ETV Bharat / entertainment

'ಕೆರೆಬೇಟೆ'ಗೆ ಬಿ.ವೈ ರಾಘವೇಂದ್ರ, ಆರಗ ಜ್ಞಾನೇಂದ್ರ ಸಾಥ್: ಟೈಟಲ್​​ ಸಾಂಗ್​​ ರಿಲೀಸ್ - ಕೆರೆಬೇಟೆ ಸಿನಿಮಾ

''ಕೆರೆಬೇಟೆ'' ಚಿತ್ರದ ಟೈಟಲ್​​ ಟ್ರ್ಯಾಕ್ 'ಕೆರಿಬ್ಯಾಟಿ ಸುರು ಆತೊ...' ಅನಾವರಣಗೊಂಡಿದೆ.

Kerebete title track release
ಕೆರೆಬೇಟೆ ಟೈಟಲ್​​ ಸಾಂಗ್​​ ರಿಲೀಸ್ ಈವೆಂಟ್​​
author img

By ETV Bharat Karnataka Team

Published : Mar 2, 2024, 3:36 PM IST

''ಕೆರೆಬೇಟೆ'' ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ. ಗೌರಿಶಂಕರ್ ನಟನೆಯ, ರಾಜ್ ಗುರು ನಿರ್ದೇಶನದ ಈ 'ಕೆರೆಬೇಟೆ' ಈಗಾಗಲೇ ತನ್ನ ಟ್ರೇಲರ್, ಟೀಸರ್ ಮತ್ತು ರೊಮ್ಯಾಂಟಿಕ್ ಹಾಡುಗಳ ಮೂಲಕ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ. ಇದೀಗ ಚಿತ್ರತಂಡ ಟೈಟಲ್ ಟ್ರ್ಯಾಕ್ ಅನಾವರಣಗೊಳಿಸುವ ಮೂಲಕ ಮತ್ತೊಮ್ಮೆ ಸದ್ದು ಮಾಡಿದೆ. ಇತ್ತೀಚೆಗಷ್ಟೇ ಮೊದಲ ಹಾಡು ರಿಲೀಸ್ ಮಾಡಿದ್ದ ಚಿತ್ರತಂಡವೀಗ ಸಿನಿಮಾದ ಬಹುನಿರೀಕ್ಷೆಯ ಟೈಟಲ್ ಟ್ರ್ಯಾಕ್ ಅನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಿದೆ.

Kerebete title track release
ಕೆರೆಬೇಟೆ ಟೈಟಲ್​​ ಸಾಂಗ್​​ ರಿಲೀಸ್ ಈವೆಂಟ್​​

ವಿಶೇಷ ಎಂದರೆ ಈ ಹಾಡನ್ನು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಶಾಸಕ ಹಾಗೂ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಸಂಸದ ಬಿ.ವೈ ರಾಘವೇಂದ್ರ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. 'ಕೆರಿಬ್ಯಾಟಿ ಸುರು ಆತೊ...' ಎನ್ನುವ ಈ ಟೈಟಲ್ ಟ್ರ್ಯಾಕ್ ಅನ್ನು ಪ್ರಮೋದ್ ಮರವಂತೆ ಬರೆದಿದ್ದಾರೆ. ಗಗನ್ ಬಡೇರಿಯಾ ಸಂಗೀತ ಸಂಯೋಜನೆ ಮಾಡಿದ್ದು, ಕರಿಬಸವ ತಡಕಲ್ ಈ ಹಾಡಿಗೆ ದನಿಯಾಗಿದ್ದಾರೆ. ಈ ಹಾಡು ಕೇಳಿದ ಶಾಸಕ, ಸಂಸದರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟೈಟಲ್ ಟ್ರ್ಯಾಕ್ ರಿಲೀಸ್ ಮಾಡಿ ಮಾತನಾಡಿದ ಬಿ.ವೈ ರಾಘವೇಂದ್ರ, 'ಈ ಸಿನಿಮಾ ಸಂಪೂರ್ಣವಾಗಿ ಮಲೆನಾಡಿನ ಸುತ್ತಮುತ್ತವೇ ಚಿತ್ರೀಕರಣಗೊಂಡಿದೆ. ಜೊತೆಗೆ ಮಲೆನಾಡಿನವರೇ ಸೇರಿ ಈ ಸಿನಿಮಾ ಮಾಡಿದ್ದಾರೆ. ಮಲೆನಾಡ ಸೌಂದರ್ಯವನ್ನು ಬಹಳ ಸುಂದರವಾಗಿ ತೋರಿಸಲಾಗಿದೆ. ಸಂಪೂರ್ಣ ಚಿತ್ರತಂಡಕ್ಕೆ ಒಳ್ಳೆಯದಾಗಲಿ' ಎಂದು ಶುಭ ಹಾರೈಸಿದರು.

