ETV Bharat / entertainment

'ಭೀಮ' ಪ್ರಮೋಶನ್​​ ಜೋರು: ದುನಿಯಾ ವಿಜಯ್​​​ ಚಿತ್ರದಲ್ಲಿದೆ ಯುವಕರಿಗೊಂದು ಸಂದೇಶ - Bheema Promotion - BHEEMA PROMOTION

ದುನಿಯಾ ವಿಜಯ್​​​ ನಟಿಸಿ, ನಿರ್ದೇಶಿಸಿರುವ ಬಹುನಿರೀಕ್ಷಿತ ಚಿತ್ರ 'ಭೀಮ' ಬಿಡುಗಡೆ ಹೊಸ್ತಿಲಿನಲ್ಲಿದೆ. ನಾಳೆ ಟ್ರೇಲರ್​ ಅನಾವರಣಗೊಳ್ಳಲಿದ್ದು, ಪ್ರಮೋಶನ್​ ಜೋರಾಗೇ ನಡೆಯುತ್ತಿದೆ. ಇತ್ತೀಚೆಗೆ ವಿಜಯ್​​ ಬೆಂಗಳೂರಿನ ಬನ್ನೇರುಘಟ್ಟ ಸಾಯಿ ರಾಮ್ ಇಂಜಿನಿಯರಿಂಗ್ ಕಾಲೇಜ್​​​ಗೆ ಭೇಟಿ ಕೊಟ್ಟು, ಚಿತ್ರದ ಪ್ರಚಾರ ಕೈಗೊಂಡಿದ್ದರು.

Bheema Promotion
'ಭೀಮ' ಪ್ರಮೋಶನ್​​ (ETV Bharat)
author img

By ETV Bharat Karnataka Team

Published : Aug 2, 2024, 1:46 PM IST

'ಭೀಮ' ಪ್ರಮೋಶನ್​​ (ETV Bharat)

ಈ ವರ್ಷ ಸ್ಟಾರ್​ ನಟರ ಸಿನಿಮಾಗಳು ಬರಲಿಲ್ಲ, ಚಿತ್ರಮಂದಿರಗಳಿಗೆ ಪ್ರೇಕ್ಷಕರ ಸಂಖ್ಯೆ ಕಡಿಮೆ ಆಗಿದೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಸ್ಯಾಂಡಲ್​ವುಡ್​ ಸ್ಟಾರ್​ ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚಿರುವ ಈ ಸಂದರ್ಭ ಕನ್ನಡದ ಬಹುಬೇಡಿಕೆ ನಟ ದುನಿಯಾ ವಿಜಯ್​​​ ನಟಿಸಿ, ನಿರ್ದೇಶಿಸಿರುವ ಬಹುನಿರೀಕ್ಷಿತ ಚಿತ್ರ 'ಭೀಮ' ಬಿಡುಗಡೆಗೆ ಸಜ್ಜಾಗಿದೆ.

ವಿಜಯ್ ಮುಖ್ಯಭೂಮಿಕೆಯ ಈ ಬಹುನಿರೀಕ್ಷಿತ ಚಿತ್ರ ಬಿಡುಗಡೆ ಹೊಸ್ತಿಲಿನಲ್ಲಿದ್ದು, ಪ್ರಚಾರ ಜೋರಾಗೇ ನಡೆಯುತ್ತಿದೆ. ಆಗಸ್ಟ್ 9 ರಂದು ಚಿತ್ರ ರಾಜ್ಯಾದ್ಯಂತ ತೆರೆ ಕಾಣಲಿದೆ. ಸದ್ಯ ಚಿತ್ರದ ಹಾಡುಗಳು ಸದ್ದು ಮಾಡುತ್ತಿವೆ. ದುನಿಯಾ ವಿಜಯ್ ತಮ್ಮ ಈ ಚಿತ್ರದ ಪ್ರಚಾರವನ್ನು ಕೂಡಾ ಅಷ್ಟೇ ಪ್ಲ್ಯಾನ್​​​ ಆಗಿ ಮಾಡುತ್ತಿದ್ದಾರೆ‌. ಭೀಮ ಚಿತ್ರ ಇಂದಿನ ಕಾಲೇಜು ವಿದ್ಯಾರ್ಥಿಗಳಿಗೆ ಒಂದು ಸಂದೇಶ ಹೊಂದಿರೋ ಕಾರಣ, ಪ್ರಮೋಷನ್ ಹೆಚ್ಚಾಗಿ ಕಾಲೇಜುಗಳಲ್ಲೇ ಮಾಡುತ್ತಿದ್ದಾರೆ‌.

