ಕನ್ನಡ ಚಿತ್ರರಂಗದಲ್ಲಿ ಕೆಂಡಸಂಪಿಗೆ ಹಾಗೂ ಕಾಲೇಜ್ ಕುಮಾರ ಸಿನಿಮಾಗಳ ಮೂಲಕ ಭರವಸೆ ಹುಟ್ಟಿಸಿರುವ ನಟ ವಿಕ್ಕಿ ವರಣ್. ಧನ್ಯಾ ರಾಮ್ಕುಮಾರ್ ಸದ್ಯ ತಮ್ಮ ಪೌಡರ್ ಸಿನಿಮಾ ಸಕ್ಸಸ್ ಖುಷಿಯಲ್ಲಿದ್ದಾರೆ. ಇವರಿಬ್ಬರು ತೆರೆಹಂಚಿಕೊಂಡಿರುವ ಮುಂದಿನ ಬಹುನಿರಿಕ್ಷಿತ ಚಿತ್ರ ''ಕಾಲಾಪತ್ಥರ್''. ಇತ್ತೀಚೆಗೆ ಸಿನಿಮಾದ ಸಾಂಗ್ ರಿಲೀಸ್ ಆಗಿದೆ.
ವಿಕ್ಕಿ ವರಣ್ ಅವರು ಈ ಚಿತ್ರದಲ್ಲಿ ನಟನೆ ಜೊತೆ ಜೊತೆಗೆ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ತನ್ನ ಶೀರ್ಷಿಕೆಯಿಂದಲೇ ಗಮನ ಸೆಳೆದಿರುವ ಸಿನಿಮಾ ಭರ್ಜರಿ ಪ್ರಚಾರ ಆರಂಭಿಸಿದೆ. ಚಿತ್ರಕ್ಕಾಗಿ ಪ್ರಮೋದ್ ಮರವಂತೆ ಬರೆದು, ಅನೂಪ್ ಸೀಳಿನ್ ಸಂಗೀತ ನೀಡಿರುವ "ಬಾಂಡ್ಲಿ ಸ್ಟವ್" ಹಾಡು ಇತ್ತೀಚೆಗೆ ಅನಾವರಣಗೊಂಡಿದೆ. ಗೃಹಿಣಿಯರಿಂದಲೇ ಈ ಹಾಡು ಬಿಡುಗಡೆಯಾಗಿರೋದು ವಿಶೇಷ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ "ಬಾಂಡ್ಲಿ ಸ್ಟವ್".
ಆರಂಭದಲ್ಲಿ ಮಾತನಾಡಿದ ಸಂಗೀತ ನಿರ್ದೇಶಕ ಅನೂಪ್ ಸೀಳಿನ್, ಮೊದಲು ಒಂದು ಹಾಡು ಶುರುವಾಗುವಾಗ ಸಂಗೀತ ನಿರ್ದೇಶಕರ ಜೊತೆಗೆ ನಿರ್ದೇಶಕರು ಇರುತ್ತಿದ್ದರು. ಈಗ ಹಾಗಲ್ಲ. ಆದ್ರೆ ಈ ಚಿತ್ರದ ನಿರ್ದೇಶಕ ವಿಕ್ಕಿ ವರುಣ್ ಆರಂಭದಿಂದಲೂ ನನ್ನ ಜೊತೆಗಿದ್ದಾರೆ. ಹಾಡು ಚೆನ್ನಾಗಿ ಮೂಡಿ ಬಂದಿದೆ ಅಂದ್ರೆ ಅದಕ್ಕೆ ಅವರು ಕಾರಣ ಎಂದು ತಿಳಿಸಿದರು.
ಇದನ್ನೂ ಓದಿ: ಚಿತ್ರದಲ್ಲಿ ವಿಕ್ಕಿ ವರಣ್ ಜೋಡಿಯಾಗಿ ಕಾಣಿಸಿಕೊಂಡಿರುವ ಧನ್ಯಾ ರಾಮ್ಕುಮಾರ್ ಮಾತನಾಡಿ, ಇದೀಗ ಬಿಡುಗಡೆಯಾಗಿರುವ ಹಾಡು ಹಾಗೂ ಚಿತ್ರ ಎರಡು ಚೆನ್ನಾಗಿದೆ ಎಂದು ತಿಳಿಸಿದರು.
ಬಳಿಕ ವಿಕ್ಕಿ ವರುಣ್ ಮಾತನಾಡಿ, ಬಾಂಡ್ಲಿ, ಸ್ಟವ್ ಹಾಗೂ ಸೌಟ್ ಅನ್ನು ಹೆಚ್ಚಾಗಿ ಗೃಹಿಣಿಯರು ಬಳಸುತ್ತಾರೆ. ಹಾಗಾಗಿ ಈ ಹಾಡನ್ನು ಅವರಿಂದ ಬಿಡುಗಡೆ ಮಾಡಿಸಿದ್ದೇವೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಹಾಗೂ ಪ್ರಮೋದ್ ಮರವಂತೆ ಅವರ ಸಾಹಿತ್ಯ ಬಹಳ ಚೆನ್ನಾಗಿದೆ. ನೃತ್ಯ ಬಾರದ ನನ್ನಿಂದ ಧನು ಮಾಸ್ಟರ್ ಚೆನ್ನಾಗಿ ನೃತ್ಯ ಮಾಡಿಸಿದ್ದಾರೆ. ನಿರ್ಮಾಪಕರು ಅದ್ಧೂರಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆಂದು ತಿಳಿಸಿದರು.
ಇದನ್ನೂ ಓದಿ: ಹಗಲು ಸೂರ್ಯ, ರಾತ್ರಿ ಚಂದ್ರ ಬರಬೇಕು.. ಎರಡೂ ಒಟ್ಟಿಗೆ ಬಂದರೆ ಸಮಸ್ಯೆ: ಕಿಚ್ಚನ ಮಾರ್ಮಿಕ ಉತ್ತರ - Sudeep on Darshan
ಇವರ ಜೊತೆ ನಾಗಾಭರಣ ಹಾಗೂ ಅಚ್ಯುತ್ ಕುಮಾರ್ ಸೇರಿದಂತೆ ಸಾಕಷ್ಟು ಕಲಾವಿದರು ಅಭಿನಯಿಸಿದ್ದಾರೆ. ಭುವನ್ ಮೂವೀಸ್ ಲಾಂಛನದಲ್ಲಿ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ ಸಿನಿಮಾ ನಿರ್ಮಾಣ ಮಾಡಿದ್ದು, ಸದ್ಯದಲ್ಲೇ ಟ್ರೇಲರ್ ಅನಾವರಣಗೊಳ್ಳಲಿದೆ. ಸೆಪ್ಟೆಂಬರ್ 13ರಂದು ಈ ಚಿತ್ರ ಬಿಡುಗಡೆ ಆಗಲಿದೆ.