ETV Bharat / entertainment

ಮುಂದಿನ ದಿನಗಳಲ್ಲಿ ತೆರೆ ಕಾಣಲಿರುವ ತೆಲುಗು ಚಿತ್ರಗಳಿವು: ಅಗ್ರಸ್ಥಾನದಲ್ಲಿದೆ ನಿಮ್ಮ ನೆಚ್ಚಿನ ಚಿತ್ರ! - Upcoming Telugu Films - UPCOMING TELUGU FILMS

ಇಂಡಸ್ಟ್ರಿ ಟ್ರ್ಯಾಕರ್ ಓರ್ಮ್ಯಾಕ್ಸ್ ಮೀಡಿಯಾ, ಆಗಸ್ಟ್ 2024ರಿಂದ ಬಿಡುಗಡೆಯಾಗಲಿರುವ ತೆಲುಗು ಚಲನಚಿತ್ರಗಳನ್ನು ಬಹಿರಂಗಪಡಿಸಿದೆ. ಆದರೆ ಈ ಚಿತ್ರಗಳ ಟ್ರೇಲರ್‌ಗಳು ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

Allu Arjun's Pushpa 2 Leads Most-Awaited Telugu Films List Despite Release Delay; Devara Part 1 Follows Closely
ಬಹುನಿರೀಕ್ಷಿತ ತೆಲುಗು ಚಿತ್ರಗಳು (Instagram)
author img

By ETV Bharat Karnataka Team

Published : Jun 21, 2024, 4:56 PM IST

ಹೈದರಾಬಾದ್: ಓರ್ಮ್ಯಾಕ್ಸ್ ಮೀಡಿಯಾ, ಉದ್ಯಮ ಟ್ರ್ಯಾಕರ್ ಮತ್ತು ಮಾಧ್ಯಮ ಸಲಹಾ ಸಂಸ್ಥೆ ಮುಂಬರುವ ದಿನಗಳಲ್ಲಿ ಸಿನಿಮಾ ಪ್ರೇಕ್ಷಕರನ್ನು ಸೆಳೆಯಲು ಸಿದ್ಧವಾಗಿರುವ ಬಹುನಿರೀಕ್ಷಿತ ತೆಲುಗು ಚಲನಚಿತ್ರಗಳ ಪಟ್ಟಿ ಬಹಿರಂಗಪಡಿಸಿದೆ. ಆ್ಯಕ್ಷನ್-ಪ್ಯಾಕ್ಡ್ ಥ್ರಿಲ್ಲರ್‌ಗಳಿಂದ ಹಿಡಿದು ಆ್ಯಕ್ಷನ್ ಎಂಟರ್‌ಟೈನರ್‌ಗಳವರೆಗೆ ಹಲವು ಚಿತ್ರಗಳು ಪಟ್ಟಿಯಲ್ಲಿವೆ. 2024ರ ಆಗಸ್ಟ್ ತಿಂಗಳಿನಿಂದ ಬಿಡುಗಡೆಯಾಗಲು ಸಜ್ಜಾಗಿರುವ ಚಲನಚಿತ್ರಗಳನ್ನು ಸಂಸ್ಥೆ ನೀಡಿದೆ.

ಪುಷ್ಪ 2 ಸಿನಿಮಾ ಬಿಡುಗಡೆ ಮುಂದೂಡಿಕೆಯಾದ್ದರೂ ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಈ ಚಿತ್ರಗಳ ಟ್ರೇಲರ್​ ಇನ್ನೂ ಬಿಡುಗಡೆಯಾಗಿಲ್ಲ. ಅದರ ಹೊರತಾಗಿಯೂ ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲು ಸಿದ್ಧಗೊಂಡಿರುವ ಟಾಪ್ ಟಾಲಿವುಡ್​​ ಚಿತ್ರಗಳ ಪಟ್ಟಿ ಹೀಗಿದೆ ಎಂದು ಓರ್ಮ್ಯಾಕ್ಸ್ ಮೀಡಿಯಾ ತನ್ನ ಇನ್ಸ್​ಟಾಗ್ರಾಮ್​ ಅಧಿಕೃತ ಖಾತೆಯಲ್ಲಿ ಮಾಹಿತಿ ನೀಡಿದೆ.

