ETV Bharat / entertainment

ಧನುಷ್​ ಜನ್ಮದಿನ: 'ಕುಬೇರ'ನ ಪೋಸ್ಟರ್ ಅನಾವರಣ, ಪ್ರೇಕ್ಷಕರಲ್ಲಿ ಹೆಚ್ಚಿದ ಕುತೂಹಲ - Dhanush Kubera Poster

author img

By ETV Bharat Karnataka Team

Published : Jul 28, 2024, 3:17 PM IST

ದಕ್ಷಿಣ ಚಿತ್ರರಂಗದ ಅತ್ಯಂತ ಜನಪ್ರಿಯ ನಟ ಧನುಷ್ ಅವರ ಮುಂದಿನ ಜನಪ್ರಿಯ ಚಿತ್ರ 'ಕುಬೇರ'. ಇಂದು ಅವರ ಜನ್ಮದಿನ ಹಿನ್ನೆಲೆ ಚಿತ್ರತಂಡ ಹೊಸ ಪೋಸ್ಟರ್ ಅನಾವರಣಗೊಳಿಸಿ ವಿಶೇಷವಾಗಿ ಶುಭಾಶಯ ಕೋರಿದೆ. ಹೊಸ ಪೋಸ್ಟರ್ ಶೇಖರ್ ಕಮ್ಮುಲ ನಿರ್ದೇಶನದ ಚಿತ್ರದ ಮೇಲೆ ಸಾಕಷ್ಟು ಕುತೂಹಲ ಮೂಡುವಂತೆ ಮಾಡಿದೆ.

Dhanush starrer Kubera Poster
ಧನುಷ್​ ನಟನೆಯ 'ಕುಬೇರ'ನ ಪೋಸ್ಟರ್ (Film Poster)

ದಕ್ಷಿಣ ಚಿತ್ರರಂಗದ ಖ್ಯಾತ ನಟ ಧನುಷ್ ಅವರಿಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. 41ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸೌತ್ ಸೂಪರ್ ಸ್ಟಾರ್​​ಗೆ ಕುಟುಂಬಸ್ಥರು, ಚಿತ್ರರಂಗದ ಗಣ್ಯರೂ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಅದರಂತೆ, ನಟನ ಮುಂದಿನ ಬಹುನಿರೀಕ್ಷಿತ ಚಿತ್ರದ ಪೋಸ್ಟರ್ ಅನಾವರನಗೊಂಡಿದ್ದು, ಪ್ರೇಕ್ಷಕರು ಸಿನಿಮಾ ನೋಡುವ ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

ಎರಡು ದಿನಗಳ ಹಿಂದಷ್ಟೇ ಧನುಷ್​ ಮುಖ್ಯಭೂಮಿಕೆಯ ರಾಯನ್​ ಸಿನಿಮಾ ತೆರೆಕಂಡು ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ. ಹೀಗಿರುವಾಗಲೇ ನಟನ ಮತ್ತೊಂದು ಬಹುನಿರೀಕ್ಷಿತ ಚಿತ್ರದ ಪೋಸ್ಟರ್ ಅನಾವರಣಗೊಂಡಿದೆ. ''ಕುಬೇರ'' ತಯಾರಕರು 2 ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ಧನುಷ್​​ ಅವರನ್ನು ಒಳಗೊಂಡ ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಸಿನಿಮಾ ಸುತ್ತಲಿರುವ ಕುತೂಹಲವನ್ನು ಹೆಚ್ಚಿಸಿದ್ದಾರೆ.

ಈ ಹೊಸ ಪ್ರಾಜೆಕ್ಟ್​ನಲ್ಲಿ ಧನುಷ್ ಮತ್ತು ನಿರ್ದೇಶಕ ಶೇಖರ್ ಕಮ್ಮುಲ ಅವರು ಇದೇ ಮೊದಲ ಬಾರಿಗೆ ಕೈ ಜೋಡಿಸಿದ್ದಾರೆ. ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪೋಸ್ಟರ್ ಹಂಚಿಕೊಂಡ ನಿರ್ಮಾಪಕರು "ಅಸಾಧಾರಣ ಪ್ರತಿಭೆ ಧನುಷ್​​ ಸರ್ ಅವರಿಗೆ ಜನ್ಮದಿನದ ಶುಭಾಶಯಗಳು. ಶೇಖರ್​ ಕಮ್ಮುಲ ಆ್ಯಕ್ಷನ್​ ಕಟ್​ ಹೇಳುತ್ತಿರುವ ಈ ಚಿತ್ರದಲ್ಲಿ ಮತ್ತಷ್ಟು ಅದ್ಭುತ ಪ್ರದರ್ಶನಗಳು ಮತ್ತು ಮರೆಯಲಾಗದ ಕ್ಷಣಗಳು ಇರಲಿದೆ" ಎಂದು ಬರೆದುಕೊಂಡಿದ್ದಾರೆ. ಧನುಷ್‌ ಅವರನ್ನು ಅತ್ಯಂತ ಬಲಶಾಲಿ ಮತ್ತು ದುರ್ಬಲ ಪಾತ್ರಗಳಲ್ಲಿ ಈ ಚಿತ್ರ ತೋರಿಸಲಿದೆ.

