ETV Bharat / entertainment

'777 ಚಾರ್ಲಿ'ಗೆ ಮತ್ತೊಂದು ಗರಿ: ಜೂ.28ಕ್ಕೆ ಜಪಾನ್​ನಲ್ಲಿ ಬಿಡುಗಡೆ - 777 Charlie - 777 CHARLIE

ರಾಜ್ಯ ಮತ್ತು ದೇಶಾದ್ಯಂತ ಸೂಪರ್‌ ಹಿಟ್‌ ಆಗಿದ್ದ '777 ಚಾರ್ಲಿ' ಸಿನಿಮಾ ಜೂನ್ 28ಕ್ಕೆ ಜಪಾನ್​ನ ಹಲವೆಡೆ ಬಿಡುಗಡೆ ಆಗಲಿದೆ.

777 Charlie
777ಚಾರ್ಲಿ
author img

By ETV Bharat Karnataka Team

Published : Apr 28, 2024, 1:30 PM IST

Updated : Apr 28, 2024, 1:56 PM IST

ಕನ್ನಡದ ಜನಪ್ರಿಯ ನಟ ರಕ್ಷಿತ್ ಶೆಟ್ಟಿ ಅವರ '777 ಚಾರ್ಲಿ' ಅತ್ಯಂತ ಪ್ರಸಿದ್ಧ ಚಲನಚಿತ್ರಗಳಲ್ಲೊಂದು. ಕಿರಣ್‌ ರಾಜ್ ನಿರ್ದೇಶನದಲ್ಲಿ 2022ರಲ್ಲಿ ಮೂಡಿಬಂದ ಈ ಚಿತ್ರ ಮನಮುಟ್ಟುವ ಕಥಾಹಂದರದೊಂದಿಗೆ ಅಭೂತಪೂರ್ವ ಯಶಸ್ಸು ಕಂಡಿದ್ದು, ಇಂದಿಗೂ ಸಿನಿಪ್ರಿಯರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದೆ. ಇತ್ತೀಚಿನ ಮಾಹಿತಿ ಪ್ರಕಾರ, '777 ಚಾರ್ಲಿ' ಜಪಾನ್‌ನಲ್ಲಿ ಮ್ಯಾಜಿಕ್ ಮಾಡಲು ಸಜ್ಜಾಗಿದೆ. ಹೌದು, ಜೂನ್‌ನಲ್ಲಿ ಸಾಗರೋತ್ತರ ಪ್ರದೇಶದಲ್ಲಿ ಕನ್ನಡದ ಯಶಸ್ವಿ ಚಿತ್ರ ತೆರೆಗಪ್ಪಳಿಸಲಿದೆ.

ಸಿನಿಮಾ ವ್ಯವಹಾರ ವಿಶ್ಲೇಷಕ ತರಣ್ ಆದರ್ಶ್ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಪೋಸ್ಟ್ ಶೇರ್ ಮಾಡಿದ್ದಾರೆ. ಜಪಾನೀಸ್ ಭಾಷೆಯಲ್ಲಿ '777 ಚಾರ್ಲಿ'ಯ ಪೋಸ್ಟರ್ ಅನ್ನು ಸಹ ಹಂಚಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ನಟಿಸಿರುವ ಮತ್ತು ಕಿರಣ್ ರಾಜ್ ನಿರ್ದೇಶನದ '777 ಚಾರ್ಲಿ' ಜೂನ್ 28, 2024ರಂದು ಜಪಾನ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಬರೆದುಕೊಂಡಿದ್ದಾರೆ.

ಎ ಸೈಲೆಂಟ್ ವಾಯ್ಸ್, ಜೋಸಿ, ದಿ ಟೈಗರ್ ಮತ್ತು ದಿ ಫಿಶ್‌ನಂತಹ ಯಶಸ್ವಿ ಚಿತ್ರಗಳಿಗೆ ಹೆಸರುವಾಸಿಯಾಗಿರುವ ಶೋಚಿಕು ಮೂವಿಸ್ (Shochiku Movies) ಜಪಾನ್‌ನಾದ್ಯಂತ ಈ ಸಿನಿಮಾವನ್ನು ವಿತರಿಸಲಿದೆ ಎಂದು ತರಣ್ ಆದರ್ಶ್ ತಮ್ಮ ಎಕ್ಸ್ ಪೊಸ್ಟ್​​ನಲ್ಲಿ ಉಲ್ಲೇಖಿಸಿದ್ದಾರೆ. ಶೋಚಿಕು ಮೂವಿಸ್ ಪ್ರಸ್ತುತ ಜಪಾನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅತ್ಯಂತ ಹಳೆಯ ಚಲನಚಿತ್ರ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿದೆ. ಜಪಾನ್​ ಚಲನಚಿತ್ರ ಉದ್ಯಮದಲ್ಲಿ 100 ವರ್ಷಗಳ ಇತಿಹಾಸ ಹೊಂದಿದೆ.

