ETV Bharat / entertainment

6 ವರ್ಷಗಳ ಸಂಭ್ರಮದಲ್ಲಿ ಗೂಢಾಚಾರಿ: 'ಸೀಕ್ವೆಲ್'ನ ಸ್ಟನ್ನಿಂಗ್​ ಪೋಸ್ಟರ್!​​; ಅಡಿವಿ ಶೇಷ್ ಹೇಳಿದ್ದಿಷ್ಟು - Adivi Sesh - ADIVI SESH

ಜನಪ್ರಿಯ ನಟ ಅಡಿವಿ ಶೇಷ್ ಮುಖ್ಯಭೂಮಿಕೆಯ 'ಗೂಢಾಚಾರಿ' ಆರು ವರ್ಷಗಳ ಸಂಭ್ರಮದಲ್ಲಿದೆ. ಸದ್ಯ ಗೂಢಾಚಾರಿ 2 ದೊಡ್ಡ ಮಟ್ಟದಲ್ಲಿ ಮೂಡಿ ಬರುತ್ತಿದ್ದು, ಅಭಿಮಾನಿಗಳಿಗೆ ಸಖತ್ ಟ್ರೀಟ್ ನೀಡಲಿದೆ ಎಂದು ನಾಯಕ ನಟ ಅಡಿವಿ ಶೇಷ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Adivi Sesh  Goodachari 2 Poster
ಅಡಿವಿ ಶೇಷ್ ಗೂಢಾಚಾರಿ 2 ಪೋಸ್ಟರ್ (ETV Bharat)
author img

By ETV Bharat Entertainment Team

Published : Aug 5, 2024, 7:07 PM IST

'ಗೂಢಾಚಾರಿ 2'. ಈ ಸಾಲಿನ ಬಹುನಿರೀಕ್ಷಿತ ಚಿತ್ರ. ಟಾಲಿವುಡ್ ಚಿತ್ರರಂಗದಲ್ಲಿ ದಾಖಲೆ ಬರೆದ ಸೂಪರ್ ಹಿಟ್ ಸಿನಿಮಾ 'ಗೂಢಾಚಾರಿ' ಆರು ವರ್ಷಗಳ ಸಂಭ್ರಮದಲ್ಲಿದೆ. ಶಶಿ ಕಿರಣ್ ಟಿಕ್ಕಾ ನಿರ್ದೇಶನದ ಈ ಸ್ಪೈ ಆ್ಯಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಜನಪ್ರಿಯ ನಟ ಅಡಿವಿ ಶೇಷ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು.

ಗೂಢಾಚಾರಿ 2ರ 6 ಸ್ಟನ್ನಿಂಗ್ ಲುಕ್ ರಿಲೀಸ್​​​: ಈ ಸಿನಿಮಾ ನಿರೀಕ್ಷೆಗೂ ಮೀರಿ ಬಾಕ್ಸ್​ ಆಫೀಸ್​ನಲ್ಲಿ ಕೊಳ್ಳೆ ಹೊಡೆದಿತ್ತು. ಅಂದಾಜು 6 ಕೋಟಿ ರೂ. ಬಜೆಟ್ ಚಿತ್ರ 25-30 ಕೋಟಿ ರೂ. ದೋಚಿತ್ತು. ಸದ್ಯ ಗೂಢಚಾರಿ‌ 2 ಸಿನಿಮಾ ನಿರ್ಮಾಣವಾಗುತ್ತಿದೆ. ಈ ಸಿನಿಮಾ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಚಿತ್ರದ ಶೇಖಡ 40ರಷ್ಟು ಕೆಲಸ ಮುಕ್ತಾಯಗೊಂಡಿದೆ. ಬಹಳ ಅದ್ಧೂರಿಯಾಗಿ ಗೂಢಾಚಾರಿ 2 ನಿರ್ಮಾಣಗೊಳ್ಳುತ್ತಿದೆ. ಮೊದಲ ಭಾಗ ಆರು ವರ್ಷಗಳ ಸಂಭ್ರಮದಲ್ಲಿದ್ದು, ಬಹುನಿರೀಕ್ಷಿತ ಗೂಢಾಚಾರಿ 2 ಚಿತ್ರದ 6 ಸ್ಟನ್ನಿಂಗ್ ಲುಕ್ ಬಿಡುಗಡೆ ಮಾಡಲಾಗಿದೆ.

ಅಡಿವಿ ಶೇಷ್ ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾ ಖಾತೆಗಳಲ್ಲಿ ಫೋಟೋಗಳನ್ನು ಶೇರ್ ಮಾಡಿದ್ದು, ಸೋಷಿಯಲ್​​ ಮೀಡಿಯಾದಲ್ಲಿ ಸಖತ್​​ ಸದ್ದು ಮಾಡುತ್ತಿವೆ. ಚಿತ್ರದ ಹೊಸ ಪೋಸ್ಟರ್​ಗಳು ಸಾಮಾಜಿಕ ಜಾಲತಾಣಗಳಲ್ಲಿ ಜಾಗ ಗಿಟ್ಟಿಸಿಕೊಂಡಿದ್ದು, ಅಭಿಮಾನಿಗಳು ಪ್ರತಿಕ್ರಿಯಿಸುತ್ತಿದ್ದಾರೆ.

