ETV Bharat / entertainment

'ರಜನಿಕಾಂತ್ ಸುಪ್ರೀಮ್ ಆಫ್ ಆಲ್ ಸ್ಟಾರ್ಸ್' ಎಂದ ಬಿಗ್​ ಬಿ: 'ಅಮಿತಾಭ್ ನೋಡಿ ಬಾಲಿವುಡ್​​ ನಕ್ಕ ದಿನ'ಇತ್ತೆಂದ ನಟ - Vettaiyan Prevue and Audio Launch

ಸೆಪ್ಟೆಂಬರ್​​ 20ರಂದು ಚೆನ್ನೈನಲ್ಲಿ ಬಹುನಿರೀಕ್ಷಿತ ಚಿತ್ರ 'ವೆಟ್ಟೈಯನ್‌'ನ ಪ್ರಿವ್ಯೂ ಮತ್ತು ಆಡಿಯೋ ಬಿಡುಗಡೆ ಸಮಾರಂಭ ನಡೆಯಿತು. ಈವಂಟ್​ನಲ್ಲಿ ಅಮಿತಾಭ್ ಬಚ್ಚನ್​ ಮತ್ತು ರಜನಿಕಾಂತ್​ ಪರಸ್ಪರರ ಬಗ್ಗೆ ಗುಣಗಾನ ಮಾಡಿಕೊಂಡಿದ್ದಾರೆ.

Vettaiyan Prevue, Audio Launch event
ವೆಟ್ಟೈಯನ್‌ ಪೋಸ್ಟರ್ (film poster)
author img

By ETV Bharat Entertainment Team

Published : Sep 21, 2024, 5:20 PM IST

ಚೆನ್ನೈ(ತಮಿಳುನಾಡು): ಭಾರತೀಯ ಚಿತ್ರರಂಗದ ಹಿರಿಯ, ಬಹುಬೇಡಿಕೆ ನಟ ಅಮಿತಾಭ್ ಬಚ್ಚನ್ ಅವರು ಸೌತ್​ ಸೂಪರ್​ ಸ್ಟಾರ್ ರಜನಿಕಾಂತ್ ಅವರ ಮೇಲೆ ಹೊಂದಿರುವ ಅಗಾಧ ಅಭಿಮಾನ ಎಲ್ಲರಿಗೂ ತಿಳಿದಿರುವ ವಿಚಾರ. ಶುಕ್ರವಾರ ಚೆನ್ನೈನಲ್ಲಿ ನಡೆದ ಬಹುನಿರೀಕ್ಷಿತ ಚಿತ್ರ 'ವೆಟ್ಟೈಯನ್‌'ನ ಪ್ರಿವ್ಯೂ ಮತ್ತು ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಇದು ಮತ್ತೊಮ್ಮೆ ಸಾಬೀತಾಗಿದೆ.

ಸೆಪ್ಟೆಂಬರ್ 20ರಂದು ಚೆನ್ನೈನಲ್ಲಿ ನಡೆದ ಸಿನಿಮಾ ಪ್ರಮೋಶನ್​​ ಈವೆಂಟ್​ಗೆ ಬಿಗ್​ ಬಿ ಆಗಮಿಸಲು ಸಾಧ್ಯವಾಗಿಲ್ಲವಾದರೂ, ಹೃದಯಸ್ಪರ್ಶಿ ವಿಡಿಯೋ ಸಂದೇಶದ ಮೂಲಕ ಅಭಿಮಾನಿಗಳು ಮತ್ತು ಚಿತ್ರತಂಡದೊಂದಿಗೆ ಸಂಪರ್ಕ ಸಾಧಿಸಿದ್ದಾರೆ. 'ವೆಟ್ಟೈಯನ್‌'ನ ಪ್ರಿವ್ಯೂ ಮತ್ತು ಆಡಿಯೋ ರಿಲೀಸ್​ ಈವೆಂಟ್​​ನ ಕೆಲ ಹೈಲೆಟ್ಸ್ ಇಲ್ಲಿವೆ.

