ETV Bharat / entertainment

ವರ್ಷದ ಬಳಿಕ ಸಿಹಿ ಸವಿದ ಕಾರ್ತಿಕ್ ಆರ್ಯನ್: ಸಿನಿಮಾ, ಫಿಟ್ನೆಸ್​ ಸುಲಭದ ಮಾತಲ್ಲ

author img

By ETV Bharat Karnataka Team

Published : Feb 1, 2024, 1:04 PM IST

ಕಾರ್ತಿಕ್ ಆರ್ಯನ್ ಮುಖ್ಯಭೂಮಿಕೆಯ 'ಚಂದು ಚಾಂಪಿಯನ್‌' ಸಿನಿಮಾ ಶೂಟಿಂಗ್​ ಪೂರ್ಣಗೊಂಡಿದೆ.

Kartik Aaryan Chandu Champion
ಕಾರ್ತಿಕ್ ಆರ್ಯನ್ ಚಂದು ಚಾಂಪಿಯನ್‌

ಬಾಲಿವುಡ್​ ಯಂಗ್​ ಸ್ಟಾರ್ ಕಾರ್ತಿಕ್ ಆರ್ಯನ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಚಂದು ಚಾಂಪಿಯನ್‌'. ನೈಜ ಕಥೆಯೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸಲು ಸಜ್ಜಾಗಿದ್ದಾರೆ. ಕಳೆದ ಎಂಟು ತಿಂಗಳಿನಿಂದ ಕಾರ್ತಿಕ್​​ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಬುಧವಾರ ಶೂಟಿಂಗ್​ ಪೂರ್ಣಗೊಂಡಿದೆ. ಇದನ್ನು ಸೋಷಿಯಲ್​ ಮೀಡಿಯಾ ಪೋಸ್ಟ್ ಮೂಲಕ ಸ್ವತಃ ನಟನೇ ಘೋಷಿಸಿದ್ದಾರೆ. ಚಿತ್ರೀಕರಣದ ಅಂತಿಮ ದಿನದಂದು ನಟ ತಮ್ಮ ಮೆಚ್ಚಿನ ಸಿಹಿ ಖಾದ್ಯ ರಸ್​ಮಲಾಯಿ ಸವಿದು ಖುಷಿ ಪಟ್ಟಿದ್ದಾರೆ. ಇದನ್ನು 'ವಿಜಯ' ಎಂದು ಉಲ್ಲೇಖಿಸಿದ್ದಾರೆ.

ಕೊನೆಯದಾಗಿ ಸತ್ಯಪ್ರೇಮ್​ ಕಿ ಕಥಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಕಾರ್ತಿಕ್ ಆರ್ಯನ್​​ ತಮ್ಮ 'ಚಂದು ಚಾಂಪಿಯನ್' ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಬುಧವಾರ, ನಿರ್ದೇಶಕ ಕಬೀರ್ ಖಾನ್ ನೀಡಿದ ರಸ್​ಮಲಾಯಿ ಸವಿದ ವಿಡಿಯೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಚಂದು ಚಾಂಪಿಯನ್​​ ಸಿನಿಮಾದಲ್ಲಿ ಕ್ರೀಡಾಪಟು ಪಾತ್ರ ನಿರ್ವಹಿಸಲು ಕಾರ್ತಿಕ್​​​ ದೈಹಿಕ ನೋಟದ ಬದಲಾವಣೆಗೆ ಒಳಗಾಗಬೇಕಿತ್ತು. ಈ ಹಿನ್ನೆಲೆ ಕಠಿಣ ಡಯೆಟ್​ ಅನ್ನು ಫಾಲೋ ಮಾಡಿದ್ದರು. ಸುಮಾರು ಒಂದು ವರ್ಷದ ಬಳಿಕ ರಸ್​ಮಲಾಯಿ ಸವಿದು ಸಂತಸಪಟ್ಟಿದ್ದಾರೆ.

ಕಾರ್ತಿಕ್ ಅವರು ಕಬೀರ್ ಖಾನ್ ಸೇರಿದಂತೆ ಚಿತ್ರತಂಡದವರೊಂದಿಗಿರುವ ವಿಡಿಯೋವನ್ನು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಈ ದೃಶ್ಯದಲ್ಲಿ, ಕಬೀರ್ ಅವರು ಕಾರ್ತಿಕ್‌ಗೆ ಫುಲ್ ಪ್ಲೇಟ್ ರಸ್​​ಮಲಾಯಿ ತಿನ್ನಿಸುತ್ತಿರೋದನ್ನು ಕಾಣಬಹುದು. ನಂತರ ನಟ-ನಿರ್ದೇಶಕರು ತಬ್ಬಿಕೊಂಡರು. ಸಂಪೂರ್ಣ ಚಿತ್ರತಂಡ ಸಂತಸದ ಕ್ಷಣಗಳನ್ನು ಹಂಚಿಕೊಂಡಿತು.

