ETV Bharat / entertainment

ಕಿಚ್ಚ vs ಉಪ್ಪಿ: ಮ್ಯಾಕ್ಸ್ - ಯುಐ ಬಾಕ್ಸ್​ ಆಫೀಸ್​ ಫೈಟ್​​; ಯಾರಾದರೂ ಹಿಂದೆ ಸರಿಯುತ್ತಾರಾ?

ಅಭಿನಯ ಚಕ್ರವರ್ತಿ ಸುದೀಪ್​ ಅವರ ಮ್ಯಾಕ್ಸ್ ಮತ್ತು ರಿಯಲ್​ ಸ್ಟಾರ್​ ಉಪೇಂದ್ರ ಅವರ ಯುಐ ಸಿನಿಮಾ ಕೆಲವೇ ದಿನಗಳ ಅಂತರದಲ್ಲಿ ಬಿಡುಗಡೆ ಆಗಲಿದ್ದು, ಬಾಕ್ಸ್ ಆಫೀಸ್​ ಫೈಟ್​ ಪಕ್ಕಾ ಆಗಿದೆ.

Kiccha vs Uppi
ಕಿಚ್ಚ vs ಉಪ್ಪಿ (Photo: ETV Bharat)
author img

By ETV Bharat Entertainment Team

Published : Nov 29, 2024, 5:05 PM IST

ಕನ್ನಡ ಚಿತ್ರರಂಗದಲ್ಲಿ ಡಿಸೆಂಬರ್ ಎಂದರೆ ಲಕ್ಕಿ ಮಂತ್ ಅನ್ನೋ ನಂಬಿಕೆಯಿದೆ. ಈ ಬಾರಿ ಲಕ್ಕಿ ಡಿಸೆಂಬರ್ ಮೇಲೆ ರಿಯಲ್ ಸ್ಟಾರ್ ಉಪ್ಪಿ ಕಣ್ಣಿಟ್ಟಿದ್ರು. ಉಪೇಂದ್ರ ನಟಿಸಿ, ನಿರ್ದೇಶಿಸಿರುವ ''ಯು ಐ'' ಸಿನಿಮಾ ಡಿಸೆಂಬರ್​​ 20ಕ್ಕೆ ಬಿಡುಗಡೆಯಾಗಲಿದೆ ಎಂದು ಈಗಾಗಲೇ ಘೋಷಿಸಲಾಗಿತ್ತು. ಆದ್ರೀಗ ಕಿಚ್ಚ ಸುದೀಪ್ ಕೂಡಾ ಅಖಾಡಕ್ಕೆ ಇಳಿದಿದ್ದಾರೆ. ಯು ಐ ತೆರೆಗೆ ಬಂದು ಐದೇ ದಿನಗಳ ಅಂತರದಲ್ಲಿ ಕಿಚ್ಚನ 'ಮ್ಯಾಕ್ಸ್' ಕೂಡಾ ರಿಲೀಸ್ ಆಗೋದು ಫಿಕ್ಸ್ ಆಗಿದೆ. ಸ್ಯಾಂಡಲ್​ವುಡ್​ನ ಎರಡು ಬಿಗ್ ಸಿನಿಮಾಗಳ ನಡುವೆ ಪ್ಯಾನ್ ಇಂಡಿಯಾ ವಾರ್ ಆಗೋದಿಕ್ಕೆ ವೇದಿಕೆ ಸಜ್ಜಾಗಿದೆ.

ಜಿದ್ದಾಜಿದ್ದಿಗೆ ಬಿದ್ದ ಕಿಚ್ಚ ಉಪ್ಪಿ: ಹೌದು, 2024ರ ವರ್ಷಾಂತ್ಯ ಒಂದು ಬಿಗ್ ಸ್ಟಾರ್ ಸಿನಿಮಾ ವಾರ್​​ಗೆ ಸ್ಯಾಂಡಲ್​ವುಡ್​ ಸಾಕ್ಷಿಯಾಗಲಿದೆ. ರಿಯಲ್ ಸ್ಟಾರ್ ಉಪೇಂದ್ರ ಮತ್ತು ಅಭಿನಯ ಚಕ್ರವರ್ತಿ ಸುದೀಪ್​​ ಜಿದ್ದಾಜಿದ್ದಿಗೆ ಬಿದ್ದಿದ್ದಾರೆ. ಜಸ್ಟ್ ಐದೇ ದಿನಗಳ ಗ್ಯಾಪ್​ನಲ್ಲಿ ಈ ಇಬ್ಬರೂ ಸೂಪರ್​​ ಸ್ಟಾರ್​ಗಳ ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗುತ್ತಿವೆ. ಉಪ್ಪಿಯ ಯು ಐ ಡಿಸೆಂಬರ್ 20ರಂದು ತೆರೆಗೆ ಬಂದ್ರೆ, ಡಿಸೆಂಬರ್ 25ಕ್ಕೆ ಕಿಚ್ಚನ ಮ್ಯಾಕ್ಸ್ ರಿಲೀಸ್ ಆಗಲಿದೆ.

