ETV Bharat / entertainment

ಸರಿಯಾಯ್ತು ಬ್ಲಾಕ್​ ಆಗಿದ್ದ ನಟ ಸೋನು ಸೂದ್ ವಾಟ್ಸಾಪ್: 61 ಗಂಟೆಗಳಲ್ಲಿ ಬಂದಿದ್ದು 9,000 ಮೆಸೇಜ್​ - Sonu Sood WhatsApp - SONU SOOD WHATSAPP

61 ಗಂಟೆಗಳ ನಂತರ ನಟ ಸೋನು ಸೂದ್ ಅವರ ವಾಟ್ಸಾಪ್ ಸರಿಯಾಗಿದೆ. ಖಾತೆಯಲ್ಲಿ ಒಟ್ಟು 9,483 ಸಂದೇಶಗಳಿದ್ದವು.

Sonu Sood
ಸೋನು ಸೂದ್
author img

By ETV Bharat Karnataka Team

Published : Apr 28, 2024, 5:48 PM IST

Updated : Apr 28, 2024, 6:11 PM IST

ಕೋವಿಡ್ -19 ಸಾಂಕ್ರಾಮಿಕ ಸಂದರ್ಭ ಸಮಾಜ ಸೇವೆಯಿಂದ ಜನಪ್ರಿಯರಾದ ನಟ ಸೋನು ಸೂದ್ ಅವರ ವಾಟ್ಸಾಪ್ ಖಾತೆ ಸರಿಸುಮಾರು 60 ಗಂಟೆಗಳ ಕಾಲ ಬ್ಲಾಕ್​​ ಆಗಿ ಸಮಸ್ಯೆ ಎದುರಿಸಿದರು. ಈ ಬಗ್ಗೆ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಹತಾಶೆ ವ್ಯಕ್ತಪಡಿಸಿದರು. ಜೊತೆಗೆ ಈ ಬಗ್ಗೆ ಗಮನ ಹರಿಸುವಂತೆ ಮನವಿ ಮಾಡಿದರು. ಅದೃಷ್ಟವಶಾತ್, ನಟನ ಮನವಿಯನ್ನು ಆಲಿಸಿ, ಕೆಲ ಗಂಟೆಗಳ ನಂತರ ಅವರ ವಾಟ್ಸಾಪ್ ಅನ್ನು ಸರಿಪಡಿಸಲಾಯಿತು.

ವಾಟ್ಸಾಪ್ ಸ್ಥಗಿತದ ಸಮಯ ಜನಸಾಮಾನ್ಯರಿಂದ ಸಾವಿರಾರು ಸಂದೇಶಗಳು ಬಂದಿದ್ದವು. ಸಹಾಯ ಕೋರಿ ನಟನಿಗೆ ಹಲವರು ಮೆಸೇಜ್​​ ಮಾಡಿದ್ದರು. ಕೇವಲ 61 ಗಂಟೆಗಳಲ್ಲಿ 9,000ಕ್ಕೂ ಹೆಚ್ಚು ಸಂದೇಶಗಳು ನಟನ ವಾಟ್ಸಾಪ್​ನಲ್ಲಿದ್ದವು. ವಾಟ್ಸಾಪ್​​ ಪ್ರವೇಶ ಸಾಧ್ಯವಾದ ನಂತರ, "ಫೈನಲಿ ನನ್ನ WhatsApp ಅನ್ನು ಹಿಂಪಡೆಯಲಾಗಿದೆ. 61 ಗಂಟೆಗಳಲ್ಲಿ 9,483 ಅನ್​​​ರೀಡ್​​​ ಮೆಸೇಜ್​ಗಳು. ಧನ್ಯವಾದಗಳು" ಎಂದು ಇನ್​​​​ಸ್ಟಾ ಸ್ಟೋರಿನಲ್ಲಿ ತಿಳಿಸಿದ್ದಾರೆ.

Sonu Sood
ಸೋನು ಸೂದ್ ಇನ್​ಸ್ಟಾ ಸ್ಟೋರಿ

ಸೋನು ಸೂದ್ ಅವರು ವಾಟ್ಸಾಪ್​​​ನಲ್ಲಿ ಸಮಸ್ಯೆಗಳನ್ನು ಎದುರಿಸಿರುವುದು ಇದೇ ಮೊದಲಲ್ಲ. ಈ ಹಿಂದೆ ಎಕ್ಸ್​​​ (ಟ್ವಿಟರ್​​)ನಲ್ಲಿ ವಾಟ್ಸಾಪ್​​ ಕುಂದುಕೊರತೆಗಳನ್ನು ತಿಳಿಸಿ, ಪ್ಲ್ಯಾಟ್​ಫಾರ್ಮ್​​ನ ಸರ್ವಿಸ್​​​ಗಳನ್ನು ಸುಧಾರಿಸಲು ಒತ್ತಾಯಿಸಿದ್ದರು.

