ETV Bharat / entertainment

'ಡಬಲ್ ಇಸ್ಮಾರ್ಟ್' ಸಾಂಗ್​​ನಲ್ಲಿ ಕಾವ್ಯಾ ಥಾಪರ್-ರಾಮ್ ಪೋತಿನೇನಿ ಭರ್ಜರಿ ಸ್ಟೆಪ್ಸ್​ - Double Ismart - DOUBLE ISMART

'ಡಬಲ್ ಇಸ್ಮಾರ್ಟ್' ಚಿತ್ರದ 'ಮಾರ್ ಮುಂತಾ ಚೋಡ್ ಚಿಂತಾ' ಹಾಡು ಅನಾವರಣಗೊಂಡಿದೆ. ಸೂಪರ್ ಹಿಟ್ 'ಇಸ್ಮಾರ್ಟ್ ಶಂಕರ್' ಸಿನಿಮಾದ ಮುಂದುವರೆದ ಭಾಗವೇ ಈ 'ಡಬಲ್ ಇಸ್ಮಾರ್ಟ್' ಚಿತ್ರ.

Maar Muntha Chod Chinta release
'ಮಾರ್ ಮುಂತಾ ಚೋಡ್ ಚಿಂತಾ' ರಿಲೀಸ್ (ETV Bharat)
author img

By ETV Bharat Karnataka Team

Published : Jul 18, 2024, 3:32 PM IST

ದಕ್ಷಿಣ ಚಿತ್ರರಂಗದಲ್ಲಿ ತನ್ನದೇ ಬೇಡಿಕೆ ಹೊಂದಿರುವ ಉಸ್ತಾದ್ ರಾಮ್ ಪೋತಿನೇನಿ ನಟನೆಯ ಮುಂದಿನ ಬಹುನಿರೀಕ್ಷಿತ ಚಿತ್ರ ''ಡಬಲ್ ಇಸ್ಮಾರ್ಟ್''. ಈಗಾಗಲೇ ಸಿನಿಮಾದ 'ಸ್ಟೆಪ್​ಮಾರ್' ಹಾಡಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇದೀಗ ಚಿತ್ರತಂಡ ತನ್ನ ಎರಡನೇ ಹಾಡನ್ನು ಅನಾವರಣಗೊಳಿಸಿ, ಸಿನಿಪ್ರಿಯರ ಉತ್ಸಾಹ ಹೆಚ್ಚಿಸಿದೆ.

'ಮಾರ್ ಮುಂತಾ ಚೋಡ್ ಚಿಂತಾ' ಎಂಬ ಗಾನಬಜಾನಕ್ಕೆ ನಾಯಕನಟ ಉಸ್ತಾದ್ ರಾಮ್ ಪೋತಿನೇನಿ ಹಾಗೂ ನಟಿ ಕಾವ್ಯಾ ಥಾಪರ್ ಮಸ್ತ್​​ ಆಗಿ ಕುಣಿದು ಕುಪ್ಪಳಿಸಿದ್ದಾರೆ. ಕಾಸರ್ಲ ಶ್ಯಾಮ್ ಸಾಹಿತ್ಯದ ದೇಸಿ ಹಾಡಿಗೆ ಮಣಿ ಶರ್ಮಾ ಟ್ಯೂನ್ ಹಾಕಿದ್ದು, ರಾಹುಲ್ ಸಿಪ್ಲಿಗುಂಜ್ ಮತ್ತು ಕೀರ್ತನಾ ಶರ್ಮಾ ದನಿಯಾಗಿದ್ದಾರೆ. ಮಾರ್ ಮುಂತಾ ಚೋಡ್ ಚಿಂತಾ ಲಿರಿಕಲ್ ವಿಡಿಯೋ ಜೊತೆಗೆ ಮೇಕಿಂಗ್ ವಿಡಿಯೋ ಕೂಡ ಇದ್ದು, ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಸೂಪರ್ ಹಿಟ್ 'ಇಸ್ಮಾರ್ಟ್ ಶಂಕರ್' ಸಿನಿಮಾದ ಮುಂದುವರೆದ ಭಾಗವೇ ಈ 'ಡಬಲ್ ಇಸ್ಮಾರ್ಟ್'. ಈ ಮೂಲಕ ಡೈರೆಕ್ಟರ್ ಪುರಿ ಜಗನ್ನಾಥ್ ಹೊಸ ರೀತಿಯಲ್ಲಿ ಶಂಕರ್‌ನ ಕಥೆ ಹೇಳಲು ಹೊರಟಿದ್ದಾರೆ. 2019ರಲ್ಲಿ 'ಇಸ್ಮಾರ್ಟ್ ಶಂಕರ್' ಸಿನಿಮಾ ರಿಲೀಸ್ ಆಗಿತ್ತು. ಇದರಲ್ಲಿ ಕನ್ನಡತಿ ನಭಾ ನಟೇಶ್ ಅಭಿನಯಿಸಿದ್ದರು. ಆಗ ಈ ಸಿನಿಮಾ ಕಮರ್ಷಿಯಲಿ ಸಕ್ಸಸ್ ಕಂಡಿತ್ತು. ಮೊದಲ ಭಾಗ ತೆರೆಕಂಡು 5 ವರ್ಷಗಳ ಬಳಿಕ ಪಾರ್ಟ್-2 ಮೂಡಿ ಬರುತ್ತಿದೆ. ಸೀಕ್ವೆಲ್​​ ಟಾಲಿವುಡ್‌ನಲ್ಲಿ ಈಗಾಗಲೇ ನಿರೀಕ್ಷೆ ಹುಟ್ಟುಹಾಕಿದೆ.

