ಕನ್ನಡ ಚಿತ್ರರಂಗದ ಶ್ರೇಷ್ಠ ನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದ ಪುನೀತ್ ರಾಜ್ಕುಮಾರ್ ನಮ್ಮೆಲ್ಲರನ್ನು ಅಗಲಿ ನಾಳೆಗೆ(ಅ.29) ಮೂರು ವರ್ಷ ಪೂರ್ಣಗೊಳ್ಳಲಿದೆ. ಆದ್ರೆ ಅವರ ನೆನಪು ಮಾತ್ರ ಸದಾ ಜೀವಂತ. ಅಪ್ಪು ಅವರ ನಿಧನದ ನಂತರ ಬಂದ ಗಂಧದಗುಡಿ ಚಿತ್ರ ತೆರೆಗಪ್ಪಳಿಸಿ ಇಂದಿಗೆ ಎರಡು ವರ್ಷ ಪೂರ್ಣಗೊಂಡಿದೆ. ಪುನೀತ್ ರಾಜ್ಕುಮಾರ್ ಅವರ ಮೊದಲನೇ ಪುಣ್ಯಸ್ಮರಣೆ ಸಂದರ್ಭ ಈ ಚಿತ್ರ ಬಿಡುಗಡೆ ಆಗಿ ಡೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.
'ಗಂಧದಗುಡಿ' ರಾಷ್ಟ್ರಪ್ರಶಸ್ತಿ ವಿಜೇತ ನಟನ ಕನಸಿನ ಕೂಸು. ಅವರು ಕಂಡ ಕನಸು ವಿಶೇಷ. ನಮ್ಮ ಕರುನಾಡಿನ ಸಂಪದ್ಭರಿತ ಪಾಕೃತಿಕ ಸೌಂದರ್ಯವನ್ನು ಕನ್ನಡಿಗರಿಗೆ ಪರಿಚಯ ಮಾಡಿಸಬೇಕು ಅನ್ನೋದು ಅಪ್ಪು ಅವರ ಗುರಿಯಾಗಿತ್ತು. ಕರ್ನಾಟಕದ ಹತ್ತು ಹಲವು ಅರಣ್ಯ ಪ್ರದೇಶ, ವಿಶೇಷ ಸ್ಥಳಗಳು, ನದಿಯೊಳಗಿನ ಸೌಂದರ್ಯ.. ಹೀಗೆ ಪಾಕೃತಿಕ ಶೀಮಂತಿಕಗೆ ಸಿನಿಮಾ ರೂಪ ಕೊಡಬೇಕು ಮತ್ತು ಅದನ್ನು ಜನರಿಗೆ ತಲುಪಿಸಬೇಕೆನ್ನುವ ಗುರಿಯನ್ನು ಅವರು ಹೊಂದಿದ್ದರು. ಅದು 'ಗಂಧದಗುಡಿ' ಮೂಲಕ ಸಾಕಾರಗೊಂಡಿತು. ಆದ್ರೆ ಸಿನಿಮಾ ಚಿತ್ರಮಂದಿರ ಪ್ರವೇಶಿಸುವ ವೇಳೆ 'ಗಂಧದಗುಡಿ'ಯ ಸಾರಥಿಯೇ ಇಲ್ಲದಿದ್ದದ್ದು ಮಾತ್ರ ನೋವಿನ ಸಂಗತಿ.
ಅಪ್ಪು ಅವರ ಕರ್ನಾಟಕದ ಅದ್ಭುತ ಪರಂಪರೆ ಹಾಗೂ ವನ್ಯಜೀವಿಗಳ ವಿಶೇಷ ಆಚರಣೆ 'ಗಂಧದಗುಡಿ' ಚಿತ್ರಕ್ಕೆ ಎರಡು ವರ್ಷಗಳ ಸಂಭ್ರಮ.