Sonu Sood
ಸೋನು ಸೂದ್ ಇನ್​ಸ್ಟಾ ಸ್ಟೋರಿ

ಕೋವಿಡ್​​ ಸಂದರ್ಭ ಸೋನು ಸೂದ್ ಕಷ್ಟದಲ್ಲಿರುವವರಿಗೆ ದೊಡ್ಡ ಮಟ್ಟದಲ್ಲಿ ಸಹಾಯ ಮಾಡಿದ್ದರು. ಸಾಂಕ್ರಾಮಿಕದ ನಂತರವೂ, ಬಡವರು ಮತ್ತು ಹಿಂದುಳಿದವರಿಗೆ ಸಹಾಯ ಮಾಡುವುದನ್ನು ಮುಂದುವರಿಸಿದ್ದಾರೆ. ಅವರ ಮುಂಬೈ ನಿವಾಸದ ಹೊರಗೆ ಸಾಕಷ್ಟು ಜನರು ಆಗಮಿಸುವ, ಸಹಾಯ ಕೇಳುವ, ಧನ್ಯವಾದ ಅರ್ಪಿಸುವ ದೃಶ್ಯಗಳು ಸೋಷಿಯಲ್​ ಮೀಡಿಯಾ ಪ್ಲಾಟ್​​​ಫಾರ್ಮ್​​ಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಉದ್ಯೋಗಾವಕಾಶಗಳು, ಹಣಕಾಸಿನ ನೆರವು, ವೈದ್ಯಕೀಯ ಬೆಂಬಲ ಅಥವಾ ಇತರೆ ಯಾವುದೇ ರೀತಿಯ ಸಹಾಯ ಕೋರಿ ಬರುವ ಜನರೊಂದಿಗೆ ನಟ ಸಂವಾದ ನಡೆಸುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಜಾಗ ಗಿಟ್ಟಿಸಿಕೊಳ್ಳುತ್ತವೆ.

ಇದನ್ನೂ ಓದಿ: '777 ಚಾರ್ಲಿ'ಗೆ ಮತ್ತೊಂದು ಗರಿ: ಜೂ.28ಕ್ಕೆ ಜಪಾನ್​ನಲ್ಲಿ ಬಿಡುಗಡೆ - 777 Charlie

ನಟನ ಸಿನಿಮಾ ವಿಚಾರ ಗಮನಿಸುವುದಾದರೆ, ನಟಿ ಜಾಕ್ವೆಲಿನ್ ಫರ್ನಾಂಡಿಸ್ ಜೊತೆ 'ಫತೇಹ್‌'ನಲ್ಲಿ ಕಾಣಿಸಿಕೊಳ್ಳಲಿದ್ದು, ಇದು ನಟನ ಚೊಚ್ಚಲ ನಿರ್ದೇಶದ ಚಿತ್ರ. ಶಕ್ತಿ ಸಾಗರ್ ಪ್ರೊಡಕ್ಷನ್ಸ್ ಮತ್ತು ಝೀ ಸ್ಟುಡಿಯೋಸ್ ನಿರ್ಮಾಣದ 'ಫತೇಹ್' ಭರ್ಜರಿ ಆ್ಯಕ್ಷನ್ ಸೀಕ್ವೆನ್ಸ್‌ಗಳನ್ನು ಹೊಂದಿರಲಿದೆ.

ಇದನ್ನೂ ಓದಿ: ಚೊಚ್ಚಲ ನಿರ್ಮಾಣದ ಚಿತ್ರದಲ್ಲಿ ನಾಯಕಿಯಾದ ಸಮಂತಾ: 'ಬಂಗಾರಂ' ಫಸ್ಟ್ ಲುಕ್ ರಿಲೀಸ್ - Bangaram

ಈ ಸಾಲಿನಲ್ಲೇ 'ಫತೇಹ್' ಬಿಡುಗಡೆ ಆಗಲಿದೆ. ನಟ ನಿರ್ದೇಶಿಸಿರುವ ಮೊದಲ ಚಿತ್ರವಾದ ಹಿನ್ನೆಲೆ ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ಸಾಕಷ್ಟು ನಿರಿಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಈ ಸಿನಿಮಾವನ್ನು ಸಾಕಷ್ಟು ಕುತೂಹಲದಿಂದ ನಿರೀಕ್ಷಿಸುತ್ತಿದ್ದಾರೆ.

Last Updated : Apr 28, 2024, 6:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.