ಲಾಸ್ ಏಂಜಲೀಸ್: 1997ರಲ್ಲಿ ಬಿಡುಗಡೆಯಾಗಿದ್ದ ಜನಪ್ರಿಯ ಸಿನಿಮಾ 'ಟೈಟಾನಿಕ್' ಅತಿ ಹೆಚ್ಚು ಆಸ್ಕರ್ ಪ್ರಶಸ್ತಿ ಗೆದ್ದ ಚಿತ್ರ. ಈ ಚಿತ್ರದ ಕ್ಲೈಮ್ಯಾಕ್ಸ್ ಅಂತೂ ಅನೇಕ ಸಿನಿ ಪ್ರಿಯರ ಮನಗೆದ್ದ ದೃಶ್ಯ. ಚಿತ್ರದ ನಟ ಜಾಕ್ ತಮ್ಮ ಪ್ರಿಯತಮೆ ರೋಸ್ ಜೀವ ಉಳಿಸಲು ಹಡಗಿನ ಬಾಗಿಲನ್ನು ಆಸರೆಯಾಗಿ ಪಡೆಯುತ್ತಾನೆ. ಚಿತ್ರದ ಪ್ರಮುಖ ಭಾಗವಾಗಿದ್ದ ಈ 'ತೇಲುವ ಬಾಗಿಲು' (floating door) ಇದೀಗ 5 ಕೋಟಿ ರೂಪಾಯಿ ಸಂಪಾದಿಸಿದೆ.
ಇತ್ತೀಚಿಗೆ ನಡೆದ ಸಿನಿಮಾಗಳಲ್ಲಿ ಬಳಕೆಯಾದ ಪಾರಂಪರಿಕ ವಸ್ತುಗಳ ಹರಾಜಿನಲ್ಲಿ ಈ ತೇಲುವ ಬಾಗಿಲು 5 ಕೋಟಿ (718.750 ಡಾಲರ್) ಮೊತ್ತಕ್ಕೆ ಮಾರಾಟವಾಗಿದೆ. ಹೆರಿಟೇಜ್ ಆಕ್ಷನ್ (ಪಾರಂಪರಿಕ ವಸ್ತುಗಳ ಹರಾಜು) ನಡೆಸಿದ ಪ್ಲಾನೆಟ್ ಹಾಲಿವುಡ್ ಹಾರಾಜಿನಲ್ಲಿ ಒಟ್ಟಾರೆ 1,56,80,000 ಮಿಲಿಯನ್ ಸಂಗ್ರಹಿಸಿದೆ ಎಂದು people.com ವರದಿ ಮಾಡಿದೆ.
ಈ ಹರಾಜಿನಲ್ಲಿ ಸಿನಿಮಾದ ಪ್ರಾಪ್ಸ್ (ರಂಗಪರಿಕರ) ಅಂದರೆ, ಚಿತ್ರೀಕರಣದ ಭಾಗವಾಗಿ ಬಳಕೆ ಮಾಡಿದ ಪ್ರಾಪರ್ಟಿಗಳನ್ನು ಮಾರಾಟ ಮಾಡಲಾಗಿದೆ. ಇದರಲ್ಲಿ 1984 ರ 'ಇಂಡಿಯಾನಾ ಜೋನ್ಸ್ ಮತ್ತು ಟೆಂಪಲ್ ಆಫ್ ಡೂಮ್' ಹ್ಯಾರಿಸನ್ ಫೋರ್ಡ್ ಬುಲ್‌ವಿಪ್ 1980ರ 'ದಿ ಶೈನಿಂಗ್' ಸಿನಿಮಾದ ಬಳಕೆಯಾದ ವಸ್ತುಗಳು ಹರಾಜಿನಲ್ಲಿ ಕಂಡು ಬಂದಿವೆ.
'ಟೈಟಾನಿಕ್' ಚಿತ್ರದಲ್ಲಿ ಬಳಕೆ ಮಾಡಿದ್ದ ಈ ಮರದ ಹಲಗೆಯನ್ನು ಅಭಿಮಾನಿಗಳಿಗೆ 'ತೇಲುವ ಬಾಗಿಲು' ಎಂದು ಉಲ್ಲೇಖಿಸಲಾಗಿದೆ. ಚಿತ್ರದಲ್ಲಿ ಹಡಗಿನ ಫಸ್ಟ್ ಕ್ಲಾಸ್ ಲಾಂಜ್ ದ್ವಾರದ ಬಾಗಿಲಾಗಿ ಇದನ್ನು ಬಳಕೆ ಮಾಡಲಾಗಿತ್ತು ಎಂದು ಹರಾಜಿನಲ್ಲಿ ತಿಳಿಸಲಾಗಿದೆ.
ಈ ತೇಲುವ ಬಾಗಿಲು ಹರಾಜಿನಲ್ಲಿ ಅತಿ ಹೆಚ್ಚು ಮೌಲ್ಯಕ್ಕೆ ಮಾರಾಟವಾದ ರಂಗಪರಿಕರವಾಗಿದೆ. ಹರಾಜಿನಲ್ಲಿ ಒಟ್ಟು 16 ರಂಗಪರಿಕರಗಳನ್ನು ಮಾರಾಟ ಮಾಡಲಾಗಿದೆ. ಇವುಗಳನ್ನು 83,36,960 ರೂ.ಗೆ ಮಾರಾಟ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಕ್ಯಾಮರಾನ್ ಅವರ 'ಟೈಟಾನಿಕ್' ಚಿತ್ರದಲ್ಲಿ ಈ ತೇಲುವ ಬಾಗಿಲಿನ ಜೊತೆಗೆ ಚಿತ್ರದಲ್ಲಿ ಬಳಕೆಯಾದ ಮತ್ತಷ್ಟು ವಸ್ತುಗಳನ್ನು ಕೂಡ ಹರಾಜಿನಲ್ಲಿ ಮಾರಾಟ ಮಾಡಲಾಗಿದೆ. ಅದರಲ್ಲಿ ತೇಲುವ ಬಾಗಿಲಿನ ಮೂಲದ ಮರದ ತುಂಡವನ್ನು 1,04,21,200ರೂ ಗೆ ಮತ್ತು ಚಿತ್ರದಲ್ಲಿ ಬಳಕೆ ಮಾಡಲಾದ ಬೋಟ್ನ ಚಕ್ರಗಳನ್ನು 1,66,74,030ಕ್ಕೆ ಹರಾಜು ಮಾಡಲಾಯಿತು. ಇನ್ನು ಈ ಸನ್ನಿವೇಶದಲ್ಲಿ ರೋಸ್ ಮತ್ತು ಜಾಕ್ ಪಾತ್ರಧಾರಿ ಧರಿಸಿದ್ದ ಉಡುಗೆ 99,00,205ಕ್ಕೆ ಮಾರಾಟವಾಯಿತು. (ಐಎಎನ್ಎಸ್)
ಇದನ್ನೂ ಓದಿ: 'ಹಣ ಪಾವತಿಸಿ ನನ್ನ ಸಮಯ ಪಡೆಯಿರಿ, ಫ್ರೀಯಾಗಿ ಸಿಗಲ್ಲ': ನಿರ್ದೇಶಕ ಅನುರಾಗ್ ಕಶ್ಯಪ್ - Anurag Kashyap