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ 2: ದ ರೂಲ್‌ ಮುಂಚೂಣಿಯಲ್ಲಿದೆ. ಕಳೆದ ಹಲವು ದಿನಗಳಿಂದ ಕುತೂಹಲ ಮೂಡಿಸುತ್ತಿರುವ ಚಿತ್ರ ಇದಾಗಿದ್ದರಿಂದ ಓರ್ಮ್ಯಾಕ್ಸ್​ನ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಸ್ಥಿರವಾಗಿ ಉಳಿದಿದೆ. ಚಿತ್ರದ ನಿರಂತರ ಜನಪ್ರಿಯತೆ ಅದನ್ನು ಮುಂಚೂಣಿಗೆ ತಂದಿದೆ. ಟ್ರೇಲರ್​ ಕೂಡ ಬಿಡುಗಡೆಯಾಗಿಲ್ಲ. ಆದರೂ ಇತರ ಸಿನಿಮಾಗಳಿಗಿಂತ ಹೆಚ್ಚು ಪ್ರಚಲಿತದಲ್ಲಿದೆ. ಹಾಗಾಗಿ ಗಲ್ಲಾಪೆಟ್ಟಿಗೆಯಲ್ಲಿ ಸಖತ್​ ಸದ್ದು ಮಾಡಬಲ್ಲ ಸಂಭಾವ್ಯ ಚಿತ್ರಗಳಲ್ಲಿ ಇದು ಮೊದಲನೇ ಚಿತ್ರ ಎಂದು ಭವಿಷ್ಯ ನುಡಿದಿದೆ.

ಸುಕುಮಾರ್ ನಿರ್ದೇಶನ ಮತ್ತು ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿದ, ಪುಷ್ಪ 2 ಚಿತ್ರ ಡಿಸೆಂಬರ್​ 6ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆ ಕಾಣಲಿದೆ ಎಂದು ಹೇಳಲಾಗುತ್ತಿದೆ. ಆಗಸ್ಟ್​ 15ಕ್ಕೆ ಬಿಡುಗಡೆಯಾಗಬೇಕಿದ್ದ ಪುಷ್ಪ-ದಿ ರೂಲ್(ಪುಷ್ಪ 2) ಕಾರಣಾಂತರಗಳಿಂದ ಮುಂದೂಡಲಾಗಿದೆ.

ಜೂ.ಎನ್​ಟಿಆರ್​ ಮತ್ತು ಜಾನ್ವಿ ಕಪೂರ್ ಅಭಿನಯದ ಆ್ಯಕ್ಷನ್ ಥ್ರಿಲ್ಲರ್ ದೇವರ ಭಾಗ 1 ಕೂಡ ಪಟ್ಟಿಗೆ ಬಂದಿರುವ ಮತ್ತೊಂದು ಬಹು ನಿರೀಕ್ಷಿತ ಚಿತ್ರವಾಗಿದೆ. ಚಿತ್ರದಲ್ಲಿ ಎನ್‌ಟಿಆರ್ ಅವರನ್ನು ಉಗ್ರಾವಾತಾರದಲ್ಲಿ ತೋರಿಸುವ ನಿರೀಕ್ಷೆಯಿದೆ. ಅವರ ಕೆಲವು ಭಯಾನಕ ದೃಶ್ಯಗಳು ಈಗಾಗಲೇ ಜಾಲತಾಣದಲ್ಲಿ ಜಾಗ ಪಡೆದಿವೆ. ಸೆಪ್ಟೆಂಬರ್ 27 ರಂದು ತೆರೆಗೆ ಬರಲು ಸಿದ್ಧಗೊಂಡಿದೆ. ಅಂದುಕೊಂಡ ಕೆಲಸಗಳು ಪೂರ್ಣಗೊಂಡರೆ ಈ ಮೊದಲು ಹೇಳಿದ ದಿನದಂದೇ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರ ಟ್ರೇಲರ್​ ಕೂಡ ಬಿಡುಗಡೆಯಾಗಿಲ್ಲ. ಹೀಗಿದ್ದರೂ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಕೊರಟಾಲಾ ಶಿವ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಎನ್​ಟಿಆರ್​ ಜೊತೆ ಜಾನ್ವಿ ಕಪೂರ್,​ ಬಾಲಿವುಡ್​ ನಟ ಸೈಫ್​ ಆಲಿ ಖಾನ್, ನಟ ಪ್ರಕಾಶ್​ ರೈ ಕಾಣಿಸಲಿದ್ದಾರೆ. ಚಿತ್ರ ಎರಡು ಭಾಗದಲ್ಲಿ ಬಿಡುಗಡೆಯಾಲಿದೆ. ಚಿತ್ರಕ್ಕೆ ಸುಧಾಕರ್​ ಮಿಕ್ಕಿಲಿನೆನಿ ಮತ್ತು ಕೊಸರಾಜು ಹರಿಕೃಷ್ಣ ಬಂಡವಾಳ ಹೂಡಿದ್ದಾರೆ. ಎನ್​ಟಿಆರ್​ ಆರ್ಟ್ಸ್​​ ಇದರ ಪ್ರಸ್ತುತಿ ಮಾಡಿದೆ. ತೆಲುಗು, ತಮಿಳು, ಹಿಂದಿ, ಮಲಯಾಳಂ ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿದೆ. ಅನಿರುದ್ಧ್ ರವಿಚಂದರ್ ಜೊತೆಗೆ ಸಂತೋಷ್ ವೆಂಕಿ ಕೂಡ ಸಂಗೀತ ನಿರ್ದೇಶನ ನೀಡಿದ್ದಾರೆ. ಆರಂಭದಲ್ಲಿ ಏಪ್ರಿಲ್​ನಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ ಎನ್ನಲಾಗಿತ್ತಾದರೂ ಬಳಿಕ ಅಕ್ಟೋಬರ್​ 10ರಂದು 'ದೇವರ' ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿತ್ತು. ಕೊನೆಗೆ ಸೆಪ್ಟೆಂಬರ್​ 27ಕ್ಕೆ ಚಿತ್ರ ಬಿಡುಗಡೆ ಮಾಡುವ ನಿರ್ಧಾರ ಪ್ರಕಟಿಸಿದೆ.

