ETV Bharat / entertainment

'ಪ್ರೀತಿ ಯಾರ ಮೇಲೆ ಹುಟ್ಟುತ್ತೆ ಹೇಳಿ'? ಅಂತಿದ್ದಾರೆ ಪೃಥ್ವಿ ಅಂಬಾರ್ - ಜೂನಿ ಟ್ರೇಲರ್ ರಿಲೀಸ್ - ಪೃಥ್ವಿ ಅಂಬಾರ್

​​ Juni: ಪೃಥ್ವಿ ಅಂಬಾರ್ ನಟನೆಯ ಬಹುನಿರೀಕ್ಷಿತ 'ಜೂನಿ' ಟ್ರೇಲರ್ ಅನಾವರಣಗೊಂಡಿದೆ.

Juni
ಜೂನಿ ಚಿತ್ರತಂಡ
author img

By ETV Bharat Karnataka Team

Published : Jan 30, 2024, 7:07 PM IST

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಸ್ಟಾರ್​​ಡಮ್ ಹೊಂದಿರೋ​​ ಪೃಥ್ವಿ ಅಂಬಾರ್ ಒಂದರ ಹಿಂದೊಂದರಂತೆ ವಿಶಿಷ್ಠ ಸಿನಿಮಾಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅವರ ಬಹುನಿರೀಕ್ಷಿತ ಸಿನಿಮಾವೊಂದು ಬಿಡುಗಡೆಗೆ ಸಜ್ಜಾಗಿದೆ. ಅದುವೆ 'ಜೂನಿ'. ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತಿರುವ ಈ ಚಿತ್ರದ ಟ್ರೇಲರ್ ಅನ್ನು ಇತ್ತೀಚೆಗೆ ಅನಾವರಣಗೊಳಿಸಲಾಗಿದೆ. ಈವೆಂಟ್​ನಲ್ಲಿ, ಚಿತ್ರತಂಡ 'ಜೂನಿ' ಬಗ್ಗೆ ಕೆಲ ವಿಚಾರಗಳನ್ನು ಹಂಚಿಕೊಂಡಿದೆ.

ನಾಯಕ ನಟ ಪೃಥ್ವಿ ಅಂಬಾರ್ ಮಾತನಾಡಿ, ವೈಭವ್ ಮಹಾದೇವ್​ ಎಷ್ಟು ಕ್ಲಾರಿಟಿಯಾಗಿ ಮಾತನಾಡಿದ್ದರೋ, ಅಷ್ಟೇ ಕ್ಲಾರಿಟಿಯಾಗಿ ಸಿನಿಮಾ ಮಾಡಿದ್ದಾರೆ. ವಯಸ್ಸಿನಲ್ಲಿ ನನಗಿಂತ ಚಿಕ್ಕವರು. ಬುದ್ಧಿವಂತಿಕೆ, ಅನುಭವದಲ್ಲಿ ಬಹಳ ದೊಡ್ಡವರು. ಈ ಚಿತ್ರತಂಡವನ್ನು ಕ್ರಿಕೆಟ್ ಟೀಂ ಎಂದುಕೊಂಡರೆ ಅತಿ ಹೆಚ್ಚು ಸ್ಕೋರ್​ ಮಾಡುವವರು ವೈಭವ್. ಅವರಷ್ಟೇ ಸ್ಕೋರ್ ಮಾಡುವವರು ರಿಷಿಕಾ. ಎರಡೂವರೆ ತಿಂಗಳ ಕಾಲ ಬಹಳಷ್ಟು ರಿಹರ್ಸಲ್ ಮಾಡಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಬೇಕು ಎಂದು ಬಹಳ ಶ್ರದ್ಧೆಯಿಂದ ಚಿತ್ರ ಮಾಡಿದ್ದಾರೆ. ನನ್ನದು ಈ ಚಿತ್ರದಲ್ಲಿ ಶೇ.50ರಷ್ಟು ಪರಿಶ್ರಮ ಅಷ್ಟೇ ಇರುವುದು. ಎಲ್ಲರದ್ದೂ ಶೇ.100ರಷ್ಟು ಇದೆ ಎಂದು ತಿಳಿಸಿದರು.

