ETV Bharat / entertainment

ವಿಭಿನ್ನ ಅವತಾರದಲ್ಲಿ ಬಿಗ್ ಬಾಸ್​ ಕಾರ್ತಿಕ್​​ ಮಹೇಶ್: ಗಿರಿರಾಜ್ ನಿರ್ದೇಶನದ 'ರಾಮರಸ' ಗ್ಲಿಂಪ್ಸ್ ಔಟ್​

ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಮುಖ್ಯಭೂಮಿಕೆಯ ರಾಮರಸ ಚಿತ್ರದ 'ಕ್ಯಾರೆಕ್ಟರ್ ಪಂಚ್' ಅನಾವರಣಗೊಂಡಿದೆ.

author img

By ETV Bharat Entertainment Team

Published : 3 hours ago

Ramarasa film team
ರಾಮರಸ ಚಿತ್ರತಂಡ (ETV Bharat)

'ರಾಮರಸ', ಜಟ್ಟ ಸಿನಿಮಾ ಖ್ಯಾತಿಯ ಗಿರಿರಾಜ್ ನಿರ್ದೇಶನದ ಹಾಗೂ ಗುರುದೇಶಪಾಂಡೆ ನಿರ್ಮಾಣದ ವಿನೂತನ ಚಿತ್ರ. ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್' ಕಳೆದ ಸೀಸನ್​ನ ವಿನ್ನರ್ ಕಾರ್ತಿಕ್ ಮಹೇಶ್ ಮುಖ್ಯಭೂಮಿಕೆಯ ಸಿನಿಮಾವಿದು. ಶೀರ್ಷಿಕೆಯಿಂದಲೇ ಸದ್ದು ಮಾಡುತ್ತಿರುವ ಈ ಚಿತ್ರದ ವಿಡಿಯೋವೊಂದು ಹೊರಬಿದ್ದಿದೆ.

ನಾಯಕ ನಟ ಕಾರ್ತಿಕ್ ಮಹೇಶ್ ಹುಟ್ಟುಹಬ್ಬದ ಅಂಗವಾಗಿ 'ರಾಮರಸ' ಚಿತ್ರತಂಡ 'ಕ್ಯಾರೆಕ್ಟರ್ ಪಂಚ್' ಶೀರ್ಷಿಕೆಯಡಿ ವಿಡಿಯೋವೊಂದನ್ನು ಬಿಡುಗಡೆ ಮಾಡುವ ಮೂಲಕ ನಾಯಕನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ. ಕಾರ್ತಿಕ್ ಮಹೇಶ್ ಅವರ ಜೊತೆಗೆ ಬಿಗ್ ಬಾಸ್​ನ ಸಹ ಸ್ಪರ್ಧಿಗಳು ಉಪಸ್ಥಿತರಿದ್ದು, ಗೆಳೆಯನಿಗೆ ಶುಭ ಕೋರಿದರು.

ಚಿತ್ರದ ನಿರ್ಮಾಪಕ ಗುರುದೇಶಪಾಂಡೆ ಮಾತನಾಡಿ, "ಜಿ ಅಕಾಡೆಮಿ"ಯಲ್ಲಿ ನಟನೆ ಕಲಿತಿರುವ ಹದಿನೈದು ಪ್ರತಿಭೆಗಳು ಈ ಚಿತ್ರದಲ್ಲಿ ನಟಿಸುತ್ತಿದ್ದು, ಇವರ ಜೊತೆಗೆ ನಾಯಕನ ಪಾತ್ರದಲ್ಲಿ ಕಾರ್ತಿಕ್ ಮಹೇಶ್ ಅಭಿನಯಿಸುತ್ತಿದ್ದಾರೆ. ಬಿಗ್ ಬಾಸ್​ನಿಂದ ಬಂದ ಬಳಿಕ ಅವರನ್ನು ಭೇಟಿಯಾಗಿ ನಮ್ಮ ಚಿತ್ರದ ಕಥೆ ಹೇಳಲಾಯಿತು. ಅವರು ಒಪ್ಪಿಕೊಂಡರು. ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಕ್ಯಾರೆಕ್ಟರ್ ಟೀಸರ್ ಬಿಡುಗಡೆ ಮಾಡಿದ್ದೇವೆ‌.

Ramarasa
ರಾಮರಸ ಪೋಸ್ಟರ್ (film poster)

ಮೊದಲು ಸೀಮಿತ ಬಜೆಟ್​ನಲ್ಲಿ ಸಿನಿಮಾ ಮಾಡಬೇಕೆಂದುಕೊಂಡೆವು. ಈಗ ಬಜೆಟ್ ಹೆಚ್ಚಾಗುತ್ತಿದೆ. ನಿರ್ಮಾಣಕ್ಕೆ ನಮ್ಮ ಜೊತೆಗೆ ವಿಕ್ರಮಾದಿತ್ಯ ಅವರು ಜೊತೆಯಾಗಿದ್ದಾರೆ. ಗಿರಿರಾಜ್ ಅವರ ನಿರ್ದೇಶನ, ಕೆ.ಕೆ ಅವರ ಛಾಯಾಗ್ರಹಣ, ಬಿ.ಜೆ.ಭರತ್ ಅವರ ಸಂಗೀತ ನಿರ್ದೇಶನ‌ ನಮ್ಮ ಚಿತ್ರಕ್ಕಿದೆ. ಮುಂದೆ ಹಂತಹಂತವಾಗಿ ಸಿನಿಮಾ‌ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಾಗಿ ತಿಳಿಸಿದ ನಿರ್ಮಾಪಕರು, ಕಾರ್ತಿಕ್ ಅವರಿಗೆ "ರಾಜಾಹುಲಿ"ಯ ಯಶ್ ಅವರ ಛಾಯೆ ಇದೆ. ಕಾರ್ತಿಕ್ ಸಹ ಯಶ್ ಅವರಂತೆ ಹೆಸರು ಮಾಡಲಿ ಎಂದರು.

