ETV Bharat / entertainment

ಮದುವೆ ಬಳಿಕ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಅದಿತಿ ರಾವ್ ಹೈದರಿ-ಸಿದ್ಧಾರ್ಥ್ - Aditi Rao Hydari Siddharth - ADITI RAO HYDARI SIDDHARTH

ಇಂದು ಮುಂಜಾನೆ ಚಿತ್ರರಂಗದ ನವದಂಪತಿಗಳಾದ ಅದಿತಿ ರಾವ್ ಹೈದರಿ ಮತ್ತು ಸಿದ್ಧಾರ್ಥ್ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಮದುವೆ ಬಳಿಕ ನವಜೋಡಿ ಪ್ರತ್ಯಕ್ಷವಾಗಿದ್ದು ಇದೇ ಮೊದಲು.

Aditi Rao Hydari and Siddharth
ಅದಿತಿ ರಾವ್ ಹೈದರಿ-ಸಿದ್ಧಾರ್ಥ್ (Photo: Screengrab of ANI video)
author img

By ETV Bharat Entertainment Team

Published : Sep 20, 2024, 2:14 PM IST

ಅದಿತಿ ರಾವ್ ಹೈದರಿ-ಸಿದ್ಧಾರ್ಥ್ (ANI Video)

ಹೈದರಾಬಾದ್: ದಕ್ಷಿಣ ಚಿತ್ರರಂಗದಲ್ಲಿ ಹೆಸರು ಮಾಡಿರುವ ಅದಿತಿ ರಾವ್ ಹೈದರಿ ಮತ್ತು ಸಿದ್ಧಾರ್ಥ್ ಇತ್ತೀಚೆಗಷ್ಟೇ ದಾಂಪತ್ಯ ಜೀವನ ಶುರು ಮಾಡಿದ್ದಾರೆ. ಸೆಪ್ಟೆಂಬರ್ 16ರಂದು ಮದುವೆ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸಖತ್​ ಸದ್ದು ಮಾಡಿದ್ದರು. ಸೂಪರ್​ ಸ್ಟಾರ್ಸ್ ದೇವಸ್ಥಾನದಲ್ಲಿ ಸರಳವಾಗಿ ಸಾಂಪ್ರದಾಯಿಕವಾಗಿ ಹಸೆಮಣೆ ಏರಿ ಇತರರಿಗೆ ಮಾದರಿಯಾಗಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿಂದು ಕಾಣಿಸಿಕೊಳ್ಳುವ ಮೂಲಕ ಈ ಜೋಡಿ ಮತ್ತೊಮ್ಮೆ ನೆಟ್ಟಿಗರ ಗಮನ ಸೆಳೆದರು.

ಶುಕ್ರವಾರ ಮುಂಜಾನೆ ಮುಂಬೈ ಏರ್​ಪೋರ್ಟ್​​ನಲ್ಲಿ ನವದಂಪತಿ ಕಾಣಿಸಿಕೊಂಡಿದ್ದಾರೆ. ತಮ್ಮ ಸಾಲಿಡ್​​ ಕೆಮಿಸ್ಟ್ರಿ ಮೂಲಕ ಮತ್ತೊಮ್ಮೆ ನೆಟಿಜನ್‌ಗಳ ಮನ ಗೆದ್ದರು. ದೀರ್ಘಕಾಲದವರೆಗೆ ತಮ್ಮ ಸಂಬಂಧವನ್ನು ಖಾಸಗಿಯಾಗೇ ಇರಿಸಿಕೊಂಡಿದ್ದ ಇವರು, ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡು ವೈವಾಹಿಕ ಬಂಧನಕ್ಕೆ ಬಳಗಾಗಿದ್ದಾರೆ. ಮುಂಬೈಗೆ ಆಗಮಿಸಿದ ನವದಂಪತಿಯನ್ನು ಅಭಿಮಾನಿಗಳು ಮತ್ತು ಪಾಪರಾಜಿಗಳು ಆತ್ಮೀಯವಾಗಿ ಸ್ವಾಗತಿಸಿದ್ದು, ಪ್ರೇಮಪಕ್ಷಿಗಳು ನಗು ಬೀರಿದರು.

