ETV Bharat / entertainment

ಅಭಿಷೇಕ್​ ವರ್ತನೆಯಿಂದ ಐಶ್ವರ್ಯಗೆ ಮುಜುಗರ? ವಿಡಿಯೋ ವೈರಲ್​ - Aishwarya Abhishek - AISHWARYA ABHISHEK

2016ರ ಚಿತ್ರ 'ಸರಬ್‌ಜಿತ್‌' ಪ್ರಮೋಶನಲ್​ ಈವೆಂಟ್​ನ ವಿಡಿಯೋವೊಂದು ಪ್ರತ್ಯಕ್ಷವಾಗಿದೆ. ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಬಚ್ಚನ್ ನಡುವೆ ಬಿರುಕು ವದಂತಿ ಉಲ್ಭಣಗೊಂಡಿರುವ ಈ ಹೊತ್ತಲ್ಲಿ ಹಳೇ ವಿಡಿಯೋ ವ್ಯಾಪಕವಾಗಿ ವೈರಲ್​ ಆಗಿದೆ.

Abhishek Bachchan Aishwarya Rai
ಅಭಿಷೇಕ್ ಬಚ್ಚನ್- ಐಶ್ವರ್ಯಾ ರೈ (ANI)
author img

By ETV Bharat Entertainment Team

Published : Oct 1, 2024, 8:02 PM IST

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಬಚ್ಚನ್ ಬಾಲಿವುಡ್‌ನ ಐಕಾನಿಕ್​ ಕಪಲ್​ ಎಂದೇ ಫೇಮಸ್​.​ ಟ್ರೋಲ್​​, ಟೀಕೆ, ವದಂತಿಗಳ ನಡುವೆಯೂ ಈ ದಂಪತಿ ಚಿತ್ರರಂಗದ ಪವರ್​ಫುಲ್​ ಆ್ಯಂಡ್ ಬ್ಯೂಟಿಫುಲ್​​ ಕಪಲ್​ ಆಗಿ ಜನಪ್ರಿಯರು. ತಾರಾ ದಂಪತಿಯ ನಡುವೆ ಎಲ್ಲವೂ ಸರಿ ಇಲ್ಲ, ಸಂಬಂಧದಲ್ಲಿ ಬಿರುಕು ಮೂಡಿದೆ ಅನ್ನೋದು ಬಹುದಿನಗಳ ವದಂತಿ. ಇಂಥ ಅಂತೆ-ಕಂತೆಗಳ ನಡುವೆ ಆಗಾಗ್ಗೆ ಜೋಡಿಗೆ ಸಂಬಂಧಿಸಿದ ವಿಡಿಯೋಗಳು, ವಿಷಯಗಳು ಸಖತ್​ ಸದ್ದು ಮಾಡುತ್ತವೆ.

ಅದರಂತೆ ಇದೀಗ, ಐಶ್ವರ್ಯಾರ 2016ರ ಚಿತ್ರ 'ಸರಬ್‌ಜಿತ್‌'ನ ಪ್ರಥಮ ಪ್ರದರ್ಶನ ಈವೆಂಟ್​ನಿಂದ ವಿಡಿಯೋವೊಂದು ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಸಿನಿಮಾ ಪ್ರಮೋಶನಲ್​ ಈವೆಂಟ್​ನಲ್ಲಿ ನಡೆದ ಈ ಘಟನೆಯಲ್ಲಿ ಐಶ್ವರ್ಯಾ ರೈ ಬಚ್ಚನ್​​ ಮುಜುಗರಕ್ಕೊಳಗಾಗಿದ್ದು, ವಿಡಿಯೋ ನೋಡಿದ ಅನೇಕರಿಗೆ ಶಾಕ್​ ಆಗಿತ್ತು. ಅಭಿಷೇಕ್‌ ಅವರದ್ದು ಕೋಲ್ಡ್​ ರಿಯಾಕ್ಷನ್​ನಂತೆ ತೋರಿದ್ದು, ಐಶ್ವರ್ಯಾ ಮುಜುಗರಕ್ಕೊಳಗಾಗಿದ್ದರು.