ಇತ್ತೀಚೆಗೆ ವಿಜಯ್​​ ಬೆಂಗಳೂರಿನ ಬನ್ನೇರುಘಟ್ಟ ಸಾಯಿ ರಾಮ್ ಇಂಜಿನಿಯರಿಂಗ್ ಕಾಲೇಜ್​​​ಗೆ ಭೇಟಿ ಕೊಟ್ಟಿದ್ದರು‌. ಆ ಕಾಲೇಜು ನೋಟಿಸ್ ಬೋರ್ಡ್​​​ನಲ್ಲಿ ಮಾದಕ ದ್ರವ್ಯಗಳ ನಿಯಂತ್ರಣದ ಫೋಟೋ ಹಾಕಲಾಗಿತ್ತು. ಈ ಫೋಟೋ ತೋರಿಸುವ ಮೂಲಕ ನಮ್ಮ ಚಿತ್ರದ ಕಥೆ ಇದು ಅನ್ನೋ ಸುಳಿವು ಬಿಟ್ಟುಕೊಟ್ಟಿದ್ದಾರೆ. ಈ ವಿಡಿಯೋವನ್ನು ಚಿತ್ರತಂಡ ಹಂಚಿಕೊಂಡಿದೆ.

ಅಷ್ಟೇ ಅಲ್ಲ, ನೂರಾಯ ವಿದ್ಯಾರ್ಥಿಗಳು ಕೂಡಾ ಸುಪರ್ ಸ್ಟಾರ್ ದುನಿಯಾ ವಿಜಯ್ ಬರುವಿಕೆಗೆ ಕಾಯುತ್ತಿದ್ದರು, ವಿಜಯ್ ಸ್ಟೇಜ್​​​ಗೆ ಎಂಟ್ರಿಯಾಗುತ್ತಿದ್ದಂತೆ ಅಲ್ಲಿದ್ದ ನೂರಾರು ವಿದ್ಯಾರ್ಥಿಗಳು ವಿಜಯ್​ ಅವರನ್ನು ನೋಡಿ ಥ್ರಿಲ್ ಆದ್ರು. ವಿಜಯ್ ಮಸ್ತ್ ಡ್ಯಾನ್ಸ್ ಮಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು.

'ಭೀಮ' ಸಿನಿಮಾ, ಸದ್ಯ ಸಮಾಜದಲ್ಲಿ ಉಲ್ಭಣಗೊಂಡಿರುವ ಡ್ರಗ್ಸ್ ವಿಚಾರ, ಇಂದಿನ ಯುವಕರೇಕೆ ರೌಡಿಸಂಗೆ ಎಂಟ್ರಿ ಕೊಡುತ್ತಾರೆ, ರಾತ್ರಿ ನಡೆಯುವ ಪಾರ್ಟಿಗಳಿಂದ ಏನು ಸಮಸ್ಯೆ ಆಗುತ್ತದೆ ಅನ್ನೋದನ್ನು ತೋರಿಸುವ ಜೊತೆಗೆ ಒಂದು ಸಾಮಾಜಿಕ ಸಂದೇಶದ ಕಥೆಯನ್ನು ಒಳಗೊಂಡಿದೆ. ನೈಜ ಘಟನೆ ಆಧಾರಿತ ಕಥೆಯಾಗಿರುವ ಭೀಮ ಸಹಜವಾಗಿ ಸಿನಿಪ್ರಿಯರಲ್ಲಿ ಕುತೂಹಲ ಹುಟ್ಟಿಸಿದೆ. ವಿಜಯ್ ಜೊತೆಗೆ ರಂಗಾಯಣ ರಘು, ಅಚ್ಯುತ್ ಕುಮಾರ್, ಸುಧಿ ಕಾಕ್ರೋಚ್, ಕಲ್ಯಾಣಿ, ಅಶ್ವಿನಿ, ಪ್ರಿಯಾ, ಡ್ರಾಗನ್ ಮಂಜು ಸೇರಿದಂತೆ ದೊಡ್ಡ ತಾರಾಬಳಗ ಈ ಚಿತ್ರದಲ್ಲಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹೊಸ ರೀತಿಯ ಆತಂಕಕಾರಿ ಡ್ರಗ್​ ಪತ್ತೆ: ದುನಿಯಾ ವಿಜಯ್ ಕಳವಳ - Duniya Vijay visits Siddaganga Math