ಧನುಷ್​​ ಅವರ ನಟನಾ ಕೌಶಲ್ಯದಿಂದ, ಪೋಸ್ಟರ್ ಅದ್ಭುತವಾಗಿ ಮೂಡಿಬಂದಿದೆ. ಪ್ರತಿ ಬಾರಿಯೂ ಅತ್ಯುತ್ತಮ ಅಭಿನಯ ನೀಡುವ ಧನುಷ್‌ ಅವರಿಗೆ ಇದೊಂದು ವಿಭಿನ್ನ, ಹೊಸ ಪಾತ್ರವಾಗಿದೆ. ಹಲವು ರಾಷ್ಟ್ರೀಯ ಪ್ರಶಸ್ತಿ ವಿಜೇತರನ್ನು ಒಳಗೊಂಡಿರುವ ಅದ್ಭುತ ಪಾತ್ರವರ್ಗ ಮತ್ತು ತಂಡದೊಂದಿಗೆ, ಶೇಖರ್ ಕಮ್ಮುಲ ಅವರ ಕುಬೇರ ಸಾಕಷ್ಟು ಹೈಪ್ ಕ್ರಿಯೇಟ್​​ ಮಾಡುವಲ್ಲಿ ಯಶಸ್ಸು ಕಂಡಿದೆ.

ಇದನ್ನೂ ಓದಿ: 'ಆಕಾಸಂ ಲೊ ಒಕ ತಾರಾ': ದುಲ್ಕರ್ ಬರ್ತ್​ಡೇಗೆ ಹೊಸ ಸಿನಿಮಾ ಟೈಟಲ್​​, ಫಸ್ಟ್ ಲುಕ್​ ರಿಲೀಸ್‌ - Aakasam Lo Oka Tara

ಜಿಮ್ ಸರ್ಭ್ ಮತ್ತು ಅಕ್ಕಿನೇನಿ ನಾಗಾರ್ಜುನ ಅವರು ಈ ಬಿಗ್​​ ಬಜೆಟ್ ಸೋಷಿಯಲ್​ ಡ್ರಾಮಾದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಅಲ್ಲದೇ, ಕನ್ನಡತಿ ರಶ್ಮಿಕಾ ಮಂದಣ್ಣ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ಚಿತ್ರ ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗಲಿದೆ. ಸುನೀಲ್ ನಾರಂಗ್ ಮತ್ತು ಪುಶ್ಕುರ್ ರಾಮ್ ಮೋಹನ್ ರಾವ್ ಅವರು ಶ್ರೀ ವೆಂಕಟೇಶ್ವರ ಸಿನಿಮಾಸ್ ಮತ್ತು ಅಮಿಗೋಸ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಸಂಗೀತ ನಿರ್ದೇಶಕರಾಗಿ ದೇವಿ ಶ್ರೀ ಪ್ರಸಾದ್ ಚಿತ್ರತಂಡದ ಭಾಗವಾಗಿದ್ದಾರೆ.

ಇದನ್ನೂ ಓದಿ: 'ಇಬ್ಬನಿ ತಬ್ಬಿದ ಇಳೆಯಲಿ' ಚಿತ್ರದ 'ಹೇಳು ಗೆಳತಿ' ಹಾಡು ನೋಡಿ!: ಕುತೂಹಲ ಕೆರಳಿಸಿದ ರಕ್ಷಿತ್​ ಶೆಟ್ಟಿ ಸಿನಿಮಾ - Ibbani Tabbida Ileyali Movie

ಸಿನಿಮಾ ಸುತ್ತಲಿರುವ ಕುತೂಹಲ, ನಿರೀಕ್ಷೆಗಳ ಹೊರತಾಗಿಯೂ, ಚಿತ್ರತಂಡ ಕಥಾಹಂದರ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. ಚಿತ್ರಕ್ಕೆ, ಕಥೆಗೆ ಸಂಬಂಧಿಸಿದ ಮಾಹಿತಿಯನ್ನು ಅಧಿಕೃತವಾಗಿ ಚಿತ್ರತಂಡ ಕೊಡಬೇಕಿದೆ. ಬಿಡುಗಡೆ ದಿನಾಂಕ ಇನ್ನಷ್ಟೇ ಘೋಷಣೆ ಆಗಬೇಕಿದೆ. ಕುಬೇರ ಸಿನಿಮಾ ಮೂಲಕ ಇದೇ ಮೊದಲ ಬಾರಿಗೆ ಜಿಮ್ ಸರ್ಭ್, ರಶ್ಮಿಕಾ ಮಂದಣ್ಣ, ಅಕ್ಕಿನೇನಿ ನಾಗಾರ್ಜುನ ಮತ್ತು ಶೇಖರ್ ಕಮ್ಮುಲ ಜೊತೆ ಸೂಪರ್ ಸ್ಟಾರ್ ಧನುಷ್ ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾ ನೋಡುವ ಕಾತರದಲ್ಲಿ ಸಾಕಷ್ಟು ಅಭಿಮಾನಿಗಳು, ಸಿನಿಪ್ರಿಯರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.