ETV Bharat / entertainment

ಸಲ್ಮಾನ್ ಮನೆ ಮೇಲಿನ ದಾಳಿ​ ಕೇಸ್: ಮೃತ ಆರೋಪಿ ಥಾಪನ್ ಸಂಬಂಧಿಕರ ಹೇಳಿಕೆ ದಾಖಲಿಸಿಕೊಂಡ ಸಿಐಡಿ - Salman Khan House Firing - SALMAN KHAN HOUSE FIRING

ಕಳೆದ ತಿಂಗಳು ಸಲ್ಮಾನ್ ಖಾನ್ ನಿವಾಸದ ಎದುರು ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಎದುರು ಮೃತ ಆರೋಪಿ ಅನುಜ್ ಥಾಪನ್ ಸಂಬಂಧಿಕರು ತಮ್ಮ ಹೇಳಿಕೆ ದಾಖಲಿಸಿದ್ದಾರೆ.

Salman Khan House Firing case
ಸಲ್ಮಾನ್ ಖಾನ್ ಪ್ರಕರಣ (ANI image)
author img

By ETV Bharat Karnataka Team

Published : May 5, 2024, 2:42 PM IST

ಬಾಲಿವುಡ್​ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಿವಾಸದ ಎದುರು ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ, ಮೃತ ಆರೋಪಿ ಅನುಜ್ ಥಾಪನ್ ಸಂಬಂಧಿಕರು ಸಿಐಡಿ ಎದುರು ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದೆ.

ಮುಂಬೈ ಜೈಲಿನಲ್ಲಿ ಆತ್ಮಹತ್ಯೆ ಪ್ರಕರಣ ನಡೆದ ನಂತರ ಥಾಪನ್ ಕುಟುಂಬ ತಮ್ಮ ಹೇಳಿಕೆ ದಾಖಲಿಸಿದೆ. ಪೊಲೀಸ್ ಕಸ್ಟಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾದ ಅನುಜ್ ಥಾಪನ್ ಅವರ ಕುಟುಂಬದ ಮೂವರು ಸದಸ್ಯರ ಹೇಳಿಕೆಯನ್ನು ಮಹಾರಾಷ್ಟ್ರ ರಾಜ್ಯ ಸಿಐಡಿ ಶನಿವಾರ ದಾಖಲಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಿಐಡಿ ಅಧಿಕಾರಿಗಳು ಮೃತ ಆರೋಪಿಯ ಸಂಬಂಧಿಕರಾದ ವಿಕ್ರಮ್ ಕುಮಾರ್, ಕುಲ್​​​​ದೀಪ್ ಕುಮಾರ್ ಮತ್ತು ಜಸ್ವಂತ್ ಸಿಂಗ್ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಬಂಧಿತ ಶೂಟರ್‌ಗಳಿಗೆ ರೈಫಲ್‌ಗಳು ಮತ್ತು ಬುಲೆಟ್‌ಗಳನ್ನು ಸರಬರಾಜು ಮಾಡುತ್ತಿದ್ದ ಆರೋಪದಡಿ ಪಂಜಾಬ್‌ನಲ್ಲಿ ಸಿಕ್ಕಿಬಿದ್ದ ಅನುಜ್​​​ ಥಾಪನ್ (32) ಮೃತದೇಹ ಬುಧವಾರ ಮುಂಬೈ ಅಪರಾಧ ವಿಭಾಗದ ಲಾಕ್‌ಅಪ್‌ನ ಶೌಚಾಲಯದಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮೇ 2ರಂದು ಜೆಜೆ ಆಸ್ಪತ್ರೆಯಲ್ಲಿ ಅನುಜ್ ಥಾಪನ್​​​ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಯಿತು. ಸಲ್ಮಾನ್ ಖಾನ್ ಮನೆಯ ಹೊರಗೆ ನಡೆದ ಶೂಟ್​​​​​ಔಟ್​ನಲ್ಲಿ ಭಾಗಿಯಾಗಿದ್ದ ಆರೋಪಿಗಳಿಗೆ ಶಸ್ತ್ರಾಸ್ತ್ರ ಪೂರೈಸಿದವರ ಪೈಕಿ ಈತ ಕೂಡ ಓರ್ವ ಎಂಬ ಆರೋಪವಿದ್ದು, ತನಿಖೆ ಮುಂದುವರಿದಿದೆ. ಆದ್ರೆ ಅನುಜ್​ನನ್ನು ಪೊಲೀಸರು 'ಕೊಂದಿದ್ದಾರೆ' ಎಂದು ಆತನ ಕುಟುಂಬಸ್ಥರು ಆರೋಪಿಸಿದ್ದಾರೆ. ಮೃತ ಆರೋಪಿಯ ಸಹೋದರ ಅಭಿಷೇಕ್ ಥಾಪನ್ ಮಾತನಾಡಿ, ಅನುಜ್ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ, ನಮಗೆ ನ್ಯಾಯ ಬೇಕು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮಗ ಜನಿಸಿದ ಬಳಿಕ ಮೊದಲ ಬಾರಿ ಕ್ರಿಕೆಟ್‌ ಸ್ಟೇಡಿಯಂಗೆ ಬಂದ ಅನುಷ್ಕಾ: ವಿರುಷ್ಕಾ ಕ್ಷಣಗಳು - Anushka Sharma