Juni
ಜೂನಿ ಟ್ರೇಲರ್ ರಿಲೀಸ್​ ಈವೆಂಟ್

ನಾಯಕ ನಟಿ ರಿಷಿಕಾ ಮಾತನಾಡಿ, ನಾವು 2022ರಲ್ಲಿ ಈ ಚಿತ್ರದ ಶೂಟಿಂಗ್ ಶುರು ಮಾಡಿದೆವು. ಆ ಸಮಯದಲ್ಲಿ ನನಗೆ ಇದು ಎರಡನೇ ಪ್ರಾಜೆಕ್ಟ್. ನನಗೆ ಈ ರೀತಿಯ ವಿಭಿನ್ನ ಪಾತ್ರ ಸಿಕ್ಕಿದ್ದು, ಬಹಳ ಖುಷಿ ಕೊಟ್ಟಿತ್ತು. ಬಹಳಾನೇ ರಿಹರ್ಸಲ್ ಮಾಡಿದ್ದೇವೆ. ಇದು ನನ್ನ ಒಬ್ಬಳ ಪ್ರಯತ್ನವಲ್ಲ. ಇಡೀ ತಂಡದ ಪ್ರಯತ್ನ. ಈ ಚಿತ್ರದಲ್ಲಿ ಒಂದೊಳ್ಳೆ ಸಂದೇಶ ಇದೆ. ಸ್ಪ್ಲಿಟ್ ಪರ್ಸನಾಲಿಟಿ ಸುತ್ತ ಸಾಗುವ ಸಿನಿಮಾ ಇದಾಗಿದೆ ಎಂದು ಮಾಹಿತಿ ಹಂಚಿಕೊಂಡರು.

ಸ್ಪ್ಲಿಟ್ ಪರ್ಸನಾಲಿಟಿ ಸುತ್ತ ಸಾಗುವ ಸಿನಿಮಾ: ನಿರ್ದೇಶಕ ವೈಭವ್ ಮಹಾದೇವ್ ಮಾತನಾಡಿ, ಜೂನಿ ಕಥೆ ಮೇಲೆ ಬಹಳ ನಂಬಿಕೆ ಇದೆ. ಆ ಕಥೆ ಮೇಲೆ ಇರುವ ನಂಬಿಕೆಯಿಂದಲೇ ನಾವಿಲ್ಲಿ ಕುಳಿತುಕೊಂಡಿದ್ದೇವೆ. ನಾನೊಂದು ಕಥೆಯನ್ನು ಜನರಿಗೆ ಹೇಳುತ್ತಿದ್ದೇನೆ. ಅದನ್ನು ಕೋಟ್ಯಂತರ ಕನ್ನಡಿಗರ ಮುಂದೆ ಇಡಬೇಕು ಎಂದರೆ ಅದಕ್ಕೆ ಲಕ್, ಹಾರ್ಡ್ ವರ್ಕ್ ಎಲ್ಲವೂ ಬೇಕು. ಈ ಚಿತ್ರ ಮಾಡಿರುವುದಕ್ಕೆ ನನಗೂ ತೃಪ್ತಿ ಇದೆ. ಸ್ಪ್ಲಿಟ್ ಪರ್ಸನಾಲಿಟಿ ಸುತ್ತ ಇಡೀ ಸಿನಿಮಾ ಸಾಗುತ್ತದೆ. ಜನಕ್ಕೆ ಈ ಕಂಡೀಷನ್ ಬಗ್ಗೆ ಅರ್ಥ ಮಾಡಿಸಬೇಕು ಅನ್ನೋದು ನನ್ನ ಪ್ರಯತ್ನ ಎಂದರು.