ಬಹುನಿರೀಕ್ಷಿತ ಚಿತ್ರದಲ್ಲಿ ಶಿವಸೇನಾ ಅವರ ಕ್ಯಾಮರಾ ಕೈಚಳಕವಿದೆ. ಚರಣ್ ರಾಜ್ ಅವರ ಸಂಗೀತ ಮತ್ತು ಮಾಸ್ತಿ ಅವರ ಡೈಲಾಗ್ಸ್ ಇದೆ. ದೀಪು ಎಸ್ ಕುಮಾರ್ ಸಂಕಲನ ನಿರ್ವಹಿಸಿದ್ರೆ, ಚೇತನ್ ಡಿಸೋಜಾ, ವಿನೋದ್, ಗೌತಮ್ ಅವರ ಸಾಹಸ ಮತ್ತು ಧನು ಅವರ ನೃತ್ಯ ನಿರ್ದೇಶನ 'ಭೀಮ'ನಿಗಿದೆ. ಕೃಷ್ಣ ಸಾರ್ಥಕ್, ಜಗದೀಶ್ ಗೌಡ ಸೇರಿ ಅದ್ಧೂರಿಯಾಗಿ ನಿರ್ಮಾಣ ಮಾಡಿರೋ ಭೀಮ ಎಲ್ಲ ಆ್ಯಂಗಲ್​ನಿಂದಲೂ‌ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದೆ. ಆಗಸ್ಟ್ 9, ಮುಂದಿನ ಶುಕ್ರವಾರ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ 'ಭೀಮ'ನ ದರ್ಬಾರ್ ಶುರುವಾಗಲಿದ್ದು, ಸಿನಿಪ್ರೇಮಿಗಳು ಯಾವ ರೀತಿ ರಿಸೀವ್ ಮಾಡ್ತಾರೆ ಅನ್ನೋದು ಶೀಘ್ರದಲ್ಲೇ ಗೊತ್ತಾಗಲಿದೆ.

ಇದನ್ನೂ ಓದಿ: ದುನಿಯಾ ವಿಜಯ್ 'ಭೀಮ' ಸಿನಿಮಾಗೆ ಸಿಎಂ ಸಾಥ್ - Bheema movie

ನಾಯಕ ನಟ ಸೇರಿದಂತೆ ಚಿತ್ರತಂಡ ಕಡೆಯಿಂದ ಪ್ರಮೋಶನ್​ ಜೋರಾಗೇ ನಡೆಯುತ್ತಿದೆ. ಪೋಸ್ಟರ್, ಗ್ಲಿಂಪ್ಸ್, ಸಾಂಗ್ಸ್​​​ ಎಲ್ಲವೂ ಪ್ರೇಕ್ಷಕರ ಗಮನ ಸೆಳೆದಿದೆ. ಆಗಸ್ಟ್ 3ರಂದು ಅಂದರೆ ನಾಳೆ ಭೀಮ ಟ್ರೇಲರ್​ ಅನಾವರಣಗೊಳ್ಳಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.