'ಸುಪ್ರೀಮ್ ಆಫ್ ಆಲ್ ಸ್ಟಾರ್ಸ್': ಬಿಗ್ ಬಿ

ತಮ್ಮ ವಿಡಿಯೋದಲ್ಲಿ ಬಾಲಿವುಡ್​ ಸೂಪರ್​ ಸ್ಟಾರ್ ಅಮಿತಾಭ್ ಬಚ್ಚನ್ ಅವರು ದಕ್ಷಿಣ ಚಿತ್ರರಂಗದ ಹೆಸರಾಂತ ನಟ ರಜನಿಕಾಂತ್ ಅವರನ್ನು "ಸುಪ್ರೀಮ್​ ಆಫ್​​ ಆಲ್​ ಸ್ಟಾರ್ಸ್" ಎಂದು ಉಲ್ಲೇಖಿಸಿದ್ದಾರೆ. ಈ ಗುಣಗಾನ ಪ್ರೇಕ್ಷಕರಿಂದ ಹರ್ಷೋದ್ಗಾರ ಮತ್ತು ಚಪ್ಪಾಳೆಗಳನ್ನು ಸ್ವೀಕರಿಸಿತು. "ವೆಟ್ಟೈಯನ್ ನನ್ನ ಚೊಚ್ಚಲ ತಮಿಳು ಚಿತ್ರ, ಗೌರವಕರ ವಿಷಯ. ರಜನಿಕಾಂತ್ ಎಲ್ಲ ಸ್ಟಾರ್‌ಗಳಿಗಿಂತಲೂ ಸರ್ವೋಚ್ಛ" ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.

'ರಜನಿ ನೆಲದ ಮೇಲೆ ಮಲಗುತ್ತಿದ್ದರು': 1991ರ ಬ್ಲಾಕ್‌ಬಸ್ಟರ್ 'ಹಮ್‌' ಚಿತ್ರದಲ್ಲಿ ರಜನಿಕಾಂತ್ ಮತ್ತು ಅಮಿತಾಭ್ ಸಹೋದರರ ಪಾತ್ರ ನಿರ್ವಹಿಸಿದ್ದರು. ವಿಡಿಯೋದಲ್ಲಿ, ಬಿಗ್​​ ಬಿ ಶೂಟಿಂಗ್​ ಕ್ಷಣಗಳನ್ನು ನೆನಪಿಸಿಕೊಂಡರು. ಹಮ್​​ ಚಿತ್ರೀಕರಣದ ವೇಳೆ ನಾನು ನನ್ನ ಎಸಿ ವಾಹನದಲ್ಲಿ ವಿಶ್ರಾಂತಿ ಪಡೆಯುತ್ತಿದ್ದೆ. ರಜನಿ ಬ್ರೇಕ್​​ ಟೈಮ್​ನಲ್ಲಿ ನೆಲದ ಮೇಲೆ ಮಲಗುತ್ತಿದ್ದರು. ಅವರ ಸರಳತೆ ನೋಡಿ ನಾನು ವಾಹನದಿಂದ ಹೊರಬಂದು ಹೊರಗೆ ವಿಶ್ರಾಂತಿ ಪಡೆದೆ ಎಂದು ಹಳೇ ನೆನಪುಗಳನ್ನು ಮೆಲುಕು ಹಾಕಿದರು.

