ETV Bharat / entertainment

ನಟ ಸೋನು ಸೂದ್ ನೋಡಲು 1,500 ಕಿ.ಮೀ ಓಡಿದ ಅಭಿಮಾನಿ - Sonu Sood - SONU SOOD

ಸೋನು ಸೂದ್ ಅವರನ್ನು ನೋಡಲು 1,500 ಕಿ.ಮೀ ಓಡುವ ಮೂಲಕ ಅಭಿಮಾನಿಯೋರ್ವ ಬಹುಭಾಷಾ ನಟನಿಗೆ ಗೌರವ ಸಲ್ಲಿಸಿದ್ದಾರೆ.

actor Sonu Sood
ನಟ ಸೋನು ಸೂದ್
author img

By ETV Bharat Karnataka Team

Published : Apr 30, 2024, 5:34 PM IST

ಬಹುಭಾಷಾ ನಟ ಸೋನು ಸೂದ್ ಅವರು ಸಿನಿಮಾ ಮಾತ್ರವಲ್ಲದೇ ಸಾಮಾಜಿಕ ಸೇವೆಯಿಮದಲೂ ಸಾಕಷ್ಟು ಜನಪ್ರಿಯರಾಗಿದ್ದಾರೆ. ಕೋವಿಡ್​ ಸಂದರ್ಭ ಪ್ರಾರಂಭವಾದ ಅವರ ಮಾನವೀಯ ಕಾರ್ಯಗಳು ಇಂದಿಗೂ ಮುಂದುವರೆದಿವೆ. ಇದೇ ಕಾರಣಕ್ಕೆ ಹೆಚ್ಚಿನ ಸಂಖ್ಯೆಯ ಜನರು ಅವರನ್ನು ಆರಾಧಿಸುತ್ತಾರೆ. ಇತ್ತೀಚೆಗೆ ನಟನನ್ನು ಅವರ ಕಟ್ಟಾ ಅಭಿಮಾನಿ ಭೇಟಿಯಾಗಿದ್ದಾರೆ. ತಮ್ಮ ಮೆಚ್ಚಿನ ವ್ಯಕ್ತಿಯನ್ನು ಭೇಟಿಯಾಗಲು ಅಭಿಮಾನಿ ಬರೋಬ್ಬರಿ 1,500 ಕಿಲೋ ಮೀಟರ್ ಓಡಿದ್ದಾರೆ. ಆ ಅಭಿಮಾನಿಯೊಂದಿಗೆ ಸೋನು ಸೂದ್​ ಇರುವ ಫೋಟೋವೀಗ ಸಾಮಾಜಿಕ ಜಾಲತಾಣದಲ್ಲಿ ಜಾಗ ಗಿಟ್ಟಿಸಿಕೊಂಡಿದೆ.

ಸೋನು ಸೂದ್ ಮತ್ತು ಅವರ ಅಭಿಮಾನಿ ಜೊತೆಗಿರುವ ಫೋಟೋಗಳನ್ನು ಪಾಪರಾಜಿಗಳು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಪೋಸ್ಟ್ ಪ್ರಕಾರ, ಮಹೇಶ್ ಎಂಬ ಅಭಿಮಾನಿ ಸೋನು ಸೂದ್​ ಅವರನ್ನು ಭೇಟಿ ಮಾಡಲು ರಾಷ್ಟ್ರ ರಾಜಧಾನಿ ದೆಹಲಿಯಿಂದ ಮುಂಬೈಗೆ ತೆರಳಿದ್ದಾರೆ. 1,500 ಕಿ.ಮೀ ಓಟದ ಮೂಲಕ ತಮ್ಮ ಪ್ರಯಾಣ ಪೂರ್ಣಗೊಳಿಸಿದ್ದಾರೆ. ಆನ್​ಲೈನ್​ನಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿರುವ ಫೋಟೋದಲ್ಲಿ, ಜನಪ್ರಿಯ ನಟ ಸೋನು ಸೂದ್ ತಮ್ಮ ಈ ಅಭಿಮಾನಿಯೊಂದಿಗೆ ಪೋಸ್ ನೀಡಿರುವುದನ್ನು ಕಾಣಬಹುದು.

