ETV Bharat / entertainment

ಆಧ್ಮಾತ್ಮಿಕ ನಗರಿ ಕಾಶಿಯಲ್ಲಿ ರಣ್‌ವೀರ್​, ಕೃತಿ ಸನೋನ್, ಮನೀಶ್​ ಮಲ್ಹೋತ್ರಾ ಸಂಚಾರ - Kriti Sanoan - KRITI SANOAN

ನಟ ರಣ್‌ವೀರ್​ ಸಿಂಗ್​ ಮತ್ತು ಕೃತಿ ಸನೋನ್​ ಕಾಶಿಯ ಪ್ರಮುಖ ತಾಣಗಳಲ್ಲಿ ಸುತ್ತಾಟ ನಡೆಸಿದ್ದಾರೆ. ಖ್ಯಾತ ವಸ್ತ್ರವಿನ್ಯಾಸಕ ಮನೀಶ್​ ಮಲ್ಹೋತ್ರಾ ಇವರ ಜೊತೆಗಿದ್ದರು.

Kriti Sanoan  Ranveer Singh and Manish Malhotra travelled to the holy city of Kashi

author img

By ETV Bharat Karnataka Team

Published : Apr 16, 2024, 3:59 PM IST

ಬಾಲಿವುಡ್​ ತಾರೆಗಳಾದ​ ನಟ ರಣ್‌ವೀರ್​ ಸಿಂಗ್​ ಮತ್ತು ನಟಿ ಕೃತಿ ಸನೋನ್​ ಪ್ರಸಿದ್ಧ ಆಧ್ಯಾತ್ಮಿಕ ತಾಣ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಸುತ್ತಾಟ ನಡೆಸಿದ್ದಾರೆ. ಇದಕ್ಕೂ ಮುನ್ನ, ಖ್ಯಾತ ವಸ್ತ್ರವಿನ್ಯಾಸಕ ಮನೀಶ್​ ಮಲ್ಹೋತ್ರಾ ಅವರ ಫ್ಯಾಷನ್​ ಶೋನಲ್ಲಿ ಇಬ್ಬರು ಸ್ಟಾರ್​​ಗಳು ಬನಾರಸಿ ಬಟ್ಟೆ ಧರಿಸಿ ಮಿಂಚಿದ್ದರು. ಫ್ಯಾಷನ್​ ಶೋ ಬಳಿಕ ವಿಶ್ವನಾಥ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆದು, ಕಾಶಿಯ ವಿವಿಧ ತಾಣಗಳಲ್ಲಿ ಸುತ್ತಾಡಿದ್ದಾರೆ.

ಇದರ ಚಿತ್ರಗಳನ್ನು ಕೃತಿ ಸನೋನ್​ ತಮ್ಮ ಇನ್ಸ್​ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಳದಿ ಬಣ್ಣದ ಉಡುಗೆಯಲ್ಲಿ ಕೃತಿ ಕಂಡುಬಂದರೆ, ರಣ್‌ವೀರ್​​​ ಬಿಳಿ ಕುರ್ತಾ ಪೈಜಾಮ ಧರಿಸಿದ್ದರು. ಇವರ ಪ್ರಯಾಣಕ್ಕೆ ಮನೀಶ್​​​ ಮಲ್ಹೋತ್ರಾ ಜೊತೆಯಾಗಿದ್ದರು. ಅವರು ಬಿಳಿ ಪೈಜಾಮ ಮತ್ತು ಗುಲಾಬಿ ಕುರ್ತಾದಲ್ಲಿ ಕಂಡುಬಂದಿದ್ದಾರೆ.

ಘಾಟ್​​ಗಳ ಮುಂದಿನ ಅನೇಕ ಫೋಟೋಗಳನ್ನು ಕೃತಿ ಪೋಸ್ಟ್ ಮಾಡಿದ್ದಾರೆ. ರಣ್‌ವೀರ್​​​ ಕೂಡ ಆಧ್ಯಾತ್ಮ ಪ್ರವಾಸದ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ರಣ್‌ವೀರ್​ ಅಲ್ಲಿನ ಸ್ಥಳೀಯರು ಮತ್ತು ಹೂ ಮಾರಾಟಗಾರರೊಂದಿಗೆ ಮಾತುಕತೆ ನಡೆಸಿದ್ದಾರೆ. ಮಹಿಳಾ ಅಭಿಮಾನಿಗಳೊಂದಿಗೂ ಸಂವಾದ ನಡೆಸಿದ್ದಾರೆ.

ಕಾಶಿಯಲ್ಲಿ ನಟಿ ಕೃತಿ ಸನೋನ್​
ಕಾಶಿಯಲ್ಲಿ ನಟಿ ಕೃತಿ ಸನೋನ್​

ಇಂಡಿಯನ್​ ಮೈನಾರಿಟಿ ಫೌಂಡೇಷನ್​​ ಏಪ್ರಿಲ್​ 13-14ರಂದು ನಮೋ ಘಾಟ್​ನಲ್ಲಿ ವಾರಣಾಸಿಯ ಕೈಮಗ್ಗದ ಕರಕುಶಲಗಳ ಬಟ್ಟೆಗಳ ಫ್ಯಾಷನ್​ ಶೋ ಆಯೋಜಿಸಿತ್ತು. ಈ ಫ್ಯಾಷನ್​ ಶೋನಲ್ಲಿ ಮನೀಷ್​ ಮಲ್ಹೋತ್ರಾ ಇಲ್ಲಿನ ಪ್ರಸಿದ್ಧ ಬನಾರಸಿ ರೇಷ್ಮೆಯಿಂದ ತಯಾರಿಸಿದ ದಿರಿಸನ್ನು ಕೃತಿ ಮತ್ತು ರಣ್‌ವೀರ್​​​ ತೊಟ್ಟು ಹೆಜ್ಜೆ ಹಾಕಿದ್ದರು.

ಇದನ್ನೂ ಓದಿ: ಬನಾರಸ್​ ಸೀರೆಯ ಪ್ರಚಾರದಲ್ಲಿ ರಣವೀರ್ ಸಿಂಗ್, ಕೃತಿ ಸನೋನ್: ಕಾಶಿಘಾಟ್​ನಲ್ಲಿ ರ‍್ಯಾಂಪ್ ವಾಕ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.