ETV Bharat / entertainment

ಒಟಿಟಿಗೆ ಬರುತ್ತಿದೆ 'ಅನಿಮಲ್​': ಎಲ್ಲಿ, ಯಾವಾಗ?

author img

By ETV Bharat Karnataka Team

Published : Jan 25, 2024, 7:53 PM IST

ಸೂಪರ್ ಹಿಟ್​ 'ಅನಿಮಲ್​' ಸಿನಿಮಾ ನಾಳೆ ಒಟಿಟಿಗೆ ಲಗ್ಗೆ ಇಡಲಿದೆ.

Animal to stream on Netflix
ಒಟಿಟಿಗೆ 'ಅನಿಮಲ್​' ಸಿನಿಮಾ

2023ರ ಕೊನೆಯಲ್ಲಿ ತೆರೆಕಂಡು ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿದ್ದ 'ಅನಿಮಲ್​​' ಸಿನಿಮಾ ಒಟಿಟಿಗೆ ಲಗ್ಗೆ ಇಡಲು ಸಜ್ಜಾಗಿದೆ. ಬಹು ನಿರೀಕ್ಷೆಗಳೊಂದಿಗೆ ಡಿಸೆಂಬರ್​ನಲ್ಲಿ ಚಿತ್ರಮಂದಿರ ಪ್ರವೇಶಿಸಿದ 'ಅನಿಮಲ್​​' ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸು ಕಂಡಿದೆ. ಥಿಯೇಟರ್​ನಲ್ಲಿ ಸಿನಿಮಾ ವೀಕ್ಷಣೆ ಮಾಡದವರು ಒಟಿಟಿಗೆ 'ಅನಿಮಲ್​' ಯಾವಾಗ ಬರಲಿದೆ ಎಂದು ಕುತೂಹಲ ಭರಿತರಾಗಿದ್ದರು. ಫೈನಲಿ ಸಿನಿಮಾ ಒಟಿಟಿ ಪ್ರವೇಶಿಸಲು ಕ್ಷಣಗಣನೆ ಆರಂಭವಾಗಿದೆ.

ರಣ್​​ಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಇದೇ ಮೊದಲ ಬಾರಿ ಸ್ಕ್ರೀನ್​ ಶೇರ್ ಮಾಡಿರುವ 'ಅನಿಮಲ್' ಗಣರಾಜ್ಯೋತ್ಸವದಂದು ಒಟಿಟಿ ಪ್ರವೇಶಿಸಲಿದೆ. ಹೌದು ನಾಳೆ - ಜನವರಿ 26ರಂದು ಡಿಜಿಟಲ್ ಪ್ರೀಮಿಯರ್‌ ಆಗಲಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರ 2023ರ ಡಿಸೆಂಬರ್ 1ರಂದು ಥಿಯೇಟರ್‌ನಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಯಿತು. ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ 550 ಕೋಟಿ ರೂ. ಕಲೆಕ್ಷನ್​ ಮಾಡಿದ 'ಅನಿಮಲ್​' ಜಾಗತಿಕವಾಗಿ 900 ಕೋಟಿ ರೂಪಾಯಿಯ ವ್ಯವಹಾರ ನಡೆಸಿತು. ಹೆಚ್ಚಿನ ಪ್ರೇಕ್ಷಕರನ್ನು ತಲುಪುವ ಸಲುವಾಗಿ ಸಿನಿಮಾ ನಾಳೆ ನೆಟ್‌ಫ್ಲಿಕ್ಸ್‌ಗೆ ಎಂಟ್ರಿ ಕೊಡಲಿದೆ. ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂನಲ್ಲಿ ಚಲನಚಿತ್ರವನ್ನು ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಬಹುದಾಗಿದೆ.

ಸಹ - ನಿರ್ಮಾಪಕರಾದ ಟೀ ಸೀರಿಸ್​​ ಮತ್ತು ಸಿನಿ 1 ಸ್ಟುಡಿಯೋಸ್ ಪ್ರೈವೇಟ್ ಲಿಮಿಟೆಡ್ ತಮ್ಮ ಭಿನ್ನಾಭಿಪ್ರಾಯ ಇತ್ಯರ್ಥಪಡಿಸಿಕೊಂಡ ನಂತರ ಈ ಬೆಳವಣಿಗೆ ನಡೆದಿದೆ. ತಮ್ಮ ಸಿನಿಮಾ ನಿರ್ಮಾಣ ಒಪ್ಪಂದದ ಉಲ್ಲಂಘನೆ ವಿಚಾರವಾಗಿ ಕಾನೂನು ಹೋರಾಟ ಎದುರಿಸಿದ್ದರು. ಎರಡೂ ಕಡೆಯವರು ತಮ್ಮ ಒಪ್ಪಂದವನ್ನು ದೆಹಲಿ ಹೈಕೋರ್ಟ್‌ನಲ್ಲಿ ಬಹಿರಂಗಪಡಿಸಿದರು. ಅಂತಿಮವಾಗಿ ಭಿನ್ನಾಭಿಪ್ರಾಯ ಇತ್ಯರ್ಥಪಡಿಸಿಕೊಳ್ಳಲಾಗಿದ್ದು, ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

