ETV Bharat / entertainment

'ಫೋಟೋ' ಜೊತೆಗೆ ಪ್ರಕಾಶ್ ರಾಜ್: ಲಾಕ್​ಡೌನ್ ಸಂಕಷ್ಟದ ಕಥೆ ಪ್ರಸೆಂಟ್ ಮಾಡ್ತಿದ್ದಾರೆ ಬಹುಭಾಷಾ ನಟ - Photo

ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಸಿನಿಪ್ರಿಯರಿಂದ ಮೆಚ್ಚುಗೆ ಗಳಿಸಿದ್ದ 'ಫೋಟೋ' ಸಿನಿಮಾವನ್ನು ಹಿರಿಯ ನಟ ಪ್ರಕಾಶ್​ ರಾಜ್​ ಪ್ರಸೆಂಟ್​ ಮಾಡುತ್ತಿದ್ದಾರೆ.

Actor Prakash Raj is presenting the photo movie
ಫೋಟೋ ಸಿನಿಮಾವನ್ನು ನಟ ಪ್ರಕಾಶ್​ ರಾಜ್​ ಪ್ರೆಸೆಂಟ್​ ಮಾಡುತ್ತಿದ್ದಾರೆ
author img

By ETV Bharat Karnataka Team

Published : Feb 12, 2024, 7:36 PM IST

ಕನ್ನಡ ಸಿನಿಮಾರಂಗವೀಗ ಬೇರೆಯದ್ದೇ ದಿಕ್ಕಿಗೆ ಹೊರಳಿದೆ. ಸೋಲು ಗೆಲುವಿನಾಚೆ ಲೆಕ್ಕಾಚಾರ ಹಾಕಿದರೂ ಹೊಸ ಹುರುಪು, ಹೊಸ ಹರಿವು, ಹೊಸ ಆಲೋಚನೆಗಳಿಂದ ಬೇರೆಯದ್ದೇ ಆಯಾಮ ಪಡೆದಿದೆ. ಅದರ ಮುಂದುವರೆದ ಭಾಗವಾಗಿ ಗೋಚರಿಸುತ್ತಿರುವ ಚಿತ್ರ 'ಫೋಟೋ'. ಕಳೆದ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರೇಕ್ಷಕರಿಂದ ಲೈಕ್ ಪಡೆದ 'ಫೋಟೋ' ಸಿನಿಮಾ ಸದ್ಯದಲ್ಲೇ ತೆರೆಗೆ ಬರ್ತಿದೆ. ಕೋವಿಡ್ ಸಮಯದ ಕಥೆಗೀಗ ಜೊತೆಯಾಗಿದ್ದಾರೆ ಬಹುಭಾಷಾ ನಟ ಪ್ರಕಾಶ್ ರಾಜ್.

'ಫೋಟೋ' ಸಿನಿಮಾವನ್ನು 'ನಿರ್ದಿಗಂತ'ದ ಮೂಲಕ ಪ್ರಕಾಶ್ ರಾಜ್ ಪ್ರೆಸೆಂಟ್ ಮಾಡುತ್ತಿದ್ದಾರೆ. ಈ ಮೂಲಕ ಹೈದರಾಬಾದ್ ಕರ್ನಾಟಕದ ಕಥೆಗೆ ನಿರ್ದಿಗಂತ ಜೊತೆಯಾಗಿ ನಿಂತಿದೆ. ರಾಯಚೂರು‌ ಮೂಲದ ಯುವ ಪ್ರತಿಭೆ ಉತ್ಸವ್ ಗೋನವಾರ ಚೊಚ್ಚಲ ಪ್ರಯತ್ನ 'ಫೋಟೋ'. ಕಳೆದ ಏಳು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿರುವ ಅವರು ಈ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟು ಸ್ವತಂತ್ರ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ.

Photo Movie Poster
ಫೋಟೋ ಸಿನಿಮಾದ ಪೋಸ್ಟರ್​

ಲಾಕ್‌ಡೌನ್‌ ಸಮಯದಲ್ಲಿ ನಡೆದ ಕಥೆ ಸುತ್ತ ಫೋಟೋ ಸಿನಿಮಾ ಸಾಗುತ್ತದೆ. ಅಪ್ಪ‌-ಮಗನ ಬಾಂಧವ್ಯ, ಭಾವನಾತ್ಮಕ ಎಳೆ ಇಟ್ಟುಕೊಂಡು ಹಲವು ವಿಷಯಗಳನ್ನು ಬಹಳ ನೈಜವಾಗಿ ಮನಸ್ಸಿಗೆ ನಾಟುವಂತೆ ಕಟ್ಟುಕೊಟ್ಟಿದ್ದಾರೆ ನಿರ್ದೇಶಕ ಉತ್ಸವ್.

ಮಸಾರಿ ಟಾಕೀಸ್ ಬ್ಯಾನರ್ ನಡಿ ನಿರ್ಮಾಣವಾಗಿರುವ ಫೋಟೋ ಸಿನಿಮಾದಲ್ಲಿ ಮಹಾದೇವ ಹಡಪದ್, ಸಂಧ್ಯಾ ಅರಕೆರೆ, ಜಹಾಂಗೀರ್, ಮತ್ತು ವೀರೇಶ್ ಗೊನ್ವಾರ್ ನಟಿಸಿದ್ದಾರೆ. ಚಿತ್ರಕ್ಕೆ ದಿನೇಶ್ ದಿವಾಕರನ್ ಅವರ ಛಾಯಾಗ್ರಹಣ ಮತ್ತು ರವಿ ಹಿರೇಮಠ್ ಅವರ ಶಬ್ದ ವಿನ್ಯಾಸ, ಶಿವರಾಜ್ ಮೆಹೂ ಸಂಕಲನದ ಶ್ರಮವಿದೆ.

ಇದನ್ನೂ ಓದಿ: ₹400 ಕೋಟಿ ವೆಚ್ಚದ ಚಿತ್ರದಲ್ಲಿ ಸಲ್ಮಾನ್ ಖಾನ್; 10 ವರ್ಷದ ನಂತರ ಸಾಜಿದ್ ಜೊತೆ ಸಿನಿಮಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.