ಭಾರತದ ಪ್ರತಿಷ್ಠಿತ ಫಿಲ್ಮ್ ಫೆಸ್ಟಿವಲ್ಗಳಲ್ಲಿ ಒಂದಾಗಿರುವ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡದ 'ಕೆರೆಬೇಟೆ' ಮತ್ತು 'ವೆಂಕ್ಯಾ' ಸಿನಿಮಾಗಳು ಪ್ರದರ್ಶನವಾಗಲಿದೆ.
55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್‌ಎಫ್‌ಐ) ನವೆಂಬರ್ 20ರಿಂದ 28ರವರೆಗೆ ಗೋವಾದ ಪಣಜಿಯಲ್ಲಿ ನಡೆಯಲಿದೆ. ಇಲ್ಲಿ ಭಾರತೀಯ ಚಿತ್ರರಂಗದ ವೈವಿಧ್ಯತೆ ಪ್ರದರ್ಶನಗೊಳ್ಳಲಿದೆ.
ಬಾಲಿವುಡ್ನ 'ಸ್ವಾತಂತ್ರ್ಯ ವೀರ್ ಸಾವರ್ಕರ್' ಸಿನಿಮಾ ಮೊದಲು ಪ್ರದರ್ಶನಗೊಳ್ಳಲಿದೆ. ರಣ್ದೀಪ್ ಹೂಡಾ ನಿರ್ದೇಶಿಸಿ, ನಟಿಸಿರುವ ಸ್ವಾತಂತ್ರ್ಯ ವೀರ್ ಸಾವರ್ಕರ್ ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ಮಾರ್ಚ್‌ನಲ್ಲಿ ಬಿಡುಗಡೆಯಾಗಿತ್ತು. ಚಿತ್ರ ಸ್ವಾತಂತ್ರ್ಯ ಹೋರಾಟಗಾರನ ಜೀವನಚರಿತ್ರೆಯನ್ನು ಹೊಂದಿದೆ.
Swatantrya Veer Savarkar, will be the opening feature film at the 55th International Film Festival of India, Goa. Directed by Randeep Hooda, this powerful portrayal delves into the life of a revolutionary figure, shedding light on India’s fight for independence.#IndianPanorama pic.twitter.com/qSPCEfqYC7
— International Film Festival of India (@IFFIGoa) October 24, 2024
ಇಂಡಿಯನ್ ಪನೋರಮಾ ವಿಭಾಗದಲ್ಲಿ 25 ಫೀಚರ್ ಫಿಲ್ಮ್ಸ್ ಪ್ರದರ್ಶನಗೊಳ್ಳಲಿದೆ. ಎಂಟ್ರಿಯಾದ 384 ಚಿತ್ರಗಳ ಪೈಕಿ 25 ಸಿನಿಮಾಗಳು ಆಯ್ಕೆ ಆಗಿವೆ. ಈ ಪೈಕಿ ಕೆರೆಬೇಟೆ (ಕನ್ನಡ), ವೆಂಕ್ಯಾ (ಕನ್ನಡ), ಓಂಕೋ ಕಿ ಕೋಥಿನ್ (ಬಂಗಾಳಿ), ಕರ್ಕೆನ್ (ಗಾರೋ), ಆರ್ಟಿಕಲ್ 370 (ಹಿಂದಿ), ಶ್ರೀಕಾಂತ್ (ಹಿಂದಿ), ಆಡುಜೀವಿತಂ (ಮಲಯಾಳಂ), ರಾವ್ಸಾಹೇಬ್ (ಮರಾಠಿ), ಜಿಗರ್ತಂಡ ಡಬಲ್ ಎಕ್ಸ್ (ತಮಿಳು) ಮತ್ತು 35 ಚಿನ್ನ ಕಥಾ ಕಾದು (ತೆಲುಗು) ಚಿತ್ರಗಳು ಸೇರಿ ಹಲವು ಇವೆ. ಕಾರ್ಖಾನು (ಗುಜರಾತಿ), 12th ಫೇಲ್ (ಹಿಂದಿ), ಮಂಜುಮ್ಮೆಲ್ ಬಾಯ್ಸ್ (ಮಲಯಾಳಂ), ಸ್ವರ್ಗರತ್ (ಅಸ್ಸಾಮಿ) ಮತ್ತು ಕಲ್ಕಿ 2898 ಎಡಿ (ತೆಲುಗು)ನಂತಹ ಐದು ಮೈನ್ಸ್ಟ್ರೀಮ್ ಸಿನಿಮಾಗಳಿವೆ.