'ಸರಬ್‌ಜಿತ್‌' ಪ್ರೀಮಿಯರ್‌ನಲ್ಲಿ ಬಚ್ಚನ್ ಕುಟುಂಬ ಸೇರಿದಂತೆ ಹಲವು ಸೆಲೆಬ್ರಿಟಿಗಳು ಉಪಸ್ಥಿತರಿದ್ದರು. ಈವೆಂಟ್ ಮುಂದುವರೆದಂತೆ, ಉತ್ಸುಕರಾದ ಮಾಧ್ಯಮದವರು ತಾರಾ ದಂಪತಿಯಲ್ಲಿ ಒಟ್ಟಿಗೆ ಪೋಸ್ ನೀಡುವಂತೆ ವಿನಂತಿಸಿದರು. ಮಾಧ್ಯಮದವರ ಮನವಿಗೆ ಐಶ್ವರ್ಯಾ ನಯವಾಗಿ ಪ್ರತಿಕ್ರಿಯಿಸಿ, ಫೋಟೋ ಕ್ಲಿಕ್ಕಿಸಿಕೊಳ್ಳಲು ಅಭಿಷೇಕ್‌ ಅವರನ್ನು ಕರೆದರು. ಆದಾಗ್ಯೂ, ಅಭಿಷೇಕ್ ಆ ಕೂಡಲೇ ಪ್ರತಿಕ್ರಿಯಿಸಲಿಲ್ಲ. ಅವರಿಗೆ ಪತ್ನಿಯ ಮಾತು ಕೇಳಿಸಲಿಲ್ಲವೇ ಅಥವಾ ನಿರ್ಲಕ್ಷಿಸಿದರೇ ಎಂಬುದು ಮಾತ್ರ ಸ್ಪಷ್ಟವಾಗಿಲ್ಲ. ಅದಾದ ಸ್ವಲ್ಪ ಸಮಯದ ನಂತರ, ಐಶ್ವರ್ಯಾ ಅಭಿಷೇಕ್ ಅವರನ್ನು ಮತ್ತೆ ಕರೆದರು, ಕ್ಯಾಮರಾಗಳಿಗೆ ಪೋಸ್ ನೀಡುವಂತೆ ನಯವಾಗಿ ಕೇಳಿಕೊಂಡರು. ಅಂತಿಮವಾಗಿ ಪತ್ನಿಯ ಮಾತು ಒಪ್ಪಿಕೊಂಡು ಅವರೊಂದಿಗೆ ಪೋಸ್ ನೀಡಲು ಪ್ರಾರಂಭಿಸಿದರು.

ಇದನ್ನೂ ಓದಿ: ಹಿರಿಯ ನಟ ರಜನಿಕಾಂತ್‌ಗೆ ಚೆನ್ನೈ ಆಸ್ಪತ್ರೆಯಲ್ಲಿ ಚಿಕಿತ್ಸೆ; ಇನ್ನೆರಡು ದಿನಗಳಲ್ಲಿ ಡಿಸ್ಚಾರ್ಜ್​​ ಸಾಧ್ಯತೆ - Rajinikanth Health Update

ನಂತರ ನಡೆದದ್ದು ಮಾತ್ರ ಮಾಧ್ಯಮ ಮತ್ತು ಐಶ್ವರ್ಯಾ ಇಬ್ಬರನ್ನೂ ಅಚ್ಚರಿಗೆ ದೂಡಿದ ವಿಚಿತ್ರ ಕ್ಷಣ. ಕ್ಯಾಮರಾಗಳೆದುರು ಪೋಸ್ ನೀಡುತ್ತಿದ್ದಂತೆ, ಅಭಿಷೇಕ್ ಇದ್ದಕ್ಕಿದ್ದಂತೆ ಐಶ್ವರ್ಯಾರ ಕೈ ಬಿಟ್ಟು ಫೋಟೋಗ್ರಾಫರ್​​ಗಳ ಬಳಿ, "ಇನ್ಹಿ ಕಾ ಲೋ (ಅವರ ಫೋಟೋಗಳನ್ನು ತೆಗೆದುಕೊಳ್ಳಿ)" ಎಂದು ಹೇಳಿ, ಹೊರನಡೆದರು. ಐಶ್ವರ್ಯಾ ಮುಜುಗರಕ್ಕೊಳಗಾಗಿದ್ದು ಸ್ಪಷ್ಟವಾಗಿ ವಿಡಿಯೋದಲ್ಲಿ ಕಂಡುಬಂತು. ಆ ಕ್ಷಣದಲ್ಲಿ ಮುಗುಳ್ನಕ್ಕರಾದರೂ, ಶಾಕ್​ ಆಗಿದ್ದು ಕೂಡಾ ನಟಿಯ ಮೊಗದಲ್ಲಿ ಎದ್ದು ಕಂಡಿದೆ. ಇದು ಹಲವು ಊಹಾಪೋಹಳಿಗೆ ಎಡೆಮಾಡಿಕೊಟ್ಟಿತ್ತು. ಸದ್ಯ ಈ ಹಳೇ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಇದನ್ನೂ ಓದಿ: ಐಶ್ವರ್ಯಾ ರೈ - ಅಭಿಷೇಕ್​​ ಬಚ್ಚನ್ ವಿಚ್ಛೇದನ ವದಂತಿ; ಎಲ್ಲಾ ಗಾಸಿಪ್​ಗೆ ಬ್ರೇಕ್​ ಹಾಕಿತು ಆ ಒಂದು ರಿಂಗ್​! - Aishwarya Abhishek

ಇತ್ತೀಚಿನ ವದಂತಿಗಳು ಜೋಡಿ ನಡುವೆ ಬಿರುಕು ಮೂಡಿದೆ ಎಂಬುದನ್ನು ತಿಳಿಸಿವೆ. ಆದಾಗ್ಯೂ, ಅಭಿಷೇಕ್ ಅಥವಾ ಐಶ್ವರ್ಯಾ ಈ ವದಂತಿಗಳನ್ನು ಉದ್ದೇಶಿಸಿ ಈವರೆಗೆ ತುಟಿಬಿಚ್ಚಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.