ಇದನ್ನೂ ಓದಿ: ಘಟಾನುಘಟಿ ತಾರಾಗಣದ 'ಕಲ್ಕಿ 2898 ಎಡಿ' ಬಿಡುಗಡೆಗೆ ಮುಹೂರ್ತ ನಿಗದಿ - Kalki 2898 AD

'777 ಚಾರ್ಲಿ' ಸಿನಿಮಾ 2022ರ ಜೂನ್ 10ರಂದು ಚಿತ್ರಮಂದಿರ ಪ್ರವೇಶಿಸಿತು. ಸಿನಿಮಾ ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶ ಕಂಡಿತು. ಅದ್ಭುತ ಕಥಾಹಂದರ, ಕಥೆ ರವಾನಿಸಿದ ರೀತಿ, ನಟನೆ, ಮನುಷ್ಯ-ಶ್ವಾನದ ಸ್ನೇಹವನ್ನು ಪ್ರದರ್ಶಿಸಿದ ರೀತಿಗೆ ಬಹುತೇಕ ಮೆಚ್ಚುಗೆ ವ್ಯಕ್ತವಾಯಿತು. ಚಿತ್ರವು ಪ್ರೇಕ್ಷಕರಿಂದ ಅಪಾರ ಪ್ರಶಂಸೆ, ಪ್ರೀತಿ ಸಂಪಾದಿಸಿತು. ಚಾರ್ಲಿ ಚಿತ್ರದಲ್ಲಿ ಶ್ವಾನ ಪ್ರಮುಖ ಪಾತ್ರ ನಿರ್ವಹಿಸಿದೆ. ಮುಖ್ಯಭೂಮಿಕೆಯಲ್ಲಿ ಜನಪ್ರಿಯ ತಾರೆ ರಕ್ಷಿತ್ ಶೆಟ್ಟಿ ಅಲ್ಲದೇ ಸಂಗೀತಾ ಶೃಂಗೇರಿ, ರಾಜ್ ಬಿ ಶೆಟ್ಟಿ, ಡ್ಯಾನಿಶ್ ಸೇಟ್, ಬಾಬಿ ಸಿಂಹರಂತಹ ಅನೇಕರು ಚಿತ್ರದಲ್ಲಿದ್ದಾರೆ.

ಇದನ್ನೂ ಓದಿ: ಮಹಾದೇವ್ ಬೆಟ್ಟಿಂಗ್ ಆ್ಯಪ್ ಕೇಸ್: 40 ಗಂಟೆ ನಾಪತ್ತೆಯಾಗಿದ್ದ ನಟ ಸಾಹಿಲ್ ಖಾನ್ ವಶಕ್ಕೆ - Mahadev Betting App Case

ಕಿರಣ್​ ರಾಜ್ ಪೋಸ್ಟ್: ಕಿರಣ್​ ರಾಜ್​ ಕೆ ಕೂಡ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​​ನಲ್ಲಿ ಪೋಸ್ಟ್ ಶೇರ್ ಮಾಡಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಜೊತೆಗೆ '777 ಚಾರ್ಲಿ'ಯ ಡಬ್ಬಿಂಗ್ ಆವೃತ್ತಿಯು ಜೂನ್ 28, 2024ರಿಂದು ಜಪಾನ್‌ನಾದ್ಯಂತ ಬಿಡುಗಡೆಯಾಗಲಿದೆ. ಮುಂದೆ ರಷ್ಯಾ, ತೈವಾನ್, ಅಮೆರಿಕ, ಜರ್ಮನಿ ಸೇರಿ ಹಲವೆಡೆ ಬಿಡುಗಡೆ ಆಗಲಿದೆ'' ಎಂದು ಕೂಡ ತಿಳಿಸಿದ್ದಾರೆ.

Last Updated : Apr 28, 2024, 1:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.