ETV Bharat / entertainment

ಹೇಗಿದೆ ದೇವರ ಟ್ರೇಲರ್?: ಜನರಿಗಾಗಿ ಜೂ.NTR ಹೋರಾಟ​, ಎದುರಾಳಿಯಾಗಿ ಸೈಫ್​ ಅಲಿ ಖಾನ್​​ - Devara Trailer

author img

By ETV Bharat Entertainment Team

Published : Sep 10, 2024, 6:53 PM IST

ಸೌತ್​ ಸೂಪರ್​ ಸ್ಟಾರ್ ಜೂನಿಯರ್ ಎನ್‌ಟಿಆರ್, ಬಾಲಿವುಡ್​​ ಸ್ಟಾರ್ಸ್ ಜಾಹ್ನವಿ ಕಪೂರ್ ಮತ್ತು ಸೈಫ್ ಅಲಿ ಖಾನ್ ನಟನೆಯ ಬಹುನಿರೀಕ್ಷಿತ 'ದೇವರ: ಭಾಗ 1'ರ ಟ್ರೇಲರ್​ ಇಂದು ಅನಾವರಣಗೊಂಡಿದೆ. ತನ್ನ ಜನರು ಮತ್ತು ಭೂಮಿಯನ್ನು ರಕ್ಷಿಸುವ ಪಾತ್ರದಲ್ಲಿ ದಕ್ಷಿಣದ ಖ್ಯಾತ ನಟ ಕಾಣಿಸಿಕೊಂಡಿದ್ದರೆ, ಜಾಹ್ನವಿ ಸಿನಿಮಾಗೆ ರೊಮ್ಯಾನ್ಸ್ ಅಂಶ ತುಂಬಿದ್ದಾರೆ, ಸೈಫ್ ಸೇಡು ತೀರಿಸಿಕೊಳ್ಳುವ ಎದುರಾಳಿಯಾಗಿ ನಟಿಸಿದ್ದಾರೆ.

Devara Part 1 Trailer Release
ದೇವರ ಟ್ರೇಲರ್​ ರಿಲೀಸ್​​ (Film poster)

ಹೈದರಾಬಾದ್: ದಕ್ಷಿಣ ಚಿತ್ರರಂಗದ ಹೆಸರಾಂತ ನಟ ಜೂನಿಯರ್ ಎನ್‌ಟಿಆರ್ ಹಾಗೂ ಜಾಹ್ನವಿ ಕಪೂರ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಚಿತ್ರ 'ದೇವರ: ಭಾಗ 1'ರ ಟ್ರೇಲರ್​ ಇಂದು ಅನಾವರಣಗೊಂಡಿದೆ. ಚಿತ್ರ ತಯಾರಕರು ಅಂತಿಮವಾಗಿ ಇಂದು (ಸೆಪ್ಟೆಂಬರ್ 10) ಬಹು ನಿರೀಕ್ಷಿತ ಟ್ರೇಲರ್ ಬಿಡುಗಡೆ ಮಾಡೋ ಮೂಲಕ ಸಿನಿಪ್ರಿಯರ ಕುತೂಹಲ, ಉತ್ಸಾಹ ದ್ವಿಗುಣಗೊಳಿಸಿದ್ದಾರೆ.

ಚಿತ್ರದ ಟ್ರೇಲರ್​ಗೂ ಮುನ್ನ ಹಲವು ಪೋಸ್ಟರ್‌ಗಳು ಮತ್ತು ಹಾಡುಗಳನ್ನು ರಿಲೀಸ್​ ಮಾಡಲಾಗಿತ್ತು. ಈ ಮೂಲಕ ಚಿತ್ರ ತಂಡ ಅಭಿಮಾನಿಗಳಲ್ಲಿ ಉತ್ಸಾಹ ಹುಟ್ಟಿಸಿತ್ತು. ಇದೀಗ ಟ್ರೇಲರ್ ಹೊರಬಿದ್ದಿದ್ದು, ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ.