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಪವನ್ ಕಲ್ಯಾಣ್ ನಟನೆಯ OG, ತೇಜ ಸಜ್ಜ ಅವರ ಜೈ ಹನುಮಾನ್ ಮತ್ತು ಪ್ರಭಾಸ್ ಅಭಿನಯದ ಸ್ಪಿರಿಟ್ ಈ ಪಟ್ಟಿಯಲ್ಲಿ ಸ್ಥಾನ ಪಡೆದ ಬಹುನಿರೀಕ್ಷಿತ ಚಿತ್ರಗಳಾಗಿವೆ. ಈ ಪ್ರತಿಯೊಂದು ಚಿತ್ರವು ವಿಶಿಷ್ಟವಾದ ಕಥೆ ಹೊಂದಿವೆ. ಇದಲ್ಲದೇ ಹೈವೋಲ್ಟೇಜ್‌ ಹಾಗೂ ವೈಭವದ ದೃಶ್ಯಗಳು ನೋಡುಗರನ್ನು ಕೇಂದ್ರೀಕರಿಸಲಿವೆ ಎಂದು ಹೇಳಲಾಗುತ್ತಿದೆ. ಆದರೆ, ಈ ಚಿತ್ರಗಳ ಟ್ರೇಲರ್​ಗಳು ಇನ್ನೂ ಬಿಡುಗಡೆಯಾಗದಿರುವುದು ಸಿನಿ ರಸಿಕರಿಗೆ ಬೇಸರ ತರಿಸಿದೆ. ಹಾಗಾಗಿ ಚಿತ್ರಗಳ ಬಿಡುಗಡೆಯ ಜೊತೆಗೆ ದೊಡ್ಡ ಪರದೆಯ ಮೇಲೆ ಈ ಚಿತ್ರಗಳನ್ನು ಅನುಭವಿಸುವ ಅವಕಾಶಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ: ಸದ್ಯಕ್ಕೆ ಪುಷ್ಪ 2 ಬಿಡುಗಡೆ ಇಲ್ಲ: ಅಲ್ಲು ಅರ್ಜುನ್ ಅಭಿಮಾನಿಗಳೆಗೆ ನಿರಾಸೆ - Pushpa 2 Release Postponed

ETV Bharat Logo

Copyright © 2024 Ushodaya Enterprises Pvt. Ltd., All Rights Reserved.