ಚೆನ್ನೈ(ತಮಿಳುನಾಡು): ನಟ ಕಮಲ್ ಹಾಸನ್ ವಿರುದ್ಧ ಒಪ್ಪಂದ ಉಲ್ಲಂಘನೆಯ ಆರೋಪದಡಿ ಚಲನಚಿತ್ರ ನಿರ್ಮಾಣ ಸಂಸ್ಥೆ 'ತಿರುಪತಿ ಬ್ರದರ್ಸ್'ನ ನಿರ್ಮಾಪಕರುಗಳಾದ ಲಿಂಗುಸಾಮಿ ಮತ್ತು ಸುಭಾಷ್ ಚಂದ್ರ ಬೋಸ್ ಅವರು ನಿರ್ಮಾಪಕರ ಮಂಡಳಿಗೆ ದೂರು ನೀಡಿದ್ದಾರೆ.
ವಿವಾದವೇನು?: 2015ರ 'ಉತ್ತಮ ವಿಲನ್' ಚಿತ್ರದಿಂದ ವಿವಾದ ಉದ್ಭವಿಸಿದೆ. ಸಿನಿಮಾ ಹಿನ್ನೆಡೆಯಿಂದಾಗಿ ಚಲನಚಿತ್ರ ನಿರ್ಮಾಣ ಸಂಸ್ಥೆ ಸಾಲದ ಸುಳಿಯಲ್ಲಿ ಸಿಲುಕಿತ್ತು. ಪರಿಣಾಮ, ಕಮಲ್ ಹಾಸನ್ 30 ಕೋಟಿ ರೂಪಾಯಿ ಬಜೆಟ್‌ನಲ್ಲಿ ಮತ್ತೊಂದು ಚಿತ್ರದಲ್ಲಿ ನಟಿಸುವ ಮೂಲಕ ಹೊರೆ ಇಳಿಸುವುದಾಗಿ ಭರವಸೆ ನೀಡಿದ್ದರು. ಆದರೆ ಒಂಭತ್ತು ವರ್ಷಗಳಾದರೂ ಈ ಮಾತನ್ನು ಕಾರ್ಯರೂಪಕ್ಕೆ ತರುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಕಮಲ್ ಹಾಸನ್ ಚಿತ್ರಕಥೆಯನ್ನು ಪದೇ ಪದೆ ಬದಲಾಯಿಸಿದ ಕಾರಣ ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಕಳಪೆ ಪ್ರದರ್ಶನಗೊಂಡಿತು. ಸದ್ಯ ನಿರ್ಮಾಣ ಸಂಸ್ಥೆಯು ಯಶಸ್ವಿ ಮಲಯಾಳಂ ಚಿತ್ರ 'ದೃಶ್ಯಂ' ಅನ್ನು ರೀಮೇಕ್ ಮಾಡಲು ಬಯಸಿತ್ತು. ಆದರೆ ಕಮಲ್ ಹಾಸನ್ ನಿರಾಕರಿಸಿದ್ದಾರೆ. ನಂತರ, ಕಮಲ್ ಹಾಸನ್ ಬೇರೆ ನಿರ್ಮಾಣ ಕಂಪನಿಯೊಂದಿಗೆ ಚಿತ್ರ ಮಾಡಲು ಹೋದರು ಎಂದು ನಿರ್ದೇಶಕರು ತಿಳಿಸಿದ್ದಾರೆ. ಈ ವಿಚಾರವನ್ನು ಬಗೆಹರಿಸುವಂತೆ ಸಹಾಯ ಕೋರಿ ಸುಭಾಷ್ ಚಂದ್ರ ಬೋಸ್ ನಿರ್ಮಾಪಕರ ಸಂಘದ ಮೊರೆ ಹೋಗಿದ್ದು, ಈವರೆಗೆ ಮಂಡಳಿ ಸ್ಪಂದಿಸಿಲ್ಲ.
ಇದನ್ನೂ ಓದಿ: ನಟ ಗುರುಚರಣ್ ಸಿಂಗ್ ನಾಪತ್ತೆ ಕೇಸ್:'ಪ್ಲ್ಯಾನ್ ಮಾಡಿ ಕಣ್ಮರೆ'; ಪೊಲೀಸರ ಶಂಕೆ - Gurucharan Singh Missing Case