Kiccha sudeep
ಅಭಿನಯ ಚಕ್ರವರ್ತಿ ಸುದೀಪ್​ (Photo: ETV Bharat)

ಬಾಕ್ಸ್​ ಆಫೀಸ್​ ಫೈಟ್​ ಫಿಕ್ಸ್ ಪ್ಯಾನ್ ಇಂಡಿಯಾ ವಾರ್: ಅಸಲಿಗೆ ಯುಐ ಚಿತ್ರತಂಡ ಎರಡು ತಿಂಗಳ ಹಿಂದೆಯೇ ಡಿಸೆಂಬರ್ 20ರಂದು ಸಿನಿಮಾ ಬಿಡುಗಡೆಗೊಳಿಸುವುದಾಗಿ ಘೋಷಿಸಿತ್ತು. ಇತ್ತೀಚೆಗಷ್ಟೇ ಮ್ಯಾಕ್ಸ್​ ರಿಲೀಸ್​ ಡೇಟ್​ ಕೂಡಾ ಅನೌನ್ಸ್​​ ಮಾಡಲಾಗಿದೆ. ಡಿಸೆಂಬರ್ 25ಕ್ಕೆ ಸುದೀಪ್​ ಸಿನಿಮಾ ಬಿಡುಗಡೆಯಾಗಲಿದ್ದು, ಬಾಕ್ಸ್​ ಆಫೀಸ್​ ಫೈಟ್​ ಫಿಕ್ಸ್ ಆಗಿದೆ. ರಿಯಲ್ ಸ್ಟಾರ್​ ಹಾಗೂ ಕಿಚ್ಚನ ಎರಡೂ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಹಾಗಾಗಿ, ಸ್ಯಾಂಡಲ್​ವುಡ್​​ ಸ್ಟಾರ್ಸ್ ಸಿನಿಮಾ ವಾರ್ ಕರುನಾಡಲ್ಲಷ್ಟೇ ಅಲ್ಲದೇ ಪ್ಯಾನ್ ಇಂಡಿಯಾದ ಉದ್ದಕ್ಕೂ ನಡೆಯಲಿದೆ. ವರ್ಷಾಂತ್ಯದ ಸಿನಿ ರೇಸ್​ನಲ್ಲಿ ಗೆಲ್ಲೋರ್ಯಾರು ಎಂಬುದರ ಮೇಲೆ ದೇಶವೇ ಕಣ್ಣಿಟ್ಟಿದೆ.

ಯು ಐ ಸಿನಿಮಾ: ರಿಯಲ್ ಸ್ಟಾರ್ ಉಪೇಂದ್ರ ಬಹಳ ವರ್ಷಗಳ ಗ್ಯಾಪ್ ನಂತರ ನಿರ್ದೇಶನ ಮಾಡಿರೋ ಸಿನಿಮಾ ಯುಐ. ಬುದ್ದಿವಂತ ಉಪ್ಪಿ ನಿರ್ದೇಶನ ಮಾಡ್ತಾರೆ ಅಂದ್ರೆ ಒಂದು ಬಾರಿ ಇಡೀ ಇಂಡಿಯನ್ ಸಿನಿ ಇಂಡಸ್ಟ್ರಿ ತಿರುಗಿನೋಡುತ್ತೆ. ಯಾಕಂದ್ರೆ ಉಪ್ಪಿ ನಿರ್ದೇಶಿಸಿರುವ ಸಿನಿಮಾಗಳೆಲ್ಲಾ ಅಂಥಾ ಮಾಸ್ಟರ್​ ಪೀಸ್​​ಗಳೇ. ಹಾಗಾಗಿ ಸಹಜವಾಗೇ ಯು ಐ ಬಗ್ಗೆ ದೊಡ್ಡ ಹೈಪ್ ಸೃಷ್ಟಿಯಾಗಿದೆ. ಚಿತ್ರದ ಡಿಫ್ರೆಂಟ್ ಪೋಸ್ಟರ್ಸ್, ಟ್ರೋಲ್ ಆಗುತ್ತೆ ಹಾಡು ಮತ್ತು ಟೀಸರ್ ಸಿನಿಪ್ರಿಯರ ನಿರೀಕ್ಷೆಗಳನ್ನು ಹೆಚ್ಚಿಸಿವೆ. ಅದ್ರಲ್ಲೂ ವಿಭಿನ್ನ ಟೀಸರ್ ಮೂಲಕ ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿದ್ದಾರೆ ರಿಯಲ್ ಸ್ಟಾರ್. ಸಿನಿಮಾಗೆ ಜಿ.ಮನೋಹರನ್ ಮತ್ತು ಕೆ.ಪಿ ಶ್ರೀಕಾಂತ್ ಬಂಡವಾಳ ಹೂಡಿದ್ದು, ವೇಣು ಸಿನಿಮಾಟೋಗ್ರಫಿ ಮತ್ತು ಅಜನೀಶ್ ಲೋಕನಾಥ್ ಸಂಗೀತವಿದೆ. ಕನ್ನಡ ಜೊತೆಗೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲೂ ಯುಐ ಏಕಕಾಲಕ್ಕೆ ರಿಲೀಸ್ ಆಗಲಿದೆ.

