ETV Bharat / entertainment

'ಕೆಟಿಎಮ್' ಟ್ರೇಲರ್ ರಿಲೀಸ್: ದೀಕ್ಷಿತ್ ಶೆಟ್ಟಿ ಸಿನಿಮಾಗೆ ರಿಷಬ್​, ರಶ್ಮಿಕಾ ಸೇರಿದಂತೆ ಸೌತ್​ ಸೆಲೆಬ್ರಿಟಿಗಳ ಸಾಥ್​​ - KTM trailer

KTM trailer: ದೀಕ್ಷಿತ್ ಶೆಟ್ಟಿ ನಟನೆಯ 'ಕೆಟಿಎಮ್' ಸಿನಿಮಾದ ಟ್ರೇಲರ್ ಅನ್ನು ಜನಪ್ರಿಯ ತಾರೆಯರು ಅನಾವರಣಗೊಳಿಸಿದ್ದಾರೆ.

KTM trailer
'ಕೆಟಿಎಮ್' ಟ್ರೇಲರ್
author img

By ETV Bharat Karnataka Team

Published : Feb 7, 2024, 7:44 AM IST

'ದಸರಾ' ಸಿನಿಮಾ ಮೂಲಕ ನ್ಯಾಚುರಲ್​​ ಸ್ಟಾರ್ ನಾನಿ ಜೊತೆಗೂಡಿ ಚಿತ್ರಮಂದಿರಗಳಲ್ಲಿ ಧಮಾಕ ಎಬ್ಬಿಸಿದ್ದ ಕನ್ನಡದ ಸೂಪರ್ ಹಿಟ್​​ 'ದಿಯಾ' ಚಿತ್ರ ಖ್ಯಾತಿಯ ದೀಕ್ಷಿತ್ ಶೆಟ್ಟಿ ಅವರೀಗ ಬಹುಭಾಷಾ ನಟ. ಕನ್ನಡದ ಜೊತೆಗೆ ತೆಲುಗು, ಮಲಯಾಳಂಗೂ ಹೆಜ್ಜೆ ಇಟ್ಟಿರುವ ಈ ಚಾಕೋಲೇಟ್ ಹೀರೋ ಈಗ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ‌. ಈ ಚಿತ್ರಕ್ಕೆ 'ಕೆಟಿಎಮ್​​' ಎಂಬ ಆಕರ್ಷಕ ಶೀರ್ಷಿಕೆ ಇಡಲಾಗಿದೆ. ಮಂಗಳವಾರ ಸಂಜೆ 'ಕೆಟಿಎಮ್' ಸಿನಿಮಾದ ಆಫೀಶಿಯಲ್ ಟ್ರೇಲರ್ ಅನಾವರಣಗೊಂಡಿದೆ.

KTM trailer
'ಕೆಟಿಎಮ್' ಟ್ರೇಲರ್

ಕೆಟಿಎಂ ಸಿನಿಮಾದ ಟೀಸರ್​ ಅನ್ನು ಏಕಕಾಲದಲ್ಲಿ 70ಕ್ಕೂ ಹೆಚ್ಚು ಕನ್ನಡ ಸೆಲೆಬ್ರೆಟಿಗಳು ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಇದೀಗ ಟ್ರೇಲರ್​ ಅನ್ನು ಸೌತ್ ಸಿನಿಮಾ ಸ್ಟಾರ್ಸ್ ಬಿಡುಗಡೆ ಮಾಡಿದ್ದಾರೆ. ರಿಷಬ್ ಶೆಟ್ಟಿ, ಡಿಂಪಲ್ ಕ್ವೀನ್ ರಚಿತಾ ರಾಮ್, ಮಹಾನಟಿ ಕೀರ್ತಿ ಸುರೇಶ್, ಕಿರಿಕ್​ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ, ಮಲಯಾಳಂ ನಟ ಶೈನ್ ಟಾಮ್ ಚಾಕೋ, ತೆಲುಗಿನ ರಾಹುಲ್ ರವೀಂದ್ರನ್ ಸೋಷಿಯಲ್ ಮೀಡಿಯಾದಲ್ಲಿ ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

