ETV Bharat / entertainment

ಕನ್ನಡದ 'ಕಪ್ಪು ಬಿಳುಪಿನ ನಡುವೆ' ಚಿತ್ರದ ಟ್ರೈಲರ್ ಮೆಚ್ಚಿದ ಕಾಲಿವುಡ್ ನಟ - ವಸಂತ್ ವಿಷ್ಣು

ಕನ್ನಡದ ಕಪ್ಪು ಬಿಳುಪಿನ ನಡುವೆ ಚಿತ್ರದ ಟ್ರೈಲರ್​ನ್ನು ಕಾಲಿವುಡ್​ ನಟ ವಿಜಯ್​ ಸೇತುಪತಿ ಮೆಚ್ಚಿದ್ದಾರೆ.

ಕಪ್ಪು ಬಿಳುಪಿನ ನಡುವೆ
ಕಪ್ಪು ಬಿಳುಪಿನ ನಡುವೆ
author img

By ETV Bharat Karnataka Team

Published : Feb 20, 2024, 7:29 PM IST

'ಕಪ್ಪು ಬಿಳುಪಿನ ನಡುವೆ' ಚಿತ್ರ ಶೀರ್ಷಿಕೆಯಿಂದಲೇ ಗಾಂಧಿನಗರದಲ್ಲಿ ಸುದ್ದಿಯಲ್ಲಿದೆ. ಸದ್ಯ ಟ್ರೈಲರ್ ಹಾಗೂ ಹಾಡುಗಳಿಂದ ಗಮನ‌ ಸೆಳೆಯುತ್ತಿರುವ ಈ ಚಿತ್ರದ ಟ್ರೈಲರ್​ಗೆ ಕಾಲಿವುಡ್ ನಟ‌ ವಿಜಯ್ ಸೇತುಪತಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಭಿನ್ನ ಕಥೆಯ ಹಾರರ್ ಚಿತ್ರ 'ಕಪ್ಪು ಬಿಳುಪಿನ ನಡುವೆ' ಇದೇ ಫೆಬ್ರವರಿ 23 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ವಸಂತ್ ವಿಷ್ಣು ಈ ಚಿತ್ರವನ್ನು ನಿರ್ದೇಶಿಸುವುದರೊಂದಿಗೆ, ನಾಯಕನಾಗಿಯೂ ಅಭಿನಯಿಸಿದ್ದಾರೆ. ಈ ಚಿತ್ರದ ಟ್ರೈಲರ್ ವೀಕ್ಷಿಸಿದ ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದ್ದಾರೆ. ಕನ್ನಡ ಹಾಗೂ ತಮಿಳಿನಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದೆ.

'ಕಪ್ಪು ಬಿಳುಪಿನ ನಡುವೆ' ಹಾರರ್ ಚಿತ್ರವಾಗಿದೆ. ಕಪ್ಪು ಬಿಳುಪನ್ನು ಕತ್ತಲು, ಬೆಳಕಿಗೆ ಹೋಲಿಸಬಹುದು. ಪಾಸಿಟಿವ್ ಹಾಗೂ ನೆಗಟಿವ್ ಎನರ್ಜಿ ಅಂತಲೂ ಎನ್ನಬಹುದು. ಯೂಟ್ಯೂಬರ್​ಗಳ ಸುತ್ತ ಈ ಚಿತ್ರದ ಕಥೆ ಸುತ್ತುತ್ತದೆ ಎಂದು ವಸಂತ್ ವಿಷ್ಣು ಅವರು ತಿಳಿಸಿದ್ದಾರೆ.

ವಸಂತ್ ವಿಷ್ಣು ಅವರಿಗೆ ನಾಯಕಿಯಾಗಿ ವಿದ್ಯಾಶ್ರೀ ಗೌಡ ನಟಿಸಿದ್ದಾರೆ. ಬಿರಾದಾರ್, ಶರತ್ ಲೋಹಿತಾಶ್ವ, ಹಾಸ್ಯ ನಟ ಹರೀಶ್, ನವೀನ್ ರಘು, ಮಾಹೀನ್ ಭಾರದ್ವಾಜ್, ತೇಜಸ್ವಿನಿ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಚಿತ್ರದಲ್ಲಿ ಮೂರು ಹಾಡುಗಳಿದ್ದು, ಡಾ. ವಿ ನಾಗೇಂದ್ರ ಪ್ರಸಾದ್ ಹಾಡುಗಳನ್ನು ಬರೆದಿದ್ದಾರೆ. ರಿಶಾಲ್ ಸಾಯಿ ಸಂಗೀತ ನೀಡಿದ್ದಾರೆ. ಕೆ.ಜಿ.ಎಫ್ ಖ್ಯಾತಿಯ ಸಂತೋಷ್ ವೆಂಕಿ, ಶ್ರೀಧರ್ ಕಶ್ಯಪ್ ಹಾಡುಗಳನ್ನು ಹಾಡಿದ್ದಾರೆ. ಪ್ರವೀಣ್ ಶೆಟ್ಟಿ ಛಾಯಾಗ್ರಹಣ ಹಾಗೂ ಅಮಿತ್ ಜಾವಲ್ಕರ್ ಸಂಕಲನ ಈ ಚಿತ್ರಕ್ಕಿದೆ. ವೃತ್ತಿಯಲ್ಲಿ ಪಾರಂಪರಿಕ ಆಯುರ್ವೇದ ವೈದ್ಯರಾಗಿರುವ ಧರ್ಮೇಂದ್ರ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ : 'ಮೆಜೆಸ್ಟಿಕ್'ಗೆ ಮರಿದಾಸನ ಎಂಟ್ರಿ: ಶಿವರಾತ್ರಿಯಂದೇ ಸೆಟ್ಟೇರಲಿದೆ ಮೆಜೆಸ್ಟಿಕ್ 2

ETV Bharat Logo

Copyright © 2025 Ushodaya Enterprises Pvt. Ltd., All Rights Reserved.