ಬಹುಭಾಷಾ ನಟಿ ಅದಿತಿ ರಾವ್​ ಹೈದರಿ ಗುಲಾಬಿ ಬಣ್ಣದ ರೇಷ್ಮೆ ಕುರ್ತಾ ಸೆಟ್‌ನಲ್ಲಿ ಬಹಳ ಸುಂದರವಾಗಿ ಕಂಗೊಳಿಸಿದರು. ಮಿನಿಮಮ್ ಮೇಕ್​ಅಪ್​ ಮತ್ತು ಜ್ಯುವೆಲರಿಯಲ್ಲಿ ಬಹಳ ಸುಂದರವಾಗಿ ಕಂಡುಬಂದರು. ಹಣೆ ಮೇಲಿನ ಸಿಂಧೂರ ನೆಟ್ಟಿಗರನ್ನು ಹೆಚ್ಚಾಗಿ ಗಮನ ಸೆಳೆಯಿತು. ಮತ್ತೊಂದೆಡೆ ನಟ ಸಿದ್ಧಾರ್ಥ್ ಬ್ಲ್ಯಾಕ್​ ಪ್ಯಾಂಟ್, ಸ್ಟೈಲಿಶ್ ಡೆನಿಮ್ ಶರ್ಟ್ ಮತ್ತು ಕ್ಯಾಪ್​ ಧರಿಸಿದ್ದರು. ಇಬ್ಬರೂ ಕ್ಯಾಶುವಲ್​​ ವೇರ್‌ನಲ್ಲಿದ್ದರು. ಪಾಪರಾಜಿಗಳ ಕ್ಯಾಮರಾಗಳಿಗೆ ನಗುನಗುತ್ತಾ ಪೋಸ್​ ನೀಡಿದ್ದಾರೆ.

ಇದನ್ನೂ ಓದಿ: ಶಿವಣ್ಣನ ಪಾದ ಮುಟ್ಟಿ ಆಶೀರ್ವಾದ ಪಡೆದ ಐಶ್ವರ್ಯಾ ರೈ ಪುತ್ರಿ: 'ದೊಡ್ಮನೆಗಳ ದೊಡ್ಡತನ'ವೆಂದ ನೆಟ್ಟಿಗರು - Aaradhya Touches Shivrajkumar Feet

ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಸೆಪ್ಟೆಂಬರ್​ 16ರಂದು ಫೋಟೋ ಶೇರ್ ಮಾಡೋ ಮೂಲಕ ತಮ್ಮ ಮದುವೆಯನ್ನು ಅಧಿಕೃತವಾಗಿ ಘೋಷಿಸಿದರು. ಪ್ರೇಮಪಕ್ಷಿಗಳ ಪ್ರೇಮಕಥೆಯು 2021ರಲ್ಲಿ ತೆಲುಗು ಸಿನಿಮಾ 'ಮಹಾ ಸಮುದ್ರಂ'ನ ಸೆಟ್‌ನಲ್ಲಿ ಪ್ರಾರಂಭವಾಯಿತೆಂದು ವರದಿಗಳು ಸೂಚಿಸಿವೆ. ಈ ವರ್ಷಾರಂಭದಲ್ಲಿ ಪ್ರೇಮಪಕ್ಷಿಗಳು ತಮ್ಮ ನಿಶ್ಚಿತಾರ್ಥವನ್ನು ಸಾಮಾಜಿಕ ಜಾಲತಾಣದಲ್ಲಿ ಸೆಲ್ಫಿ ಫೋಟೋದೊಂದಿಗೆ ದೃಢಪಡಿಸಿದರು. ಜೋಡಿಯ ಪ್ರತೀ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಖತ್​​ ಸದ್ದು ಮಾಡಿವೆ. ಇತ್ತೀಚೆಗೆ ಕೆಲ ಫೋಟೋ ಶೇರ್ ಮಾಡಿದ್ದು ಬಿಟ್ಟರೆ ಜೋಡಿ ತಮ್ಮ ಸಂಬಂಧವನ್ನು ಹೆಚ್ಚು ಖಾಸಗಿಯಾಗಿ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: ಬಿಗ್​​ ಬಾಸ್​​​ ರಾಜೀವ್ ಹನು 'ಬೇಗೂರು ಕಾಲೋನಿ‌' ಸಿನಿಮಾಗೆ ಸಾಥ್ ಕೊಟ್ಟ 'ಭೀಮ' ವಿಜಯ್​ - Beguru Colony

ತಾರಾದಂಪತಿಯ ಸಿನಿಮಾ ವಿಚಾರ ಗಮನಿಸುವುದಾದರೆ, ಅದಿತಿ ಇತ್ತೀಚೆಗೆ ಸಂಜಯ್ ಲೀಲಾ ಬನ್ಸಾಲಿಯವರ ಒಟಿಟಿ ಸೀರಿಸ್​​ 'ಹೀರಾಮಂಡಿ'ಯಲ್ಲಿನ ತಮ್ಮ ಪಾತ್ರಕ್ಕೆ ವ್ಯಾಪಕ ಪ್ರಶಂಸೆ ಗಳಿಸಿದರು. ಸಿದ್ಧಾರ್ಥ್ ಅವರು ಕಮಲ್ ಹಾಸನ್ ಜೊತೆಗೆ ಇಂಡಿಯನ್ 2 ಚಿತ್ರದಲ್ಲಿ ಕಾಣಿಸಿಕೊಂಡರು. ಮುಂದೆ ಇಂಡಿಯನ್​​ 3 ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.