ETV Bharat / education-and-career

ಒತ್ತಡ ನಿರ್ವಹಣೆಗೆ ಸಲಹೆಗಳು: ಒತ್ತಡ ಕಡಿಮೆ ಮಾಡಲು ಮೂರು ಮಂತ್ರಗಳನ್ನು ಮರೆಯದಿರಿ - Stress Management Tips

author img

By ETV Bharat Karnataka Team

Published : Jul 13, 2024, 1:17 PM IST

ಕರ್ತವ್ಯ ನಿರ್ವಹಣೆಯ ಸಮಯದಲ್ಲಿ ಕೆಲವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುತ್ತಾರೆ. ಈ ಒತ್ತಡ ಕಡಿಮೆ ಮಾಡಲು ಮೂರು ಮಂತ್ರಗಳನ್ನು ಪಾಲಿಸುವುದು ಉತ್ತಮ ಎಂಬ ಸಲಹೆಯನ್ನು ಆರೋಗ್ಯ ತಜ್ಞರು ನೀಡಿದ್ದಾರೆ.

Stress  Stress Management Tips  reduce stress
ಸಾಂದರ್ಭಿಸಿಕ ಚಿತ್ರ (ETV Bharat)

ಹೈದರಾಬಾದ್: ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು, ಕೆಲಸದಲ್ಲಿ ತೊಡಗಿರುವ ಉದ್ಯೋಗಿಗಳು, ಕರ್ತವ್ಯ ನಿರ್ವಹಣೆಯಲ್ಲಿ ಮಾಡಬೇಕಾದ ಕೆಲಸಗಳು ಹಲವು ಇರುತ್ತವೆ. ನಿಧಾನವಾಗಿ ಒಂದಾದ ನಂತರ ಒಂದು ಕಾರ್ಯವನ್ನು ಪೂರ್ಣಗೊಳಿಸುವುದು ಕಷ್ಟವಾಗುತ್ತದೆ. ತಮ್ಮ ವ್ಯಾಪ್ತಿಯಲ್ಲಿರುವ ಎಲ್ಲ ಕಾರ್ಯಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕಾಗಿರುತ್ತದೆ. ಈ ಕಾರಣದಿಂದಾಗಿ, ಕೆಲವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುತ್ತಾರೆ. ಒತ್ತಡ ಕಡಿಮೆ ಮಾಡಲು ಮೂರು ಮಂತ್ರಗಳನ್ನು ಪಾಲಿಸುವುದು ಉತ್ತಮ ಎಂಬ ಸಲಹೆಯನ್ನು ಆರೋಗ್ಯ ತಜ್ಞರು ನೀಡಿದ್ದಾರೆ.

ಈ ಮೂರು ಮಂತ್ರಗಳು ವಿವಿಧ ಹಂತಗಳಲ್ಲಿ ಒತ್ತಡವನ್ನು ನಿಯಂತ್ರಿಸಲು ಉಪಯುಕ್ತವಾಗಿದೆ. ಒತ್ತಡ ನಿರ್ವಹಣೆ ಮಾಡಲು ಒಂದು ನಿರ್ದಿಷ್ಟ ಮಟ್ಟಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಮಧ್ಯಮ ಪ್ರಮಾಣದ ಒತ್ತಡವು ನಿಮ್ಮ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಸಹಾಯ ಮಾಡುತ್ತದೆ. ಆದರೆ, ಜನರು ತೀವ್ರ ಒತ್ತಡದಿಂದಾಗಿ ಬಳಲುತ್ತಿರುವ ಸಂದರ್ಭಗಳು ಇವೆ. ರಬ್ಬರ್ ಬ್ಯಾಂಡ್ ಅನ್ನು ಎರಡೂ ತುದಿಗಳಲ್ಲಿ ಹಿಡಿದು ಎಳೆದರೆ, ಒಂದು ಹಂತದವರೆಗೂ ಚೆನ್ನಾಗಿದ್ದರೂ.. ನಂತರ ಅದು ಹರಿದು ಹೋಗುತ್ತದೆ.. ಬಳಿಕ ಕೈಗೆ ಜೋರಾಗಿಯೇ ಬಡಿಯುತ್ತದೆ. ಅತಿಯಾದ ಒತ್ತಡವೂ ನಿಮ್ಮ ದೇಹದಲ್ಲಿ ಉಷ್ಣಾಂಶ ಹೆಚ್ಚಾಗಲು ಕಾರಣವಾಗಬಹುದು. ಮೂರು ಸೂತ್ರಗಳನ್ನು ಬಳಸುವುದರಿಂದ, ಪ್ರತಿ ಹಂತದಲ್ಲೂ ಒತ್ತಡ ನಿಯಂತ್ರಿಸಬಹುದು. ಅದು ಹೇಗೆ ಎಂಬುದನ್ನು ತಿಳಿಯೋಣ.

