ETV Bharat / entertainment

ಅಲ್ಲು ಅರ್ಜುನ್​ ಜೊತೆ ಕನ್ನಡತಿ ಶ್ರೀಲೀಲಾ ಮಸ್ತ್​ ಡ್ಯಾನ್ಸ್​​: ಸಂಜೆ ಬಿಗ್ಗೆಸ್ಟ್ ಅನೌನ್ಸ್​​ಮೆಂಟ್​​! - PUSHPA 2

ಪುಷ್ಪ ಸೀಕ್ವೆಲ್ ಸ್ಪೆಷಲ್ ಸಾಂಗ್​​​ನಲ್ಲಿ ಕನ್ನಡತಿ ಶ್ರೀಲೀಲಾ ಕಾಣಿಸಿಕೊಳ್ಳುತ್ತಿದ್ದು, ಇಂದು ಸಂಜೆ ಚಿತ್ರತಂಡದಿಂದ ದೊಡ್ಡ ಅನೌನ್ಸ್​​ಮೆಂಟ್​​ ಹೊರಬೀಳಲಿದೆ.

Sreeleela
ಕನ್ನಡತಿ ಶ್ರೀಲೀಲಾ (Photo: Film Poster)
author img

By ETV Bharat Entertainment Team

Published : Nov 11, 2024, 2:18 PM IST

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಖತ್​ ಸದ್ದು ಮಾಡುತ್ತಿರುವ ಬಹುನಿರೀಕ್ಷಿತ ಚಿತ್ರ 'ಪುಷ್ಪ 2'. ಡಿಸೆಂಬರ್ 5ಕ್ಕೆ ವಿಶ್ವಾದ್ಯಂತ ತೆರೆಕಾಣಲಿರುವ ಈ ಸಿನಿಮಾದಿಂದ ಹೊಸ ಸಮಾಚಾರ ಹೊರಬಿದ್ದಿದೆ.

ಹೌದು, ಪುಷ್ಪ ಸೀಕ್ವೆಲ್ ಸ್ಪೆಷಲ್ ಸಾಂಗ್​​​ಗೆ ಯಾರು ಹೆಜ್ಜೆ ಹಾಕಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಟಾಲಿವುಡ್​ನ ಹೊಸ ಸೆನ್ಸೇಷನ್, ಡ್ಯಾನ್ಸಿಂಗ್ ಕ್ವೀನ್, ಕನ್ನಡತಿ ಶ್ರೀಲೀಲಾ ಅವರು ಪುಷ್ಪರಾಜ್ ಜೊತೆ ಸೊಂಟ ಬಳುಕಿಸಲಿದ್ದಾರೆ. ಪೋಸ್ಟರ್ ಮೂಲಕ ಚಿತ್ರತಂಡ ಶ್ರೀಲೀಲಾ ಅವರನ್ನು ಪರಿಚಯಿಸಿದೆ.

'ಪುಷ್ಪ ಮೊದಲ ಅಧ್ಯಾಯ'ದಲ್ಲಿ ಊ ಅಂಟಾವಾ ಹಾಡು ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಸೌತ್​ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮದೇ ಬೇಡಿಕೆ ಹೊಂದಿದ್ದ ಸಮಂತಾ ರುತ್ ಪ್ರಭು ಹಾಗೂ ಅಲ್ಲು ಅರ್ಜುನ್ ಭರ್ಜರಿ ಸ್ಟೆಪ್ಸ್ ಹಾಕಿದ್ದ ಸಾಂಗ್ ಸಖತ್ ಸೌಂಡ್ ಮಾಡುವಲ್ಲಿ ಯಶ ಕಂಡಿತ್ತು. ಡಿಎಸ್​ಪಿ ಮ್ಯೂಸಿಕ್, ಸ್ಯಾಮ್ ಕುಣಿತ ಎಲ್ಲವೂ‌ ನೋಡುಗರ ಮೋಡಿ ಮಾಡಿತ್ತು. ಸದ್ಯ ಪುಷ್ಪ ಸೀಕ್ವೆಲ್​ನಲ್ಲಿ ಡ್ಯಾನ್ಸಿಂಗ್ ಕ್ವೀನ್ ಶ್ರೀಲೀಲಾ ಹಾಗೂ ಸ್ಟೈಲಿಶ್​​ ಸ್ಟಾರ್ ಅಲ್ಲು ಅರ್ಜುನ್​​ ಜೋಡಿ ಕುಣಿದು ಕುಪ್ಪಳಿಸಿದ್ದಾರೆ. ಗಣೇಶ್ ಆಚಾರ್ಯ ಅವರ ಕೊರಿಯೋಗ್ರಫಿ ಇದೆ.

