ETV Bharat / entertainment

ಸೆಲೆಬ್ರಿಟಿಗಳು ಬೇರೆಯವರ ವಾಟ್ಸಪ್ ಹ್ಯಾಕ್ ಮಾಡುತ್ತಿದ್ದಾರೆ: ಚರ್ಚೆಗೆ ಗ್ರಾಸವಾದ ಕಂಗನಾ ಹೇಳಿಕೆ - ಡಾರ್ಕ್ ವೆಬ್

ಹ್ಯಾಕಿಂಗ್​ ವಿಷಯ ಪ್ರಸ್ತಾಪಿಸಿರುವ ನಟಿ ಕಂಗನಾ ರಣಾವತ್, ಚಿತ್ರರಂಗದ ವ್ಯಕ್ತಿಗಳ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

Kangana Ranaut Alleges Dark Web Activities in Bollywood: 'Many Big Names Will Be Exposed If...'
ನಟಿ ಕಂಗನಾ ರಣಾವತ್
author img

By ETV Bharat Karnataka Team

Published : Feb 24, 2024, 8:04 PM IST

ಹೈದರಾಬಾದ್: 'ಕೆಲವು ಸೆಲೆಬ್ರಿಟಿಗಳು ಇತ್ತೀಚೆಗೆ ಡಾರ್ಕ್ ವೆಬ್ ಎಂಬ ತಂತ್ರಾಂಶ ಬಳಸಿ ವಾಟ್ಸಪ್​ ನಂತಹ ಸಂವಹನ ಅಪ್ಲಿಕೇಶನ್‌ಗಳನ್ನು ಹ್ಯಾಕ್ ಮಾಡುತ್ತಾರೆ' ಎಂದು ಆರೋಪಿಸಿ ಬಾಲಿವುಡ್​ ನಟಿ ಕಂಗನಾ ರಣಾವತ್, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿರುವ ಅವರು, ಚಿತ್ರರಂಗದ ವ್ಯಕ್ತಿಗಳ ಮೇಲೆ ಈ ಗಂಭೀರ ಆರೋಪ ಮಾಡಿದ್ದಾರೆ. ಅವರ ಈ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ಕೆಲವು ನೆಟ್ಟಿಗರು ಇದ್ದರೂ ಇರಬಹುದೆಂದು ನಟಿಯ ಪರ ಬ್ಯಾಟ್​ ಬೀಸಿದರೆ, ಇನ್ನೂ ಕೆಲವರು ನಂಬಲು ಅಸಾಧ್ಯವೆಂದು ವಿರೋಧ ವ್ಯಕ್ತಪಡಿಸಿದ್ದಾರೆ.

