ETV Bharat / entertainment

ಹೃತಿಕ್​ ರೋಷನ್​ ನಟನೆಯ 'ವಾರ್​ 2'ನಲ್ಲಿ ಜೂ. ಎನ್​ಟಿಆರ್​ ಪಾತ್ರವೇನು? - War 2 Movie

ಹೃತಿಕ್ ರೋಷನ್ ಅವರ 'ವಾರ್ 2'ನಲ್ಲಿ ಜೂನಿಯರ್ ಎನ್‌ಟಿಆರ್ ಇಂಡಿಯನ್​​ ಏಜೆಂಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

War 2
ವಾರ್​ 2
author img

By ETV Bharat Karnataka Team

Published : Mar 5, 2024, 6:55 PM IST

ಜೂನಿಯರ್ ಎನ್‌ಟಿಆರ್, ಹೃತಿಕ್​ ರೋಷನ್​ ಅವರಂತಹ ಖ್ಯಾತ ಕಲಾವಿದರನ್ನೊಳಗೊಂಡ ಬಹುನಿರೀಕ್ಷಿತ ಚಿತ್ರ 'ವಾರ್ 2'. ಯಶ್​​ ರಾಜ್​ ಫಿಲ್ಮ್ಸ್​ನ ಸ್ಪೈ ಯೂನಿವರ್ಸ್​​​ನ ಭಾಗವಾಗಿರೋ ಈ ಚಿತ್ರವನ್ನು ಅಯಾನ್ ಮುಖರ್ಜಿ ನಿರ್ದೇಶಿಸುತ್ತಿದ್ದಾರೆ. ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ಮುಖಾಮುಖಿಯಾದ 'ವಾರ್'​ ಸಿನಿಮಾದ ಸೀಕ್ವೆಲ್​ ಇದು. ಜೂನಿಯರ್ ಎನ್‌ಟಿಆರ್ ಅವರು ಹೃತಿಕ್​ ರೋಷನ್ ಎದುರಾಳಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಈ ಹಿಂದೆ ಹೇಳಲಾಗಿತ್ತು. ಅದಾಗ್ಯೂ ಲೇಟೆಸ್ಟ್ ನ್ಯೂಸ್ ಬೇರೆಯದ್ದೇ ಸೂಚಿಸಿದೆ.

'ವಾರ್ 2'ರಲ್ಲಿ ಜೂನಿಯರ್ ಎನ್​ಟಿಆರ್​ ಇಂಡಿಯನ್​​ ಏಜೆಂಟ್ ಆಗಿ ಕಾಣಿಸಿಕೊಳ್ಳಲಿದ್ದಾರೆಂದು ಲೇಟೆಸ್ಟ್ ವರದಿಗಳು ಹೇಳಿವೆ. ವೈಆರ್​ಎಫ್​​ ಸ್ಪೈ ಯೂನಿವರ್ಸ್‌ನ ಹಿಂದಿರುವ ನಿರ್ಮಾಪಕ ಆದಿತ್ಯ ಚೋಪ್ರಾ ಮತ್ತು ನಿರ್ದೇಶಕ ಅಯಾನ್ ಮುಖರ್ಜಿ, ಹೃತಿಕ್ ಮತ್ತು ಜೂನಿಯರ್ ಎನ್​ಟಿಆರ್​​ ನಡುವಿನ ಅದ್ಭುತ ದೃಶ್ಯವನ್ನು ಸೃಷ್ಟಿಸಲು ಉತ್ಸುಕರಾಗಿದ್ದಾರೆ. ಪ್ರೇಕ್ಷಕರಿಗೆ ಅದ್ಭುತ ಸಿನಿಮೀಯ ಅನುಭವ ನೀಡುವತ್ತ ಚಿತ್ರತಂಡ ಗಮನ ಹರಿಸಿದೆ. ನಿರ್ಮಾಪಕ ಆದಿತ್ಯ ಚೋಪ್ರಾ ಅವರು ಜೂನಿಯರ್ ಎನ್‌ಟಿಆರ್‌ನ ಪಾತ್ರಕ್ಕಾಗಿ ಹಲವು ಯೋಜನೆಗಳನ್ನು ಹೊಂದಿದ್ದಾರೆ.