ಈ ಹಿಂದೆ ಸಿನಿಮಾದ ಒಟಿಟಿ ಬಿಡುಗಡೆಯನ್ನು ಸಿನಿ1 ಸ್ಟುಡಿಯೋಸ್ ತಡೆಯಿತು. ಸೂಪರ್ ಕ್ಯಾಸೆಟ್ಸ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್‌ / ಟೀ ಸೀರಿಸ್ ಈ ಮೊದಲು​ ಮಾಡಿಕೊಂಡಿದ್ದ ಒಪ್ಪಂದವನ್ನು ಮುರಿದಿದೆ ಎಂದು ಆರೋಪಿಸಿದ್ದರು. ಕೆಲ ಹಕ್ಕುಗಳು ಮತ್ತು ಸಮಾನ ಮಾಲೀಕತ್ವವನ್ನು ಒಪ್ಪಂದದಲ್ಲಿ ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ ಟೀ ಸೀರಿಸ್​ ಈ ನಿಯಮಗಳನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿತ್ತು. ನಿರ್ಮಾಣ ಮತ್ತು ಪ್ರಚಾರದ ವೆಚ್ಚಗಳು ಸೇರಿದಂತೆ ಕೆಲ ವಿಚಾರಗಳನ್ನು ಈ ಪ್ರಕರಣ ಒಳಗೊಂಡಿತ್ತು. ಅದಾಗ್ಯೂ, ವಿವಾದ ಇತ್ಯರ್ಥಗೊಂಡಿದ್ದು, ಒಟಿಟಿಗೆ ಬರಲು ಸಜ್ಜಾಗಿದೆ.

ಇದನ್ನೂ ಓದಿ: "ಲವ್ & ವಾರ್": ಬನ್ಸಾಲಿ ಮುಂದಿನ ಸಿನಿಮಾದಲ್ಲಿ ಆಲಿಯಾ, ರಣ್​ಬೀರ್, ವಿಕ್ಕಿ ಕೌಶಲ್

ಈ ಹಿಂದೆ ಕತ್ತರಿಸಲಾಗಿರುವ ದೃಶ್ಯಗಳನ್ನು ಒಟಿಟಿ ಆವೃತ್ತಿಯಲ್ಲಿ ಸೇರಿಸುವಂತೆ ತೋರುತ್ತಿದೆ. ಥಿಯೇಟ್ರಿಕಲ್ ಬಿಡುಗಡೆಗೂ ಮುನ್ನ, ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ರಣ್​​ಬೀರ್ ಮತ್ತು ತೃಪ್ತಿ ಡಿಮ್ರಿ ಪಾತ್ರಗಳ ನಡುವಿನ ಆತ್ಮೀಯ ದೃಶ್ಯಗಳ ಕ್ಲೋಸ್ - ಅಪ್ ಸೀನ್​ಗಳನ್ನು ತೆಗೆದುಹಾಕಲು ಸೂಚಿಸಿದೆ ಎಂದು ವರದಿಯಾಗಿತ್ತು. ಆದರೆ ನೆಟ್​ಫ್ಲಿಕ್​​ ಸಿಬಿಎಫ್​ಸಿ ಇಂದ ಸ್ವತಂತ್ರವಾಗಿರುವುದರಿಂದ, ಆ ಸೀನ್​ಗಳು ಲಭ್ಯವಾಗುವ ನಿರೀಕ್ಷೆಗಳಿವೆ.

ಇದನ್ನೂ ಓದಿ: 'ಶೈತಾನ್' ಟೀಸರ್ ರಿಲೀಸ್​​: ಸೂಪರ್ ನ್ಯಾಚುರಲ್ ಥ್ರಿಲ್ಲರ್ ಸಿನಿಮಾ ವೀಕ್ಷಿಸುವ ಕಾತುರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.