ETV Bharat / entertainment

ಸಿನಿಮಾಗಿಂತ ಹೆಚ್ಚಾಗಿ ವಿವಾದಗಳಿಂದ ಸುದ್ದಿಯಾದರೇ ದರ್ಶನ್? ಈವರೆಗಿನ ಘಟನೆಗಳು ಇವು! - Darshan Controversies

author img

By ETV Bharat Karnataka Team

Published : Jun 11, 2024, 6:43 PM IST

ರೇಣುಕಾಸ್ವಾಮಿ ಹತ್ಯೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಟನನ್ನು ಸುತ್ತುವರೆದ ಈ ಹಿಂದಿನ ಕೆಲವು ವಿವಾದಗಳ ಮೇಲೊಂದು ಪಕ್ಷಿನೋಟ.

Darshan
ದರ್ಶನ್ (ETV Bharat)

ಚಿತ್ರದುರ್ಗದ ರೇಣುಕಾಸ್ವಾಮಿ ಎಂಬವರ ಹತ್ಯೆ ಆರೋಪ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಒಟ್ಟು 13 ಆರೋಪಿಗಳನ್ನು ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ದರ್ಶನ್ ಗೆಳತಿ ಪವಿತ್ರಾ ಗೌಡ ವಿಚಾರವಾಗಿ ಈ ಹತ್ಯೆ ನಡೆದಿದೆ ಎಂಬ ಆರೋಪವಿದೆ.

ಈ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಬೇಡಿಕೆ, ಜನಪ್ರಿಯತೆ ಹೊಂದಿರುವ ದರ್ಶನ್​​​ ಸುತ್ತುವರೆದ ಈವರೆಗಿನ ಕೆಲವು ವಿವಾದಗಳನ್ನು ನೋಡುವುದಾದರೆ..

ಪತ್ನಿ ಮೇಲೆ ಹಲ್ಲೆ ಆರೋಪ ಪ್ರಕರಣ: ಲೈಟ್ ಬಾಯ್ ಆಗಿ ಚಿತ್ರರಂಗ ಪ್ರವೇಶಿಸಿ ಸೂಪರ್ ಸ್ಟಾರ್ ಆದ ದರ್ಶನ್ ಬದುಕಿನ ಮೊದಲ ವಿವಾದ ಪ್ರೀತಿಸಿ ಮದುವೆಯಾದ ಪತ್ನಿ ವಿಜಯಲಕ್ಷ್ಮೀ ಮೇಲಿನ ಹಲ್ಲೆ. ಮದ್ಯ ಸೇವಿಸಿ ಹಲ್ಲೆಗೈದ ಈ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದರು.​ 2011ರಲ್ಲಿ ಘಟನೆ ನಡೆದಿತ್ತು.

ಕೆಲಸಗಾರರ ಮೇಲೆ ಹಲ್ಲೆ ಆರೋಪ: ಮೈಸೂರಿನ ತಮ್ಮ ಫಾರ್ಮ್ ಹೌಸ್​​ನಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರು ಪ್ರಾಣಿಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಕಾರಣಕ್ಕೆ ದರ್ಶನ್, ಕೆಲಸಗಾರರಿಗೆ ಹೊಡೆದ ಆರೋಪದಿಂದ ಸುದ್ದಿಯಾಗಿದ್ದರು.

ನಿರ್ಮಾಪಕ ಉಮಾಪತಿ ಪ್ರಕರಣ: 2021ರಲ್ಲಿ 'ರಾಬರ್ಟ್' ಸಿನಿಮಾ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಹಾಗೂ ದರ್ಶನ್ ನಡುವಿನ ಗಲಾಟೆ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸುದ್ದಿಯಾಗಿತ್ತು. ಉಮಾಪತಿ ಶ್ರೀನಿವಾಸ್ ಅವರು ತಮ್ಮ ಹೆಸರು ಬಳಸಿಕೊಂಡು 25 ಕೋಟಿ ರೂಪಾಯಿ ಸಾಲ ಪಡೆದು ವಂಚಿಸಲು ಯತ್ನಿಸಿದ್ದಾರೆ ಎಂದು ದರ್ಶನ್ ದೂರು ದಾಖಲಿಸಿದ್ದರು. ಆದರೆ ಉಮಾಪತಿ ಶ್ರೀನಿವಾಸ್ ಈ ಆರೋಪವನ್ನು ತಳ್ಳಿ ಹಾಕಿದ್ದಲ್ಲದೇ, ತಮ್ಮ ಪರವಾಗಿ ಸಾಕ್ಷ್ಯಗಳನ್ನು ಬಿಡುಗಡೆ ಮಾಡಿದ್ದರು.

