ETV Bharat / entertainment

ಅಡ್ಡ ಗೋಡೆ ಮೇಲೆ ದೀಪ ಇಡೋ ಕಾಲದಲ್ಲಿ, 'ಗೋಡೆ' ಮೇಲೆ ವರ್ಲ್ಡ್ ಕಪ್ ಇಡೋರ್ ಆಗ್ಬೇಕು: ಶಿವ ರಾಜ್‌ಕುಮಾರ್‌ - Shiva Rajkumar - SHIVA RAJKUMAR

ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ ಟಿಂ ಇಂಡಿಯಾ ಟಿ20 ವಿಶ್ವಕಪ್‌ ಎತ್ತಿ ಹಿಡಿದಿದೆ. ಐತಿಹಾಸಿಕ ಗೆಲುವಿನ ಕುರಿತು ಕನ್ನಡದ ಹಿರಿಯ ನಟ ಶಿವ ರಾಜ್‌ಕುಮಾರ್ ಕುತೂಹಲಕಾರಿ ಟ್ವೀಟ್ ಮಾಡಿದ್ದಾರೆ.

Actor Shiva rajkumar
ನಟ ಶಿವ ರಾಜ್​ಕುಮಾರ್​​ (ETV Bharat)
author img

By ETV Bharat Karnataka Team

Published : Jun 30, 2024, 12:19 PM IST

ಟಿ-20 ವಿಶ್ವಕಪ್​​​ ಟೂರ್ನಿಯಲ್ಲಿ ಭಾರತ ಅಭೂತಪೂರ್ವ ಯಶಸ್ಸು ಕಂಡಿದೆ. ರೋಹಿತ್​ ಶರ್ಮಾ ನೇತೃತ್ವದ ಟೀಂ, ದಕ್ಷಿಣ ಆಫ್ರಿಕಾವನ್ನು ಮಣಿಸಿ ವಿಶ್ವ​​ಕಪ್‌ ಎತ್ತಿ ಹಿಡಿದು ಕೋಟ್ಯಂತರ ಭಾರತೀಯರ ಪ್ರೀತಿ ಗಳಿಸಿದೆ. 11 ವರ್ಷಗಳ ಬಳಿಕ ಗೆಲುವು ತನ್ನದಾಗಿಸಿಕೊಂಡಿರುವ ಭಾರತ ತಂಡಕ್ಕೆ ಜನಸಾಮಾನ್ಯರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರಿಂದ ಅಭಿನಂದನೆಗಳ ಸುರಿಮಳೆಯೇ ಆಗುತ್ತಿದೆ.

ಚಿತ್ರರಂಗದವರೂ ಕೂಡ ಕ್ರಿಕೆಟ್​ ಸ್ಟಾರ್​ಗಳನ್ನು ಮೆಚ್ಚಿ ಕೊಂಡಾಡಿದ್ದಾರೆ. ಇದರ ನಡುವೆ ನಟ ಶಿವ ರಾಜ್​ಕುಮಾರ್​​ ಟ್ವೀಟ್ ಗಮನ ಸೆಳೆಯುತ್ತಿದೆ. ನಟನ ಎಕ್ಸ್​ ಪೋಸ್ಟ್ ಅಪಾರ ಸಂಖ್ಯೆಯ ಅಭಿಮಾನಿಗಳು, ನೆಟ್ಟಿಗರ ತಲೆಗೆ ಹುಳ ಬಿಟ್ಟಿದೆ.

ಶಿವ ರಾಜ್​ಕುಮಾರ್​​ ಟ್ವೀಟ್: ಟೀಂ ಇಂಡಿಯಾದ ಫೋಟೋ ಹಂಚಿಕೊಂಡಿರುವ ಹ್ಯಾಟ್ರಿಕ್​​ ಹೀರೋ, ''ಅಡ್ಡ ಗೋಡೆ ಮೇಲೆ ದೀಪ ಇಡೋ ಕಾಲದಲ್ಲಿ, 'ಗೋಡೆ' ಮೇಲೆ ವರ್ಲ್ಡ್ ಕಪ್ ಇಡೋರ್ ಆಗ್ಬೇಕು. ಅಭಿನಂದನೆಗಳು ಟೀಂ ಇಂಡಿಯಾ'' ಎಂದು ಬರೆದುಕೊಂಡಿದ್ದಾರೆ.

ಈ ಟ್ವೀಟ್​ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ನಾನಾ ತರಹದ ಪ್ರತಿಕ್ರಿಯೆಗಳೂ ವ್ಯಕ್ತವಾಗುತ್ತಿವೆ.

ಇದನ್ನೂ ಓದಿ: ಟಿ20 ವರ್ಲ್ಡ್​ಕಪ್​ ಚಾಂಪಿಯನ್​ ಆಗಿ ಇತಿಹಾಸ ಬರೆದ ಟೀಂ ಇಂಡಿಯಾ! - INDIA CREATES HISTORY

2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೊದಲ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಧೋನಿ ನೇತೃತ್ವದ ಭಾರತ ಗೆದ್ದು ಬೀಗಿತ್ತು. ನಂತರ 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದೆ. ಇದೀಗ 11 ವರ್ಷಗಳ ಅಂತರದ ಬಳಿಕ ಟಿ-20 ವಿಶ್ವಕಪ್ ಟ್ರೋಫಿ ತನ್ನದಾಗಿಸಿಕೊಂಡಿದೆ.

ಇದನ್ನೂ ಓದಿ: ಹೀನಾ ಖಾನ್​ಗೆ ಸ್ತನ ಕ್ಯಾನ್ಸರ್: ಬ್ರೆಸ್ಟ್​​ ಕ್ಯಾನ್ಸರ್​ ವಿರುದ್ಧ ಹೋರಾಡಿದ ನಟಿಮಣಿಯರಿವರು - Breast Cancer

ETV Bharat Logo

Copyright © 2025 Ushodaya Enterprises Pvt. Ltd., All Rights Reserved.