ಸಲ್ಮಾನ್ ಖಾನ್ ಅವರ ಗ್ಯಾಲಾಕ್ಸಿ ಅಪಾರ್ಟ್‌ಮೆಂಟ್‌ನ ಬಳಿ ಏಪ್ರಿಲ್ 14ರಂದು ಮುಂಜಾನೆ ಇಬ್ಬರು ಬೈಕ್‌ನಲ್ಲಿ ಆಗಮಿಸಿ, ಹೊರಗೆ ನಾಲ್ಕು ಸುತ್ತುಗಳ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದರು. ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರ್ ಪಾಲ್ ಮತ್ತು ವಿಕ್ಕಿ ಗುಪ್ತಾ ಜೊತೆಗೆ ಇಬ್ಬರು ಶಸ್ತ್ರಾಸ್ತ್ರ ಪೂರೈಕೆದಾರರಾದ ಸೋನು ಸುಭಾಷ್ ಚಂದರ್ ಮತ್ತು ಅನುಜ್ ಥಾಪನ್ ಅವರನ್ನು ಬಂಧಿಸಿತ್ತು. ಈ ಪೈಕಿ ಓರ್ವ ಆರೋಪಿ ಮೃತಪಟ್ಟಿದ್ದಾನೆ.

ಇದನ್ನೂ ಓದಿ: ಬಿಗಿ ಭದ್ರತೆಯೊಂದಿಗೆ ಭಾರತಕ್ಕೆ ಮರಳಿದ ಸಲ್ಮಾನ್​: ಕ್ಯಾಮರಾಗೆ ಪೋಸ್ ಕೊಡದೇ ತೆರಳಿದ ನಟ - Salman Khan

ಮತ್ತೊಂದೆಡೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಕಿರಿಯ ಸಹೋದರ ಅನ್ಮೋಲ್ ಬಿಷ್ಣೋಯ್‌ಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲುಕ್‌ಔಟ್ ನೋಟಿಸ್ ಜಾರಿಗೊಳಿಸಲಾಗಿದೆ. ದಾಳಿ ನಡೆದ ಕೊಂಚ ಸಮಯದ ನಂತರ ಫೇಸ್‌ಬುಕ್ ಪೋಸ್ಟ್‌ನಲ್ಲಿ, ಈ ದಾಳಿಯನ್ನು ತಾವೇ ನಡೆಸಿದ್ದಾಗಿ ಹೇಳಿಕೊಂಡಿದ್ದ. ಹಾಗಾಗಿ ಮುಂಬೈ ಕ್ರೈಂ ಬ್ರ್ಯಾಂಚ್ ಅಧಿಕಾರಿಗಳು ಲಾರೆನ್ಸ್ ಮತ್ತು ಅನ್ಮೋಲ್​ನನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳೆಂದು ಉಲ್ಲೇಖಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.