Ramarasa film team
ರಾಮರಸ ಚಿತ್ರತಂಡ (ETV Bharat)

ನಿರ್ದೇಶಕ ಬಿ.ಎಂ.ಗಿರಿರಾಜ್ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಸಿನಿಮಾ ನಿರ್ಮಾಣ ಅಷ್ಟು ಸುಲಭವಲ್ಲ. ಚಿತ್ರ ನಿರ್ಮಾಣ ಮಾಡಲು ಹೆಚ್ಚಿನ ಧೈರ್ಯ ಬೇಕು. ಆ ಧೈರ್ಯವನ್ನು ಗುರು ದೇಶಪಾಂಡೆ ಅವರು ಮಾಡಿ ರಾಮರಸ ಚಿತ್ರ ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಕಥೆಗೆ ಹದಿನೈದು ಪ್ರತಿಭೆಗಳ ಜೊತೆಗೆ ಹೆಸರಾಂತ ನಟರೊಬ್ಬರು ಬೇಕಿತ್ತು. ಕಾರ್ತಿಕ್ ಮಹೇಶ್ "ಬಿಗ್ ಬಾಸ್"ನಿಂದ ಕನ್ನಡಿಗರ ಮನ ಗೆದ್ದಿದ್ದರು. ಈ ಚಿತ್ರದ ಕಥೆ ಕೇಳಿ, ಅವರು ಚಿತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡರು. ಕೆಲಸಗಳು ಶುರುವಾದ ನಂತರ ಕಾರ್ತಿಕ್ ನಮ್ಮನ್ನು ಆವರಿಸಿಕೊಳ್ಳಲು ಶುರುವಾದರು. ಈಗ ಚಿತ್ರದ ಬಜೆಟ್​ನಿಂದ ಹಿಡಿದು ಎಲ್ಲಾ ವಿಷಯದಲ್ಲೂ ದೊಡ್ಡದಾಗುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗುವ ಎಲ್ಲಾ ಲಕ್ಷಣಗಳು ಇವೆ ಅಂದರು.

Ramarasa film team
ರಾಮರಸ ಚಿತ್ರತಂಡ (ETV Bharat)

ಇದನ್ನೂ ಓದಿ: ಯೋಗರಾಜ್ ಭಟ್ 'ಕುಲದಲ್ಲಿ ಕೀಳ್ಯಾವುದೋ' ಕಥೆಗೆ ಕಾಮಿಡಿ ಕಿಲಾಡಿ ಖ್ಯಾತಿಯ ಮಡೆನೂರ್ ಮನು ಹೀರೋ

ನಂತರ ನಟ ಕಾರ್ತಿಕ್ ಮಹೇಶ್ ಮಾತನಾಡಿ, ನಾನು ಆಚರಣೆಗಳು ಬೇಡ ಅಂದಿದ್ದೆ. ಆದರೂ ನನ್ನ ಹುಟ್ಟುಹಬ್ಬವನ್ನು ಇಷ್ಟು ಅದ್ದೂರಿಯಾಗಿ ಆಚರಿಸುತ್ತಿರುವ ನಿರ್ಮಾಪಕ ಗುರು ದೇಶಪಾಂಡೆ ಅವರಿಗೆ ಮೊದಲು ಧನ್ಯವಾದ ಅರ್ಪಿಸುತ್ತೇನೆ. ನನ್ನನ್ನು ಹಾರೈಸಲು ಬಂದಿರುವ "ಬಿಗ್ ಬಾಸ್" ಸ್ನೇಹಿತರಿಗೆ ಹಾಗೂ ನಿರ್ದೇಶಕರಿಗೂ ಧನ್ಯವಾದಗಳು. ನಿರ್ದೇಶಕರು ಹಾಗೂ ನಿರ್ಮಾಪಕರು ನನ್ನ ಬಗ್ಗೆ ತುಂಬಾ ನಂಬಿಕೆಯಿಟ್ಟಿದ್ದಾರೆ. ಅವರ ನಂಬಿಕೆಯನ್ನು ಖಂಡಿತವಾಗಿ ಉಳಿಸಿಕೊಳ್ಳುತ್ತೇನೆ ಎಂದರು.

Ramarasa film team
ರಾಮರಸ ಚಿತ್ರತಂಡ (ETV Bharat)

ಇದನ್ನೂ ಓದಿ: ಹೊಸಬರ ಮರ್ಡರ್ ಮಿಸ್ಟರಿ 'ಆಪರೇಷನ್ ಡಿ' ಸಿನಿಮಾಗೆ ಸಿಕ್ತು ಆ್ಯಕ್ಷನ್ ಪ್ರಿನ್ಸ್ ಬಲ - Operation D Teaser

ಈ ಸಂದರ್ಭದಲ್ಲಿ ಪ್ರೀತೀಕ ಗುರು ದೇಶಪಾಂಡೆ, ಕಾರ್ಯಕಾರಿ ನಿರ್ಮಾಪಕ ಸುನೀಲ್ ಹೆಚ್ ಸಿ ಗೌಡ, ಛಾಯಾಗ್ರಾಹಕ ಕೆ.ಕೆ ಸೇರಿದಂತೆ ಸಿನಿಮಾ ಗೆಳೆಯರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.