ಮಕ್ಕಳಾದ ಸಿತಾರಾ ಮತ್ತು ಗೌತಮ್ ಘಟ್ಟಮನೇನಿ ಅವರೊಂದಿಗೆ ಕಾಣಿಸಿಕೊಂಡರು. ಈ ವೇಳೆ ಮಹೇಶ್ ಬಾಬು ಅವರ ಹೊಸ ಪೋನಿಟೈಲ್ ಲುಕ್​ನಲ್ಲಿ ಗಮನ ಸೆಳೆದಿದ್ದಾರೆ. ಸದ್ಯ ಈ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಅಭಿಮಾನಿಗಳ ಮನ ಗೆದ್ದ ಮಹೇಶ್ ಹೊಸ ಲುಕ್​: ವೈರಲ್ ಆಗಿರುವ ವಿಡಿಯೋದಲ್ಲಿ ಮಹೇಶ್ ಬಾಬು ಎಸ್ಎಸ್ಎಂಬಿ 29 ಸಿನಿಮಾಗಾಗಿ ಹೊಸ ರಫ್ ಲುಕ್ ಅನ್ನು ಅಳವಡಿಸಿಕೊಂಡಿರುವುದು ಕಂಡುಬಂದಿದೆ. ಅವರು ತಮ್ಮ ಹೊಸ ಲುಕ್​ಗಾಗಿ ಪೋನಿಟೈಲ್ ಮಾಡಿಕೊಂಡಿದ್ದು, ಬ್ರೌನ್ ಟಿ-ಶರ್ಟ್ ಮತ್ತು ಜೀನ್ಸ್‌ನೊಂದಿಗೆ ಬೀಜ್ ಕ್ಯಾಪ್ ಧರಿಸಿದ್ದರು. ಮತ್ತೊಂದೆಡೆ, ಪತ್ನಿ ನಮ್ರತಾ ಬಿಳಿ ಉಡುಪಿನಲ್ಲಿ ಕಂಗೊಳಿಸಿದ್ದರು. ಅವರೊಂದಿಗೆ ಮಗಳು ಸಿತಾರಾ ಜೊತೆಗಿರುವುದನ್ನು ಕಾಣಬಹುದು. ಇನ್ನು ಪುತ್ರ ಗೌತಮ್ ಕೂಡ ಜೈಪುರ ವಿಮಾನ ನಿಲ್ದಾಣದಲ್ಲಿ ಕ್ಯಾಶುಯಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು.

ನಮ್ರತಾ ಇತ್ತೀಚೆಗೆ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಕುಟುಂಬದೊಂದಿಗೆ ರಾಜಸ್ಥಾನದಲ್ಲಿ ರಜಾದಿನಗಳನ್ನು ಕಳೆದ ಫೋಟೋವನ್ನು ಹಂಚಿಕೊಂಡಿದ್ದಾರೆ. ಫೋಟೋಗಳಲ್ಲಿ ಅವರು ತಮ್ಮ ಮಕ್ಕಳು ಮತ್ತು ಆಪ್ತರೊಂದಿಗೆ ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಪ್ರವಾಸದ ಕ್ಯಾಂಡಿಡ್ ಫೋಟೋಗಳು ಮತ್ತು ಖಾಸಗಿ ಜೆಟ್​ನಲ್ಲಿ ಪ್ರಯಾಣಿಸುತ್ತಿರುವ ಫೋಟೋಗಳನ್ನು ಸಹ ಪೋಸ್ಟ್ ಮಾಡಿದ್ದಾರೆ. ಅವರು ತಮ್ಮ ಪೋಸ್ಟ್​ಗೆ 'ರಾಜಸ್ಥಾನ ರಿಟ್ರೀಟ್' ಭಾಗ 1 ಮತ್ತು ಭಾಗ 2 ಎಂದು ಶೀರ್ಷಿಕೆ ನೀಡಿದ್ದಾರೆ.

ಮಹೇಶ್ ಬಾಬು ತಮ್ಮ 49 ನೇ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಎಲ್ಲರಿಗೂ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಧನ್ಯವಾದ ತಿಳಿಸಿದ್ದಾರೆ. ನಟ ಮಹೇಶ್ ಬಾಬು ಪ್ರಸ್ತುತ ಎಸ್ಎಸ್ ರಾಜಮೌಳಿ ಅವರೊಂದಿಗೆ ತಮ್ಮ ಮುಂಬರುವ ಚಿತ್ರ ಎಸ್ಎಸ್ಎಂಬಿ 29 ಗಾಗಿ ಸಜ್ಜಾಗಿದ್ದಾರೆ. ಮಹೇಶ್ ಬಾಬು ಈ ಚಿತ್ರದಲ್ಲಿ ತಮ್ಮ ಪಾತ್ರಕ್ಕಾಗಿ ತಯಾರಿ ಆರಂಭಿಸಿದ್ದಾರೆ. ಸದ್ಯಕ್ಕೆ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.

ಇದನ್ನೂ ಓದಿ: ಲೊಕಾರ್ನೊ ಫಿಲ್ಮ್ ಫೆಸ್ಟಿವಲ್: ಶಾರುಖ್ ಖಾನ್​ಗೆ ಪಾರ್ಡೊ ಅಲ್ಲಾ ಕ್ಯಾರಿಯರಾ ಪ್ರಶಸ್ತಿ ಗರಿ - Pardo Alla Carriera Award

ETV Bharat Logo

Copyright © 2024 Ushodaya Enterprises Pvt. Ltd., All Rights Reserved.