ಜೂನಿಯರ್ ಎನ್​ಟಿಆರ್​ ಪಾತ್ರ ಭವಿಷ್ಯದಲ್ಲಿ ಮುಂದುವರಿಯುವಂತಹ ಯೋಜನೆಗಳನ್ನು ಚಿತ್ರತಂಡ ಹಾಕಿಕೊಂಡಿದೆಯಂತೆ. ಈ ಪ್ರಾಜೆಕ್ಟ್​​ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡೋ ಗುರಿ ಹೊಂದಿದೆ. ಅಲ್ಲದೇ ಬಹುಭಾಷೆಗಳ ಪ್ರತಿಭೆಗಳನ್ನು ಒಂದುಗೂಡಿಸಲಿದೆ. ವೆಬ್ಲಾಯ್ಡ್ ವರದಿಯೊಂದರ ಪ್ರಕಾರ, ಜೂನಿಯರ್ ಎನ್‌ಟಿಆರ್ ಅವರ ಬಾಲಿವುಡ್​ ಪ್ರಯಾಣ ಯುದ್ಧ 2ರ ಆಚೆಗೂ ವಿಸ್ತರಿಸಲಿದೆ. ಸೌತ್ ಸೂಪರ್ ಸ್ಟಾರ್ ಅನ್ನು ಹಿಂದಿ ಚಿತ್ರರಂಗಕ್ಕೆ ಗಮನಾರ್ಹ ರೀತಿಯಲ್ಲಿ ಪರಿಚಯಿಸಲಾಗುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ರಾಜಮೌಳಿ ಸಿನಿಮಾ: 8 ವಿಭಿನ್ನ ನೋಟದಲ್ಲಿ ಮಹೇಶ್​ ಬಾಬು; ವಿದೇಶದಲ್ಲಿ ನಡೆಯಲಿದೆ ಚಿತ್ರೀಕರಣ?!

'ವಾರ್ 2', ವೈಆರ್‌ಎಫ್ ಸ್ಪೈ ಯೂನಿವರ್ಸ್‌ನ ಆರನೇ ಸಿನಿಮಾ. ಆಲಿಯಾ ಭಟ್ ಮತ್ತು ಶಾರ್ವರಿ ನಟನೆಯ ಸ್ಪೈ ಸಿನಿಮಾ ಕೂಡ ಇದೇ ಸಾಲಿನಲ್ಲಿದೆ. ಶಾರುಖ್ ಖಾನ್ ಅವರ ಪಠಾಣ್​ 2 ಕೂಡ ಪ್ರೀ ಪ್ರೊಡಕ್ಷನ್​ ಹಂತದಲ್ಲಿದೆ. ಸಲ್ಮಾನ್ ಖಾನ್ ಮತ್ತು ಎಸ್‌ಆರ್‌ಕೆ ಜೋಡಿಯ 'ಟೈಗರ್ ವರ್ಸಸ್ ಪಠಾಣ್'​​​ ಸಿನಿಮಾ ಕೂಡ ಯೋಜನಾ ಹಂತದಲ್ಲಿದೆ. ವಾರ್ 2 ಚಿತ್ರ 2025ರ ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಬಿಡುಗಡೆಯಾಗಲಿದೆ. ಈ ವರ್ಷ ಚಿತ್ರೀಕರಣ ಪೂರ್ಣಗೊಳ್ಳಲಿದೆ.

ಇದನ್ನೂ ಓದಿ: ಕಮಲ್ ಹಾಸನ್​​ರ 'ಥಗ್ ಲೈಫ್‌'ನಿಂದ ಹೊರಬಂದ ದುಲ್ಕರ್ ಸಲ್ಮಾನ್!

ಜೂನಿಯರ್​ ಎನ್​​ಟಿಆರ್​​ ಕೊನೆಯದಾಗಿ ಆರ್​ಆರ್​ಆರ್​ ಸಿನಿಮಾದಲ್ಲಿ ಕಾಣಿಸಿಕೊಂಡರು. ರಾಜಮೌಳಿ ನಿರ್ದೇಶನದ ಈ ಚಿತ್ರದಲ್ಲಿ ಜೂನಿಯರ್​ ಎನ್​​ಟಿಆರ್​​ ಜೊತೆಗೆ ರಾಮ್​ಚರಣ್​ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡರು. ಈ ಚಿತ್ರದಲ್ಲಿನ ನಟರ ಅಮೋಘ ಅಭಿನಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಯಿತು. ಇವರ ಮುಂದಿನ ಚಿತ್ರಗಳ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.