ಫೀಚರ್ ಫಿಲ್ಮ್ ಜೊತೆ ಜೊತೆಗೆ, 20 ನಾನ್ ಫೀಚರ್ ಸಿನಿಮಾಗಳು ಸಹ ಪ್ರದರ್ಶನಗೊಳ್ಳಲಿವೆ. ಲಡಾಖಿ ಭಾಷೆಯ ಘರ್ ಜೈಸಾ ಕುಚ್ ಚಿತ್ರ ಮೊದಲು ಪ್ರದರ್ಶನಗೊಳ್ಳಲಿದೆ. ಈ ಆಯ್ಕೆ ಪ್ರಕ್ರಿಯೆಯು ಚಿತ್ರರಂಗದ ಹೆಸರಾಂತ ವ್ಯಕ್ತಿಗಳನ್ನು ಒಳಗೊಂಡಿತ್ತು. ಸಿನಿಮಾಗಳ ಮೂಲಕ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಶ್ರೀಮಂತಿಕೆಯನ್ನು ಪ್ರತಿನಿಧಿಸುವ ಪ್ರಯತ್ನವಿದು. ಇಂಡಿಯನ್ ಫಿಲ್ಮ್ಮೇಕರ್ಗಳ ಕಲಾತ್ಮಕ ಅಭಿವ್ಯಕ್ತಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ 'ಇಂಡಿಯನ್ ಪನೋರಮಾ'ವು 1978ರಲ್ಲಿ ಪ್ರಾರಂಭವಾದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅವಿಭಾಜ್ಯ ಅಂಗವಾಗಿದೆ.
ಇನ್ನೂ ಕನ್ನಡದ ಸಿನಿಮಾಗಳನ್ನು ಗಮನಿಸುವುದಾದ್ರೆ, ಗೌರಿಶಂಕರ್ ಮುಖ್ಯಭೂಮಿಕೆಯ ಮತ್ತು ರಾಜ್ ಗುರು ನಿರ್ದೇಶನದ 'ಕೆರೆಬೇಟೆ' ಸಿನಿಮಾ ಮಾರ್ಚ್ ತಿಂಗಳಲ್ಲಿ ತೆರೆಕಂಡು ಯಶಸ್ವಿಯಾಗಿತ್ತು. ಕಮರ್ಷಿಯಲಿ ದೊಡ್ಡ ಮಟ್ಟದಲ್ಲಿ ಯಶ ಕಾಣದಿದ್ದರೂ ಕೂಡಾ ಜನಮನ ಗೆದ್ದಿರುವುದು ತಂಡದ ಶ್ರಮಕ್ಕೆ ಸಿಕ್ಕ ಫಲ ಎಂದು ಚಿತ್ರತಂಡ ಹೇಳಿಕೊಂಡಿತ್ತು.
ಅಪ್ಪಟ ಹಳ್ಳಿ ಸೊಗಡಿನ ಚಿತ್ರ ಮಾರ್ಚ್ 15ಕ್ಕೆ ರಾಜ್ಯಾದ್ಯಂತ ತೆರೆಕಂಡಿತ್ತು. ಜನಮನ ಸಿನಿಮಾ ಸಂಸ್ಥೆಯಡಿ ಮೂಡಿಬಂದ ಸಿನಿಮಾ ಮಲೆನಾಡಿನ ಮೀನು ಬೇಟೆ ಸಂಸ್ಕೃತಿಯನ್ನು ಒಳಗೊಂಡಿತ್ತು. ಗೌರಿಶಂಕರ್, ಬಿಂದು ಗೌಡ ಜೊತೆಗೆ ಗೋಪಾಲ್ ದೇಶಪಾಂಡೆ, ಸಂಪತ್ ಕುಮಾರ್ ಹರಿಣಿ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದರು. ನಂತರ, ಬೆಂಬಲ ಸೂಚಿಸಿದ ಸರ್ವರಿಗೂ ಧನ್ಯವಾದ ಅರ್ಪಿಸುವ ನಿಟ್ಟಿನಲ್ಲಿ ಚಿತ್ರತಂಡ 50 ದಿನಗಳ ಸಂಭ್ರಮಾಚರಣೆಯನ್ನೂ ಹಮ್ಮಿಕೊಂಡಿತ್ತು.
