ETV Bharat / entertainment

'ಆರ್ಟಿಕಲ್​ 370' vs​ 'ಕ್ರಾಕ್'​​; ಬಾಕ್ಸ್​ ಆಫೀಸ್​ನಲ್ಲಿ ಎರಡು ಸಿನಿಮಾದ ಗಳಿಕೆ ಹೇಗಿದೆ? - ಯಾಮಿ ಗೌತಮ್​ ಆರ್ಟಿಕಲ್​ 370

ಒಂದೇ ದಿನ ಬಿಡುಗಡೆಯಾದ ಈ ಚಿತ್ರಗಳ 10ನೇ ದಿನದ ಕಲೆಕ್ಷನ್​ನಲ್ಲಿ ಆರ್ಟಿಕಲ್​ 370 ಉತ್ತಮವಾಗಿ ಪ್ರದರ್ಶನ ಕಂಡಿದೆ.

article-370-vs-crakk-bo-day-10-yamis-film-zooms-past-rs-50-crore-vidyut-starrer-lags-far-behind

author img

By ETV Bharat Karnataka Team

Published : Mar 4, 2024, 3:46 PM IST

ಹೈದರಾಬಾದ್​: ಯಾಮಿ ಗೌತಮ್​ ನಟನೆಯ ಆರ್ಟಿಕಲ್​ 370 ಮತ್ತು ವಿದ್ಯುತ್​ ಜಮ್ವಾಲ್​ ಕ್ರಾಕ್​ ಸಿನಿಮಾ ಒಟ್ಟಿಗೆ ಫೆ 23ರಂದು ಬಿಡುಗಡೆಯಾಗಿದ್ದವು. ಚಿತ್ರ ಬಿಡುಗಡೆಯಾಗಿ 10 ದಿನ ಕಳೆದಿದ್ದು,' ಆರ್ಟಿಕಲ್​ 370' ಚಿತ್ರ ಇದುವರೆಗೆ 50 ಕೋಟಿ ರೂ.ಯನ್ನು ಸಂಪಾದಿಸಿದರೆ, 'ಕ್ರಾಕ್'​ ಸಿನಿಮಾ ಇನ್ನು ತೆವಳುತ್ತಾ ಸಾಗಿದೆ. ಯಾಮಿ ಗೌತಮ್​ ನಟನೆಯ ಚಿತ್ರಕ್ಕೆ ಆದಿತ್ಯ ಸುಹಾಸ್​ ಜಂಬ್ಹಲೆ ನಿರ್ದೇಶನ ಮಾಡಿದರೆ, ಕ್ರಾಕ್​ ಚಿತ್ರವನ್ನು ಆದಿತ್ಯ ದತ್​​​ ನಿರ್ದೇಶಿಸಿದ್ದಾರೆ.

  • " class="align-text-top noRightClick twitterSection" data="">

ಎರಡನೇ ವಾರದಲ್ಲಿ 'ಆರ್ಟಿಕಲ್​ 370' ಚಿತ್ರವು ಉತ್ತಮ ಪ್ರದರ್ಶನ ಕಾಣುತ್ತಿದೆ. ಆದಿತ್ಯ ಧಾರ್​ ನಿರ್ಮಾಣದ ಈ ಚಿತ್ರ ಮೆಟ್ರೊಪಾಲಿಟನ್​ ಪ್ರದೇಶಗಳಲ್ಲಿ ಉತ್ತಮವಾಗಿ ಪ್ರದರ್ಶನ ಮಾಡುತ್ತಿದ್ದು, ಜನರಿಂದ ಸಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಮುಂಬರುವ ವಾರದಲ್ಲಿ ಕೂಡ ಚಿತ್ರ ಉತ್ತಮ ಗಳಿಕೆ ಮಾಡುವ ಸಾಧ್ಯತೆ ಇದೆ.