ಟ್ರೇಲರ್ ತನ್ನ ಭೂಮಿ ಮತ್ತು ಜನರ ರಕ್ಷಕನಾಗಿ ನಿಂತಿರುವ ಜೂನಿಯರ್ ಎನ್‌ಟಿಆರ್ ಪಾತ್ರದ ಒಂದು ನೋಟ ಒದಗಿಸಿದೆ. ಹೈ - ಆಕ್ಟೇನ್ ಆಕ್ಷನ್ ಸೀಕ್ವೆನ್ಸ್‌ಗಳನ್ನು ಪ್ರದರ್ಶಿಸಿ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ. ಜೂನಿಯರ್ ಎನ್‌ಟಿಆರ್​ ಹೋರಾಟದ ಮನೋಭಾವ ವ್ಯಕ್ತಗೊಂಡಿದೆ. ಬೆದರಿಕೆಗಳಿಂದ ತಮ್ಮ ಸಮುದಾಯವನ್ನು ರಕ್ಷಿಸಲು ಹೋರಾಡುತ್ತಾರೆ. ಜಾಹ್ನವಿ ಅವರ ಪಾತ್ರ ಚಿತ್ರಕ್ಕೆ ರೊಮ್ಯಾಂಟಿಕ್ ಅಂಶ ಸೇರಿಸಲಿದೆ. ನ್ಯಾಯ, ನಿಷ್ಠೆ ಮತ್ತು ಪ್ರತೀಕಾರದಂದಹ ಅಂಶಗಳನ್ನೊಳಗೊಂಡಿರುವ ಈ ಡ್ರಾಮಾದಲ್ಲಿ ಜೂನಿಯರ್ ಎನ್‌ಟಿಆರ್‌ ಎದುರಾಳಿಯಾಗಿ ಬಾಲಿವುಡ್​ ಸೂಪರ್​ ಸ್ಟಾರ್ ಸೈಫ್ ಅಲಿ ಖಾನ್ ಕಾಣಿಸಿಕೊಳ್ಳಲಿದ್ದಾರೆ. ಸೇಡು ತೀರಿಸಿಕೊಳ್ಳಲಿಚ್ಛಿಸುವ ಆತ ಅಧಿಕಾರ ಬಯಸುತ್ತಾ ಉದ್ವಿಗ್ನತೆ ಸೃಷ್ಟಿಸುತ್ತಾನೆ.

'ದೇವರ: ಭಾಗ 1' ಬಿಡುಗಡೆಗೂ ಮುನ್ನ ಅಮೆರಿಕದಲ್ಲಿ 26,000ಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡಿ ದಾಖಲೆ ಬರೆದಿದೆ. ಜಾಗತಿಕ ಮಟ್ಟದ ಅಭಿಮಾನಿಗಳ ಈ ಸ್ಪಂದನೆ ಸಿನಿಮಾ ಸುತ್ತಲಿರುವ ಉತ್ಸಾಹವನ್ನು ಒತ್ತಿಹೇಳುತ್ತಿದೆ. ಜೊತೆಗೆ ಜೂನಿಯರ್​ ಎನ್​ಟಿಆರ್​ ಅವರ ಜಾಗತಿಕ ಮಟ್ಟದ ಜನಪ್ರಿಯತೆಯನ್ನೂ ಸಾಬೀತುಪಡಿಸಿದೆ.

ಇದನ್ನೂ ಓದಿ: ರಮೇಶ್​ ಅರವಿಂದ್​​​ಗೆ ವಯಸ್ಸು 60 ಅಂದ್ರೆ ನಂಬ್ತೀರಾ?: ಅರವತ್ತರಲ್ಲೂ 30ರ ಚಾರ್ಮ್​ - ಹ್ಯಾಂಡ್ಸಂ ಲುಕ್​​ಗೆ ಫ್ಯಾನ್​ ಫಿದಾ - Ramesh Aravind

ಕೊರಟಾಲ ಶಿವ ಆ್ಯಕ್ಷನ್​ ಕಟ್​ ಹೇಳಿರುವ ಈ ಚಿತ್ರ ಕರಾವಳಿ ಹಿನ್ನೆಲೆಯಲ್ಲಿ ನಡೆಯುತ್ತದೆ. ಆ್ಯಕ್ಷನ್​​-ಪ್ಯಾಕ್ಡ್ ಸೀಕ್ವೆನ್ಸ್ ಜೊತೆಗೆ ಭಾವನಾತ್ಮಕ ಮಿಶ್ರಣವನ್ನೂ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: 'ದಿಗಂತ್​​ ಜೊತೆ ಮತ್ತೆ ನಟಿಸಲ್ಲ': ನಟಿ ಐಂದ್ರಿತಾ ರೇ ಸಿನಿಮಾ ಸಂಖ್ಯೆ ಕಡಿಮೆಯಾಗಿದ್ದೇಕೆ ಗೊತ್ತಾ? - Aindrita Ray Interview

ಆಕ್ಷನ್ ಥ್ರಿಲ್ಲರ್ ಸಿನಿಮಾ ಸೆಪ್ಟೆಂಬರ್ 27ರಂದು ಚಿತ್ರಮಂದಿರ ಪ್ರವೇಶಿಸಲಿದೆ. ಜಾಹ್ನವಿ ಕಪೂರ್​ ಅವರಿಗಿದು ಚೊಚ್ಚಲ ತೆಲುಗು ಚಿತ್ರ. ಯುವಸುಧಾ ಆರ್ಟ್ಸ್ ಮತ್ತು ಎನ್‌ಟಿಆರ್ ಆರ್ಟ್ಸ್ ನಿರ್ಮಾಣದ ಈ ಚಿತ್ರದಲ್ಲಿ ಪ್ರಕಾಶ್ ರಾಜ್, ಶ್ರೀಕಾಂತ್ ಮತ್ತು ಶೈನ್ ಟಾಮ್ ಚಾಕೊ ಸಹ ನಟಿಸಿದ್ದಾರೆ. ತೆಲುಗು, ಹಿಂದಿ, ಮಲಯಾಳಂ, ಕನ್ನಡ ಮತ್ತು ತಮಿಳು ಸೇರಿದಂತೆ ಬಹು ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದ್ದು, ಪ್ರಚಾರ ಜೋರಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.