Juni
ಫೆಬ್ರವರಿ 9ಕ್ಕೆ ಜೂನಿ ಬಿಡುಗಡೆ

ವೈಭವ್ ಮಹಾದೇವ್ ಈಗಾಗಲೇ ಜನ್ನಿ ಅನ್ನೋ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದರು. ಈಗ 'ಜೂನಿ' ಸಿನಿಮಾ ಮೂಲಕ ದೊಡ್ಡ ಪರದೆಗೆ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಪ್ರಾಗ್ ಫಿಲ್ಮ್ ಸ್ಕೂಲ್​ನಲ್ಲಿ ನಿರ್ದೇಶನದ ತರಬೇತಿಯನ್ನೂ ಪಡೆದಿದ್ದಾರೆ. ಇದೀಗ 'ಜೂನಿ' ಸಿನಿಮಾಗೆ ಕಥೆ-ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಇಂತಹ ವಿಭಿನ್ನ ಟೈಟಲ್ ಇಟ್ಟು ಮಾಡುತ್ತಿರುವ ಸಿನಿಮಾದಲ್ಲಿ ಪೃಥ್ವಿ ಅಂಬಾರ್ ಮತ್ತು ರಿಷಿಕಾ ನಾಯಕ - ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾದ ನಿರ್ಮಾಪಕ‌ ಹೆಚ್ಎಂಕೆ ಮೂರ್ತಿ ಮೊಮ್ಮಗ ಯಶಸ್ವ

'ಜೂನಿ'ಯ ಒಂದೆಳೆ ಕಥೆ ಏನಪ್ಪ ಅಂದ್ರೆ, 'ಪ್ರೀತಿ ಯಾರ ಮೇಲೆ ಹುಟ್ಟುತ್ತೋ..ಅವರ ಮೇಲೆ ಪ್ರೀತಿ ಆಗುತ್ತಾ?' ಅನ್ನೋದು. ಇಂಥದ್ದೊಂದು ಪ್ರಶ್ನೆ ಇಟ್ಟುಕೊಂಡು ಕಥೆ ಹೆಣೆಯಲಾಗಿದೆ. ತ್ರಿಶೂಲ ಕ್ರಿಯೇಷನ್ ಬ್ಯಾನರ್ ಅಡಿ ಮೋಹನ್ ಕುಮಾರ್ ಎಂಬುವವರು ಹಣ ಹಾಕಿದ್ದಾರೆ. ಶ್ರೇಯಸ್ ವೈ ಎಸ್ ಎಂಬುವರು ಸಹ ನಿರ್ಮಾಪಕರಾಗಿ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

  • " class="align-text-top noRightClick twitterSection" data="">

ಇದನ್ನೂ ಓದಿ: ಚಿರಂಜೀವಿ ಭೇಟಿಯಾದ ಅನೀಶ್ ತೇಜೇಶ್ವರ್: ಆರಾಮ್ ಅರವಿಂದ್ ಸ್ವಾಮಿ ಕಂಟೆಂಟ್ ಮೆಚ್ಚಿದ ಮೆಗಾಸ್ಟಾರ್

ಜೂನಿ ಸಿನಿಮಾದ ಚಿತ್ರೀಕರಣವನ್ನು ಬೆಂಗಳೂರು ಸುತ್ತಮುತ್ತ ನಡೆಸಲಾಗಿದೆ. 'ಲವ್ ಮಾಕ್ಟೇಲ್ 2'ಗೆ ಸಂಗೀತ ನಿರ್ದೇಶಿಸಿದ್ದ ನಕುಲ್ ಅಭ್ಯಂಕರ್ ಅವರು ಈ ಚಿತ್ರಕ್ಕೂ ಸಂಗೀತ ನಿರ್ದೇಶಿಸಿದ್ದಾರೆ. ಶಶಾಂಕ್ ನಾರಾಯಣ ಎಡಿಟಿಂಗ್ ಮಾಡಿದ್ರೆ, ಅಜಿನ್ ಬಿ, ಜಿತಿನ್ ದಾಸ್ ಕ್ಯಾಮರಾ ವರ್ಕ್ ನಿರ್ವಹಿಸಿದ್ದಾರೆ. ಹಾಗೇ ನವೀನ್ ಈ ಸಿನಿಮಾಗೆ ಆರ್ಟ್ ಡೈರೆಕ್ಷನ್ ಮಾಡಿದ್ದಾರೆ. ಫೆಬ್ರವರಿ 9ಕ್ಕೆ ಜೂನಿ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.