ಅಂದಾಜು ಲೆಕ್ಕದ ಪ್ರಕಾರ, 'ಆರ್ಟಿಕಲ್​ 370' ಚಿತ್ರ ಥಿಯೇಟರ್​​ನಲ್ಲಿ 10ನೇ ದಿನದ ಪ್ರದರ್ಶನದ ವೇಳೆ 6.35 ಕೋಟಿ ಗಳಿಸಿದ್ದು, ಒಟ್ಟಾರೆ ಚಿತ್ರ 50.45 ಕೋಟಿ ರೂ. ಸಂಪಾದಿಸಿದೆ. ಭಾನುವಾರ ಹಿಂದಿ ಭಾಷೆಯಲ್ಲಿಯೇ ಚಿತ್ರ 33.89 ಕೋಟಿ ಕಲೆಕ್ಷನ್​ ಮಾಡಿದೆ. ಬೆಳಗಿನ ಪ್ರದರ್ಶನದಲ್ಲಿ 18.96ರಷ್ಟು ಭರ್ತಿ ಕಂಡರೆ, ಮಧ್ಯಾಹ್ನದ ಪ್ರದರ್ಶನ 36.20ರಷ್ಟು ಮತ್ತು ಸಂಜೆ ಪ್ರದರ್ಶನದಲ್ಲಿ 47.09ರಷ್ಟು ಹಾಗೂ ರಾತ್ರಿಯ ಶೋ ಅಲ್ಲಿ 33.20ರಷ್ಟು ಭರ್ತಿ ಕಂಡಿದೆ.

ವಿದ್ಯುತ್​ ಜಮ್ವಾಲ್​ ನಟನೆಯ 'ಕ್ರಾಕ್​' ಚಿತ್ರ ಸಿಕ್ಕಾಪಟ್ಟೆ ಆ್ಯಕ್ಷನ್​ನಿಂದ​ ಕೂಡಿದ ಥ್ರಿಲ್ಲರ್​ ಚಿತ್ರವಾಗಿದ್ದು, ಗಳಿಕೆಯಲ್ಲಿ ಭಾರೀ ಹಿಂದೆ ಬಿದ್ದಿದೆ. ಸ್ನಾಕ್ನಿಲ್ಕ್​ ವರದಿ ಪ್ರಕಾರ, 'ಕ್ರಾಕ್'​ ಎರಡನೇ ಭಾನುವಾರದಂದು ದೇಶದೆಲ್ಲೆಡೆ 0.28 ಕೋಟಿ ಸಂಗ್ರಹಿಸಿದೆ. ಚಿತ್ರ ಬಿಡುಗಡೆಯಾದಗಿನಿಂದ ಇಲ್ಲಿಯವರೆಗೆ 13.13 ಕೋಟಿ ರೂ. ಗಳಿಸಿದೆ. ಚಿತ್ರಕ್ಕೆ ಬಿಡುಗಡೆಯಾದ ದಿನವೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದು ಸಿನಿಮಾದ ಗಳಿಕೆಯ ಟ್ರೆಂಡ್​ ಮೇಲೆ ಪರಿಣಾಮ ಬೀರಿದೆ ಎಂದು ವಿಶ್ಲೇಷಿಸಲಾಗಿದೆ. ನೊರಾ​ ಫತೇಹಿ, ಅರ್ಜುನ್​ ರಾಂಪಾಲ್​ ಮತ್ತು ಆ್ಯಮಿ ಜಾಕ್ಸನ್ ಈ​ ಚಿತ್ರದಲ್ಲಿ ನಟಿಸಿದ್ದಾರೆ.

ಮುಂಬೈ ಸ್ಲಮ್​ನಲ್ಲಿ ಸಾಗುವ ವ್ಯಕ್ತಿ ಪ್ರಯಾಣದ ಕುರಿತ ಕಥನವನ್ನು ಈ ಚಿತ್ರ ಹೊಂದಿದೆ. ವಿದ್ಯುತ್​ ಜಮ್ವಾಲ್​, ಪರಾಗ್​ ಸಂಘ್ವಿ ಚಿತ್ರಕ್ಕೆ ಹಣ ಹೂಡಿದ್ದಾರೆ. ಆದಿ ಶರ್ಮಾ ಮತ್ತು ಆದಿತ್ಯ ಚೌಕ್ಸೆ ಕೂಡ ಸಹ ನಿರ್ಮಾಣ ಮಾಡಿದ್ದು, ರಿಲಯನ್ಸ್​​ ಎಂಟರ್​ಟೈನಮೆಂಟ್​​ ಪ್ರಸೆಂಟ್​​ ಮಾಡಿದೆ.

ಇದನ್ನೂ ಓದಿ: ಆರ್ಟಿಕಲ್​ 370: ಗರ್ಭಿಣಿಯಾಗಿದ್ದಾಗ ನಟನೆಯ ಸವಾಲು ವಿವರಿಸಿದ ಯಾಮಿ ಗೌತಮ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.