ಅಭಿಮಾನಿ ಬಿಳಿ ಟಿ-ಶರ್ಟ್, ಕಪ್ಪು ಕ್ಯಾಪ್​ ಧರಿಸಿದ್ದಾರೆ. ಅದರ ಮೇಲೆ 'ಇಂಡಿಯಾ ಗೇಟ್ (ದೆಹಲಿ)ನಿಂದ ಗೇಟ್‌ವೇ ಆಫ್ ಇಂಡಿಯಾ (ಮುಂಬೈ)ವರೆಗೆ - 1500 ಕಿಲೋ ಮೀಟರ್'' ಎಂದು ಬರೆಯಲಾಗಿದೆ. ಸೋನು​ ಸೂದ್​​ ಫೋಟೋವಿದ್ದು, ನಿಜ ಜೀವನದ ನಾಯಕನಿಗೆ ನಮನ ಎಂದು ಕೂಡ ಬರೆಯಲಾಗಿದೆ. ಪಾಪರಾಜಿಗಳು ಎರಡು ಫೋಟೋ ಶೇರ್ ಮಾಡಿದ್ದು, ಒಂದು ಫೋಟೋದಲ್ಲಿ ಇಂಡಿಯಾ ಫ್ಲ್ಯಾಗ್ ಹಿಡಿದು ನಿಂತಿದ್ದಾರೆ. ಮತ್ತೊಂದರಲ್ಲಿ ನಟ ತಮ್ಮ ಅಭಿಮಾನಿಗೆ ಗಿಡವನ್ನು ಗಿಫ್ಟ್​​ ಆಗಿ ಕೊಟ್ಟಿದ್ದಾರೆ.

ಇದನ್ನೂ ಓದಿ: ಪಬ್ಲಿಕ್ ಅಕೌಂಟ್​​ ಆಯ್ತು ಸೈಫ್​ ಮಗನ ಇನ್​​ಸ್ಟಾಗ್ರಾಮ್​: ನಾನು ಸ್ವಂಥದ್ದನ್ನು ರಚಿಸುವೆನೆಂದ ಇಬ್ರಾಹಿಂ - Ibrahim Ali Khan

ಸೋನು ಸೂದ್​ ಅವರ ಮಾನವೀಯ ಕಾರ್ಯಗಳು ದೇಶಾದ್ಯಂತ ಜನಸಾಮಾನ್ಯರು, ಅಭಿಮಾನಿಗಳ ಮೇಲೆ ದೊಡ್ಡ ಪ್ರಭಾವ ಬೀರುತ್ತವೆ. ಅವರು ಸದಾ ನಟನಿಗೆ ತಮ್ಮ ಅಪಾರ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ. ಅಗತ್ಯವಿರುವವರಿಗೆ ಸಹಾಯ ಮಾಡುವ ನಟನ ಸಮರ್ಪಣೆಯಿಂದ ಸ್ಫೂರ್ತಿ ಪಡೆದ ಅವರ ಅಭಿಮಾನಿಗಳು ಆಗಾಗ್ಗೆ ದೇಶಾದ್ಯಂತ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಾರೆ.

ಇದನ್ನೂ ಓದಿ: ಸರಿಯಾಯ್ತು ಬ್ಲಾಕ್​ ಆಗಿದ್ದ ನಟ ಸೋನು ಸೂದ್ ವಾಟ್ಸಾಪ್: 61 ಗಂಟೆಗಳಲ್ಲಿ ಬಂದಿದ್ದು 9,000 ಮೆಸೇಜ್​ - Sonu Sood WhatsApp

ಸೋನು ಸೂದ್ ಹಿಂದಿ, ತೆಲುಗು, ತಮಿಳು ಮತ್ತು ಕನ್ನಡ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಕೋವಿಡ್​ ಸಂದರ್ಭದಲ್ಲಿ ಹೆಚ್ಚು ಸಹಾಯ, ನೆರವು ನೀಡುವುದರೊಂದಿಗೆ ಜನ ಮೆಚ್ಚುಗೆ ಗಳಿಸಿದರು. ಲಾಕ್‌ಡೌನ್ ಸಮಯದಲ್ಲಿ ಸಾರಿಗೆ ಸ್ಥಗಿತಗೊಂಡಿದ್ದ ಸಂದರ್ಭ, ಸಾವಿರಾರು ವಲಸೆ ಕಾರ್ಮಿಕರಿಗೆ ತಮ್ಮ ಮನೆ ತಲುಪಲು ಸಹಾಯ ಮಾಡಿದ್ದರು. ಆ ಸಾಂಕ್ರಾಮಿಕ ಸಂದರ್ಭ ಜನರಿಗೆ ಹಾಸಿಗೆ, ಚುಚ್ಚುಮದ್ದು, ಔಷಧಿಗಳಂತಹ ಅನೇಕ ವ್ಯವಸ್ಥೆಗಳನ್ನು ಒದಗಿಸಿದ್ದರು. ಅಗತ್ಯವಿರುವವರಿಗೆ ಆಹಾರ ಮತ್ತು ಅಗತ್ಯ ವಸ್ತುಗಳನ್ನು ಸಹ ಪೂರೈಸಿದ್ದರು. ಈ ಸಮಾಜ ಸೇವೆ ಸಾಂಕ್ರಾಮಿಕ ಸಂದರ್ಭಕ್ಕೆ ಸೀಮಿತವಾಗಲಿಲ್ಲ, ಇಂದಿಗೂ ಮುಂದುವರಿದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.