ಹೈದರಾಬಾದ್: ಪ್ರಭಾಸ್, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಕಲ್ಕಿ 2898 AD ಚಿತ್ರವು ಈ ವರ್ಷ ಜಾಗತಿಕವಾಗಿ ಸುಮಾರು 1,300 ಕೋಟಿ ರೂಪಾಯಿ ಗಳಿಸುವ ಮೂಲಕ ಗಲ್ಲಾಪೆಟ್ಟಿಯಲ್ಲಿ ಭಾರಿ ಸದ್ದು ಮಾಡಿ ಯಶಸ್ವಿಯಾಗಿದೆ. ಜೂನ್ 27ರಂದು ಬಿಡುಗಡೆಯಾದ ಈ ಚಿತ್ರವು, ಹಲವು ಹೊಸ ಚಿತ್ರಗಳ ಬಿಡುಗಡೆ ಮಧ್ಯೆಯೂ ಬಾಕ್ಸ್ ಆಫೀಸ್ನಲ್ಲಿ ಪ್ರಾಬಲ್ಯ ಮುಂದುವರೆಸಿದೆ. ಕಲ್ಕಿ 2898 AD ತಯಾರಕರು ಚಲನಚಿತ್ರವನ್ನು ದೊಡ್ಡ ಯಶಸ್ಸಿಗೆ ಕಾರಣರಾದ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಟಿಕೆಟ್ ಬೆಲೆಯನ್ನು ಕಡಿತಗೊಳಿಸಿದ್ದಾರೆ. ಅಭಿಮಾನಿಗಳು ಮತ್ತು ಚಲನಚಿತ್ರ ಪ್ರೇಕ್ಷಕರಿಗೆ ಗಿಫ್ಟ್ ನೀಡಲು ಈ ಕ್ರಮಕ್ಕೆ ಮುಂದಾಗಿದ್ದಾರೆ.
ವೈಜ್ಞಾನಿಕ ಆ್ಯಕ್ಷನ್ ಚಿತ್ರದ ಕಲ್ಕಿ 2898 AD ತಯಾರಕರು ಟಿಕೆಟ್ ದರವನ್ನು 100 ರೂ.ಗೆ ಇಳಿಕೆ ಮಾಡಿ, ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದರು. ಆಗಸ್ಟ್ 1 ರಂದು, ತಯಾರಕರು ತಮ್ಮ ಅಧಿಕೃತ Instagram ಖಾತೆಯಲ್ಲಿ ಗಿಫ್ಟ್ ಆಗಿ ನೂತನ ಘೋಷಣೆ ಮಾಡಿದ್ದಾರೆ.
ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸುವ ಪೋಸ್ಟ್ ಹೀಗಿದೆ: "ಧನ್ಯವಾದಗಳು ಎಂಬುದು ಒಂದು ಸಣ್ಣ ಪದ. ಈ ವಾರ ನಮ್ಮ ಮೆಚ್ಚುಗೆಯ ಸಂಕೇತವಾಗಿದೆ ❤️ಭಾರತದಾದ್ಯಂತ ಚಿತ್ರಮಂದಿರಗಳಲ್ಲಿ ಕೇವಲ ರೂ. 100/- ಕ್ಕೆ ಟಿಕೆಟ್ ಪಡೆದು ಎಪಿಕ್ ಮಹಾ ಬ್ಲಾಕ್‌ಬಸ್ಟರ್ #Kalki2898AD ಅನ್ನು ಆನಂದಿಸಿ, ಆಗಸ್ಟ್ 2ರಿಂದ ಒಂದು ವಾರದವರೆಗೆ ಲಭ್ಯವಿದೆ!"
ಚಿತ್ರ ಯಶಸ್ಸಿನ ಹಿನ್ನೆಲೆ ರಿಯಾಯತಿ ಟಿಕೆಟ್ ಆಫರ್ ನೀಡಿರುವ ವಿಷಯ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಪೋಸ್ಟ್‌ನ ಕಾಮೆಂಟ್ ವಿಭಾಗದಲ್ಲಿ ಅಭಿಮಾನಿಗಳು ಬೆಂಕಿ ಮತ್ತು ಹೃದಯದ ಎಮೋಜಿಗಳೊಂದಿಗೆ ಫೋಸ್ಟ್ ಮಾಡುವ ಖುಷಿ ಆಚರಿಸಿದರು. ಅನೇಕರು ಚಿತ್ರವನ್ನು ಮತ್ತೊಮ್ಮೆ ನೋಡುವ ಭರವಸೆ ವ್ಯಕ್ತಪಡಿಸಿದ್ದಾರೆ.
ನಾಗ್ ಅಶ್ವಿನ್ ನಿರ್ದೇಶಿಸಿದ ಕಲ್ಕಿ 2898 AD ಚಿತ್ರವು ಈ ವರ್ಷದಲ್ಲಿ ಜಗತ್ತಿನಾದ್ಯಂತ ಬಿಡುಗಡೆಯಾಗಿ ಭಾರಿ ಯಶಸ್ಸು ಗಳಿಸಿದೆ. ಚಿತ್ರದಲ್ಲಿ ಪ್ರಭಾಸ್ ಹೊರತಾಗಿ, ದೀಪಿಕಾ ಪಡುಕೋಣೆ, ಕಮಲ್ ಹಾಸನ್, ಅಮಿತಾಬ್ ಬಚ್ಚನ್ ಮತ್ತು ದಿಶಾ ಪಟಾನಿ ಪ್ರಮುಖ ಪಾತ್ರ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಪುರಾಣಗಳಿಂದ ಪ್ರಭಾವಿತವಾದ ಮತ್ತು ಭವಿಷ್ಯದಲ್ಲಿ ಹೊಂದಿಸಲಾದ ವೈಜ್ಞಾನಿಕ ಕಾಲ್ಪನಿಕ ಚಿತ್ರಣ ವನ್ನು ಕಟ್ಟಿಕೊಡಲಾಗಿದೆ. ಈ ಚಿತ್ರದಲ್ಲಿ ನಟರಾದ ವಿಜಯ್ ದೇವರಕೊಂಡ, ದುಲ್ಕರ್ ಸಲ್ಮಾನ್ ಮತ್ತು ಮೃಣಾಲ್ ಠಾಕೂರ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: 'ಕಪಟಿ' ಚಿತ್ರದಲ್ಲಿ ನಟಿ ಸುಕೃತಾ ವಾಗ್ಲೆ: ಟೀಸರ್ ನೋಡಿ - Kapati Teaser