ETV Bharat / entertainment

​​ಮೊದಲ ಗೌರವಕ್ಕೆ ಪಾತ್ರವಾದ 'ಕಲ್ಕಿ': ಅವಾರ್ಡ್ ಫೋಟೋ ಹಂಚಿಕೊಂಡ ನಿರ್ದೇಶಕ ನಾಗ್ ಅಶ್ವಿನ್ - Kalki First Award

'ಕಲ್ಕಿ 2898 ಎಡಿ' ನಿರ್ದೇಶಕ ನಾಗ್ ಅಶ್ವಿನ್​ ಹಂಚಿಕೊಂಡಿರುವ ಇನ್​ಸ್ಟಾಗ್ರಾಮ್​ ಸ್ಟೋರಿ ನೆಟ್ಟಿಗರ ಗಮನ ಸೆಳೆದಿದೆ.

Nag Ashwin, Kalki 2898 AD
ನಾಗ್ ಅಶ್ವಿನ್, ಕಲ್ಕಿ 2898 ಎಡಿ (Screen grab/Film poster)
author img

By ETV Bharat Karnataka Team

Published : Jun 30, 2024, 8:21 PM IST

ನಾಗ್ ಅಶ್ವಿನ್ ನಿರ್ದೇಶನದ ಮೈಥೋಲಾಜಿಕಲ್​​​ ಸೈನ್ಸ್ ಫಿಕ್ಷನ್​​ 'ಕಲ್ಕಿ 2898 ಎಡಿ' ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಪ್ರಭಾಸ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರ ಪ್ರೇಕ್ಷಕರ ಮನ ಗೆಲ್ಲುವುದರ ಜತೆಗೆ ಭಾರತೀಯ ಚಿತ್ರರಂಗದ ಪ್ರಮುಖರಿಂದಲೂ ಪ್ರಶಂಸೆ ಗಳಿಸುತ್ತಿದೆ. ಕಲ್ಕಿ 2898 ಎಡಿ ಈಗಾಗಲೇ ತನ್ನ 'ಚೊಚ್ಚಲ ಪ್ರಶಸ್ತಿ'ಯನ್ನು ಪಡೆದುಕೊಂಡಿದೆ. ಚಿತ್ರದ ನಿರ್ದೇಶಕ ನಾಗ್​ ಅಶ್ವಿನ್​​ ಒಂದು ವಿಶೇಷ ಕ್ಷಣವನ್ನು ಇನ್​ಸ್ಟಾಗ್ರಾಮ್​ ಸ್ಟೋರೀಸ್​ನಲ್ಲಿ ಹಂಚಿಕೊಂಡಿದ್ದಾರೆ.

Nag Ashwin Instagram story
ನಾಗ್​​ ಅಶ್ವಿನ್ ಇನ್​ಸ್ಟಾಗ್ರಾಮ್​ ಸ್ಟೋರಿ (Nag Ashwin Instagram story)

ನಾಗ್ ಅಶ್ವಿನ್ ತಮ್ಮ ಇನ್​ಸ್ಟಾಗ್ರಾಮ್ ಸ್ಟೋರೀಸ್​​​ನಲ್ಲಿ ಡಾರ್ತ್ ವಾಡರ್ ಪ್ರತಿಮೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದು ಸೂಪರ್​ ಹಿಟ್ 'ಸ್ಟಾರ್ ವಾರ್ಸ್'ನ ಖಳನಾಯಕ ಪಾತ್ರ (fictional character in the Star Wars franchise). ಡಾರ್ತ್ ವಾಡೆರ್ ಕೈಯಲ್ಲಿ ಸರ್ಫ್ಬೋರ್ಡ್ ಅನ್ನೂ ಕಾಣಬಹುದು. ಫೋಟೋದ ಜೊತೆಗೆ ನಾಗ್ ಅಶ್ವಿನ್, "ಕಲ್ಕಿಯ ಮೊದಲ ಪ್ರಶಸ್ತಿ, ಫ್ರಂ ಒನ್​ ಆ್ಯಂಡ್​ ಓನ್ಲಿ ರಾಣಾ ದಗ್ಗುಬಾಟಿ" ಎಂದು ಬರೆದುಕೊಂಡಿದ್ದಾರೆ.

