ETV Bharat / entertainment

ಹುಬ್ಬೇರಿಸಿದ 'ದೇವರ' ಪಾರ್ಟ್​-​1' ಹಿಂದಿ ಥಿಯೇಟರಿಕಲ್ ಹಕ್ಕುಗಳ ಮಾರಾಟ - Devara Part 1 - DEVARA PART 1

'ದೇವರ: ಪಾರ್ಟ್​​ 1' ಸಿನಿಮಾ ಜಾಗತಿಕ​ ಪ್ರೀ ರಿಲೀಸ್​ ಮೂಲಕ 200 ಕೋಟಿ ರೂ ಗಳಿಕೆ ನಡೆಸಲಿದೆ ಎಂದು ಅಂದಾಜಿಸಲಾಗಿದೆ.

Jr NTR and Janhvi Kapoor's Devara: Part 1 Strikes Massive Rs 45 Crore Hindi Theatrical Deal

author img

By ETV Bharat Karnataka Team

Published : Apr 18, 2024, 3:56 PM IST

ಹೈದರಾಬಾದ್​​: 'ಆರ್​ಆರ್​ಆರ್'​ ಸಿನಿಮಾ ಯಶಸ್ಸಿನ ಬಳಿಕ 'ದೇವರ: ಪಾರ್ಟ್​ 1'ನಲ್ಲಿ ಜೂ.ಎನ್‌ಟಿಆರ್​ ಕಾಣಿಸಿಕೊಳ್ಳುತ್ತಿದ್ದಾರೆ. ಬಹುನಿರೀಕ್ಷಿತ ಚಿತ್ರ 'ದೇವರ: ಪಾರ್ಟ್​ 1'ಗೆ ಕೊರಟಾಲಾ ಶಿವ ನಿರ್ದೇಶಿಸಿದ್ದು ಬಾಲಿವುಡ್​ ನಟಿ ಜಾಹ್ನವಿ ಕಪೂರ್​​ ಮತ್ತು ಸೈಫ್​ ಆಲಿ ಖಾನ್​ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಈ ಚಿತ್ರದ ಹಿಂದಿ ಥಿಯೇಟರಿಕಲ್​ ಹಕ್ಕು ಮಾರಾಟವಾಗಿದ್ದು, ಹುಬ್ಬೇರಿಸುವಂತೆ ಮಾಡಿದೆ.

ಕರಣ್​ ಜೋಹರ್​​ ಅವರ ಧರ್ಮ ಮೂವೀಸ್​ ಪ್ರಸ್ತುತಪಡಿಸುತ್ತಿರುವ 'ದೇವರ: ಭಾಗ 1'ರ ಹಿಂದಿ ಥಿಯೇಟರಿಕಲ್​ ಹಕ್ಕನ್ನು ಎಎ ಫಿಲ್ಮ್ಸ್​​​​ ಪಡೆದುಕೊಂಡಿದೆ. ಈ ಥಿಯೇಟರಿಕಲ್​ ಮಾರಾಟದ ಹಕ್ಕು 45 ಕೋಟಿ ರೂ.ಗೆ ಸೇಲ್ ಆಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ಡೀಲ್​ ಹಿಂದಿ ಭಾಷಿಕ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಹಾಯವಾಗಲಿದೆ ಎಂದು ಸಿನಿಮಾ ಪಂಡಿತರು ಹೇಳುತ್ತಿದ್ದಾರೆ. ಹಿಂದಿ ಸಿನಿಮಾ ಮಾರುಕಟ್ಟೆಯಲ್ಲಿ ಚಿತ್ರ 100 ಕೋಟಿ ರೂ ಗಳಿಕೆ ಮಾಡಿದ್ದಲ್ಲಿ ಜೂ.ಎನ್​ಟಿಆರ್​ ಮತ್ತು ಅವರ ತಂಡ ಕೂಡ ಈ ಗಳಿಕೆಯಲ್ಲಿ ಕೆಲವು ಪರ್ಸೆಂಟೇಜ್ ಹಣ​ ಪಡೆಯುವುದು ನಿಶ್ಚಿತ ಎನ್ನುತ್ತಿವೆ ಮೂಲಗಳು.

  • " class="align-text-top noRightClick twitterSection" data="">

'ಆಚಾರ್ಯ' ಸಿನಿಮಾದ ಸೋಲಿನ ಬಳಿಕ ಕೊರಟಾಲ ಶಿವ ಅವರ ಭರವಸೆಯ ಚಿತ್ರ ಇದಾಗಿದ್ದು, ಮೇಕಿಂಗ್​ ಅದ್ಬುತವಾಗಿದೆ ಎನ್ನಲಾಗುತ್ತಿದೆ. ಆರ್​ಆರ್​​ಆರ್​ ಚಿತ್ರದ ಬಳಿಕ ಜೂ.ಎನ್​ಟಿಆರ್​​ ಅವರು ಸೋಲೋ ಹೀರೋ ಆಗಿ ನಟಿಸುತ್ತಿರುವ ಚಿತ್ರವೂ ಇದಾಗಿದೆ. 'ದೇವರ: ಪಾರ್ಟ್​ 1' ಕುರಿತು ವ್ಯಕ್ತವಾಗುತ್ತಿರುವ ಸಕಾರಾತ್ಮಕ ಅಭಿಪ್ರಾಯಗಳು ಬಾಕ್ಸ್​ ಆಫೀಸ್​ ದಾಖಲೆ ಮೇಲೆ ಪರಿಣಾಮ ಬೀರಲಿದೆ ಎಂಬ ಲೆಕ್ಕಾಚಾರ ನಡೆದಿದೆ.

ಒಂದು ಅಂದಾಜಿನ ಪ್ರಕಾರ, 'ದೇವರ: ಪಾರ್ಟ್​​ 1' ಗ್ಲೋಬಲ್​ ಪ್ರೀ ರಿಲೀಸ್​​ ಮೂಲಕ 200 ಕೋಟಿ ರೂ ಗಳಿಸಲಿವೆ. ನಾನ್​ ಥಿಯೇಟರ್ ಹಕ್ಕಿನ ಮೂಲಕ 150 ಕೋಟಿ ರೂ ಸಂಪಾದಿಸಲಿದೆ. ಒಟ್ಟಾರೆ ಚಿತ್ರ 200 ರಿಂದ 250 ಕೋಟಿ ರೂ ಗಳಿಕೆ ಮಾಡುವ ಮೂಲಕ ನಿರ್ಮಾಪಕರಿಗೆ ಹಣ ತಂದುಕೊಡಲಿದೆ ಎಂಬುದು ನಿರೀಕ್ಷೆ. 'ದೇವರ: ಪಾರ್ಟ್​ 1' ಅಕ್ಟೋಬರ್​ನಲ್ಲಿ ತೆರೆಕಾಣಲು ಸಜ್ಜಾಗಿದೆ.

ಇದನ್ನೂ ಓದಿ: ಉಲಾಜ್​ ಟೀಸರ್​ ಬಿಡುಗಡೆ; ದೇಶಪ್ರೇಮಿಯಾಗಿ ನಟಿ ಜಾಹ್ನವಿ ಕಪೂರ್ ಮಿಂಚಿಂಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.