— Ashwini Puneeth Rajkumar (@Ashwini_PRK) October 28, 2024
Celebrating two years of Appu’s Gandhada Gudi, a cinematic spectacle and a soulful symphony that pays tribute to Karnataka's wildlife and heritage.#DrPuneethRajkumar… pic.twitter.com/skniXn2Ju1
ಪುನೀತ್ ಅಶ್ವಿನಿ ದಂಪತಿಯ ಪಿಆರ್ಕೆ ಪ್ರೊಡಕ್ಷನ್ಸ್ ಮೂಲಕ ಅಶ್ವಿನಿ ಪುನೀತ್ ರಾಜ್ಕುಮಾರ್ ನಿರ್ಮಾಣ ಮಾಡಿದ 'ಗಂಧದಗುಡಿ' 2022ರ ಅಕ್ಟೋಬರ್ 28ರಂದು ತೆರೆಗಪ್ಪಳಿಸಿತು. ಅಮೋಘವರ್ಷ ಜೆ.ಎಸ್ ನಿರ್ದೇಶನದ ಈ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಬಿ ಅಜನೀಶ್ ಲೋಕನಾಥ್ ಅವರ ಸಂಗೀತವಿತ್ತು. ಸಿನಿಮಾ ಭಾರಿ ಪ್ರಶಂಸೆ ಗಿಟ್ಟಿಸಿಕೊಂಡಿತ್ತು.
ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ತಮ್ಮ ವಿವಿಧ ಸೋಷಿಯಲ್ ಮೀಡಿಯಾ ಫ್ಲ್ಯಾಟ್ಫಾರ್ಮ್ಗಳಲ್ಲಿ ವಿಶೇಷ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಗಂಧದಗುಡಿಯ ಕ್ಷಣಗಳ ಜೊತೆಗೆ ಫ್ಯಾನ್ಸ್ ಮೂಮೆಂಟ್ಗಳು ಇವೆ. ಅಭಿಮಾನಿಗಳ ಪ್ರೀತಿ ವರ್ಣನಾತೀತ ಎಂದು ಅಪ್ಪು ಬಣ್ಣಿಸಿದ್ದಾರೆ. ಪೋಸ್ಟ್ಗೆ, ''ಅಪ್ಪು ಅವರ ಕರ್ನಾಟಕದ ಅದ್ಭುತ ಪರಂಪರೆ ಹಾಗೂ ವನ್ಯಜೀವಿಗಳ ವಿಶೇಷ ಆಚರಣೆ 'ಗಂಧದಗುಡಿ' ಚಿತ್ರಕ್ಕೆ ಎರಡು ವರ್ಷಗಳ ಸಂಭ್ರಮ'' ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಮೋಕ್ಷಿತಾ - ತ್ರಿವಿಕ್ರಮ್ ವಾಕ್ಸಮರ: ನಿಮ್ಮ ಪ್ರಕಾರ ಈ ಮನೇಲಿ 10 ವಾರ ಉಳಿಯೋರು ಯಾರು?
ಈ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ನಟನೆ ಮಾಡಿಲ್ಲ. ಬದಲಾಗಿ ಸಹಜ ಜೀವನದ ಅಪ್ಪು ಆಗಿ ಕಾಣಿಸಿಕೊಂಡಿದ್ದರು. ಹೆಸರಾಂತ ಛಾಯಾಗ್ರಾಹಕ ಅಮೋಘವರ್ಷ ಅವರು ಈ ಚಿತ್ರವನ್ನು ಡೈರೆಕ್ಟ್ ಮಾಡಿ, ಪುನೀತ್ ಜೊತೆ ಕಾಣಿಸಿಕೊಂಡಿದ್ದರು. ನೇಚರ್ ಬ್ಯೂಟಿಯೇ ಕಥೆಯಾದ್ದರಿಂದ ಚಿತ್ರ ನಿಜಕ್ಕೂ ಸಿನಿಪ್ರಿಯರಿಗೆ ಒಂದೊಳ್ಳೆ ಅನುಭವ ಕೊಟ್ಟಿತ್ತು. ಈ ಸಿನಿಮಾ ಅಂದಾಜು ಎರಡು ವರ್ಷಗಳ ಫಲ. ಆದ್ರೆ ಬಿಡುಗಡೆ ಹೊತ್ತಿಗೆ ನಾಯಕ ನಟನೇ ಇರಲಿಲ್ಲ ಅನ್ನೋದು ಕನ್ನಡಿಗರ ಕಣ್ಣೀರಿಗೆ ಕಾರಣವಾಗಿತ್ತು. ಪುನೀತ್ ರಾಜ್ಕುಮಾರ್ ನಿಧನದ ಒಂದು ವರ್ಷದ ಬಳಿಕ ಈ ಚಿತ್ರವನ್ನು ಬಹಳ ವಿಶೇಷವಾಗಿ, ಅದ್ಧೂರಿಯಾಗಿ ಬಿಡುಗಡೆ ಮಾಡಲಾಯಿತು.