ನೆಟ್ಟಿಗರೊಬ್ಬರ ಪ್ರಶ್ನೆಯುಳ್ಳ ಪೋಸ್ಟ್​ ಅನ್ನು ಮರು ಟ್ಯಾಗ್​ ಮಾಡಿಕೊಂಡಿರುವ ನಟಿ ಕಂಗನಾ, ''ಅದ್ಭುತ!! ಡಾರ್ಕ್ ವೆಬ್ ಬಗ್ಗೆ ಕೇಂದ್ರವು ಏನಾದರೂ ಮಾಡಬೇಕು. ಕೆಲವು ಪ್ರಭಾವಿ ವ್ಯಕ್ತಿಗಳು ಡಾರ್ಕ್ ವೆಬ್ ಮೂಲಕ ವಾಟ್ಸಪ್ ಮತ್ತು ಇಮೇಲ್‌ಗಳಂತಹ ಪ್ಲಾಟ್‌ಫಾರ್ಮ್‌ಗಳನ್ನು ಹ್ಯಾಕ್​ ಮಾಡಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಕೇಂದ್ರವು ಡಾರ್ಕ್ ವೆಬ್ ಬಗ್ಗೆ ಏನಾದರೂ ಕ್ರಮ ಕೈಗೊಳ್ಳಬೇಕು. ಅನೇಕ ಜನಪ್ರಿಯ ಚಿತ್ರರಂಗದ ವ್ಯಕ್ತಿಗಳು ಇದಕ್ಕೆ ವ್ಯಸನಿಯಾಗಿದ್ದಾರೆ. ಅವರು ಅಲ್ಲಿಂದ ಕಾನೂನುಬಾಹಿರ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಅದಕ್ಕಾಗಿ ಪ್ರತಿಯೊಬ್ಬರ ವಾಟ್ಸಪ್ ಮತ್ತು ಇ-ಮೇಲ್‌ನಂತಹ ಸಂವಹನಗಳನ್ನು ಹ್ಯಾಕ್​ ಮಾಡುತ್ತಿದ್ದಾರೆ. ಭೇದಿಸಿದರೆ ಅನೇಕ ದೊಡ್ಡ ಹೆಸರುಗಳು ಬಹಿರಂಗಗೊಳ್ಳುತ್ತವೆ. ತಪ್ಪಿತಸ್ಥರು ಅಂತ ಕಂಡುಬಂದರೆ ಅವರ ವಿರುದ್ಧ ಕ್ರಮ ಜರುಗಿಸಬೇಕು. ಕೇಂದ್ರ ಸಹ ಇದನ್ನು ಗಂಭೀರವಾಗಿ ಪರಿಗಣಿಸಬೇಕು'' ಎಂದಿದ್ದಾರೆ.

ನಟಿಯ ಈ ಪೋಸ್ಟ್ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಅವರು ಯಾರ ಬಗ್ಗೆ ಮಾತನಾಡಿದ್ದಾರೆ ಎಂಬುದನ್ನು ನಿಖರವಾಗಿ ಹೇಳಿಲ್ಲ. ಆದರೂ, ಈ ಕೆಲಸವನ್ನು ಯಾರು ಮಾಡುತ್ತಿದ್ದಾರೆ ಎನ್ನುವ ಅನುಮಾನ ಮೂಡಿದೆ. ಹಾಗಾಗಿ ನಟಿ ನೀಡಿರುವ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಜಾಗ ಪಡೆದಿದೆ.

ಇನ್ನು ಅವರ ನಟನೆಯ 'ಎಮರ್ಜೆನ್ಸಿ' ಚಿತ್ರ 2024ರ ಜೂನ್​ 14ರಂದು ತೆರೆಗೆ ಬರಲು ಸಿದ್ಧವಾಗಿದೆ. ತಾವೇ ಕಥೆ ಬರೆದು, ನಿರ್ದೇಶಿಸಿ, ನಟಿಸಿ, ನಿರ್ಮಾಣ ಮಾಡಿರುವ ಚಿತ್ರ ಇದಾಗಿದ್ದು ಇತ್ತೀಚೆಗಷ್ಟೇ ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ಇಂದಿರಾ ಗಾಂಧಿ ಪಾತ್ರಕ್ಕೆ ಕಂಗನಾ ಬಣ್ಣ ಹಚ್ಚಿದ್ದು ತುರ್ತುಪರಿಸ್ಥಿತಿ ಕುರಿತಾದ ಕಥೆ ಹೇಳಲಿದೆ. ಇದಷ್ಟೇ ಅಲ್ಲದೇ ನಿರ್ದೇಶಕ ವಿಜಯ್ ಅವರು ನಿರ್ದೇಶಿಸಲಿರುವ ಸೈಕಲಾಜಿಕಲ್ ಥ್ರಿಲ್ಲರ್‌ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿಯೂ ಅವರು ನಟಿಸಲಿದ್ದಾರೆ.

ಇದನ್ನೂ ಓದಿ: 'ಎಮರ್ಜೆನ್ಸಿ' ರಿಲೀಸ್​ ಡೇಟ್ ಅನೌನ್ಸ್: ತೆರೆ ಮೇಲೆ ಬರಲಿದೆ ಇಂದಿರಾ ಗಾಂಧಿ ಆಡಳಿತಾವಧಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.