ಒತ್ತಡ ಗುರುತಿಸುವುದು ಹೇಗೆ?: ನೀವು ಹೆಚ್ಚು ಒತ್ತಡಕ್ಕೊಳಗಾಗಿರುವ ಸಂದರ್ಭಗಳನ್ನು ಗುರುತಿಸಿ. ಅಲ್ಲದೇ, ಒತ್ತಡಕ್ಕೆ ಕಾರಣವೇನು ಎಂಬುದನ್ನು ಕಂಡು ಹಿಡಿಯಲು ಪ್ರಯತ್ನಿಸಿ. ನೀವು ನಿಜವಾದ ಕಾರಣವನ್ನು ಕಂಡುಕೊಂಡರೆ, ನೀವು ಬೇಗನೆ ತೊಂದರೆಯಿಂದ ಹೊರ ಬರಬಹುದು. ಈ ಸಂದರ್ಭದಲ್ಲಿ ಉಸಿರಾಟದ ವ್ಯಾಯಾಮವನ್ನು ಅಭ್ಯಾಸ ಮಾಡುವುದು ಸಹಾಯ ಮಾಡುತ್ತದೆ. ದೀರ್ಘವಾಗಿ ಉಸಿರನ್ನು ತೆಗೆದುಕೊಳ್ಳಿ. ಸ್ವಲ್ಪ ಹೊತ್ತು ಹಿಡಿದುಕೊಳ್ಳಿ. ಕೆಲವು ನಿಮಿಷಗಳ ನಂತರ ನಿಧಾನವಾಗಿ ಹೊರಗೆ ಬಿಡಿ. ಸ್ವಲ್ಪ ಸಮಯದವರೆಗೆ ಈ ವಿಧಾನವನ್ನು ಅನುಸರಿಸಿ ಮತ್ತು ಪರಿಸ್ಥಿತಿಯಲ್ಲಿ ಬದಲಾವಣೆಯನ್ನು ನೀವೇ ಅನುಭವಿಸುವಿರಿ.

ಒತ್ತಡದ ಸಂದರ್ಭದಲ್ಲಿ ಆಲೋಚನೆಗಳನ್ನು ತಡೆಯಿರಿ: ನೀವು ಯಾವ ಸಂದರ್ಭಗಳಲ್ಲಿ ಒತ್ತಡದಲ್ಲಿದ್ದೀರಿ ಎಂದು ನಿಮಗೆ ತಿಳಿದಿದ್ದರೆ, ತೊಂದರೆಯಿಂದ ಹೊರಬರಲು ನೀವು ಮಾರ್ಗಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಇದು ಸಾಧ್ಯವಾಗದಿದ್ದರೆ ಇನ್ನೊಂದು ಮಾರ್ಗವನ್ನು ಪ್ರಯತ್ನಿಸಬಹುದು. ಒತ್ತಡದ ಸಂದರ್ಭಗಳಲ್ಲಿ ಸಾಮಾನ್ಯವಾಗಿ, ಆಲೋಚನೆಗಳು ಅನಿರ್ದಿಷ್ಟವಾಗಿ ಬರುತ್ತವೆ. ಆದ್ದರಿಂದ ಮೊದಲು ಹೆಚ್ಚು ಆಲೋಚನೆಗಳನ್ನು ನಿಲ್ಲಿಸಿ. ಇದರರ್ಥ ಒತ್ತಡಕ್ಕೆ ಒಳಗಾಗುವ ಮೊದಲು ಅದನ್ನು ಜಯಿಸಲು ನಿಮ್ಮ ಕಡೆಯಿಂದ ಪ್ರಯತ್ನಗಳನ್ನು ಪ್ರಾರಂಭಿಸಿ.

ಉದಾಹರಣೆಗೆ, ಒಂದು ಪ್ರಾಜೆಕ್ಟ್ ಅನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಲು/ಒಂದು ವಿಷಯದಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಸಾಧ್ಯವಾಗದಿರುವ ಬಗ್ಗೆ ನೀವು ಪದೇ ಪದೇ ಆಲೋಚನೆಗಳನ್ನು ಹೊಂದಿದ್ದೀರಿ ಎಂದು ಭಾವಿಸೋಣ. ಇವುಗಳನ್ನು ತಡೆಗಟ್ಟಲು, ಅದೇ ಯೋಜನೆ ಅಥವಾ ವಿಷಯದ ಮೇಲೆ ಮುಂದುವರಿಯಲು ಯಾವ ಪ್ರಯತ್ನಗಳನ್ನು ಮಾಡಬೇಕೆಂದು ಯೋಚಿಸಲು ಪ್ರಾರಂಭಿಸಬೇಕು.

ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಬಳಿ ಕೇಳಿ ತಮ್ಮ ಸಂದೇಹಗಳನ್ನು ನಿವಾರಿಸಿಕೊಳ್ಳಬೇಕು. ಅವರು ಟ್ಯೂಷನ್‌ಗೆ ಹೋಗಬೇಕೇ? ಅಥವಾ ಸ್ನೇಹಿತರ ಸಹಾಯವನ್ನು ತೆಗೆದುಕೊಳ್ಳುವುದರಿಂದ ಏನಾದರೂ ಪ್ರಯೋಜನವಿದೆಯೇ? ಅವರು ವಿವಿಧ ಕೋನಗಳಿಂದ ಯೋಚಿಸಲು ಪ್ರಾರಂಭಿಸಬೇಕು. ಇಲ್ಲಿ ನೆನಪಿಡಬೇಕಾದ ಅಂಶವಿದೆ. ಸಮಸ್ಯೆಯ ಬಗ್ಗೆ ಪದೇ ಪದೇ ಯೋಚಿಸುವುದು ಒತ್ತಡವನ್ನು ಹೆಚ್ಚಿಸುತ್ತದೆ. ಒಮ್ಮೆ ನೀವು ಪರಿಹಾರಗಳ ಬಗ್ಗೆ ಯೋಚಿಸಲು ಪ್ರಾರಂಭಿಸಿದರೆ, ಸಮಸ್ಯೆಯ ತೀವ್ರತೆಯು ಕಡಿಮೆಯಾಗುತ್ತದೆ.

ಸ್ಥಿತಿಸ್ಥಾಪಕತ್ವ: ಒತ್ತಡದ ಸಂದರ್ಭಗಳಲ್ಲಿ ಸಿಲುಕಿಕೊಂಡಾಗ, ಚೇತರಿಸಿಕೊಳ್ಳಲು ಪ್ರಯತ್ನಿಸುವಂತಿರಬೇಕು. ನೀವು ಎಷ್ಟು ಬೇಗನೆ ಅಥವಾ ಸುಲಭವಾಗಿ ಒತ್ತಡದಿಂದ ಹೊರಬರುತ್ತೀರಿ ಎಂಬುದು ಮುಖ್ಯವಲ್ಲ. ಆದರೆ, ಮುಖ್ಯ ವಿಷಯವೆಂದರೆ ಅದನ್ನು ತಪ್ಪಿಸುವುದು ಮತ್ತು ಹಿಂದಿನ ಸ್ಥಿತಿಗೆ ಮರಳುವುದು. ಒತ್ತಡದ ಕಾರಣವನ್ನು ಒಪ್ಪಿಕೊಳ್ಳುವುದು, ಅದರ ಬಗ್ಗೆ ಎಚ್ಚರವಹಿಸುವುದು ಮತ್ತು ಉಸಿರಾಟದ ವ್ಯಾಯಾಮಗಳನ್ನು ಮಾಡುವುದು. ಒತ್ತಡದ ಸಂದರ್ಭಗಳಲ್ಲಿ ಈ ಉಪಕರಣಗಳನ್ನು ಬಳಸುವುದು ಫಲಿತಾಂಶವನ್ನು ನೀಡುತ್ತದೆ.

ಒತ್ತಡ ನಿರ್ವಹಣೆಗೆ ಮತ್ತಷ್ಟು ಸಲಹೆಗಳು:

  • ಇತರರು ಯಾವ ಸಂದರ್ಭಗಳಲ್ಲಿ ಒತ್ತಡದಲ್ಲಿದ್ದಾರೆ ಎಂಬುದನ್ನು ವಿವರವಾಗಿ ಕಂಡುಹಿಡಿಯಲು ಪ್ರಯತ್ನಿಸಬೇಡಿ. ಹೀಗೆ ಮಾಡುವುದರಿಂದ ಅಂತಹ ಸಂದರ್ಭಗಳಲ್ಲಿ ನೀವು ಒತ್ತಡಕ್ಕೆ ಒಳಗಾಗುವುದಿಲ್ಲ.
  • ಯಾವಾಗಲೂ ಧನಾತ್ಮಕವಾಗಿ ಯೋಚಿಸುವ ಜನರು ಸುತ್ತಲೂ ಇರುವುದನ್ನು ಖಚಿತಪಡಿಸಿಕೊಳ್ಳಿ. ಇದರೊಂದಿಗೆ, ನೀವು ಒತ್ತಡದಿಂದ ದೂರವಿರಬಹುದು ಮತ್ತು ಮಾನಸಿಕ ಶಾಂತಿಗೆ ಹತ್ತಿರವಾಗಬಹುದು.

ಇದನ್ನೂ ಓದಿ: ಎಷ್ಟೇ ಪ್ರಯತ್ನ ಮಾಡಿದರೂ ಶುಗರ್​ ಕಂಟ್ರೋಲ್​​​​​ಗೇ ಬರ್ತಿಲ್ಲವೇ?: ಹಾಗಾದ್ರೆ ಈ ಜ್ಯೂಸ್​ ಸೇವಿಸಿ ನೋಡಿ - HERBAL DRINKS TO CONTROL SUGAR

ETV Bharat Logo

Copyright © 2024 Ushodaya Enterprises Pvt. Ltd., All Rights Reserved.