ಈ ಸಿನಿಮಾ ಎಂಬ ಕ್ರಿಯೇಟಿವ್ ಫೀಲ್ಡ್ನಲ್ಲಿ ತಮ್ಮ ಕನಸು ನನಸು ಮಾಡಿಕೊಂಡ ಟ್ಯಾಲೆಂಟೆಡ್ ಡೈರೆಕ್ಟರ್ ಅಂತಾ ಬ್ರಾಂಡ್ ಆಗಿರುವ ನಿರ್ದೇಶಕ ಆರ್ ಚಂದ್ರು. ಇದೀಗ ಕನ್ನಡ ಚಿತ್ರರಂಗ ಅಲ್ಲದೇ ಪ್ಯಾನ್ ಇಂಡಿಯಾ ಡೈರೆಕ್ಟರ್ ಆಗಿರುವ ಚಂದ್ರು ಸದಾ ಗೆಲ್ಲುತ್ತೇನೆ ಎಂಬ ವಿಶ್ವಾಸ ಹೊಂದಿರುವ ನಿರ್ದೇಶಕ. ತಾಜ್ ಮಹಲ್, ಮೈಲಾರಿ, ಚಾರ್ ಮಿನಾರ್, ಐ ಲವ್ ಯೂ ಹಾಗೂ ಪ್ಯಾನ್ ಇಂಡಿಯಾ ಚಿತ್ರ ಕಬ್ಜ ಅಂತಹ ಹಿಟ್ ಸಿನಿಮಾಗಳನ್ನ ನಿರ್ದೇಶನ ಮಾಡಿರೋ ಅವರ ಈ ವರ್ಷದ ಹುಟ್ಟು ಹಬ್ಬವನ್ನ ಅಭಿಮಾನಿಗಳು ಮತ್ತು ಆಪ್ತರು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಆಚರಿಸಲು ಸಜ್ಜಾಗಿದ್ದಾರೆ.
ಚಿಕ್ಕಬಳ್ಳಾಪುರದ ಕೇಶಾವರ ಎಂಬ ಹಳ್ಳಿಯಿಂದ ಬಂದ ರೈತನ ಮಗ ಆರ್ ಚಂದ್ರು ಅವರು ಮೊದಲ ಚಿತ್ರ "ತಾಜ್ ಮಹಲ್" ನಿಂದ ರಾಜ್ಯಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದರು. "ಕಬ್ಜ" ಎಂಬ ಪ್ಯಾನ್ ಇಂಡಿಯಾ ಚಿತ್ರದ ಮೂಲಕ ಈಗ ದೇಶದೆಲ್ಲೆಡೆ ಮನೆ ಮಾತಾಗಿದ್ದಾರೆ. ತಮ್ಮ ಸರಳತೆ ಹಾಗೂ ಸಜ್ಜನಿಕೆಗೆ ಹೆಸರಾದ ಆರ್ ಚಂದ್ರು ಅವರು ಸದಾ ಜನರೊಂದಿಗೆ ಬೆರೆಯುವವರು.
ರಾಜ್ಯಾದ್ಯಂತ ಇರುವ "ಮೈಲಾರಿ" ಆರ್ ಚಂದ್ರು ಅಭಿಮಾನಿಗಳು, ಜಿಲ್ಲಾಧ್ಯಕ್ಷರು, ರಾಜ್ಯಾಧ್ಯಕ್ಷರು ಸೇರಿ ಎಲ್ಲೆಡೆ ಆರ್ ಚಂದ್ರು ಅವರನ್ನು ಪ್ರೀತಿಸುವ ಸಾವಿರಾರು ಬೃಹತ್ ಅಭಿಮಾನಿಗಳ ಸಂಘ ಸ್ಥಾಪನೆಗೆ ಮುಂದಾಗಿದ್ದು, "ಅಖಿಲ ಕರ್ನಾಟಕ ಆರ್ ಚಂದ್ರು ಅಭಿಮಾನಿಗಳ ಸಂಘ" ಆರಂಭಿಸಲಿದ್ದಾರೆ.