'ಬಿಗ್​ ಬಿ ಯಶಸ್ಸಿನ ಅವನತಿಗಾಗಿ ಜಗತ್ತು ಕಾದಿತ್ತು': ಈವೆಂಟ್​ನಲ್ಲಿ, ಅಮಿತಾಭ್ ಅವರು ತಮ್ಮ ವೃತ್ತಿಜೀವನದ ಆರಂಭದಲ್ಲಿ ಎದುರಿಸಿದ ಕೆಲ ಸವಾಲುಗಳನ್ನು ರಜನಿ ವಿವರಿಸಿದರು. "ಅಮಿತ್ ಜಿ ಸಿನಿಮಾಗಳನ್ನು ನಿರ್ಮಿಸುವ ಸಂದರ್ಭ ಅವರು ದೊಡ್ಡ ನಷ್ಟವನ್ನು ಎದುರಿಸಿದ್ದರು. ಎಷ್ಟರ ಮಟ್ಟಿಗೆಂದರೆ ತಮ್ಮ ವಾಚ್‌ಮ್ಯಾನ್‌ಗೆ ಸಂಬಳ ಪಾವತಿಸಲು ಸಹ ಸಾಧ್ಯವಾಗಲಿಲ್ಲ. ಅವರ ಜುಹು ನಿವಾಸ ಪಬ್ಲಿಕ್​​ ಬಿಡ್ಡಿಂಗ್‌ಗೆ ಹೋಗಿತ್ತು. ಆ ಸಂದರ್ಭ ಬಾಲಿವುಡ್ ಅವರನ್ನು ನೋಡಿ ನಗುತ್ತಿತ್ತು. ಅವರ ಯಶಸ್ಸಿನ ಅವನತಿಗಾಗಿ ಜಗತ್ತು ಕಾದಿತ್ತು'' ಎಂದು ತಿಳಿಸಿದರು.

'ದಿನಕ್ಕೆ 10 ಗಂಟೆ ಕೆಲಸ ಮಾಡುತ್ತಾರೆ': "ಕೇವಲ ಮೂರು ವರ್ಷಗಳಲ್ಲಿ, ಅಮಿತಾಭ್​​ ಅವರು ಜಾಹೀರಾತುಗಳು ಮತ್ತು ಕೆಬಿಸಿ ಯಲ್ಲಿ ಕಾಣಿಸಿಕೊಂಡರು. ಎಲ್ಲ ಹಣವನ್ನು ಮರಳಿ ಗಳಿಸಿದರು. ಜುಹು ಸೇರಿದಂತೆ ಅವರ ಮೂರು ಮನೆಗಳನ್ನು ಸಹ ಮರಳಿ ಪಡೆದರು. ಅವರದ್ದು ಸ್ಫೂರ್ತಿದಾಯಕ ವ್ಯಕ್ತಿತ್ವ. 82ರ ಹರೆಯದ ಅವರು ದಿನಕ್ಕೆ 10 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ'' ಎಂದು ಪ್ರಶಂಸೆಗಳ ಸುರಿಮಳೆಯನ್ನೇ ಹರಿಸಿದರು

'ತಂದೆಯ ಜನಪ್ರಿಯತೆಯನ್ನು ಬಳಸಲಿಲ್ಲ': ಅಮಿತಾಭ್ ಕುಟುಂಬದ ಸಾಹಿತ್ಯ ಪರಂಪರೆ ಬಗ್ಗೆಯೂ ಮಾತನಾಡಿದರು. "ಅಮಿತಾಭ್ ಅವರ ತಂದೆ ಓರ್ವ ಶ್ರೇಷ್ಠ ಬರಹಗಾರರಾಗಿದ್ದರು. ಅವರು ತಮ್ಮ ತಂದೆಯ ಜನಪ್ರಿಯತೆಯನ್ನು ಸುಲಭವಾಗಿ ಬಳಸಬಹುದಿತ್ತು. ಆದರೆ ಅವರು ತಮ್ಮದೇ ಆದ ಮಾರ್ಗ ಕಂಡುಕೊಂಡರು" ಎಂದು ತಿಳಿಸಿದರು.