ಹೋಟೆಲ್ ಸಪ್ಲೈಯರ್ ಮೇಲೆ ಹಲ್ಲೆ ಪ್ರಕರಣ: 2021ರಲ್ಲಿ ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್‌ನಲ್ಲಿ ಸಪ್ಲೈಯರ್ ಓರ್ವರ ಮೇಲೆ ದರ್ಶನ್ ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿಬಂದಿತ್ತು. ಪೊಲೀಸರು ಹೋಟೆಲ್​ಗೆ ಭೇಟಿ ನೀಡಿ ತನಿಖೆ ನಡೆಸಿದ್ದರು.

ಕಾನೂನುಬಾಹಿರವಾಗಿ ಪಕ್ಷಿ ಸಾಕಣೆ ಆರೋಪ: ಮೈಸೂರಿನ ತಮ್ಮ ಫಾರ್ಮ್​​ ಹೌಸ್​ ಮೇಲೆ ದಾಳಿ ಮಾಡಿದ್ದ ಅರಣ್ಯ ಇಲಾಖೆ ಅಧಿಕಾರಿಗಳು, ಕಾನೂನುಬಾಹಿರವಾಗಿ ಸಾಕುತ್ತಿದ್ದ ಬಾರ್ ಹೆಡೆಡ್ ಗೂಸ್ ಹೆಸರಿನ ಪಕ್ಷಿಗಳನ್ನು ವಶಕ್ಕೆ ಪಡೆದಿದ್ದರು. ಆ ಪಕ್ಷಿಗಳನ್ನು ಸಾಕಲು ದರ್ಶನ್ ಅರಣ್ಯ ಇಲಾಖೆಯ ಅನುಮತಿ ಪಡೆದುಕೊಂಡಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು.

ಇದನ್ನೂ ಓದಿ: ನಟ ದರ್ಶನ್, ಪವಿತ್ರಾ ಗೌಡ ಸೇರಿ 13 ಆರೋಪಿಗಳ ಬಂಧನ: ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ - Actor darshan arrest

ಮಹಿಳೆಯರ ಬಗ್ಗೆ ಅಗೌರವ ಆರೋಪ: 'ಕಾಟೇರ' ಸಿನಿಮಾದ ಸಕ್ಸಸ್ ಮೀಟ್​ನಲ್ಲಿನ ದರ್ಶನ್‌ ನೀಡಿದ ಹೇಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಮಹಿಳೆಯರ ಬಗ್ಗೆ ಅಗೌರವದಿಂದ ಮಾತನಾಡಿದ್ದಾರೆ ಎಂದು ಆರೋಪಿಸಿ ಕೆಲವು ಮಹಿಳಾಪರ ಸಂಘಟನೆಗಳು ದರ್ಶನ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದವು.

ಇದನ್ನೂ ಓದಿ: ಹಲ್ಲೆ, ಕೊಲೆ ಆರೋಪ ಪ್ರಕರಣ; ಹತ್ಯೆಗೀಡಾದ ರೇಣುಕಾಸ್ವಾಮಿ ಯಾರು? - Renukaswamy Murder case

ಲೇಟ್‌ನೈಟ್ ಪಾರ್ಟಿ:​ ಬೆಂಗಳೂರಿನ ಜೆಟ್​ಲ್ಯಾಗ್ ಪಬ್​ ವಿರುದ್ಧ ತಡ ರಾತ್ರಿ ಪಾರ್ಟಿಗೆ ಅವಕಾಶ ನೀಡಲಾಗಿದೆ ಎಂಬ ಆರೋಪದ ಮೇಲೆ ಸುಬ್ರಮಣ್ಯಂ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ದರ್ಶನ್​ ಸೇರಿ ಹಲವರನ್ನು ಸುಬ್ರಮಣ್ಯಂ ನಗರ ಪೊಲೀಸರು ವಿಚಾರಣೆ ನಡೆಸಿದ್ದರು, ಆಗ ನಟ ಸೇರಿ ಚಿತ್ರತಂಡದ ಹಲವರು ಪೊಲೀಸರೆದುರು ಹಾಜರಾಗಿ ವಿವರಣೆ ಕೊಟ್ಟಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.