ಹೈದರಾಬಾದ್: ನಟ ಶಾಹೀದ್ ಕಪೂರ್ 'ತೇರಿ ಬಾತೊ ಮೆ ಹೈಸಾ ಉಲ್ಜಾ ಜಿಯಾ' ಸಿನಿಮಾದಲ್ಲಿ ನಟಿ ಕೃತಿ ಸನೋನ್ ಜೊತೆ ನಟಿಸಿದ್ದು, ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಕೊಂಚ ತಡವಾಗಿ ಚಿತ್ರದ ಪ್ರಚಾರ ಆರಂಭಿಸಿರುವ ಅವರು, ಅನೇಕ ವಿಚಾರಗಳ ಕುರಿತು ಮುಕ್ತವಾಗಿ ಚರ್ಚಿಸಿದ್ದಾರೆ. ಇತ್ತೀಚೆಗೆ ಸಂದರ್ಶನದಲ್ಲಿ ಮಾತನಾಡಿರುವ ಅವರು, ವೈಯಕ್ತಿಕ ಮತ್ತು ಖಾಸಗಿ ಜೀವನದ ಕುರಿತು ಮಾತನಾಡಿದ್ದಾರೆ. ಅಲ್ಲದೇ ಇದೇ ವೇಳೆ, ನಟ ಹೃತಿಕ್ ರೋಶನ್ ಅವರು ಸ್ಟಾರ್ಡಮ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ್ದಾರೆ
ಸ್ಟಾರ್ಡಮ್ ಹೊರೆ ಕುರಿತು ಮಾತನಾಡಿದ್ದ ನಟ ಹೃತಿಕ್ ರೋಶನ್, ಯಾವುದೇ ನಿರೀಕ್ಷೆಗಳು ಇಲ್ಲದೇ ಹೋದಾಗ ತಾವು ಕೊಂಚ ನೆಮ್ಮದಿಯಾಗಿರುತ್ತೇನೆ. ಸೆಲೆಬ್ರಿಟಿ ಎಂಬುದು ಜವಾಬ್ದಾರಿ. ಅಲ್ಲದೇ, ನನಗೆ ನಟನೆಯ ಕೌಶಲ್ಯವನ್ನು ಕಳೆದುಕೊಳ್ಳುವ ಇಚ್ಛೆ ಇಲ್ಲ. ಇದೇ ಕಾರಣಕ್ಕೆ ನಾನು ಸೆಲಿಬ್ರಿಟಿ ಮನಸ್ಥಿತಿಯನ್ನು ತ್ಯಾಗ ಮಾಡುತ್ತೇನೆ ಎಂದಿದ್ದರು. ಇದೀಗ ಶಾಹೀದ್ ಇದಕ್ಕೆ ವಿರುದ್ಧವಾಗಿ ಸಮಸ್ಯೆ ಹೊಂದಿರುವುದಾಗಿ ಪ್ರತಿಕ್ರಿಯಿಸಿದ್ದಾರೆ. ನಾನು ಈ ಬೇಲಿಯ ವಿರುದ್ಧ ಬದಿಯಲ್ಲಿ ಇದ್ದೇನೆ. ನನಗೆ ವಿರುದ್ಧವಾದ ಸಮಸ್ಯೆ ಇದೆ ಎಂದು ಕಪೂರ್ ತಿಳಿಸಿದ್ದಾರೆ.
ಹೃತಿಕ್ ಏನು ಹೇಳಿದ್ದಾರೆ ಎಂಬುದು ನನಗೆ ಗೊತ್ತಿದೆ. ಕಾರಣ ಅದೇ ರೀತಿಯ ಪರಿಸ್ಥಿತಿಯನ್ನು ನಾನು ಅನುಭವಿಸಿದ್ದೆ. ಆದರೆ, ಅವರು ಆಯ್ಕೆ ಮಾಡಿದ ಸಿನಿಮಾಗಳು ಬೇರೆ. ನಾನು ಮಾಡುವ ನಿರ್ಧಾರಗಳು ಮತ್ತು ನನ್ನ ಆಯ್ಕೆಗಳು ಭಿನ್ನ. ಅವರ ಪ್ರಯಾಣವೂ ನನಗಿಂತ ವಿಭಿನ್ನವಾಗಿದೆ ಎಂದರು.
ಈ ವೇಳೆ ಅಮಿತಾಬ್ ಬಚ್ಚನ್ ಮತ್ತು ದಿಲೀಪ್ ಕುಮಾರ್ ಅವರ ಉದಾಹರಣೆ ನೀಡಿದರು. ತಮ್ಮ ನಟನೆಯ ಆಧಾರದ ಮೇಲೆ ಪ್ರಖ್ಯಾತಿಯನ್ನು ಆಯ್ಕೆಮಾಡಿಕೊಂಡಿಲ್ಲ. ಸ್ಟಾರ್ಡಮ್ ಮತ್ತು ಮತ್ತು ಉನ್ನತ ನಟನ ಕೌಶಲ್ಯಗಳನ್ನು ನಿರ್ವಹಿಸಿದ ಅನೇಕ ಉದಾಹರಣೆಗಳು ಇದೆ. ಅದನ್ನು ನೋಡುತ್ತಾ ನಾನು ಬೆಳೆದೆ. ಅದನ್ನು ಪಡೆಯಬೇಕು ಎಂದು ಇಚ್ಛಿಸಿದೆ. ನನ್ನ ಒಳಗಿನ ನಟನನ್ನು ನಾನು ಹೊರ ಹೋಗಲು ಬಿಡಲಿಲ್ಲ ಎಂದಿದ್ದಾರೆ
ಚಿತ್ರದ ಪ್ರಚಾರದಲ್ಲಿ ನಟ: ನಟ ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ಒಟ್ಟಾಗಿ ನಟಿಸುತ್ತಿರುವ ರೋಮ್ಯಾಂಟಿಕ್ ಡ್ರಾಮಾ 'ತೇರಿ ಬಾತೊ ಮೇ ಹೈಸಾ ಉಲ್ಜಾ ಜಿಯಾ' ಅಮಿತ್ ಜೋಶಿ ಮತ್ತು ಆರಾಧಾನ ಸಹ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದೇ ಮೊದಲ ಬಾರಿಗೆ ಕೃತಿ ಸನೋನ್ ಮತ್ತು ಶಾಹಿದ್ ಕಪೂರ್ ಈ ಚಿತ್ರದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಮ್ಯಾಡ್ಡೊಕ್ ಫಿಲ್ಮ್ಸ್ ನಿರ್ಮಾಣ ಮಾಡಿದ್ದು, ಫೆಬ್ರವರಿ 9ಕ್ಕೆ ಚಿತ್ರ ಬಿಡುಗಡೆಯಾಗಲಿದೆ.
ಇದನ್ನೂ ಓದಿ: 250 ಕೋಟಿ ದಾಟಿದ 'ಫೈಟರ್': ಸಿನಿಮಾದ ಒಂದು ವಾರದ ಕಲೆಕ್ಷನ್ ಮಾಹಿತಿ ಇಲ್ಲಿದೆ