  • " class="align-text-top noRightClick twitterSection" data="">

ಆರಗ ಜ್ಞಾನೇಂದ್ರ ಮಾತನಾಡಿ, 'ಇತ್ತೀಚಿನ ದಿನಗಳಲ್ಲಿ ಮಲೆನಾಡಿನ ಸಂಸ್ಕೃತಿ ಕಣ್ಮರೆಯಾಗಿವೆ. ಅನೇಕ ಪದ್ಧತಿಗಳು ಮರೆಯಾಗಿವೆ. ಇದೀಗ ಕೆರೆಬೇಟೆ ಸಂಸ್ಕೃತಿಯ ಬಗ್ಗೆ ಸಿನಿಮಾ ಮಾಡಿರುವುದು ತುಂಬಾ ಖುಷಿ ಕೊಟ್ಟಿದೆ. ಟ್ರೇಲರ್ ಮತ್ತು ಸಾಂಗ್ ಅದ್ಭುತವಾಗಿ ಮೂಡಿಬಂದಿದೆ. ನಾಯಕ ನಟ, ನಿರ್ದೇಶಕ ನಿರ್ಮಾಪಕ ಸೇರಿದಂತೆ ಎಲ್ಲರೂ ಮಲೆನಾಡಿನವರೇ ಎನ್ನುವುದು ಖುಷಿಯ ವಿಚಾರ. ಸಿನಿಮಾ ಎಲ್ಲ ಕಡೆಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣಲಿ' ಎಂದು ಶುಭ ಹಾರೈಸಿದರು.

ಇದನ್ನೂ ಓದಿ: 'ಕೆರೆಬೇಟೆ ಸುರು ಆತೊ': ಗೌರಿಶಂಕರ್ ನಟನೆಯ ಸಿನಿಮಾ ಸಾಂಗ್​​ ರಿಲೀಸ್​ ಈವೆಂಟ್​ನ ಫೋಟೋಗಳಿಲ್ಲಿವೆ

ಸಾಂಗ್ ರಿಲೀಸ್ ಬಳಿಕ, ನಿಜವಾದ ಕೆರೆಬೇಟೆ ಆಟಗಾರರು ಕೂಣಿ ಹಿಡಿದು ಪ್ರತಿ ಜಿಲ್ಲೆಗಳಿಗೂ ಚಿತ್ರದ ಪ್ರಚಾರಕ್ಕಾಗಿ ಬೈಕ್ ರ‍್ಯಾಲಿ ಹೊರಡಲಿದ್ದು, ರ‍್ಯಾಲಿಗೂ ಚಾಲನೆ ನೀಡಲಾಯಿತು. ಅಪ್ಪಟ ಹಳ್ಳಿ ಸೊಗಡಿನ ಸಿನಿಮಾ ಇದಾಗಿದ್ದು, ಇದೇ ಮಾರ್ಚ್ 15ಕ್ಕೆ ಬಿಡುಗಡೆ ಆಗಲಿದೆ. ಜನಮನ ಸಿನಿಮಾ ಸಂಸ್ಥೆಯಲ್ಲಿ ಮೂಡಿ ಬಂದಿರುವ ಕೆರಬೇಟೆ ಸಿನಿಮಾ ಮೇಲೆ ಪ್ರೇಕ್ಷಕರು ಸಾಕಷ್ಟು ಕುತೂಹಲ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: ಅನಂತ್​ ಅಂಬಾನಿ ಗ್ರ್ಯಾಂಡ್​ ಪ್ರೀ ವೆಡ್ಡಿಂಗ್​​ ಸೆಲೆಬ್ರೇಶನ್​​ ಫೋಟೋಗಳಿಲ್ಲಿವೆ ನೋಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.