ಅಮಿತಾಭ್ ಆ್ಯಕ್ಸಿಡೆಂಟ್​​ ನೆನಪಿಸಿಕೊಂಡ ರಜನಿ: ರಜನಿ ಕೆಲ ಕಠಿಣ ಕ್ಷಣಗಳನ್ನೂ ನೆನಪಿಸಿಕೊಂಡರು. "ಒಮ್ಮೆ, ಅಮಿತಾಭ್ ಅವರು ಭೀಕರ ಅಪಘಾತಕ್ಕೊಳಗಾದರು. ಆ ವೇಳೆ, ಇಂದಿರಾ ಗಾಂಧಿ ಅವರು ಸಮ್ಮೇಳನಕ್ಕಾಗಿ ವಿದೇಶದಲ್ಲಿದ್ದರು. ಅಪಘಾತದ ಬಗ್ಗೆ ತಿಳಿದ ಕೂಡಲೇ ಅವರು ಭಾರತಕ್ಕೆ ಹಿಂತಿರುಗಿದರು. ಆಗ ರಾಜೀವ್ ಗಾಂಧಿ ಮತ್ತು ಅಮಿತಾಭ್ ಜಿ ಒಟ್ಟಿಗೆ ವಿದ್ಯಾಭ್ಯಾಸ ಪಡೆದವರು ಎಂಬುದು ಎಲ್ಲರಿಗೂ ಗೊತ್ತಾಯಿತು.

ಕುಣಿದು ಕುಪ್ಪಳಿಸಿದ ರಜನಿ: 'ವೆಟ್ಟೈಯನ್‌'ನ ಪ್ರಿವ್ಯೂ ಮತ್ತು ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮಂಜು ವಾರಿಯರ್, ರಾಣಾ ದಗ್ಗುಬಾಟಿಯಂತಹ ಗಣ್ಯರು ಕಾಣಿಸಿಕೊಂಡರು. ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರು ಮನಸಿಲಾಯೊ ಹಾಡಿಗೆ ಸಿಗ್ನೇಚರ್ ಸ್ಟೆಪ್‌ ಹಾಕಲು ರಜನಿಕಾಂತ್ ಅವರನ್ನು ಆಹ್ವಾನಿಸಿದರು. ಬ್ಲ್ಯಾಕ್​ ಔಟ್​​ಫಿಟ್​​ನಲ್ಲಿದ್ದ ಸೂಪರ್‌ ಸ್ಟಾರ್ ವೇದಿಕೆಯಲ್ಲಿ ಸಖತ್​ ಸ್ಟೆಪ್​ ಹಾಕಿದರು. ಅನಿರುದ್ಧ್ ಅವರ ಗಾಯನ ಈವೆಂಟ್‌ನ ಉತ್ಸಾಹ ಹೆಚ್ಚಿಸಿತ್ತು. ರಜನಿಕಾಂತ್ ಡ್ಯಾನ್ಸ್ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್ ಆಗಿವೆ.

ಇದನ್ನೂ ಓದಿ: ಬಚ್ಚನ್​​ ಕುಟುಂಬದೊಂದಿಗಿನ ಐಶ್ವರ್ಯಾ ರೈ ಫೋಟೋಗಳಿವು: ಮರೆಯಾದ ಕ್ಷಣಗಳ ಮೆಲುಕು - Bachchan Family

ಟಿಜೆ ಜ್ಞಾನವೆಲ್​​​ ನಿರ್ದೇಶನದ ವೆಟ್ಟೈಯನ್ ಅಕ್ಟೋಬರ್ 10 ರಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಇತ್ತೀಚೆಗೆ ಅನಾವರಣಗೊಂಡ ಪ್ರಿವ್ಯೂ ಸಿನಿಮಾ ನೋಡುವ ಅಭಿಮಾನಿಗಳ ಕಾತರ ಹೆಚ್ಚಿಸಿದೆ. ರಜನಿ ಜೊತೆ ಅಮಿತಾಭ್ ಬಚ್ಚನ್, ಫಹದ್ ಫಾಸಿಲ್ ಮತ್ತು ಮಂಜು ವಾರಿಯರ್ ಸೇರಿದಂತೆ ಹಲವರು ನಟಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.