ಇದನ್ನೂ ಓದಿ: 'ಚಂದು ಚಾಂಪಿಯನ್'​​: ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿದ ಕಾರ್ತಿಕ್ ಆರ್ಯನ್ ಲುಕ್​

ವಿಡಿಯೋ ಹಂಚಿಕೊಂಡ ಕಾರ್ತಿಕ್​​, ''ಈ ರಸ್​ಮಲಾಯಿ ವಿಜಯದ ರುಚಿ ಕೊಟ್ಟಿತು. ಅಂತಿಮವಾಗಿ ಒಂದು ವರ್ಷದ ನಂತರ ಸಿಹಿ (ಸಕ್ಕರೆ) ಸವಿಯುತ್ತಿರುವೆ. ಒಂದು ವರ್ಷಕ್ಕೂ ಹೆಚ್ಚು ಕಾಲ ತಯಾರಿ ಮತ್ತು ಪ್ರಪಂಚದಾದ್ಯಂತ 8 ತಿಂಗಳ ಹಗಲು-ರಾತ್ರಿಯ ಚಿತ್ರೀಕರಣದ ಬಳಿಕ ಇಂದು ನಾವು ಚಂದು ಚಾಂಪಿಯನ್‌ನ ಶೂಟಿಂಗ್ ಪೂರ್ಣಗೊಳಿಸಿದ್ದೇವೆ'' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: 'ಹೀರಾಮಂಡಿ' ಫಸ್ಟ್ ಲುಕ್ ಔಟ್; ವೇಶ್ಯೆಯರ ಬದುಕು ತೆರೆದಿಡಲಿದ್ದಾರೆ ಸಂಜಯ್​ ಲೀಲಾ ಬನ್ಸಾಲಿ

ಇದಕ್ಕೂ ಮೊದಲು, ಕಾರ್ತಿಕ್ ಆರ್ಯನ್​ ಅವರ ಫಸ್ಟ್ ಲುಕ್​ ಅನಾವರಣಗೊಂಡಿತ್ತು. ಗಣರಾಜ್ಯೋತ್ಸವ ಸಂದರ್ಭ ರಿಲೀಸ್​ ಆದ ಈ ಮೊದಲ ನೋಟದಲ್ಲಿ, ಕಾರ್ತಿಕ್​ ಸೇನಾ ಸಮವಸ್ತ್ರದಲ್ಲಿ ಕಾಣಿಸಿಕೊಂಡಿದ್ದರು. ಕಬೀರ್ ಖಾನ್ ನಿರ್ದೇಶಿಸಿರೋ ಈ ಸಿನಿಮಾ ಫ್ರೀಸ್ಟೈಲ್ ಸ್ವಿಮ್ಮಿಂಗ್‌ನಲ್ಲಿ ಭಾರತದ ಮೊದಲ ಪ್ಯಾರಾಲಿಂಪಿಕ್ ಗೋಲ್ಡ್ ಚಾಂಪಿಯನ್ ಮುರಳಿಕಾಂತ್ ಪೇಟ್ಕರ್ ಅವರ ಕಥೆಯನ್ನಾಧರಿಸಿದೆ. ಭುವನ್ ಅರೋರಾ, ಪಲಕ್ ಲಾಲ್ವಾನಿ ಮತ್ತು ಅಡೋನಿಸ್ ಕಪ್ಸಾಲಿಸ್ ಸಹ ಈ ಚಿತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಜೂನ್​ 14ರಂದು ತೆರೆಕಾಣಲಿದೆ. ಕಂಗನಾ ರಣಾವತ್ ಅವರ ಬಹುನಿರೀಕ್ಷಿತ ಸಿನಿಮಾ ಎಮರ್ಜೆನ್ಸಿ ಕೂಡ ಅದೇ ಸಂದರ್ಭ ತೆರೆಕಾಣಲಿದ್ದು ಬಾಕ್ಸ್ ಆಫೀಸ್​ ಪೈಪೋಟಿ ಏರ್ಪಡಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.