Maar Muntha Chod Chinta release
'ಮಾರ್ ಮುಂತಾ ಚೋಡ್ ಚಿಂತಾ' ರಿಲೀಸ್​​, ಡಬಲ್ ಇಸ್ಮಾರ್ಟ್ ಪೋಸ್ಟರ್. (ETV Bharat)

ಇದನ್ನೂ ಓದಿ: 76ನೇ ಎಮ್ಮಿ ಅವಾರ್ಡ್ಸ್: ದಿನಾಂಕ, ಸ್ಥಳ, ನಾಮನಿರ್ದೇಶನದ ಪಟ್ಟಿ ಬಿಡುಗಡೆ - Emmy Awards 2024

ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ 'ಡಬಲ್ ಇಸ್ಮಾರ್ಟ್' ಬಿಡುಗಡೆ ಆಗಲಿದೆ. ಮಣಿ ಶರ್ಮಾ ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಪುರಿ ಕನೆಕ್ಟ್ಸ್ ಬ್ಯಾನರ್ ಮೂಲಕ ಪುರಿ ಜಗನ್ನಾಥ್, ಚಾರ್ಮಿ ಕೌರ್ ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸಿನಿಮಾದಲ್ಲಿ ರಾಮ್‌ ಪೊತಿನೇನಿಗೆ ಕಾವ್ಯಾ ಥಾಪರ್ ಜೋಡಿಯಾಗಿ (ನಾಯಕಿ) ನಟಿಸಿದ್ದಾರೆ. ಬಾಲಿವುಡ್​​ ಸೂಪರ್ ಸ್ಟಾರ್ ಸಂಜಯ್ ದತ್ ಈ ಸಿನಿಮಾದಲ್ಲಿ ಖಡಕ್ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. 'ಡಬಲ್ ಇಸ್ಮಾರ್ಟ್' ಮೇಲೆ ಸಿನಿಪ್ರಿಯರು, ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.

ಇದನ್ನೂ ಓದಿ: ರಾಜವರ್ಧನ್ ಜೊತೆ ದಿವ್ಯಾ ಸುರೇಶ್ ಮಸ್ತ್ ಡ್ಯಾನ್ಸ್: ನಾಳೆ 'ಹಿರಣ್ಯ' ತೆರೆಗೆ - Hiranya

ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ. ಸಿನಿಮಾ ರಿಲೀಸ್ ಡೇಟ್ ಕೂಡ ಫಿಕ್ಸ್ ಆಗಿದೆ. ಆಗಸ್ಟ್ 15ರಂದು 'ಡಬಲ್ ಇಸ್ಮಾರ್ಟ್' ಚಿತ್ರಮಂದಿರ ಪ್ರವೇಶಿಸಲಿದೆ. ಈಗಾಗಲೇ ವಿಶ್ವದಾದ್ಯಂತ ಚಿತ್ರದ ಪ್ರಚಾರ ಜೋರಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.