ETV Bharat / entertainment

ಸೆಟ್ಟೇರಲು ಸಜ್ಜಾಯಿತು 'ಎನ್​ಟಿಆರ್​​ 31': ಪ್ರಶಾಂತ್​ ನೀಲ್​- ಜೂ ಎನ್​ಟಿಆರ್​ ಸಿನಿಮಾದ ಲೇಟೆಸ್ಟ್​ ಅಪ್ಡೇಟ್​​ - Jr NTR Prashanth Neel film - JR NTR PRASHANTH NEEL FILM

'ದೇವರ' ಸಿನಿಮಾದಲ್ಲಿ ನಟಿಸಿರುವ ಎನ್​​ಟಿಆರ್​​​​ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದರ ಬೆನ್ನಲ್ಲೇ ಅವರು ಪ್ರಶಾಂತ್​ ನೀಲ್​ ಅವರ ಸಿನಿಮಾದಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ

Anticipation Peaks with Latest Update on Jr. NTR and Prashanth Neel's Epic Collaboration
ಪ್ರಶಾಂತ್​ ನೀಲ್​- ಜೂ ಎನ್​ಟಿಆರ್​ (ಈಟಿವಿ ಭಾರತ್​​)
author img

By ETV Bharat Entertainment Team

Published : Aug 6, 2024, 10:41 AM IST

ಹೈದರಾಬಾದ್​: ತಮ್ಮ ಭರ್ಜರಿ ಆಕ್ಷ್ಯನ್​ಗಳಿಂದಲೇ ಪ್ರೇಕ್ಷಕರನ್ನು ಮೋಡಿ ಮಾಡಿರುವ ಟಾಲಿವುಡ್​ ಸೂಪರ್​ ಸ್ಟಾರ್​ ಜೂ ಎನ್​ಟಿಆರ್​ ಇದೀಗ 'ಕೆಜಿಎಫ್'​ ಪ್ರಶಾಂತ್​ ನೀಲ್​ ಜೊತೆಗೆ ತಮ್ಮ ಮುಂದಿನ ಚಿತ್ರ ನಿರ್ಮಾಣಕ್ಕೆ ಸಜ್ಜಾಗಿದ್ದಾರೆ. 'ಆರ್​ಆರ್​ಆರ್'​ ಯಶಸ್ಸಿನ ಬಳಿಕ ಬಾಲಿವುಡ್​ ನಟಿ ಜಾಹ್ನವಿ ಕಪೂರ್​ ಜೊತೆಗೆ 'ದೇವರ' ಸಿನಿಮಾದಲ್ಲಿ ನಟಿಸಿರುವ ಅವರ ಸಿನಿಮಾ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಇದರ ಬೆನ್ನಲ್ಲೇ ಅವರು ಪ್ರಶಾಂತ್​ ನೀಲ್​ ಅವರ ಸಿನಿಮಾದಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ

'ಕೆಜಿಎಫ್'​ನಂತಹ ಬಿಗ್​ ಹಿಟ್​​ ನೀಡಿದ ಕನ್ನಡದ ಸ್ಟಾರ್​​ ನಿರ್ದೇಶಕ ಪ್ರಶಾಂತ್​ ನೀಲ್​ ಜೊತೆ ಜೂ ಎನ್​ಟಿಆರ್​ ಒಟ್ಟಿಗೆ ಕೆಲಸ ಮಾಡುವುದಾಗಿ ಕಳೆದ ವರ್ಷವೇ ಘೋಷಿಸಿದ್ದರು. ಈ ಚಿತ್ರಕ್ಕೆ ತಾತ್ಕಲಿಕವಾಗಿ 'ಎನ್​ಟಿಆರ್​ 31' ಎಂದು ಹೆಸರು ಘೋಷಿಸಿದ್ದು, ಈ ಪೋಸ್ಟರ್​ ಕೂಡ ಅವರ ಫ್ಯಾನ್ಸ್​​ಗಳಲ್ಲಿ ಕ್ರೇಜ್​ ಹುಟ್ಟಿಸಿದೆ. ಇದೀಗ ಬಂದಿರುವ ಹೊಸ ಮಾಹಿತಿ ಪ್ರಕಾರ, ಈ ಚಿತ್ರದ ಕುರಿತು ಅಧಿಕೃತ ಮಾಹಿತಿ ಇದೇ ಆಗಸ್ಟ್​ 9 ರಂದು ನೀಡಲು ಚಿತ್ರತಂಡ ಸಜ್ಜಾಗಿದೆ ಎಂದು ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.