ಎರಡೂವರೆ ವರ್ಷಗಳ ನಂತರ ಕಿಚ್ಚನ ಸಿನಿಮಾ: ಮತ್ತೊಂದೆಡೆ ಕಿಚ್ಚ ಸುದೀಪ್ ಅಭಿನಯದ ಕೊನೆ ಸಿನಿಮಾ ತೆರೆಗೆ ಬಂದಿದ್ದು 2022ರಲ್ಲಿ. ಬಹುತೇಕ ಎರಡೂವರೆ ವರ್ಷಗಳ ನಂತರ ಬಿಡುಗಡೆಯಾಗುತ್ತಿರುವ ಮ್ಯಾಕ್ಸ್​ ಬಗ್ಗೆ ಮ್ಯಾಕ್ಸಿಮಮ್ ಹೈಪ್ ಕ್ರಿಯೇಟ್ ಆಗಿದೆ. ಫ್ಯಾನ್ಸ್ ಮ್ಯಾಕ್ಸ್ ಕಣ್ತುಂಬಿಕೊಳ್ಲಲು ತುದಿಗಾಲ ಮೇಲೆ ನಿಂತಿದ್ದಾರೆ. ಸಿನಿಮಾದಲ್ಲಿ ಕಿಚ್ಚ ಅರ್ಜುನ್ ಮಹಾಕ್ಷಯ್ ಅನ್ನೋ ಸೂಪರ್ ಕಾಪ್ ರೋಲ್ ನಿರ್ವಹಿಸಿದ್ದು, ವೀರ ಮದಕರಿ, ಕೆಂಪೇಗೌಡ ಬಳಿಕ ಮತ್ತೊಮ್ಮೆ ಖಾಕಿ ತೊಟ್ಟು ಅಬ್ಬರಿಸಲು ಸಜ್ಜಾಗಿದ್ದಾರೆ.

Kiccha sudeep
ಕಿಚ್ಚ ಸುದೀಪ್​ (Photo: ETV Bharat)

ವಿಜಯ್ ಕಾರ್ತಿಕೇಯ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಪ್ರತಿಷ್ಠಿತ ವಿ ಕ್ರಿಯೇಷನ್ಸ್ ಸಂಸ್ಥೆ ಚಿತ್ರಕ್ಕೆ ಬಂಡವಾಳ ಹೂಡಿದೆ. ಟೀಸರ್​ ನೋಡ್ತಿದ್ರೆ ಇದೊಂದು ಹೈವೋಲ್ಟೇಜ್ ಆ್ಯಕ್ಷನ್ ಡ್ರಾಮಾ ಅನ್ನೋದು ಗೊತ್ತಾಗುತ್ತದೆ. ಹಾಗಾಗಿ ಇಯರ್ ಎಂಡ್​ಗೆ ಮಸ್ತ್ ಟ್ರೀಟ್ ಫಿಕ್ಸ್ ಅಂತಾ ಕಿಚ್ಚನ ಫ್ಯಾನ್ಸ್ ಎಕ್ಸೈಟ್ ಆಗಿದ್ದಾರೆ.