ಅಡಿವಿ ಶೇಷ್ ಹೇಳಿದ್ದಿಷ್ಟು..: ಗೂಢಾಚಾರಿ 2 ಬಗ್ಗೆ ಮಾತಾನಾಡಿರೋ ನಾಯಕ ನಟ ಅಡಿವಿ ಶೇಷ್, ಗೂಢಾಚಾರಿ ಹಲವು ಕಾರಣಗಳಿಂದ ವಿಶೇಷ ಚಿತ್ರವಾಗಿದೆ. ಕಳೆದ ಆರು ವರ್ಷಗಳಲ್ಲಿ ನಾನು ಮೆಚ್ಚುಗೆ ಕೇಳದ ಒಂದು ವಾರವೂ ಇರಲಿಲ್ಲ. ಸದ್ಯ ಗೂಢಾಚಾರಿ 2 ದೊಡ್ಡ ಮಟ್ಟದಲ್ಲಿ ಮೂಡಿ ಬರುತ್ತಿದೆ. ಇದು ಅಭಿಮಾನಿಗಳಿಗೆ ಸಖತ್ ಟ್ರೀಟ್ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಇಂದು ಮುಂಬೈನಲ್ಲಿ 'ಮಾರ್ಟಿನ್'​ ಟ್ರೇಲರ್​​ ಬಿಡುಗಡೆ: ಧ್ರುವ ಸರ್ಜಾ ಅಭಿಮಾನಿಗಳಲ್ಲಿ ಗರಿಗೆದರಿದ ಕುತೂಹಲ - Dhruva Sarja Martin

ಸೂಪರ್ ಹಿಟ್ ಸಿನಿಮಾ ಗೂಢಾಚಾರಿಯ ಸೀಕ್ವೆಲ್‌ಗೆ ಸ್ವತಃ ಅಡಿವಿ ಶೇಷ್ ಕಥೆ ಬರೆದಿದ್ದು, ಕಾರ್ತೀಕೇಯ- 2, ಮೇಜರ್ ಹಾಗೂ ಕಾಶ್ಮೀರಿ ಫೈಲ್ಸ್​ನಂತಹ ಸೂಪರ್ ಹಿಟ್ ಸಿನಿಮಾ ನಿರ್ಮಾಣ ಮಾಡಿರೋ ದೊಡ್ಡ ನಿರ್ಮಾಣ ಸಂಸ್ಥೆಗಳು ಬಂಡವಾಳ ಹೂಡುತ್ತಿವೆ. ಪೀಪಲ್ ಮೀಡಿಯಾ ಫ್ಯಾಕ್ಟರಿ, ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಮತ್ತು ಎಕೆ ಎಂಟರ್​ಟೈನ್ಮೆಂಟ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಬ್ಯಾನರ್ ಅಡಿ ಟಿಜಿ ವಿಶ್ವಪ್ರಸಾದ್ ಮತ್ತು ಅಭಿಷೇಕ್ ಅಗರ್ವಾಲ್​​ ಜಂಟಿಯಾಗಿ ಈ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ.

ಇದನ್ನೂ ಓದಿ: ''ಎಂಥ ಚೆಂದಾನೆ ಇವಳು'' ಅಂತಿದ್ದಾರೆ ರಿಷಬ್​​ ಶೆಟ್ಟಿ ತಂಡ: 'ಲಾಫಿಂಗ್ ಬುದ್ಧ'ನ ಮೊದಲ ಹಾಡು ಬಿಡುಗಡೆಗೆ ದಿನ ನಿಗದಿ - Enta Chendane Ivalu

ಚಿತ್ರದಲ್ಲಿ ಅಡಿವಿ ಶೇಷ್ ಜೊತೆ ಶೋಭಿತಾ ಧೂಳಿಪಾಲ, ಜಗಪತಿ ಬಾಬು, ಪ್ರಕಾಶ್ ರಾಜ್ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿದ್ದರು. ಸೂಪರ್ ಸಿನಿಮಾದ ಸೀಕ್ವೆಲ್‌ನಲ್ಲಿಯೂ ನಟಿಸಿ ಮತ್ತೊಮ್ಮೆ ಗೆಲ್ಲುವ ಉತ್ಸಾಹದಲ್ಲಿ ಅಡಿವಿ ಶೇಷ್ ಇದ್ದಾರೆ. ಬಾಲಿವುಡ್​​​ ಸ್ಟಾರ್​ ನಟ ಇಮ್ರಾನ್ ಹಶ್ಮಿ ಕೂಡಾ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅಡಿವಿ ಶೇಷ್ ನಟನೆಯ 'ಮೇಜರ್' ಚಿತ್ರದ ಎಡಿಟರ್ ವಿನಯ್ ಕುಮಾರ್ ಸಿರಿಗಿನೀದಿ ಈ ಚಿತ್ರದ ಮೂಲಕ ನಿರ್ದೇಶಕನಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. 2025ರಲ್ಲಿ ಗೂಢಾಚಾರಿ 2 ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಅಭಿಮಾನಿಗಳು ಸಿನಿಮಾದಿಂದ ಹೆಚ್ಚಿನ ಅಪ್ಡೇಟ್ಸ್ ನಿರೀಕ್ಷಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.