ಫೆಬ್ರವರಿ 7, ನಿರ್ದೇಶಕ, ನಿರ್ಮಾಪಕ ಆರ್ ಚಂದ್ರು ಅವರ ಹುಟ್ಟುಹಬ್ಬ. ಅಂದು ಬೆಳಗ್ಗೆ ಅವರ ಅಭಿಮಾನಿಗಳ ಸಂಘದಿಂದ ಚಂದ್ರು ಅವರ ನಿವಾಸದ ಬಳಿ ಹುಟ್ಟುಹಬ್ಬ ಆಚರಿಸಲು ನಿರ್ಧರಿಸಲಾಗಿದೆ. ಹಲವು ಸಾಮಾಜಿಕ ಕಾರ್ಯಕ್ರಮಗಳೊಂದಿಗೆ "ಅಖಿಲ ಕರ್ನಾಟಕ ಆರ್ ಚಂದ್ರು ಅಭಿಮಾನಿಗಳ ಸಂಘ"ಕ್ಕೂ ಚಾಲನೆ ಸಿಗಲಿದ್ದು, ಚಂದ್ರು ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಹಾಗೂ ಅದ್ದೂರಿಯಾಗಿ ಆಚರಿಸಲು ಅಭಿಮಾನಿಗಳು ಸಿದ್ದವಾಗಿದ್ದಾರೆ.
ಆರ್ ಚಂದ್ರು ಅವರು 5 ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಘೋಷಿಸಿದ ಬೆನ್ನಲ್ಲೇ ಅವರ ಅಭಿಮಾನಿಗಳು ಶಕ್ತಿಯಾಗಿ ನಿಂತಿದ್ದು, ಸಾಮಾಜಿಕ ಜಾಲತಾಣದಲ್ಲೂ ಸಹ ಭಾರಿ ಬೆಂಬಲ ಸಿಕ್ಕಿದೆ. "ಕಬ್ಜ" ಯಶಸ್ಸಿನ ನಂತರ ಮುಂದಿನ ಸಿನಿಮಾ ಘೋಷಣೆಗೆ ಕಾಯುತ್ತಿದ್ದ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಅವರು, ಒಮ್ಮೆಲೆ 5 ಸಿನಿಮಾಗಳ ಘೋಷಣೆ ಮತ್ತು ಆರ್ ಸಿ ಸ್ಟುಡಿಯೋಸ್ ಎಂಬ ಬೃಹತ್ ಪ್ಯಾನ್ ಇಂಡಿಯಾ ಸಂಸ್ಥೆ ನಿರ್ಮಾಣ ಮಾಡಿದ್ದಾರೆ. ಇದು ಕನ್ನಡಿಗರಿಗೆ ಹಾಗೂ ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ವಿಚಾರ.
ಸ್ನೇಹಿತರು, ಅಭಿಮಾನಿಗಳು, ಹಿತೈಷಿಗಳು, ರೈತಾಪಿ ಜನರು, ಆಪ್ತ ವಲಯದವರು ಇವರು ಮುಟ್ಟಿದ್ದೆಲ್ಲ ಚಿನ್ನವಾಗಲಿ. ಆರ್ ಚಂದ್ರು ಅವರು ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂಬುದು ಕನ್ನಡಿಗರ ಆಶಯ.
ಇದನ್ನೂ ಓದಿ: ಶಿವಣ್ಣನ 'ಐವಿ ರಿಟರ್ನ್ಸ್'ಗೆ ಲಕ್ಕಿ ಗೋಪಾಲ್ ನಿರ್ದೇಶನ; ಸಿನಿಮಾದಲ್ಲಿ ಹೆಸರಾಂತ ತಾಂತ್ರಿಕ ವರ್ಗ