ಬೆರಳೆಣಿಕೆ ದಿನಗಳ ಅಂತರದಲ್ಲಿ ಸೂಪರ್​ ಸ್ಟಾರ್​ಗಳ ಸಿನಿಮಾಗಳು ತೆರೆ ಕಾಣುತ್ತಿವೆ. ಈ ಸ್ಟಾರ್ ವಾರ್ ತಪ್ಪಿಸಬಹುದಿತ್ತು ಅನ್ನೋ ಮಾತುಗಳು ಫ್ಯಾನ್ಸ್ ಕಡೆಯಿಂದ ಕೇಳಿ ಬರುತ್ತಿವೆ. ಆದ್ರೆ ಈ ನಿರ್ಧಾರದ ಹಿಂದಿನ ಕಾರಣ ಬೇರೇನೇ ಇದೆ. ಯುಐ ಸಿನಿಮಾ ಈ ಹಿಂದೆ ಅಕ್ಟೋಬರ್ ತಿಂಗಳಲ್ಲಿ ತೆರೆಗೆ ಬರಲು ತಯಾರಿ ನಡೆಸಿತ್ತು. ಆದ್ರೆ ಸಿಜಿ ವರ್ಕ್ ತಡವಾದ ಹಿನ್ನೆಲೆ ಡಿಸೆಂಬರ್ 20ಕ್ಕೆ ಬಿಡುಗಡೆ ದಿನಾಂಕವನ್ನು ಫಿಕ್ಸ್ ಮಾಡಲಾಯ್ತು. ಸಿನಿಮಾಗೆ ದೊಡ್ಡ ಬಂಡವಾಳ ಹೂಡಿಕೆ ಮಾಡಿ, ಎರಡೂವರೆ ವರ್ಷಗಳ ಕಾಲ ಕಾದಿರೋ ನಿರ್ಮಾಪಕರು ಸಿನಿಮಾ ರಿಲೀಸ್ ಮಾಡಲೇಬೇಕಾದ ಒತ್ತಡದಲ್ಲಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್​​ ಚೆಕ್​: ಐಶ್ವರ್ಯಾ ರೈ ಮೊಬೈಲ್​​ ವಾಲ್​ಪೇಪರ್​ನಲ್ಲಿರೋದು ಅಮಿತಾಭ್​​ ಬಚ್ಚನ್​ ಅಲ್ಲ; ಹಾಗಾದ್ರೆ ಯಾರು? ವಿಡಿಯೋ ಇಲ್ಲಿದೆ

ಇನ್ನೂ ಮ್ಯಾಕ್ಸ್ ಸಿನಿಮಾದ ಕಥೆಯೂ ಬಹುತೇಕ ಇದೇ ಆಗಿದೆ. ಕಾರಣಾಂತರಗಳಿಂದ ಹಲವು ಬಾರಿ ಮ್ಯಾಕ್ಸ್ ಬಿಡುಗಡೆ ತಡವಾಗಿದೆ. ಒಂದು ಹಂತದಲ್ಲಿ ಖುದ್ದು ಕಿಚ್ಚ ಸುದೀಪ್ ಅವರೇ ಈ ಬಗ್ಗೆ ಅಸಮಧಾನಗೊಂಡಿದ್ರು. ನಿರ್ಮಾಪಕರು ಕೂಡ ವರ್ಷಾಂತ್ಯಕ್ಕೆ ಸಿನಿಮಾ ರಿಲೀಸ್ ಮಾಡೋದು ಬೆಸ್ಟ್ ಅನ್ನೋ ತೀರ್ಮಾನಕ್ಕೆ ಬಂದಿದ್ದಾರೆ. ಆದ್ರೆ ಬಿಡುಗಡೆ ದಿನಾಂಕ ಬದಲಾಗುತ್ತಾ ಎಂಬ ಪ್ರಶ್ನೆಯೂ ಅಭಿಮಾನಿ ಬಳಗದಲ್ಲಿ ಎದ್ದಿದೆ.

ಇದನ್ನೂ ಓದಿ: ಎಸ್.ಪಿ.ಬಾಲಸುಬ್ರಹ್ಮಣ್ಯಂ ಸ್ಮಾರಕ ನಿರ್ಮಾಣಕ್ಕೆ ಪುತ್ರನಿಂದ 'ಸಂಗೀತ ಸಂಜೆ' ಆಯೋಜನೆ

ಕಿಚ್ಚ ಸುದೀಪ್ ಹಾಗೂ ಉಪೇಂದ್ರ ನಡುವೆಯೇನೂ ಪೈಪೋಟಿ ಇಲ್ಲ. ಈ ಇಬ್ಬರೂ ಹಿಂದೆ ಒಟ್ಟಾಗಿ ಮುಕುಂದ ಮುರಾರಿ ಅನ್ನೋ ಸಿನಿಮಾ ಕೂಡಾ ಮಾಡಿದ್ರು. ಇದೀಗ ಒಂದು ವಾರದ ಅಂತರದಲ್ಲಿ ಮುಕುಂದ ಮತ್ತು ಮುರಾರಿ ಇಬ್ಬರೂ ಬರುತ್ತಿದ್ದಾರೆ. ವರ್ಷಾಂತ್ಯಕ್ಕೆ ಬರಲಿರೋ ಈ ಎರಡೂ ಸಿನಿಮಾಗಳು ಗೆಲ್ಲಲಿ. ಎರಡು ಚಿತ್ರಗಳು ಸೂಪರ್ ಹಿಟ್ ಆಗುವ ಮೂಲಕ ಹೊಸ ವರ್ಷಕ್ಕೆ ಕನ್ನಡ ಚಿತ್ರರಂಗಕ್ಕೆ ಹೊಸ ಮುನ್ನಡಿ ಬರೆಯಲಿ ಅನ್ನೋದು ಅಭಿಮಾನಿಗಳ ಹಾರೈಕೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.