ಸೋಮವಾರ (ಜನವರಿ 22ರಂದು) ಕೋಟ್ಯಂತರ ಭಾರತೀಯರ ಕನಸು ನನಸಾಗುವ ದಿನ. ನಾಳೆ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಆಗುವ ಸುವರ್ಣ ಯುಗ. ಇತ್ತೀಚಿಗೆ ಸಿರಿ ಮ್ಯೂಸಿಕ್ ಅರ್ಪಿಸುವ ಹಾಗೂ ನಟಿ ರೂಪಿಕಾ ಅವರ ಗೆಜ್ಜೆ ಡ್ಯಾನ್ಸ್ ಸ್ಟುಡಿಯೋ ಸಾರಥ್ಯದಲ್ಲಿ ಮೂಡಿಬಂದಿರುವ ಜಾನಕಿ ರಾಮ ಆಲ್ಬಂ ಸಾಂಗ್ ಬಿಡುಗಡೆಯಾಗಿದೆ.
- " class="align-text-top noRightClick twitterSection" data="">
ಸುರಪುರದ ಶಾಸಕ ರಾಜುಗೌಡ, ಡಿ ಎಸ್ ಮ್ಯಾಕ್ಸ್ ಎಂ ಡಿ ದಯಾನಂದ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್, ನಟಿ ಪ್ರಿಯಾಂಕಾ ಉಪೇಂದ್ರ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ.ಮ. ಹರೀಶ್, ಕರ್ನಾಟಕ ಚಲನಚಿತ್ರ ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಪೊಲೀಸ್ ಅಧಿಕಾರಿ ಶಂಕರ್ ಸೇರಿದಂತೆ ಅನೇಕ ಗಣ್ಯರು ಸನ್ನಿಧಾನದಲ್ಲಿ "ಜಾನಕಿ ರಾಮ" ಆಲ್ಬಂ ಸಾಂಗ್ ಬಿಡುಗಡೆ ಮಾಡಲಾಯಿತು. ಹಾಡನ್ನು ವೀಕ್ಷಿಸಿದ ಗಣ್ಯರು ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ನಟಿ ಪ್ರಿಯಾಂಕಾ ಉಪೇಂದ್ರ, ಈ ಹಾಡನ್ನು ವೀಕ್ಷಿಸಿದಾಗ ಮೈ ರೋಮಾಂಚನವಾಯಿತು. ಇಲ್ಲೇ ರಾಮನ ಪ್ರಾಣ ಪ್ರತಿಷ್ಠಾಪನೆ ವೈಭವ ನೋಡಿದ ಹಾಗಾಯಿತು. ಇಂತಹ ಅದ್ಭುತ ಗೀತೆಯನ್ನು ಹೊರ ತಂದಿರುವ ಸಿರಿ ಮ್ಯೂಸಿಕ್ ಸುರೇಶ್ ಚಿಕ್ಕಣ್ಣ ಹಾಗೂ ರೂಪಿಕಾ ಅವರಿಗೆ ಅಭಿನಂದನೆ ಎಂದರು.
ಬಳಿಕ ನಟಿ ರೂಪಿಕಾ ಮಾತನಾಡಿ, ನಮ್ಮ ಗೆಜ್ಜೆ ಡ್ಯಾನ್ಸ್ ಸ್ಟುಡಿಯೋಸ್ನಲ್ಲಿ ಎಲ್ಲರೂ ಸಹಕಾರ ನೀಡಿದ್ದರಿಂದ ಈ ಹಾಡು ಸುಂದರವಾಗಿ ಮೂಡಿಬಂದಿದೆ. ನಮ್ಮ ಕನಸಿಗೆ ಸಿರಿ ಮ್ಯೂಸಿಕ್ನ ಸುರೇಶ್ ಚಿಕ್ಕಣ್ಣ ಅವರು ಆಸರೆಯಾದರು. ಬೆಂಗಳೂರು ಸ್ಟುಡಿಯೋಸ್ನಲ್ಲಿ ನಿರ್ಮಿಸದ್ದ ಅದ್ಧೂರಿ ಸೆಟ್ ನಲ್ಲಿ ಈ ಹಾಡನ್ನು ಚಿತ್ರಿಸಲಾಗಿದೆ.
ಅನಿರುದ್ದ್ ಜತಕರ್, ನಿರಂಜನ ದೇಶಪಾಂಡೆ ಈ ಹಾಡನಲ್ಲಿ ಅಭಿನಯಿಸಿ ನಮ್ಮ ಪ್ರಯತ್ನಕ್ಕೆ ಸಾಥ್ ನೀಡಿದ್ದಾರೆ. ಅದ್ವೈತ್ ಶೆಟ್ಟಿ ನಿರ್ದೇಶಿಸಿರುವ ಈ ಹಾಡನ್ನು ಮನೋಜ್ ಸೌಗಂಧ್ ಬರೆದಿದ್ದಾರೆ. ನೀತು ನಿನಾದ್ ತಾವೇ ಹಾಡಿ ಸಂಗೀತವನ್ನು ನೀಡಿದ್ದಾರೆ. ನಾನು ಕ್ರಿಯೇಟಿವ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುವುದರ ಜೊತೆಗೆ, ಲಿಖಿತ್ ಆಚಾರ್ ಅವರ ಜೊತೆಗೂಡಿ ನೃತ್ಯ ನಿರ್ದೇಶನ ಕೂಡ ಮಾಡಿದ್ದೇನೆ ಎಂದರು.
ಸಿರಿ ಮ್ಯೂಸಿಕ್ ನ ಸುರೇಶ್ ಚಿಕ್ಕಣ್ಣ ಮಾತನಾಡಿ, ಜಾನಕಿರಾಮ ಆಲ್ಬಂ ಸಾಂಗ್ ಬಿಡುಗಡೆ ಮಾಡುತ್ತಿರುವುದಕ್ಕೆ ಸಂತೋಷವಾಗಿದೆ. ಎಲ್ಲರ ಸಹಕಾರದಿಂದ ಹತ್ತು ದಿನಗಳಲ್ಲಿ ಮುಗಿಯುವ ಚಿತ್ರೀಕರಣ ಒಂದೇ ದಿನದಲ್ಲಿ ಮುಗಿದಿದೆ. ಮುಂದೆ ಕೂಡ ನಮ್ಮ ಸಂಸ್ಥೆಯಿಂದ ಇಂತಹ ಅದ್ಭುತ ಗೀತೆಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದರು.
ಸಂಗೀತ ನಿರ್ದೇಶಕ ನೀತು ನಿನಾದ್, ನಿರ್ದೇಶಕ ಅದ್ವೈತ ಶೆಟ್ಟಿ, ನಟ ನಿರಂಜನ್ ದೇಶಪಾಂಡೆ "ಜಾನಕಿರಾಮ"ನ ಹಾಡಿನ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಇದನ್ನೂಓದಿ:'ಆಪಲ್ ಕಟ್' ಟೀಸರ್ ಔಟ್: ಚಿತ್ರತಂಡಕ್ಕೆ ಅಶ್ವಿನಿ ಪುನೀತ್ ರಾಜ್‍ಕುಮಾರ್, ಯೋಗರಾಜ್ ಭಟ್ ಸಾಥ್