ನಟಿ ಶ್ರೀಲೀಲಾ ಅಭಿನಯದ ಜೊತೆಗೆ ನೃತ್ಯದಲ್ಲಿಯೂ ಪ್ರವೀಣೆ. ಅವರ ಡ್ಯಾನ್ಸ್ ಇಷ್ಟಪಡುವವರ ಸಂಖ್ಯೆ ದೊಡ್ಡದಿದೆ. ಇನ್ನೂ ಅಲ್ಲು ಅರ್ಜುನ್ ಡ್ಯಾನ್ಸ್ ಬಗ್ಗೆ ವಿಶೇಷ ಪರಿಚಯ ಬೇಕೆನಿಸದು. ಡ್ಯಾನ್ಸಿಂಗ್ ಸ್ಟಾರ್ ಹಾಗೂ ಡ್ಯಾನ್ಸಿಂಗ್ ಕ್ವೀನ್ ಇಬ್ಬರೂ ಜಬರ್ದಸ್ತ್ ಆಗಿ ಪುಷ್ಪ‌ ಸೀಕ್ವೆಲ್​​ನ ಸ್ಪೆಷಲ್​​ ಸಾಂಗ್​ಗೆ ಸ್ಟೆಪ್ ಹಾಕಿದ್ದು, ಶೀಘ್ರದಲ್ಲೇ ಹಾಡು ಬಿಡುಗಡೆ ಆಗಲಿದೆ.

ಇದನ್ನೂ ಓದಿ: Watch: ಮುಂಬೈನಲ್ಲಿ ಯಶ್​​ - ಕಿಯಾರಾ ಅಡ್ವಾಣಿ; 'ಟಾಕ್ಸಿಕ್'​​​ಗೆ ಬಾಲಿವುಡ್​ ನಟಿ?

ಸುಕುಮಾರ್ ನಿರ್ದೇಶನ 'ಪುಷ್ಪ‌ 2: ದಿ ರೂಲ್​​' ಅದ್ಧೂರಿಯಾಗಿ ನಿರ್ಮಾಣಗೊಂಡಿದೆ. ಚಿತ್ರದಲ್ಲಿ ನಾಯಕ ನಟ ಅಲ್ಲು ಅರ್ಜುನ್ ಜೊತೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಮಿಂಚಿದ್ದಾರೆ. ಉಳಿದಂತೆ ಫಹಾದ್ ಫಾಸಿಲ್, ಧನಂಜಯ್, ಅನಸೂಯ ಸೇರಿದಂತೆ ದೊಡ್ಡ ತಾರಾಗಣ ಮೊದಲ ಭಾಗದಲ್ಲಿತ್ತು. ಹೆಚ್ಚು ಕಡಿಮೆ ಅದೇ ತಂಡ ಸೀಕ್ವೆಲ್‌ನಲ್ಲಿಯೂ ಮುಂದುವರೆದಿದೆ. ಪುಷ್ಪ 1 ಚಿತ್ರದ ನಟನೆಗಾಗಿ ಅಲ್ಲು ಅರ್ಜುನ್ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಮತ್ತೊಮ್ಮೆ ಪುಷ್ಪರಾಜ್ ಆಗಿ ಸ್ಟೈಲಿಶ್ ಸ್ಟಾರ್ ಆರ್ಭಟ ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ. ದೊಡ್ಡಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸಲು ಸಜ್ಜಾಗುತ್ತಿದೆ.

ಇದನ್ನೂ ಓದಿ: ಪ್ರಭಾಸ್​ 'ಕಣ್ಣಪ್ಪ' ನೋಟ, ಅಲ್ಲು ಅರ್ಜುನ್​-ಶ್ರೀಲೀಲಾ 'ಪುಷ್ಪ 2' ಡ್ಯಾನ್ಸ್ ಲುಕ್​​​ ಲೀಕ್​​: 'ವೈರಲ್​​ ಮಾಡಬೇಡಿ' - ಚಿತ್ರತಂಡ ಮನವಿ

ಇನ್ನೂ ಚಿತ್ರದ ಹಿಂದಿರುವ ಮೈತ್ರಿ ಮೂವಿ ಮೇಕರ್ಸ್​​​ ಇಂದು ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾ ಅಕೌಂಟ್​ಗಳಲ್ಲಿ ಪೋಸ್ಟ್​ ಒಂದನ್ನು ಹಂಚಿಕೊಂಡಿದ್ದು, ಸಂಜೆ ಸಿನಿಮಾದಿಂದ ದೊಡ್ಡ ಘೋಷನೆಯಾಗಲಿದೆ ಎಂದು ತಿಳಿಸಿದೆ. ಮೈತ್ರಿ ಮೂವಿ ಮೇಕರ್ಸ್ ಮತ್ತು ಮುತ್ತಂಸೆಟ್ಟಿ ಮೀಡಿಯಾ ನಿರ್ಮಾಣದ ಸಿನಿಮಾದಲ್ಲಿ ರಕೀಬ್ ಆಲಂ ಅವರ ಸಾಹಿತ್ಯವಿದ್ದು, ದೇವಿ ಶ್ರೀ ಪ್ರಸಾದ್ ಸಂಗೀತ ಒದಗಿಸಿದ್ದಾರೆ. ಶ್ರೇಯಾ ಘೋಷಾಲ್ ಕಂಠಸಿರಿಯಲ್ಲಿ ಹಾಡುಗಳು ಮೂಡಿಬರಲಿವೆ. ಬಹುನಿರೀಕ್ಷಿತ ಚಿತ್ರ ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ, ಬೆಂಗಾಲಿ ಸೇರಿ ವಿವಿಧ ಭಾಷೆಗಳಲ್ಲಿ ಮುಂದಿನ ತಿಂಗಳು ಡಿಸೆಂಬರ್​ 5ರಂದು ತೆರೆಗಪ್ಪಳಿಸಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.