ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎದ್ದಿದೆ. ಉತ್ತಮ ಸಿನಿಮಾಗಳು ನಿರ್ಮಾಣ ಆಗುತ್ತಿವೆ. ಬಹುಭಾಷೆಗಳಿಂದ ಕನ್ನಡದ ಕಂಟೆಂಟ್ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಪ್ರತಿಭಾವಂತ ಕಲಾವಿದರು, ಹೊಸ ಪ್ರತಿಭೆಗಳು ಮಾಡುತ್ತಿರುವ ಹೊಸ ಹೊಸ ಪ್ರಯೋಗಗಳಿಗೆ ಕನ್ನಡ ಪ್ರೇಕ್ಷಕರು ಮಾತ್ರವಲ್ಲದೇ ಪಕ್ಕದ ರಾಜ್ಯದವರೂ ಫಿದಾ ಆಗುತ್ತಿದ್ದಾರೆ. ಬಾಲಿವುಡ್ ಮಂದಿ ಕೂಡ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತಾಗಿದೆ. ಇದೀಗ ಫಾರ್ ರಿಜಿಸ್ಟ್ರೇಷನ್ ಸಿನಿಮಾ ಕೂಡ ಇತರ ಭಾಷೆಯ ಚಿತ್ರರಂಗದ ಗಮನ ಸೆಳೆದಿದೆ.
- " class="align-text-top noRightClick twitterSection" data="">
ಹೌದು, ಇಂದು ತೆರೆಗಪ್ಪಳಿಸಿರೋ ಫಾರ್ ರಿಜಿಸ್ಟ್ರೇಷನ್ ಚಿತ್ರದ ತೆಲುಗು ಡಬ್ಬಿಂಗ್ ರೈಟ್ಸ್ ಅನ್ನು ತೆಲುಗಿನ ಖ್ಯಾತ ನಿರ್ಮಾಪಕರೊಬ್ಬರು ಭಾರಿ ಮೊತ್ತಕ್ಕೆ ಪಡೆದುಕೊಂಡಿದ್ದಾರೆ. ಯುವ ನಿರ್ದೇಶಕ ನವೀನ್ ದ್ವಾರಕನಾಥ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿದೆ. ನವೀನ್ ರಾವ್ ನಿರ್ಮಾಣದ 'ಫಾರ್ ರಿಜಿಸ್ಟ್ರೇಷನ್'ನಲ್ಲಿ ಪೃಥ್ವಿ ಅಂಬಾರ್ ಹಾಗೂ ಮಿಲನಾ ನಾಗರಾಜ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.
ಶಿವ ರಾಜ್ಕುಮಾರ್ ನಟನೆಯ 125ನೇ ಸಿನಿಮಾ 'ವೇದ'ವನ್ನು ತೆಲುಗು ಪ್ರೇಕ್ಷಕರ ಎದುರು ಪ್ರಸ್ತುತಪಡಿಸಿದ್ದ ಎಂವಿಆರ್ ಕೃಷ್ಣ ಅವರು ಈ ಫಾರ್ ರಿಜಿಸ್ಟ್ರೇಷನ್ ಚಿತ್ರದ ಡಬ್ಬಿಂಗ್ ಹಕ್ಕು ಖರೀದಿ ಮಾಡಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನವೇ ಡಬ್ಬಿಂಗ್ ರೈಟ್ಸ್ ಸೇಲ್ ಆಗಿದ್ದು, ಚಿತ್ರತಂಡ ಖುಷಿಯನ್ನು ದುಪ್ಪಟ್ಟು ಮಾಡಿತ್ತು. ಇಂದು ಚಿತ್ರ ಬಿಡುಗಡೆ ಆಗಿದೆ.
ಇದನ್ನೂ ಓದಿ: ಆಲಿಯಾ ಭಟ್ - ವೇದಾಂಗ್ ರೈನಾ ಸ್ಕ್ರೀನ್ ಶೇರ್: 'ಜಿಗ್ರಾ' ಶೂಟಿಂಗ್ ಕಂಪ್ಲೀಟ್
ಟ್ರೇಲರ್ ಹಾಗೂ ಹಾಡಿನ ಮೂಲಕ ಆಮಂತ್ರಣ ಕೊಟ್ಟಿದ್ದ ಫಾರ್ ರಿಜಿಸ್ಟ್ರೇಷನ್ ಸಿನಿಮಾ ಇಂದು ಚಿತ್ರಮಂದಿರ ಪ್ರವೇಶಿಸಿದೆ. ಸಂಬಂಧದ ಮಹತ್ವ ಸಾರುವ ಈ ಚಿತ್ರದಲ್ಲಿ ರವಿಶಂಕರ್, ತಬಲಾ ನಾಣಿ, ಸುಧಾ ಬೆಳವಾಡಿ, ಬಾಬು ಹಿರಣಯ್ಯ, ಸ್ವಾತಿ, ರಮೇಶ್ ಭಟ್, ಉಮೇಶ್ ಸೇರಿದಂತೆ ಹಲವರು ನಟಿಸಿದ್ದಾರೆ. ಚಿತ್ರಕಥೆ, ನಿರ್ದೇಶನವನ್ನು ನವೀನ್ ದ್ವಾರಕನಾಥ್ ನಿರ್ವಹಿಸಿದ್ದು, ಸಂಗೀತ ಸಂಯೋಜನೆ ಆರ್.ಕೆ ಹರೀಶ್ ಅವರದ್ದು. ಅಭಿಲಾಷ್ ಕಲಾತಿ, ಅಭಿಷೇಕ್ ಜಿ. ಕಾಸರಗೋಡು ಛಾಯಾಗ್ರಹಣ ನಿರ್ವಹಿಸಿದ್ದಾರೆ. ಮನು ಶೇಡ್ಗರ್ ಸಂಕಲನ ಈ ಚಿತ್ರಕ್ಕಿದೆ. ನಿಶ್ಚಲ್ ಫಿಲಂಸ್ ಬ್ಯಾನರ್ ಅಡಿ ನವೀನ್ ರಾವ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಬಹಳ ದಿನಗಳ ನಂತರ ಮತ್ತೆ ವಿತರಣೆ ಅಖಾಡಕ್ಕೆ ಇಳಿದಿರುವ ದೀಪಕ್ ಗಂಗಾಧರ್ ಫಿಲ್ಮ್ಸ್ 'ಫಾರ್ ರಿಜಿಸ್ಟ್ರೇಷನ್' ಸಿನಿಮಾವನ್ನು ಇಂದು ರಾಜ್ಯಾದ್ಯಂತ ಬಿಡುಗಡೆ ಮಾಡಿದೆ.
ಇದನ್ನೂ ಓದಿ: ಡಿಟೆಕ್ಟಿವ್ ಪಾತ್ರದಲ್ಲಿ ಬೆಳ್ಳಿ ತೆರೆ ಮೇಲೆ ಮಿಂಚಲು ರೆಡಿಯಾದ ಲವ್ ಮಾಕ್ಟೇಲ್ ಬೆಡಗಿ