ಚಿತ್ರದ ಕುರಿತ ಅಧಿಕೃತ ಮಾಹಿತಿ ಶೀಘ್ರದಲ್ಲೇ ಹೊರ ಬರಲಿದೆ. ಇದೊಂದು ಆಕ್ಷ್ಯನ್​ ಆಧಾರಿತ ಕಥೆ ಹೊಂದಿರಲಿದ್ದು, ಹೆಚ್ಚಿನ ನಿರೀಕ್ಷೆ ಹುಟ್ಟು ಹಾಕಲಿದೆ ಎಂದಿದ್ದಾರೆ. ವರದಿಗಳ ಪ್ರಕಾರ 'ಎನ್​ಟಿಆರ್​ 31' ಚಿತ್ರಕ್ಕೆ 'ಡ್ರಾಗನ್'​ ಎಂಬ ಶೀರ್ಷಿಕೆ ಇಡುವ ಸಾಧ್ಯತೆ ಇದೆ. ದೊಡ್ಡ ಬ್ಯಾನರ್​ನಲ್ಲಿ ಈ ಸಿನಿಮಾ ನಿರ್ಮಾಣ ಆಗಲಿದ್ದು, ಚಿತ್ರ ಪೂರ್ವ ನಿರ್ಮಾಣ ಹಂತದಲ್ಲಿದೆ. ಜೂ. ಎನ್​ಟಿಆರ್​ ಪ್ರಶಾಂತ್​ ನೀಲ್​ ಜೋಡಿ ಈಗಾಗಲೇ ಅಭಿಮಾನಿಗಳಲ್ಲಿ ದೊಡ್ಡ ಮನರಂಜನೆಯ ಭರವಸೆ ನೀಡಿದೆ. ಈ ನಡುವೆ ಬಿಡುಗಡೆಗೆ ಸಜ್ಜಾಗಿರುವ ಪ್ಯಾನ್​ ಇಂಡಿಯಾ ಸಿನಿಮಾ ದೇವರ ಚಿತ್ರದ ಬಗ್ಗೆ ಕೂಡ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳು ಮೂಡಿವೆ.

'ದೇವರ: ಪಾರ್ಟ್​ 1' ಸಿನಿಮಾವನ್ನು ಅತ್ಯುತ್ತಮ ಗುಣಮಟ್ಟದ ನಿರ್ಮಾಣದೊಂದಿಗೆ ಉತ್ತಮ ಕಥೆಯೊಂದನ್ನು ಪ್ರೇಕ್ಷಕರಿಗೆ ತೆರೆದಿಡಲಾಗಿದೆ ಎಂದು ಚಿತ್ರತಂಡ ತಿಳಿಸಿದೆ. ಇನ್ನು ಇತ್ತೀಚಿಗಷ್ಟೇ ಚಿತ್ರದ ಎರಡನೇ ಹಾಡು ಧೀರೆ ಧೀರೆ ಬಿಡುಗಡೆಯಾಗಿದ್ದು, ನಟಿ ಜಾಹ್ನವಿ ಅವರ ಈ ರೋಮ್ಯಾಂಟಿಕ್​ ಹಾಡು ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದು, ಇಬ್ಬರ ನಡುವಿನ ಕೆಮಿಸ್ಟ್ರಿ ಉತ್ತಮವಾಗಿ ಮೂಡಿ ಬಂದಿದೆ ಎಂದು ಸಿನಿ ಪಂಡಿತರು ತಿಳಿಸಿದ್ದರು.

ಇದನ್ನೂ ಓದಿ: ಸ್ವಾತಿಮುತ್ತೇ ಸಿಕ್ಕಂಗೈತೆ..: 'ದೇವರ' ರೊಮ್ಯಾಂಟಿಕ್‌ ಹಾಡು ರಿಲೀಸ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.