Rana Daggubati Instagram story
ರಾಣಾ ದಗ್ಗುಬಾಟಿ ಇನ್​ಸ್ಟಾಗ್ರಾಮ್​​ ಸ್ಟೋರಿ (Rana Daggubati Instagram story)

​​ನಾಗ್​​ ಅಶ್ವಿನ್ ಅವರ ಸ್ಟೋರಿಯನ್ನು ಮರುಹಂಚಿಕೊಂಡ ನಟ ರಾಣಾ ದಗ್ಗುಬಾಟಿ, ಫೈಯರ್ ಎಮೋಜಿಗಳೊಂದಿಗೆ "ಇನ್ನೂ ಬರಲಿದೆ" ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ರಾಣಾ ಮತ್ತು ನಾಗ್ ತಮ್ಮ ಬಾಂಧವ್ಯವನ್ನು ಸೋಷಿಯಲ್​​ ಮೀಡಿಯಾದಲ್ಲಿ ಪ್ರದರ್ಶಿಸಿದ್ದಾರೆ. ಸೋಷಿಯಲ್​ ಮೀಡಿಯಾ ಪೋಸ್ಟ್​ಗಳು ಪರಸ್ಪರ ಗೌರವ, ಮೆಚ್ಚುಗೆ, ಬಾಂಧವ್ಯವನ್ನು ಒತ್ತಿ ಹೇಳಿವೆ.

ಇದನ್ನೂ ಓದಿ: 3 ದಿನಗಳಲ್ಲಿ ವಿಶ್ವದಾದ್ಯಂತ 400 ಕೋಟಿಗೂ ಅಧಿಕ ಕಲೆಕ್ಷನ್​​: 'ಕಲ್ಕಿ' ಅಬ್ಬರ ಜೋರು - Kalki Worldwide Collection

ಕಲ್ಕಿ 2898 ಎಡಿ ಸಿನಿಮಾ ಮೂರೇ ದಿನಗಳಲ್ಲಿ ಜಾಗತಿಕವಾಗಿ 415 ಕೋಟಿ ರೂ.ಗಳನ್ನು ಕಲೆಕ್ಷನ್​ ಮಾಡಿದೆ. ಈ ವಿಚಾರವನ್ನು ಹಂಚಿಕೊಂಡ ಚಿತ್ರ ತಯಾರಕರು "ದಿ ಫೋರ್ಸ್ ಈಸ್ ಅನ್​​​ಸ್ಟಾಪಬಲ್" ಎಂದು ಬರೆದುಕೊಂಡಿದ್ದಾರೆ. ಭಾರತೀಯ ಬಾಕ್ಸ್​ ಆಫೀಸ್​ನಲ್ಲಿ 220 ಕೋಟಿ ರೂ. ಸಂಪಾದಿಸಿದೆ.

ಇದನ್ನೂ ಓದಿ: ಮೂರೇ ದಿನದಲ್ಲಿ ಭಾರತದಲ್ಲಿ ₹200 ಕೋಟಿ ಗಳಿಸಿದ 'ಕಲ್ಕಿ 2898 ಎಡಿ' - Kalki Movie Collection

ವೈಜಯಂತಿ ಮೂವೀಸ್ ನಿರ್ಮಾಣದ ಈ ಚಿತ್ರ ಗುರುವಾರ, ಜೂನ್ 27 ರಂದು 6 ಭಾಷೆಗಳಲ್ಲಿ ಬಿಡುಗಡೆಯಾಗಿದೆ. ತೆಲುಗು, ತಮಿಳು, ಮಲಯಾಳಂ, ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಪ್ರಭಾಸ್ ಜೊತೆ ದೀಪಿಕಾ ಪಡುಕೋಣೆ, ಅಮಿತಾಭ್​​ ಬಚ್ಚನ್ ಮತ್ತು ಕಮಲ್ ಹಾಸನ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.