ಇದನ್ನೂ ಓದಿ: ಒಂದೇ ಒಂದು ಡೈಲಾಗ್ ಇಲ್ಲ, ಶಿವಣ್ಣನ ಕಣ್ಣೋಟವೇ ಸಾಕು: ಕುತೂಹಲ ಕೆರಳಿಸಿದ 'ಭೈರತಿ ರಣಗಲ್' ಟೀಸರ್
ಪಣಜಿಯಲ್ಲಿ ನಡೆಯಲಿರುವ ಚಿತ್ರೋತ್ಸವದಲ್ಲಿ ದೇಶ ವಿದೇಶದ ಹಲವರು ಭಾಗಿಯಾಗಲಿದ್ದಾರೆ. ಜಾಗತಿಕ ಮಟ್ಟದಲ್ಲಿ ಮನ್ನಣೆ ಹೊಂದಿರುವ ಈ ಸಿನಿಮೋತ್ಸವದಲ್ಲಿ 'ವೆಂಕ್ಯಾ' ಪ್ರದರ್ಶನ ಕಾಣಲಿವೆ. ಡೊಳ್ಳು ಸಿನಿಮಾ ಮೂಲಕ ನಿರ್ಮಾಣಕ್ಕಿಳಿದು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಬಾಚಿಕೊಂಡಿದ್ದ ಪವನ್ ಒಡೆಯರ್ ಹಾಗೂ ಸಾಗರ್ ಪುರಾಣಿಕ್ ಕಾಂಬಿನೇಷನ್ನಲ್ಲಿ ವೆಂಕ್ಯಾ ಚಿತ್ರ ಮೂಡಿಬಂದಿದೆ. ವೆಂಕ್ಯಾನಿಗೆ ಸಾಗರ್ ಪುರಾಣಿಕ್ ಆ್ಯಕ್ಷನ್ ಕಟ್ ಹೇಳುವುದರ ಜೊತೆಗೆ ನಾಯಕನಾಗಿಯೂ ಬಣ್ಣ ಹಚ್ಚಿದ್ದಾರೆ. ಸಾಗರ್ಗೆ ಜೋಡಿಯಾಗಿ ಶಿಮ್ಲಾದ ರೂಪಾಲಿ ಸೂದ್ ಅಭಿನಯಿಸಿದ್ದರು.
ಇದನ್ನೂ ಓದಿ: ನ.8ಕ್ಕೆ ದರ್ಶನ್ ಮುಖ್ಯಭೂಮಿಕೆಯ 'ನವಗ್ರಹ' ಮರು ಬಿಡುಗಡೆ: ಹಬ್ಬ ಆಚರಿಸಲು ಅಭಿಮಾನಿಗಳು ಸಜ್ಜು
ಉತ್ತರ ಕರ್ನಾಟಕ ಕಥೆಯಾಧಾರಿತ ವೆಂಕ್ಯಾ ಸಿನಿಮಾವನ್ನು ಅಪೇಕ್ಷಾ ಒಡೆಯರ್ ಮತ್ತು ಪವನ್ ಒಡೆಯರ್ ನಿರ್ಮಾಣ ಮಾಡಿದ್ದಾರೆ. ಪವನ್ ಸ್ನೇಹಿತರಾದ ಅವಿನಾಶ್ ವಿ.ರೈ ಮತ್ತು ಮೋಹನ್ ಲಾಲ್ ಮೆನನ್ ಅವರ ಸಹ ನಿರ್ಮಾಣವಿದೆ.
ಇಂಡಿಯನ್ ಪನೋರಮಾ ವಿಭಾಗದ ಆರಂಭಿಕ ಸಿನಿಮಾವಾಗಿ ಬಾಲಿವುಡ್ನ ಸ್ವಾತಂತ್ರ್ಯ ವೀರ್ ಸಾವರ್ಕರ್ ಸಿನಿಮಾ ಪ್ರದರ್ಶನ ಆಗಲಿದೆ. ಎರಡನೇ ಸಿನಿಮಾವಾಗಿ ಕನ್ನಡದ ಕೆರೆಬೇಟೆ ಆಯ್ಕೆ ಆಗಿದೆ. ಆಯ್ಕೆಯಾದ ಸಿನಿಮಾಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿ ಕನ್ನಡದ ವೆಂಕ್ಯಾ ಚಿತ್ರವಿದೆ.