ಪ್ರೀತಿ, ಸ್ನೇಹ, ಕಾಳಜಿ, ಕೋಪ, ಕಿರುಚಾಟ, ವಾದ, ವಿವಾದ ಹೀಗೆ ನಾನಾ ಭಾವನೆಗಳ ಸಮ್ಮಿಶ್ರಣವೇ ಕನ್ನಡದ 'ಬಿಗ್ ಬಾಸ್'. ಅತಿಯಾದ್ರೆ ಅಮೃತವೂ ವಿಷವೆಂಬ ಮಾತು ಈ ಮನೆಯಲ್ಲೂ ನಿಜವಾಗಿದೆ. ನೆಮ್ಮದಿಯಿಂದ ಕುಳಿತು ಊಟ ಮಾಡಲೂ ಆಗುತ್ತಿಲ್ಲ ಎಂಬ ಮಾತು ಸ್ಪರ್ಧಿಯಿಂದಲೇ ಕೇಳಿಬಂದಿದೆ.
ಹೌದು, ''ಯಾವ್ದೋ ಸ್ವಿಚ್‍ಗೆ ಇನ್ಯಾವ್ದೋ ಬಲ್ಬ್ ಆನ್ ಆಯ್ತಾ? ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ-ಶುಕ್ರ ರಾತ್ರಿ 9:30ಕ್ಕೆ'' ಎಂಬ ಕ್ಯಾಪ್ಷನ್ನೊಂದಿಗೆ ಕಲರ್ಸ್ ಕನ್ನಡ ವಾಹಿನಿ ವಿವಿಧ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಪ್ರೋಮೋ ರಿಲೀಸ್ ಮಾಡಿದೆ. ಮಾತುಗಳು ಹೆಚ್ಚಾಗಿ, ಅಸಹನೀಯ ಪರಿಸ್ಥಿತಿಗೆ ಸ್ಪರ್ಧಿಗಳು ಹೋಗಿರುವುದನ್ನು ಇಲ್ಲಿ ನೀವು ಕಾಣಬಹುದು.
ನರಕನಿವಾಸಿ ಜಗದೀಶ್, ಕ್ಯಾಪ್ಟನ್ ಹಂಸ ಬಳಿ ಸಂಜೆ ಪನ್ನೀರ್ ಬಟರ್ ಮಸಾಲ ಮತ್ತು ರೋಟಿ ಬೇಕು ಎಂದು ಆರ್ಡರ್ ಮಾಡಿದ್ದಾರೆ. ಹಂಸ ಅವರು, ಅಡುಗೆ ಏರಿಯಾದಲ್ಲಿ ಸುಮ್ನೆ ಫುಟೇಜ್ಗೋಸ್ಕರ ಬೊಗಳ್ತಿದ್ದಾನೆ ಎಂದು ಹೇಳಿದ್ದಾರೆ. ಹಂಸ, ಕ್ಯಾಪ್ಟನ್ ಎಂದು ಜಗದೀಶ್ ಅವರು ಪದೇ ಪದೆ ಕರೆದಿದ್ದಾರೆ. ಡೈನಿಂಗ್ ಟೇಬಲ್ನಲ್ಲಿದ್ದ ಭವ್ಯಾ ಪ್ರತಿಕ್ರಿಯಿಸಿ, ಬೇರೆ ಟೈಮಲ್ಲೂ ನೆಮ್ಮದಿ ಇಲ್ಲ, ಊಟ ಮಾಡೋವಾಗಲಾದ್ರೂ ನೆಮ್ಮದಿ ಕೊಡಿ ಎಂದಿದ್ದಾರೆ. ಬೆಳಗ್ಗೆ 5 ಗಂಟೆಗೆ ಟೀ ಕೇಳ್ದೆ, ಕೊಡ್ಲಿಲ್ಲಾ ಅಂತಾ ಜಗದೀಶ್ ದೂರಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಭವ್ಯಾ, ಬೆಳಗ್ಗೆ 5 ಗಂಟೆಗೆ ಬಿಗ್ ಬಾಸ್ ಎದ್ದೇಳಿ ಅಂತಾ ಹೇಳಿಲ್ಲ ನಮ್ಗೆ ಅಂದಿದ್ದಾರೆ.
ಇದನ್ನೂ ಓದಿ: ನಿನ್ನೆ ಪ್ರೀತಿ, ಇಂದು ಮುನಿಸು: ಬಿಗ್ ಬಾಸ್ ಮನೆಯಲ್ಲಿ ಗೊಬ್ಬರ, ಮನಸ್ಸುಗಳೂ ಗೊಬ್ಬರ? ಎಲ್ಲರೂ ನಾಮಿನೇಟ್
ರೊಚ್ಚಿಗೆದ್ದ ಜಗದೀಶ್, ಸೆಂಟರ್ ಅಲ್ಲಿ ಇಂಟರ್ಫಿಯರ್ ಆಗ್ಬೇಡಿ ಅಂತಾ ಭವ್ಯಾರಿಗೆ ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಭವ್ಯಾ ನನಗೆ ಇರಿಟೇಟ್ ಆಗ್ತಿದೆ, ನನ್ ಮನೆ ಇದು ಅಂದಿದ್ದಾರೆ. ವೈ ಆರ್ ಯೂ ಇಂಟರ್ಫಿಯರಿಂಗ್ ಎಂದು ಮತ್ತೆ ಪ್ರಶ್ನಿಸಿದ ಜಗದೀಶ್, ಯಾರ್ ನೀವು? ಎಂದು ಕೇಳಿದ್ದಾರೆ. ಅದಕ್ಕೆ ಭವ್ಯಾ ನನ್ ಜೊತೆ ಮಾತನಾಡಲು ನೀವ್ ಯಾರು? ಎಂದು ಕೇಳಿದ್ದಾರೆ. ಒಟ್ಟಾರೆ ಇಂದಿನ ಸಂಚಿಕೆಯಲ್ಲಿ ಮಾತಿನ ಜಿದ್ದಾಜಿದ್ದಿ ಇರೋದು ಪಕ್ಕಾ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ಪ್ರೋಮೋ ವೈರಲ್ ಆಗುತ್ತಿದ್ದು, ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ.
ಇದನ್ನೂ ಓದಿ: ಸರಳತೆಯ ಸಾಹುಕಾರ: ನೂಕುನುಗ್ಗಲಿನ ನಡುವೆ ತಾಳ್ಮೆಯಿಂದ ಸೆಲ್ಫಿಗೆ ಪೋಸ್ ಕೊಟ್ಟ ಸೂಪರ್ ಸ್ಟಾರ್
ಇದಕ್ಕೂ ಮೊದಲು, ''ಮನೆಯಲ್ಲಿ ಗೊಬ್ಬರ, ಮನಸ್ಸುಗಳೂ ಗೊಬ್ಬರ!?'' ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ 9:30ಕ್ಕೆ ಎಂಬ ಶೀರ್ಷಿಕೆಯಡಿ ಪ್ರೋಮೋ ಒಂದು ಹೊರಬಿದ್ದಿತ್ತು. ಟಾಸ್ಕ್, ಆ ನಂತರದ ವಾದ, ವಿವಾದಗಳು ಮನೆಯ ಶಾಂತಿ ಕೆಡಿಸಿದಂತಿದೆ.