  • " class="align-text-top noRightClick twitterSection" data="">

ಒಂದು ಸುಂದರ ಪ್ರೇಮಕಥೆ. ಈ ಕಥೆಯಲ್ಲಿ ಒಬ್ಬ ನಾಯಕ, ಇಬ್ಬರು ನಾಯಕಿಯರು. ಪ್ರೀತಿಗಾಗಿ ಪರಿತಪಿಸುವ ನಾಯಕ. ನಾಯಕ ಎಂದರೆ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ನಾಯಕಿಯರು. ನಾಯಕನ ಜೀವನದಲ್ಲಿ ನಡೆದ ಏರಿಳಿತಗಳು ಕೆಟಿಎಂ ಟ್ರೇಲರ್​​​ನ ಹೈಲೆಟ್ಸ್. ಥೇಟ್ ದಿಯಾ ಸಿನಿಮಾವನ್ನು ಮತ್ತೊಮ್ಮೆ ನೆನಪು ಮಾಡಿರುವ ಈ ಝಲಕ್ ನೋಡುಗರ ಕುತೂಹಲ ಹೆಚ್ಚಿಸಿದೆ. ಹಾಗಂತ ಈ ಚಿತ್ರಕ್ಕೂ ಆ ಚಿತ್ರಕ್ಕೂ ಯಾವುದೇ ಲಿಂಕ್ ಇಲ್ಲ. ದೀಕ್ಷಿತ್ ಶೆಟ್ಟಿ ಭಗ್ನಪ್ರೇಮಿಯಾಗಿ ಪ್ರೇಕ್ಷಕರನ್ನು ಆವರಿಸಿಕೊಂಡ್ರೆ, ಅವರಿಗೆ ಜೋಡಿಯಾಗಿ ಸಂಜನಾ ದಾಸ್ ಹಾಗೂ ಕಾಜಲ್ ಕುಂದರ್ ಸಾಥ್ ಕೊಟ್ಟಿದ್ದಾರೆ. ಉಷಾ ಭಂಡಾರಿ, ಪ್ರಕಾಶ್ ತುಮ್ಮಿನಾಡು, ರಘು ರಮಣಕೊಪ್ಪ, ಶಾನಿಲ್ ಗುರು, ಬಾಬು ಹಿರಣಯ್ಯ, ದೇವ್ ದೇವಯ್ಯ, ಅಭಿಷೇಕ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತೋಷ್ ಸೇರಿದಂತೆ ಹಲವು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಅಮ್ಮನ 35 ವರ್ಷದ ಹಳೇ ಘರ್ಚೋಲಾ ಸೀರೆಯುಟ್ಟು ಮಿಂಚಿದ ಸೋನಂ ಕಪೂರ್

ಅಥರ್ವ ಸಿನಿಮಾ ನಿರ್ದೇಶಿಸಿದ್ದ ಅರುಣ್ 'ಕೆಟಿಎಂ' ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದು, ಇದು ಇವರ ಎರಡನೇ ಪ್ರಯತ್ನ. ಈ ಚಿತ್ರವನ್ನು ಮಹಾಸಿಂಹ ಮೂವೀಸ್ ಬ್ಯಾನರ್ ಅಡಿ ವಿನಯ್ ನಿರ್ಮಾಣ ಮಾಡಿದ್ದು, ರಕ್ಷಯ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ನವೀನ್ ಕ್ಯಾಮರಾ ವರ್ಕ್, ಅರ್ಜುನ್ ಕಿಟ್ಟು ಸಂಕಲನ, ಚೇತನ್ ಸಂಗೀತ ನಿರ್ದೇಶನ, ಅಭಿನಂದನ್ ದೇಶಪ್ರಿಯ ಅವರ ಸಂಭಾಷಣೆ ಈ ಚಿತ್ರಕ್ಕೆ ಇದೆ. ಕೆಟಿಎಂ ಸಿನಿಮಾದ ಭರದ ಪ್ರಚಾರ ಕಾರ್ಯ ನಡೆಯುತ್ತಿದ್ದು, ಇದೇ ತಿಂಗಳ 16ಕ್ಕೆ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಾಣಲಿದೆ.

ಇದನ್ನೂ ಓದಿ: 'ದಿಗಂತ್​​​ ನನ್ನ ಕ್ರಶ್'​​- ಸಂಗೀತಾ ಶೃಂಗೇರಿ; ತೆರೆ ಹಂಚಿಕೊಂಡ 'ಮಾರಿಗೋಲ್ಡ್' ಜೋಡಿಯ ಸುಂದರ ಫೋಟೋಗಳಿಲ್ಲಿವೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.