'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ' (TGIKS) ಭಾರತೀಯ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ. ಕಾಮಿಡಿ ಕಿಂಗ್ ಕಪಿಲ್ ಶರ್ಮಾ ನಡೆಸಿಕೊಡುವ ಈ ಫೇಮಸ್ ಪ್ರೋಗ್ರಾಮ್ ತನ್ನದೇ ಆದ ಫ್ಯಾನ್ ಬೇಸ್ ಹೊಂದಿದೆ. ಕಳೆದ ಎಪಿಸೋಡ್ನಲ್ಲಿ ತಾರಾ ಸಹೋದರರಾದ ವಿಕ್ಕಿ ಕೌಶಲ್ ಮತ್ತು ಸನ್ನಿ ಕೌಶಲ್ ಕಾಣಿಸಿಕೊಂಡಿದ್ದರು. ಮುಂದಿನ ಸಂಚಿಕೆಯಲ್ಲಿ ಸೂಪರ್ ಸ್ಟಾರ್ ಅಮೀರ್ ಖಾನ್ ಕಾಣಿಸಿಕೊಳ್ಳಲಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಾಗಿದೆ.
ಇಂದು ಈ ಕಾರ್ಯಕ್ರಮದ ತಯಾರಕರು ಅಮೀರ್ ಖಾನ್ ಸಂಚಿಕೆಯ ಪ್ರೋಮೋ ಅನಾವರಣಗೊಳಿಸಿದ್ದಾರೆ. ಪ್ರಶಸ್ತಿ ಕಾರ್ಯಕ್ರಮಗಳಲ್ಲಿ ಭಾಗಿಯಾಗದಿರುವುದು, ನಟನ ಇತ್ತೀಚಿನ ಫ್ಲಾಪ್ ಸಿನಿಮಾಗಳ ವಿಚಾರಗಳನ್ನು ಪ್ರೋಮೋ ಒಳಗೊಂಡಿದೆ. ಅಲ್ಲದೇ ಸೂಪರ್ ಹಿಟ್ ಪಿ.ಕೆ ಸಿನಿಮಾದ ರೆಡಿಯೋ ಸೀನ್ ಕೂಡ ಇವರ ಸಂಭಾಷಣೆಯಲ್ಲಿ ಬಂದಿದ್ದು, ಕಾರ್ಯಕ್ರಮ ಮನರಂಜನೆಯ ರಸದೌತಣ ಉಣಬಡಿಸಲಿದೆ ಎಂಬುದು ಖಚಿತವಾಗಿದೆ.
ಏಪ್ರಿಲ್ 27 ರಂದು ನೆಟ್ಫಿಕ್ಸ್ನಲ್ಲಿ ಸಂಪೂರ್ಣ ಸಂಚಿಕೆ ಲಭ್ಯವಾಗಲಿದೆ. ಸದ್ಯ ಅನಾವರಣಗೊಂಡಿರುವ ಪ್ರೋಮೋದಲ್ಲಿ ಸೂಪರ್ ಸ್ಟಾರ್ನ ವೈಯಕ್ತಿಕ ಜೀವನದ ವಿಚಾರಗಳು ಬಂದಿವೆ. ನಟ ಬಾಕ್ಸ್ ಆಫೀಸ್ನಲ್ಲಿ ತಮ್ಮ ಸಿನಿಮಾಗಳು ಹಿನ್ನೆಡೆ ಕಂಡ ಬಗ್ಗೆ ಮತ್ತು ಮಕ್ಕಳ ಫ್ಯಾಷನ್ ಸಲಹೆಗಳ ಕುರಿತು ಮಾತನಾಡಿದ್ದಾರೆ. ಇತ್ತೀಚಿನ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೂ ತುಲನಾತ್ಮಕವಾಗಿ ಉತ್ತಮ ಹಣ ಗಳಿಸಿವೆ ಎಂದು ಕಪಿಲ್ ಶರ್ಮಾ ತಿಳಿಸಿದ್ದು, ಅಮೀರ್ ನಗು ಬೀರಿದ್ದಾರೆ.
ಇದನ್ನೂ ಓದಿ: ’ನಾನು ಡಿಸಿಗೆ ತುಂಬಾ ಕ್ಲೋಸ್’: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶಿಷ್ಠ ರೀತಿಯ ಚುನಾವಣಾ ಪ್ರಚಾರ - Voting Awareness
ಅರ್ಚನಾ ಪುರಾಣ್ ಸಿಂಗ್ ಅವರು ಅಮೀರ್ ಬಳಿ ಪ್ರಶಸ್ತಿ ಕಾರ್ಯಕ್ರಮಗಳಿಗೆ ಏಕೆ ಹೋಗುವುದಿಲ್ಲ ಎಂದು ಪ್ರಶ್ನಿಸಿದ್ದಾರೆ. ಅವಾರ್ಡ್ಸ್ ಪ್ರೋಗ್ರಾಮ್ ಅನ್ನು ಬುದ್ಧಿವಂತಿಕೆಯಿಂದ ಟೀಕಿಸಿದ ಖಾನ್, "ಸಮಯ ಬಹಳ ಮೌಲ್ಯವಾದದ್ದು. ಹಾಗಾಗಿ ನಾವು ಅದನ್ನು ಸರಿಯಾಗಿ ಬಳಸಬೇಕು" ಎಂದು ತಿಳಿಸಿದರು. ಪ್ರೋಮೋ ಕೊನೆಯಲ್ಲಿ ಕಪಿಲ್, ಅಮೀರ್ ಬಳಿ 'ಯಾವಾಗ ಸೆಟಲ್ ಡೌನ್' ಎಂದು ಪ್ರಶ್ನಿಸಿದ್ದು, ಅಮೀರ್ ಸಣ್ಣ ನಗು ಬೀರಿದ್ದಾರೆ.
ಇದನ್ನೂ ಓದಿ: ಕೇಂದ್ರ ಸಚಿವ ಜೋಶಿ ಭೇಟಿಯಾದ ಹರ್ಷಿಕಾ ಪೂಣಚ್ಚ ದಂಪತಿ: ಸಚಿವರಿಂದ ಸೂಕ್ತ ಕ್ರಮದ ಭರವಸೆ - Harshika Bhuvann
ಅಮೀರ್ ಸಿನಿಮಾ ವಿಚಾರ ಗಮನಿಸುವುದಾದರೆ, ಮುಂದಿನ ಬಹುನಿರೀಕ್ಷಿತ ಚಿತ್ರ ಸಿತಾರೆ ಝಮೀನ್ ಪರ್ ಕ್ರಿಸ್ಮಸ್ಗೆ ಬಿಡುಗಡೆ ಆಗಲಿದೆ. ಕೊನೆಯ ಚಿತ್ರ ಲಾಲ್ ಸಿಂಗ್ ಚಡ್ಡಾ ಹಿನ್ನಡೆ ಅನುಭವಿಸಿದ ನಂತರ, ಸಿನಿಮಾಗಳಿಂದ ದೂರ ಉಳಿದು ಕುಟುಂಬಕ್ಕೆ ಸಂಪೂರ್ಣ ಸಮಯ ಮೀಸಲಿಟ್ಟರು. ಲಾಲ್ ಸಿಂಗ್ ಚಡ್ಡಾ ಬಳಿ ಬಿಡುಗಡೆ ಆಗುತ್ತಿರುವ ಚಿತ್ರ ಸಿತಾರೆ ಝಮೀನ್ ಪರ್.