ETV Bharat / entertainment

'ಅಬ್ಬಬ್ಬ' ಸಿನಿಮಾ ಟ್ರೇಲರ್ ಬಿಡುಗಡೆ ಮಾಡಿ ಹೀಗಂದ್ರು​ ಡಾಲಿ ಧನಂಜಯ್​ - ಅಬ್ಬಬ್ಬ ಚಿತ್ರದ ಟ್ರೇಲರ್

ಕೆ.ಎಂ.ಚೈತನ್ಯ ನಿರ್ದೇಶನದ ಅಬ್ಬಬ್ಬ ಚಿತ್ರದ ಟ್ರೇಲರ್​ ಅನ್ನು ನಟ ಡಾಲಿ ಧನಂಜಯ್ ಬಿಡುಗಡೆ ಮಾಡಿದರು.

ಅಬ್ಬಬ್ಬ ಚಿತ್ರದ ಟ್ರೈಲರ್ ಬಿಡುಗಡೆ
ಅಬ್ಬಬ್ಬ ಚಿತ್ರದ ಟ್ರೈಲರ್ ಬಿಡುಗಡೆ
author img

By ETV Bharat Karnataka Team

Published : Feb 5, 2024, 10:57 PM IST

ಸ್ಯಾಂಡಲ್​ವುಡ್​ನಲ್ಲಿ ಆ ದಿನಗಳು ಸಿನಿಮಾ ಸೇರಿದಂತೆ ಅನೇಕ ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿರುವ ಕೆ.ಎಂ.ಚೈತನ್ಯ ನಿರ್ದೇಶನ ಹಾಗು ಫ್ಯಾಮಿಲಿ ಪ್ಯಾಕ್ ಚಿತ್ರದ ನಂತರ ಲಿಖಿತ್ ಶೆಟ್ಟಿ ಮತ್ತು ಅಮೃತಾ ಅಯ್ಯಂಗಾರ್ ಒಟ್ಟಿಗೆ ಅಭಿನಯಿಸಿರುವ ಚಿತ್ರವೇ 'ಅಬ್ಬಬ್ಬ'. ಸದ್ಯ ಕೆಲವು ವಿಚಾರಗಳಿಗೆ ಸಿನಿಮಾಪ್ರಿಯರಲ್ಲಿ ಚಿತ್ರ ಕ್ಯೂರಿಯಾಸಿಟಿ ಹುಟ್ಟಿಸಿದೆ. ಈ ಸಿನಿಮಾಗೆ ನಟ ರಾಕ್ಷಸ ಡಾಲಿ ಧನಂಜಯ ಸಪೋರ್ಟ್ ಮಾಡ್ತಿದ್ದು ಟ್ರೇಲರ್​ ಬಿಡುಗಡೆ ಮಾಡಿ, ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು.

ನಿರ್ದೇಶಕ ಕೆ.ಎಂ.ಚೈತನ್ಯ ಮಾತನಾಡಿ, ನಾನು ಸಾಮಾನ್ಯವಾಗಿ ಒಂದೇ ಜಾನರ್​ನ ಸಿನಿಮಾ ಮಾಡುವುದಿಲ್ಲ. ಆದರೆ ನಾನು ನಿರ್ದೇಶಿಸಿರುವ ಕಾಮಿಡಿ ಜಾನರಿನ ಎರಡನೇ ಸಿನಿಮಾ ಅಬ್ಬಬ್ಬ. ಕುಟುಂಬಸಮೇತ ನೋಡಬಹುದಾದ ಪಕ್ಕ ಪೈಸಾ ವಸೂಲ್ ಸಿನಿಮಾ ಇದು.‌ ಈ ಚಿತ್ರ ಕೆ.ಆರ್.ಜಿ ಸ್ಟುಡಿಯೋಸ್ ಮೂಲಕ ಬಿಡುಗಡೆಯಾಗುತ್ತಿದೆ ಎಂದರು.

ಅಬ್ಬಬ್ಬ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ನಟ ಧನಂಜಯ್
ಅಬ್ಬಬ್ಬ ಚಿತ್ರ

ಹಾಸ್ಟೆಲ್​ನಲ್ಲಿ ನಡೆಯುವ ಕಾಮಿಡಿ ಜಾನರ್​ನ ಕಥೆ.‌ ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದು ನಾಯಕ ಲಿಖಿತ್ ಶೆಟ್ಟಿ ತಿಳಿಸಿದರು. ಬಾಯ್ಸ್ ಹಾಸ್ಟೆಲ್ ಹೇಗಿರುತ್ತದೆ ಎಂದು ನೋಡಲು ಹೋಗಿ ಪಜೀತಿ ಪಡುವ ಹುಡುಗಿಯ ಪಾತ್ರ ನನ್ನದು ಎಂದು ನಾಯಕಿ ಅಮೃತ ಅಯ್ಯಂಗಾರ್ ತಿಳಿಸಿದರು.

ಫ್ರೈಡೇ ಫಿಲಂ ಹೌಸ್ ಹಾಗೂ ಮೀರಾಮಾರ್ ಸಂಸ್ಥೆಯ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿರುವ ಆನ್ ಆಗಸ್ಟೇನ್, ವಿವೇಕ್ ಥಾಮಸ್ ಹಾಗೂ ವಿಜಯ್ ಬಾಬು ಮಾತನಾಡಿ, ಚಿತ್ರ ಚೆನ್ನಾಗಿ ಮೂಡಿಬರಲು ಸಹಕಾರ ನೀಡಿದ ಚಿತ್ರತಂಡಕ್ಕೆ ಹಾಗೂ ಟ್ರೇಲರ್​ ಬಿಡುಗಡೆ ಮಾಡಿಕೊಟ್ಟ ಧನಂಜಯ್ ಅವರಿಗೆ ಧನ್ಯವಾದ ಹೇಳಿದರು. ಫೆಬ್ರವರಿ 16ರಂದು ರಾಜ್ಯಾದ್ಯಂತ ಚಿತ್ರ ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ: ಸಿನಿಮಾ ಪ್ರೇಮಿಗಳಿಗೆ ಬಂಪರ್ ಆಫರ್ ಕೊಟ್ಟ ರವಿಕೆ ಪ್ರಸಂಗ ಸಿನಿಮಾ ತಂಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.